Bagalkote: ಲಾಬಿಗೆ ಮಣಿಯದೆ ಮಲಪ್ರಭೆ ಒತ್ತುವರಿ ತೆರವಿಗೆ ಮುಂದಾಗುತ್ತಾ ಸರ್ಕಾರ?

ಉತ್ತರ ಕರ್ನಾಟಕದ ಜೀವನದಿಗಳಲ್ಲೊಂದಾಗಿರೋ ಮಲಪ್ರಭಾ ನದಿಗೆ ಪ್ರತಿವರ್ಷ ಪ್ರವಾಹ ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವಿಗೆ ಕೂಗು ಕೇಳಿ ಬರ್ತಿದೆ.

protests over encroachments across malaprabha river bank in bagalkote gvd

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಮೇ.13): ಉತ್ತರ ಕರ್ನಾಟಕದ (North Karnataka) ಜೀವನದಿಗಳಲ್ಲೊಂದಾಗಿರೋ ಮಲಪ್ರಭಾ ನದಿಗೆ (Malaprabha River) ಪ್ರತಿವರ್ಷ ಪ್ರವಾಹ ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವಿಗೆ ಕೂಗು ಕೇಳಿ ಬರ್ತಿದೆ. ಈ ಮಧ್ಯೆ ಪ್ರತಿವರ್ಷ ಪ್ರವಾಹ ಭೀತಿ ಒಂದೆಡೆಯಾದ್ರೆ ಮತ್ತೊಂದೆಡೆ ಕಳಸಾ ಬಂಡೂರಿ ತಿರುವು ಯೋಜನೆ ಅನುಷ್ಠಾನ ಮುನ್ನವೇ ಸರ್ಕಾರ (Goverment) ಎಚ್ಚೆತ್ತುಕೊಂಡು ಎಚ್ಚರಿಕೆ ಹೆಜ್ಜೆ ಇಡಬೇಕಿದೆ. ಹೀಗಾಗಿ ಶತಾಯಗತಾಯ ಮಲಪ್ರಭಾ ನದಿ ಒತ್ತುವರಿಗೆ ಸಂಘಟನಾತ್ಮಕ ಕೂಗು ಕೇಳಿ ಬಂದಿದೆ.

ಹೌದು! ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ ಮತ್ತು ಬಾದಾಮಿ ತಾಲೂಕಿನಲ್ಲಿ ಹಾಯ್ದು ಹೋಗಿರುವ ಮಲಪ್ರಭಾ ನದಿಯ ಹಲವು ವರ್ಷಗಳ ಹಿಂದಿನ ಪರಿಸ್ಥಿತಿ ನೋಡುತ್ತಾ ಬಂದಾಗ ನಮಗೆ ಕಣ್ಣು ಮುಂದೆ ಬರೋದು ಅಂದರೆ, ಅಲ್ಲಿ ಭೋರ್ಗರೆಯುತ್ತಿದ್ದ ಮಲಪ್ರಭಾ ನದಿ, ನದಿ ಅಕ್ಕಪಕ್ಕದಲ್ಲಿ ಹೊಲಗದ್ದೆಗಳಲ್ಲಿ ಜಲಾವೃತವಾಗಿದ್ದ ಬೆಳೆಗಳು, ಮನೆ ಮಠ ಕಳೆದುಕೊಂಡ ಅದೆಷ್ಟೋ ಸಂತ್ರಸ್ಥರು. ಇಂತಹ ದೃಶ್ಯಗಳು ಮಳೆಗಾಲದ ಸಮಯದಲ್ಲಿ ಪ್ರತಿವರ್ಷ ಉತ್ತರ ಕನಾ೯ಟಕದ  ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರೋ ಮಲಪ್ರಭಾ ನದಿಯ ತೀರದಲ್ಲಿ ಕಂಡು ಬಂದಿವೆ. ಸಾಮಾನ್ಯವಾಗಿ ನವಿಲುತೀಥ೯ ಜಲಾಶಯದಿಂದ ನೀರು ಹರಿಬಿಡುವ ಕಾರಣ ಈ ಮಲಪ್ರಭಾ ನದಿಗೆ ಪ್ರವಾಹ ಉಂಟಾಗುತ್ತೇ. ಕಳೆದ ಹಲವು ವಷ೯ಗಳಲ್ಲಿ ನೀರು ಕಡಿಮೆ ಇರುವಾಗ ದಿನಗಳೆದಂತೆ ನದಿ ಪಾತ್ರ ಚಿಕ್ಕದಾಗುತ್ತಲೇ ಹೋಯ್ತು. 

