Bagalkot Horticulture Fair: ಪ್ರಗತಿ ಕಾಣದ ತೋಟಗಾರಿಕೆ ಕ್ಷೇತ್ರ: ಸಚಿವ ಕಾರಜೋಳ

*   ತೋಟಗಾರಿಕೆ ವಿವಿ ಮೇಳದಲ್ಲಿ ಸಚಿವ ಗೋವಿಂದ ಕಾರಜೋಳ ಬೇಸರ
*   ಸವಳು ಭೂಮಿಯಲ್ಲಿ ಏನು ಬೆಳೆಯಬಹುದು ಸಂಶೋ​ಧಿಸಿ
*   ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ 
 

No Development in Horticulture Sector Says Minister Govind Karjol grg

ಬಾಗಲಕೋಟೆ(ಡಿ.27): ದೇಶದಲ್ಲಿಯೇ ಅಖಂಡ ವಿಜಯಪುರ(Vijayapura) ಜಿಲ್ಲೆಯನ್ನು ತೋಟಗಾರಿಕೆ ಜಿಲ್ಲೆಯಂದು ಘೋಷಿಸಿ 25 ವರ್ಷಗಳು ಗತಿಸಿವೆ. ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ(Bagalkot University of Horticultural Sciences) ಆರಂಭಗೊಂಡು 13 ವರ್ಷಗಳು ಆಗುತ್ತಿವೆ. ಆದರೂ ನಿರೀಕ್ಷಿಸಿದಷ್ಟು ತೋಟಗಾರಿಕಾ ಕ್ಷೇತ್ರದ ಬೆಳವಣಿಗೆ ಹಾಗೂ ಅಭಿವೃದ್ಧಿ ಆಗಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಬೇಸರ ವ್ಯಕ್ತಪಡಿಸಿದ್ದಾರೆ.

ಅವರು ಬಾಗಲಕೋಟೆ(Bagalkot) ನವನಗರದ ಉದ್ಯಾನಗಿರಿಯಲ್ಲಿ ಭಾನುವಾರ ತೋಟಗಾರಿಕೆ ವಿವಿಯ 10ನೇ ಮೇಳದಲ್ಲಿ ಫಲಶ್ರೇಷ್ಠ ರೈತ ಪ್ರಶಸ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ 9 ಜನ ಸಾಧಕರಿಗೆ ಪ್ರಶ​ಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು 2008ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ(BS Yediyurappa) ಅವರ ಮೇಲೆ ಒತ್ತಡ ಹಾಕಿ ಬಾಗಲಕೋಟೆಗೆ ತಂದ ತೋಟಗಾರಿಕೆ ವಿವಿಯು ನಿರೀಕ್ಷಿಸಿದಷ್ಟು ಸಾ​ಧಿಸಲು ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.

Bagalkot Horticulture Fair: ಕೃಷಿ, ತೋಟಗಾರಿಕೆ ಬಲವರ್ಧನೆಗೆ ಆದ್ಯತೆ: ಸಚಿವ ನಿರಾಣಿ

ದೇಶದಲ್ಲಿಯೇ(India) ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳು ತೋಟಗಾರಿಕೆ ಬೆಳೆಗಳಿಗೆ, ಹಣ್ಣು ಹಂಪಲುಗಳಿಗೆ ಹೆಸರುವಾಸಿ. ಆದರೆ ಸದ್ಯ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಬೆಳೆಗಳಾದರೂ ಯಾವವು? ಎಂದು ಪ್ರಶ್ನಿಸಿದ ಸಚಿವರು, ಕೇವಲ ಕಬ್ಬನ್ನೇ ಅವಲಂಬಿಸಿರುವ ರೈತರು(Farmers) ಹೆಚ್ಚಾಗಿ ಕಬ್ಬು ಬೆಳೆಯುತ್ತಿರುವುದರಿಂದ ರೈತರಿಗೆ ಹಾಗೂ ಕಬ್ಬು ಬೆಳೆದ ಭೂಮಿಗೆ ಆಗುತ್ತಿರುವ ಹಾನಿಯನ್ನು ಯಾರು ಗಮನಿಸುತ್ತಿಲ್ಲ ಎಂದು ವಿಷಾ​ಸಿದರು.
ತೋಟಗಾರಿಕೆ ಕ್ಷೇತ್ರದ(Horticulture Sector) ಅಭಿವೃದ್ಧಿಯಾದರೆ ಆ ಮೂಲಕ ಬೆಳೆಯುವ ತರಕಾರಿ, ಹಣ್ಣು ಹಂಪಲುಗಳು ಕೇವಲ ರೈತರಿಗೆ ಮಾತ್ರ ಆದಾಯ ತರುವುದಿಲ್ಲ. ಬದಲಾಗಿ ಭೂರಹಿತ ಕೃಷಿ ಕಾರ್ಮಿಕರು ಸಹ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಂಡು ವಿವಿಗಳು ಸಂಶೋಧನೆ ನಡೆಸಲಿ ಎಂದರು.

