ವಿಶೇಷಚೇತನ ಮಹಿಳೆಗೆ ಪ್ರವೇಶ ನಿರಾಕರಿಸಿದ ಪಬ್

  • ವಿವಾದಕ್ಕೀಡಾದ ಗುರುಗ್ರಾಮ್‌ನ ರಸ್ತಾ ಪಬ್‌
  • ವಿಶೇಷಚೇತನ ಮಹಿಳೆಗೆ ಪ್ರವೇಶ ನಿರಾಕರಿಸಿದ ಆರೋಪ
  • ಆರೋಪ ನಿರಾಕರಿಸಿದ ರಸ್ತಾ ಪಬ್‌
Gurugram Pub Denies Entry To Differently Abled Woman akb

ಗುರುಗ್ರಾಮ್: ಇಲ್ಲಿನ ಸೈಬರ್ ಹಬ್‌ನಲ್ಲಿರುವ ಐಷಾರಾಮಿ ರೆಸ್ಟೋರೆಂಟ್‌ವೊಂದು ಗಾಲಿಕುರ್ಚಿಯಲ್ಲಿ ಆಗಮಿಸಿದ ಅಂಗವಿಕಲ ಮಹಿಳೆಗೆ ಪ್ರವೇಶ ನಿರಾಕರಿಸಿ ವಿವಾದಕ್ಕೆ ಗುರಿಯಾಗಿದೆ. ವಿಕಲಚೇತನ ಮಹಿಳೆಗೆ ಪ್ರವೇಶ ನೀಡಿದರೆ, ಇದು ಇತರ ಗ್ರಾಹಕರಿಗೆ ತೊಂದರೆ ನೀಡುತ್ತದೆ ಎಂದು ತನಗೆ ಪ್ರವೇಶ ನಿರಾಕರಿಸಿದರು ಎಂದು ವಿಶೇಷ ಚೇತನ ಯುವತಿ ಆರೋಪಿಸಿದ್ದಾಳೆ. ಆದರೆ ಇದನ್ನು ಪಬ್‌ನ ಆಡಳಿತ ಮಂಡಳಿ ನಿರಾಕರಿಸಿದೆ. 

ಸೃಷ್ಟಿ ಪಾಂಡೆ ಎಂಬ ವಿಶೇಷ ಚೇತನ ಯುವತಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ಹಂಚಿಕೊಂಡ ಬಳಿಕ ರಾಸ್ತಾ ಪಬ್‌ನ (Raasta pub) ಮ್ಯಾನೇಜರ್, ಬಿ ಮಾಧವ್ ( B Madhav) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಿಳೆಗೆ ಪ್ರವೇಶವನ್ನು ನಿರಾಕರಿಸಲಾಗಿಲ್ಲ ಆದರೆ ಪಬ್‌ ಅಂದು ಕಿಕ್ಕಿರಿದಿದ್ದರಿಂದ  ವಿಲ್‌ಚೇರ್‌ನಿಂದಾಗಿ ಅಲ್ಲಿ ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕೆ ಅವರ ಗಾಲಿಕುರ್ಚಿ ಡ್ಯಾನ್ಸ್ ಫ್ಲೋರ್‌ಗೆ ಹೋಗುವುದನ್ನು ತಡೆಯಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ. 

 

