ಇದು ಸ್ಮಾರ್ಟ್‌ಫೋನ್ ಜಮಾನ. ಭಾರತದ ಮಾರುಕಟ್ಟೆಗೆ ಪ್ರತಿ ದಿನ ಹೊಸ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ಕೈಗೆಟುಕುವ ದರದಿಂದ ದುಬಾರಿ ಬೆಲೆಯ ಫೋನ್‌ಗಳು ಲಭ್ಯವಿದೆ. ಆದರೆ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದ್ದಂತೆ ಅಪಾಯಗಳು ಹೆಚ್ಚಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಫೋನ್ ಬ್ಯಾಟರಿ ಸ್ಫೋಟ. ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಫೋಟಗೊಳ್ಳಲು ಪ್ರಮುಖ ಕಾರಣವೇನು? ಸ್ಫೋಟ ತಡೆಯಲು ಏನು ಮಾಡಬೇಕು?

ಬೆಂಗಳೂರು(ಜು.20) ಸ್ಮಾರ್ಟ್‌ಫೋನ್ ಸ್ಫೋಟಗೊಂಡು ಸಾವು, ಗಾಯ ಸೇರಿದಂತೆ ಹಲವು ದುರಂತ ಘಟನೆಗಳು ನಡೆದಿದೆ. ಬಹುತೇಕ ಘಟನೆಗಳು ಚಾರ್ಜಿಂಗ್ ವೇಳೆ ಫೋನ್ ಕರೆಯಿಂದ ಸ್ಫೋಟಗೊಂಡಿದೆ. ಇತ್ತೀಚೆಗೆ ಫುಲ್ ಚಾರ್ಜಿಂಗ್ ಇರಲಿಲ್ಲ, ಫೋನ್ ಬಳಕೆಯೂ ಮಾಡುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಫೋನ್ ಸ್ಫೋಟಗೊಂಡ ಘಟನೆಯೂ ನಡೆದಿದೆ. ಸ್ಮಾರ್ಟ್‌ಫೋನ್ ಬ್ಯಾಟರಿಗಳು ಸ್ಫೋಟಗೊಳ್ಳುವುದೇಕೆ? ಸ್ಫೋಟಕ್ಕಿಂತ ಮೊದಲೇ ಅಪಾಯ ಅರಿತು ತಡೆಯಲ ಸಾಧ್ಯವಿದೆಯೇ? ಸೇರಿದಂತೆ ಹಲವು ಪ್ರಶ್ನೆಗಳು ಸ್ಮಾರ್ಟ್‌ಪೋನ್ ಬಳಕೆದಾರರಲ್ಲಿ ಮೂಡುವುದು ಸಹಜ. ಫೋನ್ ಸ್ಫೋಟಕ್ಕೆ ಹಲವು ಕಾರಣಗಳಿದೆ. ಈ ಕಾರಣಗಳ ಪೈಕಿ ನೀವು ಯಾವುದಾದರು ತಪ್ಪು ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ಅಪಾಯದಿಂದ ಪಾರಾಗಿ.

ಸಹಜವಾದಗಿ ಫೋನ್ ಚಾರ್ಚಿಂಗ್ ವೇಳೆ ಬ್ಯಾಟರಿ ಬಿಸಿಯಾಗುತ್ತದೆ. ಈ ವೇಳೆ ಫೋನ್ ಕರೆ ಮೂಲಕ ಮಾತನಾಡುವುದು ಅಪಾಯಕ್ಕೆ ಅಹ್ವಾನ ನೀಡಿದಂತೆ. ಬ್ಯಾಟರಿಯಲ್ಲಿ ವಿದ್ಯುತ್ ಪ್ರಹಿಸುವ ವೇಳೆ ಇತ್ತ ಫೋನ್ ಕೂಡ ಕಾರ್ಯರಂಭಗೊಳ್ಳುವಾಗ ಬಿಸಿ ಹೆಚ್ಚಾಗಲಿದೆ. ಇದು ಬ್ಯಾಟರಿಯಲ್ಲಿ ವಿದ್ಯುತ್ ಪ್ರವಹಿಸುವ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ವೇಳೆ ಸ್ಫೋಟಗಳು ಸಂಭವಿಸುತ್ತದೆ. ಇದನ್ನು ಹೊರತುಪಡಿಸಿ ಇತರ ಕಾರಣಗಳು ಇವೆ.

