ಪ್ರತಿಯೊಬ್ಬ ಮಹಿಳೆಯರ ವಾಡ್ರೋಬಿನಲ್ಲಿ ಹತ್ತು ವಿಧದ ಬ್ರಾ ಇರಲೇಬೇಕು. ಯಾಕೆಂದರೆ ಪ್ರತಿಯೊಂದೂ ಔಟ್ ಫಿಟ್‌ಗೂ ಒಂದೊಂದು ರೀತಿಯ ಬ್ರಾ ಬೇಕು. ಪ್ರತಿಯೊಬ್ಬ ಮಹಿಳೆಯರ  ಫಿಗರ್ ಮತ್ತು ಬಟ್ಟೆ ಧರಿಸುವ ಸ್ಟೈಲ್ ಬೇರೆ ಬೇರೆ ಆಗಿರುತ್ತದೆ. ಆದುದರಿಂದ ಒಂದೊಂದು ರೀತಿಯ ಡ್ರೆಸ್‌ಗೂ ಒಂದೊಂದು ರೀತಿಯ ಬ್ರಾ ಧರಿಸಿದರೆ ಚೆಂದ.  ಹಾಗಾದರೆ ಆ 10 ವಿಧದ ಬ್ರಾ ಯಾವುವು? 

ಮ್ಯಾಕ್ಸಿ ಮೈಜಿಂಗ್ ಬ್ರಾ: ಈ ಬ್ರಾ ಪುಶ್ ಅಪ್, ಪ್ಯಾಡೆಡ್ ಮತ್ತು ಅಂಡರ್ ವಯರ್ಡ್ ಆಗಿರುತ್ತದೆ. ಸ್ಮಾಲ್ ಮತ್ತು ಮೀಡಿಯಂ ಸೈಜ್ ಇರುವ ಮಹಿಳೆಯರು ಪರ್ಫೆಕ್ಟ್ ಫಿಗರ್ ಮತ್ತು ಕ್ಲಿವೇಜ್‌ಗಾಗಿ ಈ ಬ್ರಾ ಟ್ರೈ ಮಾಡಬಹುದು. ಇದನ್ನು ಫಾರ್ಮಲ್, ಎಥ್ನಿಕ್, ಪಾರ್ಟಿ ವೇರ್ ಜೊತೆಗೆ ಧರಿಸಬಹುದು. 

ಒಂದು ಕ್ರಾಪ್‌ಟಾಪ್‌ನ ಹಲವು ಅವಸ್ಥಾಂತರ!

ಮಿನಿಮೈಜ್ ಬ್ರಾ: ಇದು ಫುಲ್ ಕಪ್ ಬ್ರಾ. ಇದರಲ್ಲಿ ಪ್ಯಾಡ್ ಇರೋದಿಲ್ಲ. ಮೀಡಿಯಂನಿಂದ ದೊಡ್ಡ ಬಸ್ಟ್ ಹೊಂದಿರುವ ಮಹಿಳೆಯರು ಈ ಬ್ರಾ ಧರಿಸಬಹುದು. ಇದು ಬ್ರೆಸ್ಟ್ ಸೈಜ್ ಸ್ವಲ್ಪ ಕಡಿಮೆ ಇರುವಂತೆ ಮಾಡುತ್ತದೆ. ಇದನ್ನು ಫಾರ್ಮಲ್ ಅಥವಾ ಯುನಿಫಾರ್ಮ್ ಜೊತೆ ಧರಿಸಬಹುದು. 

ಅಂಡರ್ ವಯರ್ಡ್: ಈ ಬ್ರಾ ಡೆಮಿ ಕಪ್ ಮತ್ತು ಪ್ಯಾಡೆಡ್ ಹೊಂದಿರುತ್ತದೆ. ಸಣ್ಣ ಮತ್ತು ಮೀಡಿಯಂ ಬಸ್ಟ್ ಹೊಂದಿರುವವರಿಗೆ ಇದು ಬೆಸ್ಟ್. ಇದು ರೆಗ್ಯುಲರ್ ಆಗಿ ಧರಿಸುವ ಡ್ರೆಸ್ ಜೊತೆ ಧರಿಸಬಹುದು. 

ಟೀ ಶರ್ಟ್ ಬ್ರಾ : ಈ ಪ್ಯಾಡೆಡ್ ಬ್ರಾದ ಸ್ಟ್ರಾಪ್ ಟ್ರಾನ್ಸ್ಪರೆಂಟ್ ಆಗಿರುತ್ತದೆ. ಇದನ್ನು ಸಣ್ಣ -ದೊಡ್ಡ ಸೈಜ್ ಬಸ್ಟ್ ಹೊಂದಿರುವವರು ಇಬ್ಬರೂ ಧರಿಸಬಹುದು. ಜಿಮ್ ವೇರ್, ಟೀ ಶರ್ಟ್, ಶಿಯರ್ ಪಾರ್ಟಿ ವೇರ್ ಜೊತೆಗೆ ಈ ಬ್ರಾ ಧರಿಸಬಹುದು. 

ಸ್ಪೋರ್ಟ್ಸ್ ಬ್ರಾ : ಸ್ಪೋರ್ಟ್ಸ್ ಬ್ರಾ ನಾನ್ ಪ್ಯಾಡೆಡ್ ಮತ್ತು ನಾನ್ ಅಂಡರ್ ವಯರ್ಡ್ ಆಗಿರುತ್ತದೆ. ಇದರ ಸ್ಟ್ರಾಪ್ ಅಗಲವಾಗಿರುತ್ತದೆ. ಇದನ್ನು ಸಣ್ಣ ಮತ್ತು ಮೀಡಿಯಂ ಬಸ್ಟ್ ಹೊಂದಿರುವವರು ಧರಿಸಬಹುದು. ನಾರ್ಮಲ್ ಬ್ರಾದ ಮೇಲೆ ಈ ಸ್ಪೋರ್ಟ್ಸ್ ಬ್ರಾ ಧರಿಸಿದರೆ ಬ್ರೆಸ್ಟ್ ಗೆ ಸಪೋರ್ಟ್ ಮತ್ತು ರಕ್ಷಣೆ ಸಿಗುತ್ತದೆ. 

ಡೈಲಿ ವೇರ್ ಬ್ರಾ : ಇದು ನಾನ್ ಪ್ಯಾಡೆಡ್ ಮತ್ತು ಫುಲ್ ಕಪ್ ಆಗಿರುತ್ತದೆ. ಇದು ತುಂಬಾ ಆರಾಮದಾಯಕವಾಗಿರುತ್ತದೆ. ಅದಕ್ಕಾಗಿ ಮಹಿಳೆಯರು ಇದನ್ನು ಧರಿಸಲು ಇಷ್ಟಪಡುತ್ತಾರೆ. ಇದನ್ನು ದೈನಂದಿನ ಡ್ರೆಸ್‌ಗಳ ಜೊತೆ ಧರಿಸಬಹುದು. 

ಟೈಟ್ ಜೀನ್ಸ್, ಫಿಟ್ಟಿಂಗ್ ಟಾಪ್ ಹಾಕೋ ಮುನ್ನ....

ಟ್ಯೂಬ್ ಟಾಪ್ ಬ್ರಾ: ಇದು ಸ್ಟ್ರಾಪ್‌ಲೆಸ್ ಮತ್ತು ನಾನ್ ಪ್ಯಾಡೆಡ್ ಆಗಿರುತ್ತದೆ. ಸಣ್ಣ ಮತ್ತು ಮೀಡಿಯಂ ಬ್ರೆಸ್ಟ್ ಮಹಿಳೆಯರು ಟ್ಯೂಬ್ ಟಾಪ್ ಬ್ರಾ ಧರಿಸಬಹುದು. ಇದನ್ನು ಟೀ ಶರ್ಟ್, ಜಿಮ್ ವೇರ್, ಸ್ಟ್ರಾಪ್‌ಲೆಸ್ ಪಾರ್ಟಿ ಡ್ರೆಸ್‌ ಜತೆ ಬಳಸಬಹುದು.

ಪುಶಪ್ ಬ್ರಾ: ಈ ಬ್ರಾ ಪ್ಯಾಡೆಡ್ ಆಗಿರುತ್ತದೆ. ಸ್ಟ್ರಾಪ್ ಜೊತೆ ಮತ್ತು ಸ್ಟ್ರಾಪ್‌ಲೆಸ್‌ನಲ್ಲೂ ಈ ಬ್ರಾ ದೊರೆಯುತ್ತದೆ. ಇದನ್ನು ಸಣ್ಣ ಮತ್ತು ಮೀಡಿಯಂ ಬ್ರೆಸ್ಟ್ ಹೊಂದಿದ ಮಹಿಳೆಯರು ಧರಿಸಬಹುದು. ಫಿಗರ್ ಚೆನ್ನಾಗಿ ಕಾಣುತ್ತದೆ. ಇದನ್ನು ಪಾರ್ಟಿ ಡ್ರೆಸ್ ಜೊತೆ ಧರಿಸಬಹುದು. 

ಡ್ರೆಸ್ ಅಪ್ ಬ್ರಾ: ಡ್ರೆಸ್ ಅಪ್ ಬ್ರಾ ಲೆಸ್, ಡೆಮಿ ಕಪ್ ಮತ್ತು ನಾನ್ ಪ್ಯಾಡೆಡ್ ಆಗಿರುತ್ತದೆ. ಸಣ್ಣ ಮತ್ತು ಮೀಡಿಯಂ ಬಸ್ಟ್ ಹೊಂದಿದ ಮಹಿಳೆಯರು ಡ್ರೆಸ್ ಅಪ್ ಬ್ರಾ ಧರಿಸಬಹುದು. ಡ್ರೆಸ್ ಅಪ್ ಬ್ರಾ ಹೆಚ್ಚು ಸಪೋರ್ಟ್ ನೀಡುವುದಿಲ್ಲ. ಆದುದರಿಂದ ಇದನ್ನು ಕೆಲವು ಗಂಟೆಗಳ ಕಾಲ ಮಾತ್ರ ಧರಿಸಬಹುದು. ಹನಿಮೂನ್ ಸಮಯದಲ್ಲಿ ಅಥವಾ ನೈಟ್ ಪತಿಯ ಮುಂದೆ ಇದನ್ನು ನೀವು ಧರಿಸಬಹುದು. 

ಡೆಮಿ ಕಪ್ ಬ್ರಾ: ಡೆಮಿ ಕಪ್ ಬ್ರಾ ಪ್ಯಾಡೆಡ್ ಬ್ರಾ, ಅಂಡರ್ ವೈರ್ ಸಪೋರ್ಟ್ ಜೊತೆಗೆ ಬರುತ್ತದೆ. ಇದನ್ನು ಸಹ ಸ್ಮಾಲ್ ಮತ್ತು ಮೀಡಿಯಂ ಬಸ್ಟ್ ಮಹಿಳೆಯರು ಧರಿಸಬಹುದು. ಇದನ್ನು ಫಾರ್ಮಲ್ ಮತ್ತು ಇನ್ ಫಾರ್ಮಲ್ ಬಟ್ಟೆ ಜೊತೆ ಧರಿಸಬಹುದು.