ಮಂಗಳೂರು: ಬೇಸಗೆಯಲ್ಲಿ ನಂದಿನಿ ಬ್ರ್ಯಾಂಡ್ ಬೆಣ್ಣೆ, ತುಪ್ಪಕ್ಕೆ ತೀವ್ರ ಬರ!
ಕರಾವಳಿ ಕರ್ನಾಟಕ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗ ನಂದಿನಿ ಬ್‌ಂ್ರ$್ಡ ಬೆಣ್ಣೆ ಮತ್ತು ತುಪ್ಪಕ್ಕೆ ತೀವ್ರ ಬರ ಕಾಡಿದೆ. ಎರಡು ತಿಂಗಳುಗಳಿಂದ ಸಮಸ್ಯೆ ಉಲ್ಬಣ .ಜಾನುವಾರು ಚರ್ಮ ಗಂಟು ರೋಗದಿಂದ ಹೈನುಗಾರರು ಹೈರಾಣು
ಆತ್ಮಭೂಷಣ್
ಮಂಗಳೂರು (ಮೇ.22) ಕರಾವಳಿ ಕರ್ನಾಟಕ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗ ನಂದಿನಿ ಬ್‌ಂ್ರ$್ಡ ಬೆಣ್ಣೆ ಮತ್ತು ತುಪ್ಪಕ್ಕೆ ತೀವ್ರ ಬರ ಕಾಡಿದೆ. ಪ್ರತಿ ಬಾರಿ ಬೇಸಗೆಯಲ್ಲಿ ಹಾಲಿನ ಕೊರತೆ ತಲೆದೋರುವುದು ಸಾಮಾನ್ಯ, ಆದರೆ ಗ್ರಾಹಕರ ಬೇಡಿಕೆ ಈಡೇರಿಸಲಾಗÜದಷ್ಟುಪ್ರಮಾಣದಲ್ಲಿ ಬೆಣ್ಣೆ ಮತ್ತು ತುಪ್ಪಕ್ಕೆ ಕೊರತೆ ಉಂಟಾಗಿರಲಿಲ್ಲ. ಈ ಬಾರಿ ಬೇಸಗೆಯಲ್ಲಿ ಜಾತ್ರೆ, ಉತ್ಸವ, ಮದುವೆ ಮತ್ತಿತರ ಸಮಾರಂಭಗಳಿಗೂ ಬೆಣ್ಣೆ, ತುಪ್ಪ ಸಿಗುತ್ತಿಲ್ಲ. ಗ್ರಾಹಕರು ಬೆಣ್ಣೆ, ತುಪ್ಪಕ್ಕಾಗಿ ಅಲೆದಾಡುವಂತಾಗಿದೆ.
ಈ ಬಾರಿ ರಾಜ್ಯದ ಎಲ್ಲೆಡೆಗೆ ಜಾನುವಾರುಗಳಿಗೆ ವ್ಯಾಪಕ ಪ್ರಮಾಣದಲ್ಲಿ ಚರ್ಮ ಗಂಟು ರೋಗ ಬಾಧೆ ಕಾಣಿಸಿತ್ತು. ಇದರಿಂದ ಅನೇಕ ಜಾನುವಾರುಗಳು ಜೀವತೆತ್ತರೆ, ಇನ್ನೂ ಕೆಲವು ಜೀವಚ್ಛವದಂತೆ ಕೊಟ್ಟಿಗೆಯಲ್ಲೇ ಇವೆ. ಜತೆಗೆ ಹಾಲಿಗೆ ಲಾಭದಾಯಕ ದರ ಇಲ್ಲ. ಜಾನುವಾರಿನ ಚರ್ಮ ಗಂಟು ರೋಗ ಇನ್ನೂ ಪೂರ್ತಿಯಾಗಿ ಮರೆಯಾಗಿಲ್ಲ. ಚರ್ಮಗಂಟು ರೋಗಕ್ಕೆ ಲಕ್ಷಾಂತರ ರು. ವ್ಯಯಿಸಿದ ಹೈನುಗಾರರು ಪಶುಪಾಲನೆಯ ಉಸಾಬರಿಯೇ ಬೇಡ ಎಂದು ಜಾನುವಾರು ಮಾರಾಟ ಮಾಡುತ್ತಿದ್ದಾರೆ. ಮೊದಲೇ ಬೇಸಗೆಯಲ್ಲಿ ಹಾಲು ಉತ್ಪಾದನೆ ಕಡಿಮೆ ಇರುವಾಗ ಈ ವಿದ್ಯಮಾನಗಳು ಹಾಲು ಉತ್ಪಾದನೆ ಮತ್ತಷ್ಟುಕುಂಠಿತಗೊಳ್ಳುವಂತೆ ಮಾಡಿದೆ.