ಮೊಬೈಲ್ ಬ್ಯಾಟರಿ ಸ್ಫೋಟಕ್ಕೆ ವ್ಯಕ್ತಿ ಬಲಿ: ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವ..!

ಕಳಪೆ ಗುಣಟ್ಟದ ಉತ್ಪಾದನೆ
ಸ್ಮಾರ್ಟ್ ಫೋನ್‌ನಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ಬಳಕೆ ಮಾಡಲಾಗುತ್ತದೆ. ಆದರೆ ಫೋನ್ ತಯಾರಿಕೆ ವೇಳೆ ಮಾಡುವ ಸಣ್ಣ ಸಣ್ಣ ಎಡವಟ್ಟುಗಳಿಂದ ಸ್ಫೋಟ ಸಂಭವಿಸುತ್ತದೆ. ಕಳಪೆ ಗುಣಮಟ್ಟದ ಉತ್ಪಾದನೆಯಿಂದ ಫೋನ್ ಸ್ಫೋಟ ಸಾಧ್ಯತೆ ಹೆಚ್ಚಿದೆ.

ಬ್ಯಾಟರಿ ಅಥವಾ ಫೋನ್ ಡ್ಯಾಮೇಜ್
ಫೋನ್ ಕಳಕ್ಕೆ ಬೀಳುವುದು ಅಥವಾ ಇನ್ಯಾವುದೇ ರೂಪದಲ್ಲಿ ಡ್ಯಾಮೇಜ್ ಆಗುವುದು ಕೂಡ ಸ್ಫೋಟಕ್ಕೆ ಕಾರಣಾಗಲಿದೆ. ಪ್ರಮುಖವಾಗಿ ಬ್ಯಾಟರಿ ಡ್ಯಾಮೇಜ್ ಆದರೆ ಇದರಿಂದ ಅಪಾಯದ ಸಾಧ್ಯತೆ ಹೆಚ್ಚು. ಬ್ಯಾಟರಿಯೊಳಗಿರುವ ಕೆಮಿಕಲ್, ಅಥವಾ ಆಂತರಿಂಕ ಮೆಕಾನಿಕಲ್ ಡ್ಯಾಮೇಜ್ ಆಗುವುದರಿಂದ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇದೆ.

ಬೇರೆ ಚಾರ್ಜರ್ ಬಳಕೆ
ಫೋನ್ ಖರೀದಿಸುವಾಗ ನೀಡುವ ಚಾರ್ಜರ್ ಬಿಟ್ಟು ಇತರ ಚಾರ್ಜರ್ ಬಳಕೆ ಮಾಡುವುದು ಉತ್ತಮವಲ್ಲ. ಪ್ರತಿ ಫೋನ್‌ಗೆ ಇಂತಿಷ್ಟೆ ಪ್ರಮಾಣದ ವಿದ್ಯುತ್ ವೋಲ್ಟ್ ಅಗತ್ಯವಿರುತ್ತದೆ. ಹೀಗಾಗಿ ಅಧಿಕೃತ ಚಾರ್ಜರ್ ಬಿಟ್ಟು ಬೇರೆ ಚಾರ್ಜರ್ ಬಳಕೆ ಮಾಡುವುದರಿಂದ, ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಚಾರ್ಜರ್ ಬಳಕೆ ಮಾಡುವುದರಿಂದಲೂ ಸ್ಫೋಟ ಸಾಧ್ಯತೆಗಳಿವೆ. 

ರಾತ್ರೀಯಿಡಿ ಚಾರ್ಜಿಂಗ್
ಫೋನ್ ಚಾರ್ಚ್ ವೇಳೆಯೂ ಗಮನಹರಿಸಬೇಕು. ರಾತ್ರಿ ಚಾರ್ಜ್ ಇಟ್ಟು ಮಲಗಿ ಬೆಳಗ್ಗೆ ಚಾರ್ಜಿಂಗ್‌ನಿಂದ ತೆಗೆಯುವುದು ಉತ್ತಮ ಹವ್ಯಾಸವಲ್ಲ. ಫೋನ್ ಶೇಕಡಾ 100 ರಷ್ಟು ಚಾರ್ಜ್ ಆದ ಬಳಿಕ ಚಾರ್ಜಿಂಗ್ ಆಫ್ ಮಾಡಬೇಕು. ಹೆಚ್ಚುವರಿಯಾಗಿ ಚಾರ್ಜಿಂಗ್ ಹಾಕಿರಬಾರದು. ಇದರಿಂದ ಬ್ಯಾಟರಿ ಬಿಸಿಯಾಗಲಿದೆ. ಶಾರ್ಟ್ ಸರ್ಕ್ಯೂಟ್ ಸೇರಿದಂತೆ ಇತರ ಕೆಲ ಕಾರಣಗಳಿಂದಲೂ ಬ್ಯಾಟರಿ ಸ್ಫೋಟಗೊಳ್ಳಲಿದೆ.

Phone Battery: ಚಾರ್ಜ್‌ ಆಗುತ್ತಿದ್ದ ಅಮ್ಮನ ಫೋನ್‌ ಸ್ಫೋಟ: ಬಲಿಯಾದ 8 ತಿಂಗಳ ಕಂದಮ್ಮ

ಓವರ್‌ಲೋಡ್ ಪ್ರೊಸೆಸರ್
ನಿಮ್ಮ ಫೋನ್ ಸಾಮರ್ಥ್ಯ ಎಷ್ಟಿದೆ? ಅದಕ್ಕೆ ತಕ್ಕಂತೆ ಬಳಕೆ ಮಾಡಿ. ಕಾರಣ ಪ್ರೊಸೆಸರ್ ಸಾಮರ್ಥ್ಯ ಕಡಿಮೆ ಇದ್ದು, ಫೋನ್‌ನಲ್ಲಿ ಪಬ್‌ಜಿ, ಇತರ ಗೇಮಿಂಗ್ ಆ್ಯಪ್, ಬೇರೆ ಬೇರೆ ಆ್ಯಪ್ ಹಾಗೂ ವಿಡಿಯೋಗಳ ಸ್ಟೋರೇಜ್‌ ಹಾಗೂ ಬಳಕೆಯಿಂದ ಫೋನ್ ಪ್ರೊಸೆಸರ್ ಓವರ್‌ಲೋಡೆಡ್ ಆಗಲಿದೆ. ಇದರಿಂದ ಫೋನ್ ಬಿಸಿಯಾಗಲಿದೆ. ಜೊತೆ ಸ್ಫೋಟಗೊಳ್ಳಲಿದೆ.

ಇನ್ನು ಫೋನ್ ಬಿಸಿನಲ್ಲಿಡುವುದು, ಅಥವಾ ಬಿಸಿನಲ್ಲಿ ನಿಂತಿರುವ ಕಾರಿನೊಳಗೆ ಇಟ್ಟಿರುವ ಫೋನ್ ಕೂಡ ಅಪಾಯಕಾರಿ. ಬಿಸಿಲಿನ ಶಾಖಕ್ಕೆ ಲಿಥಿಯಂ ಹಾಗೂ ಇಯಾನ್ ಬ್ಯಾಟರಿ ಬೇಗನೆ ಬಿಸಿಯಾಗಲಿದೆ. ಇದು ಕೂಡ ಸ್ಫೋಟಕ್ಕೆ ಕಾರಣವಾಗಲಿದೆ. ಫೋನ್ ನೀರಿಗೆ ಬಿದ್ದು ಬ್ಯಾಟರಿಯಲ್ಲಿ ನೀರು ಸೇರಿಕೊಂಡರೂ ಅಪಾಯ ಹೆಚ್ಚು.