ನಾನು ನಿನ್ನೆ ರಾತ್ರಿ ನನ್ನ ಆತ್ಮೀಯ ಸ್ನೇಹಿತೆ ಮತ್ತು ಆಕೆಯ ಕುಟುಂಬದೊಂದಿಗೆ @raastagurgaon ಪಬ್‌ಗೆ ಹೋಗಿದ್ದೆ. ಮೋಜು ಮಾಡಲು ಬಯಸಿ ತುಂಬಾ ದಿನಗಳ ನಂತರ ಮೊದಲ ಬಾರಿ ನಾನು ಹೊರಗೆ ಹೊರಟ್ಟಿದೆ.  ನನ್ನ ಸ್ನೇಹಿತೆಯ ಅಣ್ಣ ನಾಲ್ವರಿಗೆ ಟೇಬಲ್ ಕೇಳಿದರು. ಆದರೆ ಅಲ್ಲಿದ್ದ ಸಿಬ್ಬಂದಿ ಅವರನ್ನು ಎರಡು ಬಾರಿ ನಿರ್ಲಕ್ಷಿಸಿದರು ಎಂದು ಸೃಷ್ಟಿ ಪಾಂಡೆ ಶನಿವಾರ ಸರಣಿ ಟ್ವೀಟ್‌ ಮಾಡಿ ಪಬ್‌ನಲ್ಲಾದ ಘಟನೆಯನ್ನು ವಿವರಿಸಿದ್ದಾರೆ.

ಮೊದಲಿಗೆ ಅವರು ಪ್ರವೇಶ ನಿರಾಕರಿಸಿದಾಗ ನಾವು ಇದು ವೀಲ್‌ಚೇರ್‌ ಪ್ರವೇಶಕ್ಕೆ ಸಮಸ್ಯೆ ಇರುವುದರಿಂದ ನಿರಾಕರಿಸಿರಬಹುದು ಎಂದು ಭಾವಿಸಿದೆವು. ಆದರೆ ರೆಸ್ಟೋರೆಂಟ್‌ನಲ್ಲಿನ ಸಿಬ್ಬಂದಿ ನನ್ನ ಉಪಸ್ಥಿತಿಯಿಂದ ಇತರ ಗ್ರಾಹಕರು ತೊಂದರೆಗೊಳಗಾಗಬಹುದು ಎಂದು ಸೂಚಿಸಿದಾಗ ನಮಗೆ ಆಘಾತವಾಯಿತು ಎಂದು ಹೇಳಿದರು.

ಒಳಗಡೆ ಇರುವ ಗ್ರಾಹಕರು ತೊಂದರೆಗೊಳಗಾಗುತ್ತಾರೆ ಎಂದು ಅವರು ನನ್ನ ಕಡೆಗೆ ತೋರಿಸುತ್ತಾ ನಮಗೆ ಹೇಳಿದರು ಮತ್ತು ತುಂಬಾ ಸುಲಭವಾಗಿ ಪ್ರವೇಶವನ್ನು ನಿರಾಕರಿಸಿದರು. ಇದಾದ ಬಳಿಕ ಸಾಕಷ್ಟು ಜಗಳವಾದ ನಂತರ ಹೊರಗೆ ಟೇಬಲ್ ತೆಗೆದುಕೊಳ್ಳುವಂತೆ ಹೇಳಿದರು. ಹೊರಗಿನ ಆಸನಗಳು  ತಣ್ಣಗಾಗುತ್ತಿತ್ತು. ಮತ್ತು ನನ್ನ ದೇಹವು ದುರ್ಬಲ ಆಗಿರುವುದರಿಂದ ನಾನು ಹೆಚ್ಚು ಕಾಲ ಶೀತದಲ್ಲಿ ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ, ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಸೃಷ್ಟಿ ಪಾಂಡೆ ಅವರು ಪಬ್ ಸಿಬ್ಬಂದಿಯೊಂದಿಗೆ ನಡೆದ ವಾದದ ವೀಡಿಯೊವನ್ನೂ ಪೋಸ್ಟ್ ಮಾಡಿದ್ದಾರೆ.

Bengaluru: ಪಾರ್ಕಿಂಗ್‌ ವಿಚಾರಕ್ಕೆ ನಡು ರಸ್ತೆಯಲ್ಲೇ ಎಎಸ್‌ಐ, ಅಂಗವಿಕಲೆ ಮಾರಾಮಾರಿ!

