ಮಸಾಜ್ ಮಾಡಿದರೆ ದೇಹ ಮತ್ತು ಮನಸು ನಿರಾಳವಾಗಬೇಕು. ಮಸಾಜಿನಿಂದ ಮೈ ಮನಸು ಎಲ್ಲೋ ಕಳೆದು ಹೋಗುತ್ತದೆ. ಹಲವು ಸಮಸ್ಯೆಗಳನ್ನು ದೂರವಾಗಿಸಲೂ ಮಸಾಜ್ ಸಹಕಾರಿ. ಆದರೆ  ಹೆಬ್ಬಾವಿನ ಮಸಾಜ್ ಬಗ್ಗೆ ಕೇಳಿದ್ದೀರಾ? ಶಾಕ್ ಆಗಬೇಡಿ ಇದರಿಂದ ಎಲ್ಲಾ ನೋವೂ ದೂರವಾಗಿ ಮನಸು-ದೇಹ ಹಗುರಾಗುತ್ತದೆ ಎನ್ನುತ್ತಾರೆ ಹೆಬ್ಬಾವಿನಿಂದ ಮಸಾಜ್ ಮಾಡಿಸಿಕೊಂಡವರು. 

ಹೌದು. ಈ ಹೆಬ್ಬಾವು ಕುತ್ತಿಗೆಗೆ, ಮೈ ಮೇಲೆ, ಕಾಲಿನ ಮೇಲೆ, ಬೆನ್ನಿನ ಮೇಲೆ ಬಿಟ್ಟು ಚೆನ್ನಾಗಿ ಮಸಾಜ್ ಮಾಡಿಸಿಕೊಳ್ಳಲಾಗುತ್ತದೆ. ಈ ವಿಶಿಷ್ಟ ಮಸಾಜಿನ ಅನುಭವ ಪಡೆಯಲು ಗ್ರಾಹಕರು  ಕಾತುರರಾಗಿರುತ್ತಾರೆ.   

ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ, ಯಾವುದಕ್ಕೆ ಒಳಿತು?

ಇಂಡೋನೇಶಿಯಾ ಮತ್ತು ಥಾಯ್ಲೆಂಡ್‌ನಲ್ಲಿ ಗ್ರಾಹಕರನ್ನು ಸೆಳೆಯಲು ಹಾಗೂ ಭಿನ್ನವಾದ ಮಸಾಜ್ ನೀಡಲು ಹೆಬ್ಬಾವನ್ನು ಬಳಸುತ್ತಾರೆ. ಈ ಹಾವಲ್ಲಿ ಪುಟ್ಟ ಹಸಿರು ಹಾವಿನಿಂದ ತೊಡಗಿ ದೊಡ್ಡ ಹೆಬ್ಬಾವನ್ನೂ ಬಳಸುತ್ತಾರೆ. ಈ ಹಾವು ದೇಹದ ಮೇಲೆ ಅತ್ತಿತ್ತ ಚಲಿಸಿದಾಗ ಮಸಾಜ್ ಆಗುತ್ತದೆ. ಇಂಥ ಹಾವಿನ ಮಸಾಜ್ ಮಾಡಲು ಸ್ಪಾಗಳು ಕಾನೂನುಬದ್ಧ ಲೈಸನ್ಸ್ ಸಹ ಪಡೆದುಕೊಂಡಿವೆ.

ಹಾವೆಂದರೆ ಭಯ ಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಈ ಹಾವು ವಿಷಕಾರಿಯಾಗಿರುವುದಿಲ್ಲ. ವಿಷಕಾರಿ ಹಾವನ್ನು ಬಳಸುವಾಗ ಇವುಗಳ ವಿಷವನ್ನು ಮೊದಲೇ ತೆಗೆಯಲಾಗುತ್ತದೆ. ಇವುಗಳನ್ನು ಸುಮ್ಮನೇ ಗ್ರಾಹಕರ ಮೈಮೇಲೆ ಓಡಿಸುತ್ತಾರೆ. ಈ ಬಗ್ಗೆ ಕುತೂಹಲಗೊಂಡ ಕೆಲವು ತಜ್ಞರು ಈ ವಿಧಾನದ ಬಗ್ಗೆ ಸಂಶೋಧನೆಯನ್ನೂ ನಡೆಸಿದ್ದು, ಹಾವಿನ ಓಡಾಟದಿಂದ ಮಸಾಜ್ ಆಗುತ್ತದೆ ಎಂದು ತಿಳಿದು ಬಂದಿದೆ. ಇನ್ನು ಗ್ರಾಹಕರ ಶರೀರದ ಗಾತ್ರ ಹಾಗೂ ಅವರಿಗೆ ಇಷ್ಟಕ್ಕೆ ಅನುಗುಣವಾಗಿ ಬೇರೆ ಬೇರೆ ಜಾತಿ ಹಾವನ್ನು ಇವರ ಮೈಮೇಲೆ ಓಡಿಸುತ್ತಾರೆ. ಹೀಗೆ ಮಾಡಿದರೆ ದೇಹಕ್ಕೆ ಚೆನ್ನಾಗಿ ಮಸಾಜ್ ಆಗುತ್ತದೆ. 

ಹೀಗ್ ಮಾಡೋದ್ರಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತೆ

ಫಿಲಿಪ್ಪೀನ್ಸ್‌ನ ಸೆಬೂ ನಗರದ ಪ್ರಾಣಿಸಂಗ್ರಹಾಲಯದಲ್ಲಿ ಗ್ರಾಹಕರ ಮೈಮೇಲೆ ಹಾವನ್ನು ಚಲಿಸುವಂತೆ ಮಾಡುವ ಮೂಲಕ ಮಸಾಜ್ ಮಾಡುತ್ತಾರೆ. ಈ ಹೆಬ್ಬಾವಿನ ಮಸಾಜ್ ವಿದೇಶದಲ್ಲಿ ತುಂಬಾ ಜನಪ್ರಿಯ. ಇನ್ನೇನು ಸ್ವಲ್ಪ ದಿನದಲ್ಲೇ ಭಾರತದಲ್ಲೂ ಬರಬಹುದು. ನೀವೂ ಟ್ರೈ ಮಾಡಬಹುದು ಬಿಡಿ...