ಇಂದಿನಿಂದ ದೇಶದಲ್ಲಿ 5ಜಿ ಕ್ರಾಂತಿ: ಏನಿದರ ವಿಶೇಷತೆ?

ಇನ್ನು ವಿಳಂಬ ಮುಕ್ತ ಅಲ್ಟ್ರಾ ಹೈಸ್ಪೀಡ್‌ ಇಂಟರ್‌ನೆಟ್‌ ಸೇವೆ, ಡಿಜಿಟಲ್‌ ಕ್ರಾತಿಗೆ ನಾಂದಿ ಅನೇಕ ಉದ್ಯೋಗ ಅವಕಾಶ

5G Services Starts on October 1st in India grg

ನವದೆಹಲಿ(ಅ.01):  ಇಂದು(ಅ.1 ರಂದು) ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5ಜಿ ದೂರಸಂಪರ್ಕ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಮೊದಲಿಗೆ ಆಯ್ದ ಕೆಲವು ನಗರಗಳಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಲಾಗುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಇಡೀ ದೇಶಾದ್ಯಂತ 5ಜಿ ಸೇವೆಗಳು ಲಭ್ಯವಾಗಲಿದೆ. 5ಜಿ ಅಲ್ಟ್ರಾ ಹೈಸ್ಪೀಡ್‌-ವಿಳಂಬ ಮುಕ್ತ ಇಂಟರ್‌ನೆಟ್‌ ಸೇವೆಯಾಗಿದ್ದು, ಭಾರತದಲ್ಲಿ ಡಿಜಿಟಲ್‌ ಕ್ರಾಂತಿಗೆ ಕಾರಣವಾಗಲಿದೆ ಹಾಗೂ ಇದರಿಂದಾಗಿ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳಲಿವೆ ಎಂಬ ನಿರೀಕ್ಷೆಯಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಏನಿದು 5ಜಿ?

5ಜಿ ಎಂಬುದು 5ನೇ ಪೀಳಿಗೆ ಮೊಬೈಲ್‌ ನೆಟ್‌ವರ್ಕ್ ಆಗಿದೆ. ಇದು 4ಜಿ ಬಳಿಕ ಬಂದ ಹೊಸ ಜಾಗತಿಕ ವೈರ್‌ಲೆಸ್‌ ಸ್ಟಾಂಡರ್ಡ್‌ ಎನಿಸಿಕೊಂಡಿದೆ. 5ಜಿ ಬಹು-ಜಿಬಿಪಿಎಸ್‌ ಗರಿಷ್ಠ ಡೇಟಾ ವೇಗ, ಹೆಚ್ಚು ವಿಶ್ವಾಸಾರ್ಹತೆ, ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಸುಧಾರಿತ ನೆಟ್‌ವರ್ಕ್ ಆಗಿದೆ. ಇದು ಅಲ್ಟಾ್ರ ಹೈಸ್ಪೀಡ್‌ನಲ್ಲಿ ವಿಳಂಬ ಮುಕ್ತ ಸಂಪರ್ಕವನ್ನು ಬಳಕೆದಾರರಿಗೆ ಒದಗಿಸುತ್ತದೆ. ಅತ್ಯಧಿತ ಸಂಖ್ಯೆಯ ಬಳಕೆದಾರರಿಗೆ ಏಕರೂಪದ ಸೇವೆಯನ್ನು ಹಾಗೂ ಹೊಸ ಪೀಳಿಗೆ ಬಳಕೆದಾರರ ಅನುಭವವನ್ನು ತಲುಪಿಸುವ ಉದ್ದೇಶ ಹೊಂದಿದೆ.

ಅ.1ಕ್ಕೆ 5ಜಿ ಆರಂಭ, ಹೊಸ ಸೇವೆಯಿಂದ 3G, 4G ಫೋನ್ ಕರೆ, ಡೇಟಾ ಕಾರ್ಯನಿರ್ವಹಿಸುತ್ತಾ?

ಇಂದು ಎಲ್ಲೆಲ್ಲಿ ಚಾಲನೆ?

ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಆದರೆ ಸೆ.29ರಂದು ಗುರುವಾರ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 5ಜಿ ಸೇವೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಮೆಟ್ರೋ ನಗರಗಳು ಸೇರಿ 13 ನಗರಗಳಲ್ಲಿ ಸೇವೆ ಸಿಗಬಹುದು ಎನ್ನಲಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ ಇಡೀ ದೇಶದಲ್ಲಿ 5ಜಿ ಸೇವೆ ಲಭ್ಯವಾಗಲಿದೆ.

ಭಾರತ 11ನೇ ದೇಶ

ಈಗಾಗಲೇ 10 ದೇಶಗಳಲ್ಲಿ 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಅಮೆರಿಕ, ಚೀನಾ, ಫಿಲಿಪ್ಪಿನ್‌, ಉತ್ತರ ಕೊರಿಯಾ, ಕೆನಡಾ, ಸ್ಪೇನ್‌ ಇಟಲಿ, ಜರ್ಮನಿ, ಬ್ರಿಟನ್‌, ಸೌದಿ ಅರೇಬಿಯಾದಲ್ಲಿ 5ಜಿ ನೆಟ್‌ವರ್ಕ್ ಲಭ್ಯವಿದ್ದು, ಈ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ.

5ಜಿ ಅನ್ವೇಷಕರು ಯಾರು?

ಯಾವುದೇ ಒಂದು ಕಂಪನಿ ಅಥವಾ ಒಬ್ಬ ವ್ಯಕ್ತಿ 5ಜಿ ಒಡೆತನವನ್ನು ಪಡೆದುಕೊಂಡಿಲ್ಲ. ಆದರೆ ಮೊಬೈಲ್‌ ಸಿಸ್ಟಮ್‌ಗಳಲ್ಲಿರುವ ಹಲವಾರು ಕಂಪನಿಗಳು ಸೇರಿ 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿವೆ.

4ಜಿಗಿಂತ ಬಹುಪಟ್ಟು ವೇಗ

4ಜಿ ನೆಟವರ್ಕ್‌ಗಿಂತ 5ಜಿ ಬಹುಪಟ್ಟು ವೇಗವಾಗಿದೆ. ಪ್ರತಿ ಸೆಕೆಂಡಿಗೆ 20 ಗಿಗಾಬೈಟ್‌ (ಜಿಬಿಪಿಎಸ್‌) ಸಾಮರ್ಥ್ಯವನ್ನು ಹೊಂದಿದೆ. ಅದೇ 4ಜಿ ಅತ್ಯಧಿಕ ವೇಗ ಕೇವಲ 1 ಜಿಬಿಪಿಎಸ್‌ ಆಗಿದೆ.

ಕಾರ್ಯನಿರ್ವಹಣೆ ಹೇಗೆ?

4ಜಿ ಎಲ್‌ಇಟಿಯಂತೆ, 5ಜಿ ಸಹ ಒಎಫ್‌ಡಿಎಂ-(ಆರ್ಥೋಗೋನಲ… ಫ್ರೀಕ್ವೆನ್ಸಿ-ಡಿವಿಷನ್‌ ಮಲ್ಟಿಪ್ಲೆಕ್ಸಿಂಗ್‌) ಆಧಾರಿತವಾಗಿದ್ದು, ಅದೇ ಮೊಬೈಲ… ನೆಟ್‌ವರ್ಕಿಂಗ್‌ ತತ್ವಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.

5ಜಿ ಲಾಭವೇನು?

5ಜಿ ಸೇವೆ ಸ್ಮಾರ್ಚ್‌ಫೋನುಗಳು ದಕ್ಷತೆ, ಕಾರ್ಯಕ್ಷಮತೆ ಇನ್ನಷ್ಟುಹೆಚ್ಚಿಸುತ್ತದೆ. ಆನ್ಲೈನ್‌ ಗೇಮಿಂಗ್‌, ಸ್ವಯಂಚಾಲಿತ ಕಾರುಗಳ ನಿರ್ವಹಣೆ, ವಿಡಿಯೋ ಕಾನ್ಫರೆನ್ಸಿಂಗ್‌ ಮೊದಲಾದ ಡಿಜಿಟಲ್‌ ಅನುಭವ ಸುಧಾರಿಸುತ್ತದೆ.
ಇ- ಆರೋಗ್ಯ ಸೇವೆ, ಮೆಟಾವರ್ಸ್‌ ಅನುಭವಗಳು, ಅಡ್ವಾನ್ಸಡ್‌ ಮೊಬೈಲ್‌ ಕ್ಲೌಡ್‌ ಗೇಮಿಂಗ್‌ಗೆ ನೆರವಾಗುತ್ತದೆ. ಹೊಸ ಇಮ್ಮರ್ಸಿವ್‌ ವರ್ಚುವಲ್‌ ವಾತಾವರಣ ಸೃಷ್ಟಿಸುವ ವರ್ಚುವಲ್‌ ರಿಯಾಲಿಟಿ ಹಾಗೂ ಆಗ್‌ಮೆಂಟೆಡ್‌ ರಿಯಾಲಿಟಿ ಅನುಭವ ಉತ್ತಮಪಡಿಸುತ್ತದೆ. 5ಜಿ ಮೂಲಕ ಕ್ಲಿಷ್ಟಕರ ಮೂಲಸೌಕರ್ಯ, ವಾಹನ ಹಾಗೂ ವೈದ್ಯಕೀಯ ಕಾರ್ಯವಿಧಾನಗಳನ್ನು ದೂರದಿಂದಲೇ ಹೆಚ್ಚು ಸಮರ್ಥವಾಗಿ ನಿರ್ವಹಿಸಬಹುದಾಗಿದೆ. ಇದು ಬೌಂಡ್‌ಲೆಸ್‌ ಎಕ್ಸ್‌ಟ್ರೀಮ್‌ ರಿಯಾಲಿಟಿ, ಲೋಕಲ್‌ ಇಂಟರ್‌ಆಕ್ಟಿವ್‌ ಕಂಟೆಂಟ್‌, ತಕ್ಷಣ ಕ್ಲೌಡ್‌ ಎಕ್ಸೆಸ್‌ ಸೇವೆಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಇದು ಐಒಟಿ (ಇಂಟರ್‌ನೆಟ್‌ ಆಫ್‌ ಥಿಂಗ್‌್ಸ), ಎಂ2ಎಂ (ಮಶೀನ್‌ ಟು ಮಶೀನ್‌ ಕಮ್ಯುನಿಕೇಶನ್‌), ಎಐ (ಕೃತಕ ಬುದ್ಧಿಮತ್ತೆ), ಎಡ್ಜ್‌ ಕಂಪ್ಯೂಟಿಂಗ್‌, ರೊಬೊಟಿಕ್ಸ್‌ ಮೊದಲಾದ ಸುಧಾರಿತ ತಂತ್ರಜ್ಞಾನಕ್ಕೂ 5ಜಿ ನೆಟವರ್ಕ್ ಬೆಂಬಲಿಸಲಿದೆ. 5ಜಿ ಪ್ರತಿ ಬಿಟ್‌ಗೆ ಕಡಿಮೆ ವೆಚ್ಚ ಹಾಗೂ ಹೆಚ್ಚು ಏಕರೂಪದ ಡೇಟಾ ವೆಚ್ಚವನ್ನು ಹೊಂದಿದೆ.

5ಜಿ ಸೇವೆ ದುಬಾರಿ

ಹೆಚ್ಚು ಕಡಿಮೆ 4ಜಿ ಸೇವೆಗಳನ್ನು ಒದಗಿಸುವ ಬೆಲೆಯಲ್ಲೇ 5ಜಿಯನ್ನು ಒದಗಿಸುವುದಾಗಿ ಏರ್‌ಟೆಲ್‌ ಘೋಷಿಸಿದೆ. ಆದರೂ ಟೆಲಿಕಾಂ ಕಂಪನಿಗಳು 4ಜಿಗಿಂತ 5ಜಿ ಸೇವೆಗಳ ಬೆಲೆ ಹೆಚ್ಚಿಸುವ ಸಾಧ್ಯತೆಗಳಿವೆ.

4ಜಿಗಿಂತ ಹೇಗೆ ಉತ್ತಮ?

ಇದು ಅಲ್ಟ್ರಾ ಹೈಸ್ಪೀಡ್‌ ವಿಳಂಬ ಮುಕ್ತ ಸಂವಹನಕ್ಕೆ ನೆರವಾಗುತ್ತದೆ. ಪ್ರತಿ ಸೆಕೆಂಡಿಗೆ 20 ಗಿಗಾಬೈಟ್‌ (ಜಿಬಿಪಿಎಸ್‌) ಸಾಮರ್ಥ್ಯವನ್ನು ಹೊಂದಿದೆ. ಅದೇ 4ಜಿ ಅತ್ಯಧಿಕ ವೇಗ ಕೇವಲ 1 ಜಿಬಿಪಿಎಸ್‌ ಆಗಿದೆ. ಲೆಟೆನ್ಸಿ (ಸಂವಹನದಲ್ಲಾಗುವ ವಿಳಂಬ) 4ಜಿ ಯಲ್ಲಿ 55 ಮಿಲಿಸೆಕೆಂಡ್‌ಗಳಷ್ಟಿದ್ದರೆ, 5ಜಿಯಲ್ಲೇ ಕೇವಲ 10 ಮಿಲಿಸೆಕೆಂಡ್‌ಗಳಷ್ಟಿದೆ.

