ಶಿವಮೊಗ್ಗ [ಆ.16]: ರಾಜ್ಯದಲ್ಲಿ ಸುರಿದ ಅತಿಯಾದ ಮಳೆಯು ಹಲವೆಡೆ ಭೂಕುಸಿತಕ್ಕೆ ಕಾರಣವಾಗಿದೆ. ಇದರಿಂದ ಹಲವು ಮಾರ್ಗಗಳು ಬಂದ್ ಆಗಿವೆ. 

ಇದೀಗ ತೀರ್ಥಹಳ್ಳಿ - ಉಡುಪಿ ಮಧ್ಯೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿಯಲ್ಲಿ ಅತಿಯಾದ ಮಳೆ ಕಾರಣ 12 ಟನ್‌ಗಿಂತ  ಹೆಚ್ಚು ಇರುವ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾರೀ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳು ಕುಸಿಯುವ ಭೀತಿ ಇದ್ದು ಈ ನಿಟ್ಟಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. 

ನಿತ್ಯಹರಿದ್ವರ್ಣಗಳ ನಡುವೆ ಮೈದುಂಬಿ ಹರಿವ ಸೀತೆ!

ದುರಸ್ಥಿ ಕಾರ್ಯದ ಹಿನ್ನೆಲೆ ಏಪ್ರಿಲ್ ತಿಂಗಳಲ್ಲಿ ಒಂದು ತಿಂಗಳ ಕಾಲ ಸಂಚಾರ ನಿಷೇಧಿಸಲಾಗಿತ್ತು. ಮೇ ತಿಂಗಳಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಇದೀಗ ಭಾರೀ ಮಳೆ ಸುರಿದ ಹಿನ್ನೆಲೆ ಮತ್ತೆ ನಿಷೇಧ ಹೇರಲಾಗಿದೆ.