ಮೇಳಗಳು ಜಾತ್ರೆಗಳಾಗುವದು ಬೇಡ:

ಶಾಸಕ ವೀರಣ್ಣ ಚರಂತಿಮಠ ಅವರು, ಬಾಗಲಕೋಟೆಯ ತೋಟಗಾರಿಕೆ ವಿವಿ ಸ್ಥಾಪನೆ ಆಗಲು ಹಾಗೂ ವಿವಿಗೆ ಜಮೀನನ್ನು ನೀಡಲು ಅಂದು ಕೈಗೊಂಡ ಕ್ರಮದ ಕುರಿತು ಮಾತನಾಡಿದರು. ವಿವಿ ಆರಂಭಗೊಂಡ ನಂತರ ನಡೆದ ಮೇಳಗಳು ಬರಿ ಜಾತ್ರೆಗಳಾಗುವದು ಬೇಡ ಬದಲಾಗಿ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದರು.

ಸದ್ಯ ನವನಗರದಲ್ಲಿ ವಿವಿಗೆ 300 ಎಕರೆ ಜಾಗ ನೀಡಿದ್ದು ಮುಧೋಳದಲ್ಲಿಯೂ ಸಹ 350 ಎಕರೆ ಜಮೀನನ್ನು ನೀಡಲು ಸಚಿವ ಕಾರಜೋಳ ಅವರು ಒಪ್ಪಿದ್ದಾರೆ. ಅಲ್ಲಿಯೂ ಸಹ ತೋಟಗಾರಿಕೆ ಕ್ಷೇತ್ರದ ವಿಸ್ತರಣೆಗೆ ಅವಕಾಶ ಸಿಗಲಿದ್ದು ಬರುವ ದಿನಗಳಲ್ಲಿ ರೈತರ ತೋಟಗಾರಿಕೆ ಬೆಳೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಲಿ ಎಂದು ಆಶಿಸಿದರು.

ನಾಡಗೀತೆ ಹಾಗೂ ರೈತಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿವಿಯ ಶಿಕ್ಷಣ ನಿರ್ದೇಶಕರಾದ ಡಾ.ಎಂ.ಎಸ್‌.ಕುಲಕರ್ಣಿ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ಡೀನ್‌ ಡಾ.ರವೀಂದ್ರ ಮೂಲಗಿ ವಂದಿಸಿದರು. ವೇದಿಕೆ ಮೇಲೆ ವಿವಿ ಕುಲಪತಿ ಇಂದಿರೇಶ, ಕುಲಸಚಿವರಾದ ಡಾ.ಟಿ.ಬಿ.ಅಳ್ಳೊಳ್ಳಿ ಇದ್ದರು.

ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ:

ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ತುಮಕೂರ ಜಿಲ್ಲೆಯ ಗುಬ್ಬಿ ತಾಲೂಕಿನ ಎರಬಳ್ಳಿ ಗ್ರಾಮದ ಅರುಣಾ ರಾಜಣ್ಣ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕನ್ನಮಂಗಳ ಗ್ರಾಮದ ಮಹೇಶ ಶಿವಣ್ಣ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಲ್ಲಟ್ಟಿಹುಣಸೆಕೊಪ್ಪದ ರಮಾಕಾಂತ ಹೆಗಡೆ, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಗುಡುಗನಹಳ್ಳಿಯ ಪ್ರಸನ್ನ, ಧಾರವಾಡ ಜಿಲ್ಲೆಯ ಕೆಲಕೇರಿ ಗ್ರಾಮದ ಪ್ರಮೋದ ಗಾಂವಕರ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಗೊಂದಿ ಗ್ರಾಮದ ಲಕ್ಷ್ಮಣ ಕೋಡಿಹಳ್ಳಿ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದ ಅನುಪಮ ಅಳ್ಳಿಚಂಡಿ ಅವರನ್ನು ಸನ್ಮಾನಿಸಲಾಯಿತು.