ನಮ್ಮ ಜೀವನಾಡಿ ‘ನಂದಿನಿ’ ಮೇಲೇಕೆ ಕೇಂದ್ರ ಕಣ್ಣು?: ಟಿ.ಎ.ನಾರಾಯಣಗೌಡ
ಹಾಲು ಉತ್ಪಾದನೆ ಹೆಚ್ಚಿನ ಕೊರತೆ:
ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಹಾಲು ಒಕ್ಕೂಟಕ್ಕೆ ದಿನಂಪ್ರತಿ ಸರಾಸರಿ 5.10 ಲಕ್ಷ ಲೀಟರ್ ಹಾಲಿಗೆ ಬೇಡಿಕೆ ಇದೆ. ಆದರೆ ಹಾಲು ಉತ್ಪಾದನೆಯಾಗುತ್ತಿರುವುದು ಸುಮಾರು 4.40 ಲಕ್ಷ ಲೀಟರ್ ಮಾತ್ರ. ಅಂದಾಜು 4 ಲಕ್ಷ ಲೀಟರ್‌ನಷ್ಟುಹಾಲು ಮಾರಾಟ ಆಗುತ್ತಿದೆ. ಉಳಿದ ಕೊರತೆಯನ್ನು ಸಮೀಪದ ಒಕ್ಕೂಟಗಳಿಂದ ಹಾಲು ಖರೀದಿಸಿ ಸರಿದೂಗಿಸಲಾಗುತ್ತಿದೆ. ಖರೀದಿಸಿದ ಹಾಲಿನಲ್ಲಿ ಮೊಸರು, ಮಜ್ಜಿಗೆ ಹಾಗೂ ಹಾಲಿನ ಉಪ ಉತ್ಪನ್ನಗಳಿಗೂ ಬೇಕಾಗುತ್ತದೆ. ಇಲ್ಲಿ ಸುಮಾರು 50ರಿಂದ 70 ಸಾವಿರ ಲೀಟರ್‌ಗಳಷ್ಟುಮೊಸರು ಹಾಗೂ ಮಜ್ಜಿಗೆ ತಯಾರಿಸಲಾಗುತ್ತದೆ. ಹೀಗಾಗಿ ಗ್ರಾಹಕರಿಗೆ ಬೇಕಾದಷ್ಟುಬೆಣ್ಣೆ ಮತ್ತು ತುಪ್ಪ ಪೂರೈಸಲು ಆಗುತ್ತಿಲ್ಲ. ಬೆಣ್ಣೆ, ತುಪ್ಪ ಮಾತ್ರವಲ್ಲ, ನಂದಿನಿ ಬ್ರಾಂಡ್‌ನ ತೃಪ್ತಿ, ಶುಭಂ ಹಾಗೂ ಸಮೃದ್ಧಿ ಹಾಲು ಪ್ಯಾಕೆಟ್ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎನ್ನುತ್ತಾರೆ ಗ್ರಾಹಕರು.