ಜೈಲಿಗೆ ಹೋಗಿ ಬಂದ ಕಾಂಗ್ರೆಸ್ಸಿಗರಿಂದ ಬಿಜೆಪಿಗೆ ನೈತಿಕ ಪಾಠ ಬೇಕಿಲ್ಲ: ಸಚಿವ ಕಾರಜೋಳ ವಾಗ್ದಾಳಿ

ನದಿಯ ಅಕ್ಕಪಕ್ಕದ ಗ್ರಾಮಗಳಲ್ಲಿ, ಹೊಲಗದ್ದೆಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಕಣ್ಣಿಗೆ ಕಾಣದೆ ಮಲಪ್ರಭೆ ಒಡಲು ವಿರಳವಾಗುತ್ತಲೇ ಹೋಯ್ತು. ಹೀಗಿರುವಾಗ 2009ರಿಂದ ಹಿಡಿದು ಆಗಾಗ ಈಚೆಗೆ ಸತತವಾಗಿ ಬಹುತೇಕ ಪ್ರವಾಹದ ಎಫೆಕ್ಟ್ ಜೋರಾಗ್ತಿರೋದ್ರಿಂದ ಇದೀಗ ರಾಜ್ಯ ಸಕಾ೯ರಕ್ಕೂ ತಲೆನೋವಾಗಿ ಪರಿಣಮಿಸಿದೆ. ಹೀಗೆ ಪದೇ ಪದೇ ಪ್ರವಾಹಕ್ಕೆ ಕಾರಣವೇನು ಎಂದು ನೋಡಿದಾಗ ನದಿಯಲ್ಲಿ ಹೂಳಿರುವುದು ಮತ್ತು ನದಿಯ ಇಕ್ಕೆಲಗಳಲ್ಲಿ ಒತ್ತುವರಿ ಮಾಡಿದ್ದೇ ಮೂಲ ಕಾರಣ ಅಂತ ಗೊತ್ತಾಗಿದ್ದು. ಈ ಹಿನ್ನೆಲೆಯಲ್ಲಿ ಸಕಾ೯ರ ನದಿಯ ಅಕ್ಕಪಕ್ಕದ ಅತಿಕ್ರಮಣ ತೆರವು ಕಾಯ೯ ನಡೆಸಲು ಮುಂದಾಗಬೇಕಿದೆ. ಆದ್ರೆ ಆ ಕೆಲಸ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಒತ್ತುವರಿಗೆ ತೆರವಿಗೆ ಮುಂದಾಗಬೇಕು ಇಲ್ಲವಾದಲ್ಲಿ ಮತ್ತೇ ಪ್ರವಾಹ ಬಂದಲ್ಲಿ ಇನ್ನಷ್ಟು ಬೆಲೆ ತೆರಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.  