ಕೈಪಿಡಿ ಎಸೆದು ಕಾರಜೋಳ ಆಕ್ರೋಶ

ತೋಟಗಾರಿಕೆ ವಿವಿಯಲ್ಲಿ ನಡೆದ ತೋಟಗಾರಿಕೆ ಮೇಳದ(Horticulture Fair) ಮುಖ್ಯ ವೇದಿಕೆಯಲ್ಲಿ ಮುಧೋಳ ಶ್ವಾನ ಕುರಿತು ಸಚಿವ ಕಾರಜೋಳ ಕೈಪಿಡಿ ಬಿಡುಗಡೆ ಮಾಡಿದರು. ಬಿಡುಗಡೆ ಮಾಡಿದ ಕೈಪಿಡಿಯಲ್ಲಿ ಒಳಪುಟದಲ್ಲಿ ತಾವು ಉಪಸ್ಥಿತರಿದ್ದ ಭಾರತೀಯ ವಾಯು ಸೇನೆಗೆ ಮುಧೋಳದ ಮರಿಗಳ ಹಸ್ತಾಂತರ ಕುರಿತು ಭಾವಚಿತ್ರ ಪ್ರಕಟಿಸಲಾಗಿತ್ತು. ಮುಖಪುಟದಲ್ಲಿ ಅಧಿ​ಕಾರಿಗಳ ಭಾವಚಿತ್ರ ಪ್ರಕಟವಾಗಿತ್ತು. ಇದನ್ನು ನಂತರ ಗಮನಿಸಿದ ಸಚಿವರು ಸಂಬಂಧಿ​ಸಿದ ಪಶು ವೈದ್ಯಕೀಯ ಶ್ವಾನ ಸಂಶೋಧನಾ ವಿಭಾಗದ ಅ​ಧಿಕಾರಿಗಳಿಗೆ ಕೈಪಿಡಿ ಎಸೆದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ವಾಯು ಸೇನೆಗೆ ಹಾಗೂ ಮುಧೋಳದಲ್ಲಿ ಶ್ವಾನ ಸಂಶೋಧನಾ ಕೇಂದ್ರವನ್ನು ತಂದಿದ್ದೆ ನಾನು ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

Mann Ki Baat: ಬಾಗಲಕೋಟೆ ಜನರಿಗೆ ನಿರಾಸೆ ಮೂಡಿಸಿದ ಮೋದಿಯ ಮನ್​ ಕೀ ಬಾತ್

ಸವಳು ಭೂಮಿಯಲ್ಲಿ ಏನು ಬೆಳೆಯಬಹುದು ಸಂಶೋ​ಧಿಸಿ:

ಹೆಚ್ಚಾಗಿ ಕಬ್ಬು ಬೆಳೆದ ಭೂಮಿ ಸವುಳು ಭೂಮಿಗಳಾಗಿ ಪರಿವರ್ತಿತವಾಗುತ್ತಿವೆ, ಕೆಲವೆಡೆ ಬರಡು ಭೂಮಿಗಳು ಆಗಿವೆ. ಸವುಳು ಭೂಮಿ ಆಗಲು ಕಾರಣವೇನು ಹಾಗೂ ಸವುಳು ಭೂಮಿಯಲ್ಲಿ ಏನನ್ನು ಬೆಳೆಯಬಹುದು ಎಂಬುದನ್ನು ತಜ್ಞರ ನೆರವಿನೊಂದಿಗೆ ತೋಟಗಾರಿಕೆ ವಿವಿ ಸಂಶೋಧನೆ ನಡೆಸಲಿ ಎಂದು ಸಚಿವ ಗೋವಿಂದ ಕಾರಜೋಳ ಸಲಹೆ ನೀಡಿದರು.

ಮುಧೋಳದ ರೋಹಿನಿ ಬಯೋಟಿಕ್‌ ಸಂಸ್ಥೆ ಸವುಳು ಭೂಮಿಯಲ್ಲಿ ಕಬ್ಬು ಬೆಳೆಯುವ ಪ್ರಯೋಗ ಮಾಡುತ್ತಿದೆ. ಅಂತಹ ಪ್ರಯೋಗಗಳು ಏಕೆ ಆಗುತ್ತಿಲ್ಲ. ಜಿಲ್ಲೆಯಲ್ಲಿಯೇ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದವರನ್ನು ಬಳಸಿಕೊಳ್ಳಿ, ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಸಂಸ್ಥೆಯನ್ನು ಬಳಸಿಕೊಂಡು ಸವುಳು ಹಾಗೂ ಬರಡು ಭೂಮಿಯಲ್ಲಿ ಏನನ್ನು ಮಾಡಬಹುದು ಎಂಬುದನ್ನು ಸಂಶೋ​ಧಿಸಿ ಅದಕ್ಕೆ ತೋಟಗಾರಿಕೆ ವಿವಿ ಹಣ ನೀಡಬೇಕಿಲ್ಲ. ಬದಲಾಗಿ ಜಲಸಂಪನ್ಮೂಲ ಇಲಾಖೆಯೇ ಆರ್ಥಿಕ ನೆರವು ನೀಡಲಿದೆ ಎಂದು ಸಚಿವರು ತಿಳಿಸಿದರು.

ವಿವಿಗಳು ಹೆಚ್ಚಾಗಿ ರೈತರನ್ನು ತಲುಪುವ ಅಗತ್ಯತೆ ಇದೆ, ಹೊಸ ಹೊಸ ವಿಚಾರಗಳನ್ನು ರೈತರಲ್ಲಿ ಬಿತ್ತಬೇಕಿದೆ. ಸಂಶೋಧನೆಗಳು ರೈತರಿಗೆ ತಲುಪಿದಾಗ ಮಾತ್ರ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರವನ್ನು ಬಲಪಡಿಸಲು ಸಾಧ್ಯ ಎಂದರು.
 

Latest Videos
Follow Us:
Download App:
  • android
  • ios