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ರಾಸ್ತಾ ಪಬ್‌, ನಾವು ಅವರಿಗೆ ಯಾವುದೇ ಪ್ರವೇಶವನ್ನು ನಿರಾಕರಿಸಲಿಲ್ಲ ಆದರೆ ಅವಳು ತನ್ನ ಗಾಲಿಕುರ್ಚಿಯೊಂದಿಗೆ ಡಾನ್ಸ್‌ ಪ್ಲೋರ್‌ಗೆ ಹೋಗಲು ಬಯಸಿದ್ದಳು. ಆದರೆ ಆ ಮಹಡಿ ಮೆಟ್ಟಿಲುಗಳನ್ನು ಹೊಂದಿತ್ತು ಮತ್ತು ಕಿಕ್ಕಿರಿದಿತ್ತು. ಹೀಗಾಗಿ ಅಪಘಾತ ಸಂಭವಿಸಬಹುದು ಮತ್ತು ಆಕೆಯ ಸುರಕ್ಷತೆಯೂ ಮುಖ್ಯವಾಗಿತ್ತು ಎಂದು ಮಾಧವ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಘಟನೆ ಬಗ್ಗೆ ನಟಿ, ಚಿತ್ರ ನಿರ್ಮಾಪಕಿ ಪೂಜಾ ಭಟ್ ಪ್ರತಿಕ್ರಿಯಿಸಿದ್ದು, ನಿಮಗೆ ಹೀಗೆ ಆಗಿರುವುದಕ್ಕೆ ನನಗೆ ತುಂಬಾ ಬೇಸರವೆನಿಸಿದೆ. ಸಮಾಜದಲ್ಲಿನ ಮಾನವೀಯತೆಯ ಕೊರತೆಯಿಂದ ನಾವು ಬಳಲುತ್ತಿದ್ದೇವೆ. ಗಾಲಿಕುರ್ಚಿಗೆ ಪ್ರವೇಶ ನೀಡುವುದು ಒಂದು ವಿಚಾರ ಆದರೆ ಎಲ್ಲರನ್ನೂ ಸಮಾನವಾಗಿ ಕಾಣುವುದನ್ನು ನಿರಾಕರಿಸುವುದು ಖೇದಕರ ಎಂದು ಹೇಳಿದ್ದಾರೆ.

7 ವರ್ಷಗಳ ಪ್ರಯತ್ನ, ಗುಜರಿ ವಸ್ತುಗಳಿಂದ ಟವರ್ ಕ್ಲಾಕ್ ; ಅಂಗವೈಕಲ್ಯ ಮೆಟ್ಟಿ ನಿಂತ ವಿಜಯ್.!

ಈ ಬಗ್ಗೆ ರಾಸ್ತಾದ ಸಂಸ್ಥಾಪಕ ಪಾಲುದಾರ ಗೌಮ್ತೇಶ್ ಸಿಂಗ್ (Goumtesh Singh) ಕೂಡ  ಸೃಷ್ಟಿ ಪಾಂಡೆ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ನಾನು ಈ ಘಟನೆಯನ್ನು ವೈಯಕ್ತಿಕವಾಗಿ ನೋಡುತ್ತಿದ್ದೇನೆ. ನೀವು ಅನುಭವಿಸಿದ ಯಾವುದೇ ಕೆಟ್ಟ ಅನುಭವಕ್ಕಾಗಿ ಇಡೀ ತಂಡದ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ. ನಮ್ಮ ಸದಸ್ಯರು ಯಾರಾದರೂ ತಪ್ಪಾಗಿ ನಡೆಸಿಕೊಂಡಿದ್ದರೆ, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಗುರುಗ್ರಾಮ್ ಪೊಲೀಸರು ಕೂಡ ಪಾಂಡೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಅವರ ದೂರವಾಣಿ ಹಾಗೂ ವಿಳಾಸವನ್ನು ಕೇಳಿದ್ದಾರೆ. ಆದರೆ, ಡಿಎಲ್‌ಎಫ್ 2ನೇ ಹಂತದ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಪವನ್ ಮಲಿಕ್ (Pawan Malik), ನಾವು ಇನ್ನೂ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios