Interesting Facts: ಮುಳುಗ್ತೀನೆಂದ್ರೂ ಈ ಸಮುದ್ರಲ್ಲಿ ಮುಳುಗಿ ಸಾಯೋಲ್ಲ

ಸಮುದ್ರದಲ್ಲಿ ಈಜಾಡೋ ಮನಸ್ಸಿರುತ್ತೆ. ಆದ್ರೆ ಮುಂದೆ ಮುಂದೆ ಹೋದಂತೆ ಭಯ ಶುರುವಾಗುತ್ತೆ. ಸಮುದ್ರಲ್ಲಿ ಮುಳುಗಿ ಸತ್ತವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಈಗ ನಾವು ಹೇಳ್ತಿರೋ ಸರೋವರದಲ್ಲಿ ನೀವು ಏನೆ ಮಾಡಿದ್ರೂ ಮುಳುಗೋದಿಲ್ಲ.

Dead Sea The Mysterious Sea In Which No One Can Drown Even If They Want roo

ಪ್ರಕೃತಿ ಅನೇಕ ರಹಸ್ಯಮಯ ಸ್ಥಳಗಳನ್ನು ಹೊಂದಿದೆ. ಅಂತಹ ಎಷ್ಟೋ ರಹಸ್ಯಗಳನ್ನು ಇಂದಿಗೂ ಮಾನವನಿಗೆ ಬೇಧಿಸಲು ಸಾಧ್ಯವಾಗಲಿಲ್ಲ. ಕೆಲವು ವಿಚಿತ್ರ ಸ್ಥಳ, ಘಟನೆ ಮತ್ತು ವಸ್ತುಗಳ ರಹಸ್ಯವನ್ನು ತಿಳಿದುಕೊಳ್ಳುವಲ್ಲಿ ವಿಜ್ಞಾನಿಗಳು ಕೂಡ ಸೋತಿದ್ದಾರೆ. ಇಂದು ನಾವು ಅಂತಹುದೇ ಒಂದು ವಿಚಿತ್ರ ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಸಮುದ್ರ ಎಂದಾಕ್ಷಣ ಭಯಂಕರ ಅಲೆಗಳು ಹಾಗೂ ಅಲ್ಲಿರುವ ದೈತ್ಯಾಕಾರದ ಸಮುದ್ರ ಜೀವಿಗಳ ನೆನಪಾಗುತ್ತವೆ. ಅಲ್ಲಿ ಮುಳುಗಿದರೆ ದೇವರ ಪಾದವೇ ಗತಿ ಎಂದು ಸಮುದ್ರದಲ್ಲಿ ಈಜಲು (Swim) ಕೂಡ ಭಯಪಡುತ್ತಾರೆ. ಆದರೆ ಇಂದು ನಾವು ಹೇಳಲಿರುವ ಈ ಸಮುದ್ರದಲ್ಲಿ ನೀವು ಈಜಿದರೆ ನೀವು ಮುಳುಗೋದೇ ಇಲ್ಲ. ಹಾಗಾಗಿ ಈ ಸಮುದ್ರದಲ್ಲಿ ಈಜಲು ಬರದೇ ಇದ್ದವರು ಕೂಡ ಯಾವುದೇ ಭಯವಿಲ್ಲದೇ ಈಜಬಹುದು.

ಇನ್ಮುಂದೆ ಕೈಲಾಸ ಯಾತ್ರೆ ಬಹಳ ಸುಲಭ: ಚೀನಾ, ನೇಪಾಳಕ್ಕೆ ಹೋಗ್ದೆ

ಮುಳಗದೇ ಇರುವ ಈ ಸಮುದ್ರ ಯಾವುದು ? : ಈ ಸಮುದ್ರದ ಹೆಸರು Dead Sea. ಜೋರ್ಡನ್ ಮತ್ತು ಇಸ್ರೇಲ್ ನಡುವೆ ಇದೆ. ಈ ಸಮುದ್ರವು ವಿಶ್ವ (World) ದ ಅತ್ಯಂತ ಆಳವಾದ ಉಪ್ಪುನೀರಿನ ಸರೋವರ ಎಂದು ಪ್ರಸಿದ್ಧವಾಗಿದೆ. ಈ ಸಮುದ್ರದ ನೀರಿನ ಒತ್ತಡ ಮೇಲ್ಮುಖವಾಗಿರುವುದರಿಂದ ಯಾರೂ ಇಲ್ಲಿ ಮುಳುಗೋದಿಲ್ಲ.  ಹಾಗಾಗಿ ನೀವು ಈ ಸಮುದ್ರದಲ್ಲಿ ಹೇಗೆ ಬೇಕಾದರೂ ಈಜಬಹುದು, ಮಲಗಬಹುದು ಅಥವಾ ಆರಾಮಾಗಿ ಪುಸ್ತಕಗಳನ್ನು ಕೂಡ ಓದಬಹುದು. ಈ ವಿಚಿತ್ರ ಹಾಗೂ ಅದ್ಭುತವಾದ ಸಮುದ್ರವನ್ನು ನೋಡಲು ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಮಗೆ ಹೇಗೆ ಬೇಕೋ ಹಾಗೆ ಸ್ವಲ್ಪವೂ ಭಯವಿಲ್ಲದೇ ನೀರಿನ ಜೊತೆ ಆಟವಾಡುತ್ತಾರೆ. ಡೆಡ್ ಸೀ ಸಮುದ್ರ ಮಟ್ಟಕ್ಕಿಂತ ಸುಮಾರು 1388 ಅಡಿ ಕೆಳಗಿದೆ. ಇದು ಸುಮಾರು ಮೂರು ಲಕ್ಷ ವರ್ಷಗಳಷ್ಟು ಹಳೆಯ ಸಮುದ್ರ ಎಂದು ಹೇಳಲಾಗುತ್ತೆ. ಈ ಸಮುದ್ರದಲ್ಲಿ ನೀರಿನ ಸಾಂದ್ರತೆ ತುಂಬಾ ಹೆಚ್ಚಿಗೆ ಇದ್ದು ಇದರಲ್ಲಿ ನೀರಿನ ಹರಿವು ಕೆಳಗಿನಿಂದ ಮೇಲ್ಮುಖವಾಗಿದೆ. ಹಾಗಾಗಿ ನೀವು ನೀರಿನ ಮೇಲೆ ಮಲಗಿದರೂ ಮುಳುಗೋದಿಲ್ಲ.

