ಯೋಗಿನಿಯಾದಳೆ ಈ ಬಾಲಿವುಡ್ ಬ್ಯೂಟಿ..ಕಾರಣವೇನು?

First Published 24, Jul 2018, 3:25 PM IST
Bollywood Beauty Kangana Ranaut is a vision in white as she poses with Adiyogi
Highlights

ಈ ಬಾಲಿವುಡ್ ನಟಿಗೆ ಏನಾಗಿದೆ? ಈಕೆ ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರಾ? ಇದ್ದಕ್ಕಿದ್ದಂತೆ ಅಧ್ಯಾತ್ಮದ ಕಡೆ ಒಲವು ಬೆಳೆಯಲು ಕಾರಣವೇನು? ಯಾರು ಈ ನಟಿ?ಎಲ್ಲ ವಿವರಕ್ಕೆ ಈ ಸುದ್ದಿ ಓದಿ..

ಬಾಲಿವುಡ್ ಸುಂದರಿ ಕಂಗನಾ ರಣಾವತ್ ನಿಧಾನವಾಗಿ ಅಧ್ಯಾತ್ಮದ ಕಡೆ ವಾಲುತ್ತಿದ್ದಾರೆಯೇ? ಅವರ ಇತ್ತೀಚಿನ ನಡವಳಿಕೆಗಳೂ ಹೌದು ಎಂಬ ಉತ್ತರ ನೀಡುತ್ತವೆ. ಇನ್ ಸ್ಟಾಗ್ರಾಮ್ ನಲ್ಲಿ  ಕಂಗಾನಾ ಅಪ್ ಲೋಡ್ ಮಾಡಿರುವ ಫೋಟೋದಲ್ಲಿ ಯೋಗಿನಿಯಂತೆ ಕಾಣುತ್ತಿದ್ದಾರೆ.

ಕೋಯಂಬತ್ತೂರಿನ ದೊಡ್ಡ ಶಿವನ ಪ್ರತಿಮೆ ಎದುರು ಬಿಳಿ ಸೀರೆಯಲ್ಲಿ ಕಾಣಿಸಿಕೊಂಡಿರುವ ಕಂಗನಾ ಅತಿ ಕಡಿಮೆ ಮೇಕಪ್ ನಲ್ಲಿ ಇರುವುದು ವಿಶೇಷ. ಫೋಟೋವನ್ನು ಹಾಕಿರುವುದಲ್ಲದೇ ಇದನ್ನು symbol of purity’ ಮತ್ತು ‘vision of oomph ಎಂದು ಕರೆದಿದ್ದಾರೆ.

ಮೈಕ್ರೋಫೋನ್ ಎಡವಟ್ಟು, ಜಾರಿದ ಟಿವಿ ನಿರೂಪಕಿಯ ಮೇಲುಡುಪು

ಹಿಂದೊಮ್ಮೆ ಜಗಳಗಂಟರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಪಾಠ ಮಾಡಿದ್ದ ಕಂಗನಾ ನನ್ನ ವರ್ತನೆ ಇರುವುದು ಹೀಗೆ ಎಂದು ಸಮರ್ಥಿಸಿಕೊಂಡಿದ್ದರು. ಬಿಕಿನಿ ಧರಿಸುವ ವಿಚಾರದಲ್ಲಿ ವಾದ ಎದ್ದಾಗ ನಟಿಮಣಿಗಳ ಪರವಾಗಿ ಬ್ಯಾಟ್ ಬೀಸಿದ್ದ ಕಂಗನಾ ತಪ್ಪೇನು? ಎಂದು ಪ್ರಶ್ನೆ ಮಾಡಿದ್ದರು.

 

loader