ಕಳೆದ ಎರಡು ತಿಂಗಳಲ್ಲಿ ಒಕ್ಕೂಟಕ್ಕೆ ಹಾಲು ಹಾಕುವ 64 ಸಾವಿರ ಹೈನುಗಾರರ ಸಂಖ್ಯೆ ಇದ್ದುದು 60 ಸಾವಿರಕ್ಕೆ ಇಳಿಕೆಯಾಗಿದ್ದು, ಸುಮಾರು 4 ಸಾವಿರದಷ್ಟುಹೈನುಗಾರರು ಒಕ್ಕೂಟಕ್ಕೆ ಹಾಲು ನೀಡುತ್ತಿಲ್ಲ.
ದುಬಾರಿ ದರಕ್ಕೆ ಹಾಲು ಖರೀದಿ:
ದ.ಕ. ಹಾಲು ಒಕ್ಕೂಟ ಕೊರತೆ ಹಾಲನ್ನು ಸಮೀಪದ ಹಾಲು ಡೇರಿಗಳಿಂದ ಖರೀದಿಸುತ್ತಿದೆ. ಅಂತರ್ ಡೇರಿ ದರದ ಪ್ರಕಾರ ಕಡಿಮೆ(ಲೀಟರ್‌ಗೆ 36.50 ರು.) ಮೊತ್ತದಲ್ಲಿ ಹಾಲನ್ನು ಬೇರೆ ಒಕ್ಕೂಟಗಳು ನೀಡಬೇಕು ಎಂಬುದು ಕ್ರಮ. ಆದರೆ ಹಾಸನ ಹಾಗೂ ಮಂಡ್ಯ ಒಕ್ಕೂಟಗಳು ಖಾಸಗಿಗೆ ನೀಡುವ ದರದಲ್ಲಿ ಅಂದರೆ ಲೀಟರ್‌ಗೆ 41.50 ರು. ದುಬಾರಿ ದರದಲ್ಲಿ ಹಾಲು ಮಾರಾಟ ಮಾಡುತ್ತಿವೆ. ಇಷ್ಟುದುಬಾರಿ ಮೊತ್ತ ನೀಡಿ ದ.ಕ. ಒಕ್ಕೂಟ ಹಾಲು ಖರೀದಿಸಿ ಗ್ರಾಹಕರಿಗೆ ವಿತರಿಸುತ್ತಿದೆ. ಈ ರೀತಿ ದುಬಾರಿ ಹಾಲು ಖರೀದಿ ಅನಿವಾರ್ಯವಾಗಿದ್ದು, ಇದರಿಂದಾಗಿ ದ.ಕ. ಹಾಲು ಒಕ್ಕೂಟಕ್ಕೆ ಮಾಸಿಕ 1 ಕೋಟಿ ರು.ಗಳಷ್ಟುನಷ್ಟಉಂಟಾಗುತ್ತಿದೆ. ಕಳೆದ ಎರಡು ತಿಂಗಳಿಂದ ಈ ರೀತಿ ನಷ್ಟತಲೆದೋರುತ್ತಿದ್ದು, ಮಳೆಗಾಲದಲ್ಲಿ ಇದನ್ನು ಸರಿದೂಗಿಸುವ ವಿಶ್ವಾಸವನ್ನು ಆಡಳಿತ ಮಂಡಳಿ ಹೊಂದಿದೆ. ಆದರೆ ಒಕ್ಕೂಟದ ಅಧಿಕಾರಿಗಳು ಈ ಕುರಿತು ನಿಖರ ಮಾಹಿತಿ ಬಿಟ್ಟುಕೊಡುತ್ತಿಲ್ಲ.
ಗ್ರಾಹಕರ ಬದಲು ಕೆಎಂಎಫ್‌ಗೆ ಮಾರಾಟ ಉತ್ಸಾಹ?
ನಂದಿನಿ ಬ್ರ್ಯಾಂಡ್‌ನ ಹಾಲಿನ ಉತ್ಪನ್ನಗಳನ್ನು ಇಂತಿಷ್ಟುಎಂದು ಆಯಾ ಒಕ್ಕೂಟ ವ್ಯಾಪ್ತಿಯಲ್ಲಿ ಇರುವ ಕೆಎಂಎಫ್ ಕೇಂದ್ರಗಳಿಗೆ ನೀಡಬೇಕು ಎಂಬ ನಿಯಮ ಇದೆ. ಅದೇ ರೀತಿ ಸುಮಾರು 20ರಿಂದ 30 ಟನ್‌ಗಳಷ್ಟುಬೆಣ್ಣೆ ಮತ್ತು ತುಪ್ಪವನ್ನು ಹಾಲು ಒಕ್ಕೂಟಗಳು ಕೆಎಂಎಫ್‌ಗೆ ನಿಯಮಿತವಾಗಿ ನೀಡಬೇಕು. ಹಾಲು ಒಕ್ಕೂಟದ ಅಧಿಕಾರಿಗಳು ಗ್ರಾಹಕರ ಬೇಡಿಕೆಯನ್ನು ಪೂರೈಸುವ ಬದಲು ಕೆಎಂಎಫ್‌ಗೆ ನೀಡಲು ಇನ್ನಿಲ್ಲದ ಉತ್ಸಾಹ ತೋರಿಸುತ್ತಿರುವುದು ಅಚ್ಚರಿಯನ್ನು ಉಂಟು ಮಾಡಿದೆ ಎನ್ನುತ್ತಾರೆ ಗ್ರಾಹಕರೊಬ್ಬರು.
ನೆರೆ ರಾಜ್ಯದಲ್ಲಿ ನಂದಿನಿಗೆ ವಿರೋಧ: ಕರ್ನಾಟಕದಲ್ಲಿ ಅಮುಲ್ ಪರ - ವಿರೋಧ ಚರ್ಚೆ ವೇಳೆ ಕೇರಳ ಕ್ಯಾತೆ
ದ.ಕ. ಹಾಲು ಒಕ್ಕೂಟದಿಂದ ಈಗಾಗಲೇ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ ಮತ್ತಿತರ ದೇವಸ್ಥಾನಗಳಿಗೆ ಬೆಣ್ಣೆ, ತುಪ್ಪ ಪೂರೈಕೆಯಾಗುತ್ತಿದೆ.
ಈ ವರ್ಷ ಬೇಸಗೆಯಲ್ಲಿ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಹಾಲಿನ ಕೊರತೆ ವಿಪರೀತವಾಗಿ ತಟ್ಟಿದೆ. ಮಂಗಳೂರು ಒಕ್ಕೂಟ ವ್ಯಾಪ್ತಿಯಲ್ಲೂ ಬೆಣ್ಣೆ ಹಾಗೂ ತುಪ್ಪಕ್ಕೆ ಬಹಳ ಬೇಡಿಕೆ ಇದ್ದು, ಇಂತಹ ಕೊರತೆ ರಾಜ್ಯದೆಲ್ಲೆಡೆ ಇದೆ. ಮಳೆ ಬಂದ ಮೇಲೆ ಹಾಲಿನ ಉತ್ಪಾದನೆ ಏರಿಕೆಯಾಗಲಿದ್ದು, ಜೂನ್ 15ರ ಬಳಿಕ ಈ ಸಮಸ್ಯೆ ನಿವಾರಣೆಯಾಗುವ ವಿಶ್ವಾಸ ಇದೆ. ಪ್ರಸಕ್ತ ಬೇರೆ ಒಕ್ಕೂಟದಿಂದ ದುಬಾರಿ ದರಕ್ಕೆ ಹಾಲು ಖರೀದಿಸುತ್ತಿದ್ದು, ಒಕ್ಕೂಟಕ್ಕೆ ಮಾಸಿಕ 1 ಕೋಟಿ ರು. ನಷ್ಟವಾಗುತ್ತಿದೆ.
-ಸುಚರಿತ ಶೆಟ್ಟಿ, ಅಧ್ಯಕ್ಷ, ದ.ಕ.ಸಹಕಾರಿ ಹಾಲು ಒಕ್ಕೂಟ, ಮಂಗಳೂರು