ಸಕಲವನ್ನೂ ಮೀರಿದ ನಾಗಸಾಧುಗಳು ಭಂಗಿ ಸೇದುವುದ್ಯಾಕೆ?

ಡೆಡ್ ಸೀ ಎಂದು ಏಕೆ ಕರೆಯುತ್ತಾರೆ? : ಈ ಸಮುದ್ರದ ನೀರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲವಣಾಂಶವನ್ನು ಹೊಂದಿದೆ. ಹೆಚ್ಚು ಉಪ್ಪಿನಾಂಶ ಹೊಂದಿರುವುದರಿಂದ ಈ ಸಮುದ್ರದಲ್ಲಿ ಯಾವ ಜೀವಿಯೂ ಬದುಕೋದಿಲ್ಲ. ಸಮುದ್ರ ಜೀವಿಗಳು ಮಾತ್ರವಲ್ಲ ಹುಲ್ಲು, ಗಿಡ ಗಂಟಿಗಳು ಕೂಡ ಇಲ್ಲಿ ಬೆಳೆಯೋದಿಲ್ಲ. ಡೆಡ್ ಸೀ ನೀರಿನಲ್ಲಿ ಪೊಟ್ಯಾಶ್, ಬ್ರೊಮೈಡ್, ಜಿಂಕ್, ಸಲ್ಫರ್, ಮೆಗ್ನೀಶಿಯಮ್ ಮತ್ತು ಕ್ಯಾಲ್ಸಿಯಮ್ ನಂತಹ ಖನಿಜಾಂಶಗಳು ಹೇರಳವಾಗಿವೆ. ಆದ್ದರಿಂದಲೇ ಇದರಿಂದ ಉಂಟಾಗುವ ಉಪ್ಪನ್ನು ಕೂಡ ಬಳಕೆ ಮಾಡಲು ಸಾಧ್ಯವಿಲ್ಲ. ಈ ಸಮುದ್ರದಲ್ಲಿ ಯಾವುದೇ ಜೀವಿಗಳು ಬದುಕಲು ಸಾಧ್ಯವಿಲ್ಲವಾದ್ದರಿಂದ ಸಮುದ್ರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ನೀರಿನಲ್ಲಿರುವ ವಿಷಕಾರಿ ಪ್ರಾಣಿಗಳು ಹಾಗೂ ವಿಷಜಂತುಗಳು ಕಚ್ಚುತ್ತವೆ ಎಂಬ ಭಯವೂ ಇಲ್ಲ. ಈ ಕಾರಣದಿಂದಲೂ ಪ್ರವಾಸಿಗರು ಇಲ್ಲಿ ನಿರ್ಭಯವಾಗಿ ಸಮಯ ಕಳೆಯಬಹುದು. 

ಡೆಡ್ ಸೀ ನೀರು ಅನೇಕ ರೋಗಗಳಿಗೆ ಔಷಧ : ಡೆಡ್ ಸೀ ನೀರು ಹೆಚ್ಚಿನ ಲವಣಾಂಶ ಹೊಂದಿರುವುದರಿಂದಲೇ ಹೆಚ್ಚು ಪ್ರಖ್ಯಾತಿ ಪಡೆದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಉಳಿದ ಎಲ್ಲ ಸಮುದ್ರದ ನೀರಿಗಿಂತ ಪ್ರತಿಶತ 33 ರಷ್ಟು ಹೆಚ್ಚಿನ ಉಪ್ಪಿನಂಶವನ್ನು ಇದು ಹೊಂದಿದೆ. ಈ ಕಾರಣದಿಂದಲೇ ಇದು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಈ ನೀರಿನ ಸ್ನಾನ ಮಾಡುವುದರಿಂದಲೇ ಅನೇಕ ರೋಗಗಳು ದೂರವಾಗುತ್ತವೆ. ಇದರ ನೀರನ್ನು ಕೂಡ ಅನೇಕ ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಸಮುದ್ರದ ಮಣ್ಣನ್ನು ಅನೇಕ ಬ್ಯೂಟಿ ಪ್ರಾಡಕ್ಟ್ ಗಳ ತಯಾರಿಕೆಗೆ ಬಳಸಲಾಗುತ್ತದೆ.

Latest Videos
Follow Us:
Download App:
  • android
  • ios