ಜಿಯೋ ಘೋಷಣೆಗೆ ಭಾರತದಲ್ಲಿ ಸಂಚಲನ, ದೀಪಾವಳಿ ಹಬ್ಬಕ್ಕೆ 5ಜಿ ಸೇವೆ ಆರಂಭ!

5ಜಿ ಬಳಸಲು 5ಜಿ ಫೋನ್‌ ಬೇಕೆ?

5ಜಿ ನೆಟ್‌ವರ್ಕ್ ಅನ್ನು ಬಳಸಲು 5ಜಿ ತಂತ್ರಜ್ಞಾನವನ್ನು ಬೆಂಬಲಿಸುವ ಹೊಸ ಸ್ಮಾರ್ಚ್‌ಫೋನ್‌ ಬೇಕಾಗುತ್ತದೆ. 5ಜಿ ಸೇವೆಯ ವ್ಯಾಪ್ತಿ ದಿನೇ ದಿನೇ ಹೆಚ್ಚುತ್ತಿದ್ದಂತೆ ಮಾರುಕಟ್ಟೆಗೆ ಹೆಚ್ಚೆಚ್ಚು 5ಜಿ ಮೊಬೈಲ್‌ಗಳು ಬರಲಿವೆ.

ಇನ್ನು 4ಜಿ ಬಳಕೆ ನಿಲ್ಲಲಿದೆಯೇ?

ಇಲ್ಲ, 5ಜಿ ಸೇವೆಗಳು ಆರಂಭವಾದ ಬಳಿಕವೂ 4ಜಿ ಸೇವೆಗಳನ್ನು ಮುಂದುವರೆಸಲಾಗುತ್ತದೆ. ಹೀಗಾಗಿ 4ಜಿ ಮೊಬೈಲ್‌ಗಳನ್ನು ಬಳಸಬಹುದು. ಆದರೆ 4ಜಿ ಮೊಬೈಲ್‌ಗಳಲ್ಲಿ ಬಳಸಲಾದ ತಂತ್ರಜ್ಞಾನ 5ಜಿ ನೆಟ್‌ವರ್ಕ್ಗೆ ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ 5ಜಿ ಬಳಕೆಗೆ 5ಜಿ ತಂತ್ರಜ್ಞಾನ ಬೆಂಬಲಿಸುವ ಸ್ಮಾರ್ಚ್‌ಫೋನ್‌ ಬೇಕಾಗುತ್ತದೆ.

ಹಿಂದಿನ ನೆಟವರ್ಕ್ ಯಾವುದು?

5ಜಿ ಗಿಂತ ಮೊದಲು 1ಜಿ,2ಜಿ, 3ಜಿ, 4ಜಿ- ಈ 4 ಪೀಳಿಗೆ ಮೊಬೈಲ್‌ ನೆಟ್‌ವರ್ಕ್ಗಳು ಬಂದಿವೆ.
- 1ಜಿ: 1980ರ ದಶಕದಲ್ಲಿ ಬಂದ 1ಜಿ ನೆಟ್‌ವರ್ಕ್ನಿಂದ ಕೇವಲ ಅನಲಾಗ್‌ ಧ್ವನಿ ರವಾನಿಸಬಹುದಾಗಿತ್ತು.
- 2ಜಿ: 1990ರ ದಶಕದಲ್ಲಿ ಬಂದ 2ಜಿ ಸೇವೆಯು ಡಿಜಿಟಲ್‌ ಧ್ವನಿ ಕರೆ ಪರಿಚಯಿಸಿತು.
- 3ಜಿ: 2000ನೇ ದಶಕದಲ್ಲಿ ಬಂದ 3ಜಿ ಸೇವೆ ಮೊಬೈಲ್‌ ಡೇಟಾ ಬಳಕೆಗೆ ಅನುವು ಮಾಡಿಕೊಟ್ಟಿತು.
- 4ಜಿ: 2010ನೇ ದಶಕದಲ್ಲಿ ಬಂದ 4ಜಿ ಸೇವೆ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಸೇವೆ ಪರಿಚಯಿಸಲಾಯಿತು.
 

Latest Videos
Follow Us:
Download App:
  • android
  • ios