ಬೆಳಗಾವಿ, ಗದಗ, ಬಾಗಲಕೋಟೆ ಜಿಲ್ಲೆಯಲ್ಲಿ ಹರಿದಿರುವ ಮಲಪ್ರಭೆಗೆ ಬೇಕಿದೆ ಕಾಯಕಲ್ಪ: ಬೆಳಗಾವಿ ಜಿಲ್ಲೆಯ ಖಾನಾಪೂರ ದ ಕನಕುಂಬಿಯಲ್ಲಿ ಹುಟ್ಟುವ ಮಲಪ್ರಭಾ ನದಿಯು ಮುಂದೆ ಮುನವಳ್ಳಿ, ಗದಗ ಜಿಲ್ಲೆಯ ಕೊಣ್ಣೂರ ಭಾಗವನ್ನ ದಾಟಿ ನಂತರ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಕಮತಗಿ ಮಾರ್ಗವಾಗಿ ಕೂಡಲಸಂಗಮ ಸೇರುತ್ತದೆ. ಹೀಗಾಗಿ ಮಲಪ್ರಭಾ ನದಿಯು ಬಾಗಲಕೋಟೆ, ಬೆಳಗಾವಿ, ಗದಗ ಸೇರಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಂದಾಜು 360 ಕಿಮೀಗೂ ಅಧಿಕ ಉದ್ದವನ್ನು ಹೊಂದಿದ್ದು, ಈ ನದಿ ಪಾತ್ರದಲ್ಲಿ ಸಾವಿರಾರು ಕಿಮೀ ಒತ್ತುವರಿ ಯಾಗಿದೆ. ಹೀಗೆ ಒತ್ತುವರಿಯಾಗುತ್ತ ಹೋದಂತೆ ನದಿಯ ಒಡಲು ಚಿಕ್ಕದಾಗುತ್ತಲೇ ಬಂತು. ಹೀಗೆ ಯಾವಾಗ ನದಿ ಚಿಕ್ಕದಾಗುತ್ತಾ ಹೋಯ್ತೋ ಆಗ ಸ್ವಲ್ಪ ಪ್ರಮಾಣ ಮಳೆ ಬಂದು ನೀರು ಮಲಪ್ರಭಾ ನದಿಯಲ್ಲಿ ಬಂದಾಗ ಪ್ರವಾಹದಂತಹ ಪರಿಸ್ಥಿತಿಯನ್ನ ಎದುರಿಸುವಂತಾಯಿತು. ಹೀಗಾಗಿ ನದಿಯ ಇಕ್ಕೆಲಗಳ ಬಹುತೇಕ ಗ್ರಾಮಗಳು ಜಲಾವೃತವಾಗಿ ಅದೆಷ್ಟೋ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು. 

ಕಳೆದ 40 ವರ್ಷಗಳಿಂದ ಕೇಳಿ ಬರುತ್ತಿದೆ ಮಲಪ್ರಭೆ ತೆರವಿನ ಕೂಗು: ಮಲಪ್ರಭಾ ನದಿಯ ಹೂಳೆತ್ತುವುದು ಮತ್ತು ನದಿಯ ಇಕ್ಕೆಲಗಳ ಒತ್ತುವರಿ ತೆರವು ಮಾಡಬೇಕೆನ್ನುವ ಕೂಗು ಇಂದು ನಿನ್ನೆಯದಲ್ಲ. ಕಳೆದ 40 ವರ್ಷಗಳ ಹಿಂದೆಯೇ ಇಂತಹವೊಂದು ಹೋರಾಟ ಆರಂಭವಾಗಿತ್ತು. ಅಂದರೆ 1980ರಲ್ಲಿಯೇ ಬೆಳಗಾವಿ ಜಿಲ್ಲೆಯ ರಾಮದುರ್ಗದ ನಿವಾಸಿ ಮಾರುತಿ ಚಂದರಗಿ ಅವರು ನಾಗರಿಕ ವೇದಿಕೆಯನ್ನು ಕಟ್ಟಿಕೊಂಡು ಮಲಪ್ರಭೆ ಸ್ವಚ್ಚತೆ ಮತ್ತು ಒತ್ತುವರಿ ತೆರವಿಗೆ ಇನ್ನಿಲ್ಲದ ಹೋರಾಟ ಮಾಡುತ್ತಲೇ ಬಂದಿದ್ದು, ಇಂದಿಗೂ ಸರ್ಕಾರದ ಮೇಲೆ ಒತ್ತಡ ತರುವಂತಹ ಕೆಲಸವನ್ನ ಮಾರುತಿ ಚಂದರಗಿ ಮತ್ತು ಅವರ ಸಹೋದರ ಅಶೋಕ ಚಂದರಗಿ ಮಾಡುತ್ತಾ ಬಂದಿದ್ದಾರೆ. ಇದಾದ ಬಳಿಕ ಸೂರೇಬಾನ ಗ್ರಾಮದ ಪೂರ್ಣಿಮಾ ಗೌರೋಜಿ ಅವರು ಸಹ ಈ ಸಂಭಂದ ನ್ಯಾಯಾಲಯದ ಮೆಟ್ಟಿಲು ಏರಿದರು. ಮುಂದುವರೆದು ಹೀಗೆ ಸತತವಾಗಿ ಹೋರಾಟದ ಮಧ್ಯೆಯೂ ಇಂದು ನಿರಂತರವಾಗಿ  ಮಲಪ್ರಭಾ ನದಿಗೆ ಪ್ರವಾಹ ಉಂಟಾಗುತ್ತಿರುವುದರಿಂದ ಸರ್ಕಾರ ಜನರ ಪುನರ್ವಸತಿ, ಗ್ರಾಮ ಸ್ಥಳಾಂತರ ಹೀಗೆ ಒಂದಿಲ್ಲೊಂದು ವೆಚ್ಚ ಮಾಡಲೇಬೇಕಿದೆ.  ಆದ್ದರಿಂದ ಸರ್ಕಾರ ಆದಷ್ಟು ಇದೀಗ ನದಿಯ ಹೂಳು ತೆಗೆಯುವುದು ಸೇರಿದಂತೆ ಒತ್ತುವರಿ ತೆರವು ನಡೆಸಲು ಮುಂದಾಗಬೇಕಿದೆ ಎಂಬ ಕೂಗು ಕೇಳಿ ಬಂದಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಅವಾಂತರ: ಬೀದಿಗೆ ಬಂದ ಬದುಕು

ಲಾಬಿಗೆ ಮಣಿಯದೇ ಒತ್ತುವರಿ ತೆರವಿಗೆ ಮುಂದಾಗಬೇಕಿದೆ ಸರ್ಕಾರ: ಇನ್ನು ಅಂದಾಜು 360 ಕಿಮೀ ದೂರ ಹರಿದಿರುವ ಮಲಪ್ರಭಾ ನದಿಯ ಹೂಳು ತೆಗೆಯುವುದು ಮತ್ತು ನದಿ ಇಕ್ಕೆಲಗಳ ಒತ್ತುವರಿ ತೆರವುಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ಸರ್ಕಾರ ದಿಟ್ಟ ನಿಲುವು ತಾಳಬೇಕಿದೆ. ಯಾಕೆಂದರೆ ಇದಕ್ಕೆ ಒಂದೊಮ್ಮೆ ಸರ್ಕಾರ ಮುಂದಾದಲ್ಲಿ ಇದಕ್ಕೆ ವಿರೋಧಿಸಿ ಲಾಭಿ ನಡೆಸುವಂತಹ ಕಾಣದ ಕೈಗಳ ಕೈವಾಡವೂ ಇಲ್ಲದಿಲ್ಲ. ಹೀಗಾಗಿ ಸರ್ಕಾರ ಪ್ರತಿವರ್ಷ ಉಂಟಾಗುವ ಪ್ರವಾಹ ಎಫೆಕ್ಟ್​ನ್ನ ತಡೆಯಬೇಕೆಂದಾದಲ್ಲಿ ನಿರ್ಧಾಕ್ಷಣ್ಯ ಕ್ರಮಕ್ಕೆ ಮುಂದಾಗಬೇಕಿರುವುದು ಇಂದಿನ ಅನಿವಾರ್ಯತೆ ಆಗಿದೆ. ಒಟ್ಟಿನಲ್ಲಿ ನಿರಂತರ ಪ್ರವಾಹಕ್ಕೆ ತುತ್ತಾಗುವ ಮಲಪ್ರಭಾ ನದಿಯಿಂದ ಸರ್ಕಾರಕ್ಕೂ ಸಹ ಪರಿಹಾರ ನೀಡಿಯೇ ಆರ್ಥಿಕ ಹೊರೆಯನ್ನ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇನೆ ಇರಲಿ ಇನ್ನಾದ್ರೂ ಆದಷ್ಟು ಬೇಗ ಸರ್ಕಾರ ಈ ಸಂಭಂದ ಅನುದಾನ ಮೀಸಲಿರಿಸಿ ನದಿಯ ಹೂಳು ಸಹಿತ ಇಕ್ಕೆಲಗಳ ತೆರವು ಕಾರ್ಯಕ್ಕೆ ಮುಂದಾಗುತ್ತಾ ಅಂತ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios