Asianet Suvarna News Asianet Suvarna News

ಕೈ ಕಚ್ಚುತ್ತಿದೆ ತರಕಾರಿ ಬೆಲೆ : 200 ದಾಟಿದ ಕಟ್ಟು ಕೊತ್ತಂಬರಿ ಸೊಪ್ಪು

  • ಜಿಲ್ಲಾದ್ಯಂತ ಕಳೆದ 10, 15 ದಿನಗಳಿಂದ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ
  • ಪರಿಣಾಮ ದೀಪಾವಳಿ ಹೊಸ್ತಿಲಲ್ಲಿರುವ ಜನತೆಗೆ ಅಗತ್ಯ ವಸ್ತುಗಳಾದ ಹಣ್ಣು, ಸೊಪ್ಪು, ತರಕಾರಿಗಳ ಬೆಲೆ ಗಗನಕ್ಕೆ 
chikkaballapura  Vegetable prices increased  due to supply shortage snr
Author
Bengaluru, First Published Nov 1, 2021, 12:20 PM IST

 ಚಿಕ್ಕಬಳ್ಳಾಪುರ (ನ.01) :  ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಪ್ರತಿ ಲೀಟರ್‌ ಮೇಲೆ ದಾಖಲೆಯ 100 ರು, ಗಡಿ ದಾಟಿ ಜನ ಸಾಮಾನ್ಯರನ್ನು ಒಂದಡೆ ತತ್ತರಿಸುವಂತೆ ಮಾಡುತ್ತಿದ್ದಂತೆ ಮತ್ತೊಂದಡೆ ಜಿಲ್ಲಾದ್ಯಂತ ಕಳೆದ 10, 15 ದಿನಗಳಿಂದ ಸುರಿದ ಭಾರೀ ಮಳೆಗೆ (Heavy Rain) ಅಪಾರ ಪ್ರಮಾಣದ ಬೆಳೆ (crops) ನಾಶಗಿದೆ. ಪರಿಣಾಮ ದೀಪಾವಳಿ (Deepavali) ಹೊಸ್ತಿಲಲ್ಲಿರುವ ಜನತೆಗೆ ಅಗತ್ಯ ವಸ್ತುಗಳಾದ ಹಣ್ಣು, ಸೊಪ್ಪು, ತರಕಾರಿಗಳ (Vegetables) ಬೆಲೆ ಗಗನಕ್ಕೆ ಏರುತ್ತಿದೆ.

ಹೌದು, ಜಿಲ್ಲೆಯಲ್ಲಿ ಸತತ 25, 30 ವರ್ಷಗಳ ಬಳಿಕ ದಾಖಲೆಯ ಪ್ರಮಾಣದಲ್ಲಿ ಮಳೆ (rain) ಬಿದ್ದು ಜಿಲ್ಲಾದ್ಯಂತ ಕೆರೆ, ಕುಂಟೆ, ಜಲಾಶಯಗಳು (Water Resarvior) ತುಂಬಿ ಉಕ್ಕಿ ಹರಿಯುತ್ತಿದ್ದು ಜೊತೆಗೆ ಕೊಯ್ಲಿಗೆ ಬಂದಿದ್ದ ಅಪಾರ ಪ್ರಮಾಣದ, ಹೂ, ಹಣ್ಣು, ತರಕಾರಿ, ಸೊಪ್ಪು ಮತ್ತಿತರ ತರಕಾರಿ ಪದಾರ್ಥಗಳು ಮಹಾ ಮಳೆಯಿಂದ ನಾಶವಾಗಿದ್ದು, ಇದೀಗ ಮಾರುಕಟ್ಟೆಯಲ್ಲಿ (Market) ದರ ಹೆಚ್ಚಳಕ್ಕೆ ಕಾರಣವಾಗಿದೆ.

ಸೊಪ್ಪುಗಳ ದರ ದುಬಾರಿ:

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಸೊಪ್ಪುಗಳು ಕಟ್ಟೆಮೇಲೆ 40, 50 ರು,ಗೆ ಮಾರಾಟಗೊಳ್ಳುತ್ತಿದ್ದು ಗ್ರಾಹಕರನ್ನು ಕಂಗಾಲಾಗಿಸಿದರೆ ತರಕಾರಿ ಬೆಳೆಗಳು ಕೂಡ ಎಲ್ಲವೂ ಏರಿಕೆಯಾಗಿ ಗ್ರಾಹಕರು ತೀವ್ರ ಚಿಂತೆಗೀಡು ಮಾಡಿವೆ. ಚಿಕ್ಕಬಳ್ಳಾಪುರದಲ್ಲಿ (Chikkaballapura) ಕೊತ್ತಂಬರಿ ಸೊಪ್ಪು 10 ರು, ಕೊಟ್ಟರೂ ಸಿಗದ ಪರಿಸ್ಥಿತಿ ಇದ್ದು ಕಟ್ಟೊಂದು 200, 250 ರು.ಗಳಿಗೆ ಮಾರಾಟವಾಗುತ್ತಿದೆ. ಇನ್ನು ಪಾಲಾಕ್‌, ದಂಟು, ಅರಿವೆ, ಮೆಂತ್ಯ ಹಾಗೂ ಸಬ್ಬಕ್ಕಿ ಸೊಪ್ಪು ಕೂಡ 40, 50 ರುಗೆ ಮಾರಾಟವಾಗುತ್ತಿದೆ.

chikkaballapura ಭಾರೀ ಮಳೆಗೆ ಗ್ರಾಮಗಳ ಸಂಪರ್ಕವೇ ಕಡಿತ : ಜನ ಪರದಾಟ

ಇನ್ನು ತರಕಾರಿ ನೋಡಿದರೆ ಈರುಳ್ಳಿ (Onion) ಈಗಾಗಲೇ ಕೆಜಿ ಮೇಲೆ 40, 50 ರು, ಮಾರಾಟವಾಗುತ್ತಿದ್ದರೆ ಟೊಮೆಟೋ 50, 60 ರು ತಲುಪಿದೆ. ಇನ್ನೂ ಬದನೆ ಕೆಜಿ 40, ಬೀನ್ಸ್‌ ಕೆಜಿ 80, ಕ್ಯಾರೆಟ್‌ ಕೆಜಿ 60, ನವಕೋಲು, ಮೂಲಂಗಿ, ಬಿಟ್‌ರೋಟ್‌, ಹೂ ಕೋಸ್‌ ಬೆಳೆಗಳು ಅಂತೂ ಕೆಜಿ ಮೇಲೆ 50 ರಿಂದ 60 ರು,ಗೆ ಏರಿಕೆ ಆಗಿ ದೀಪಾವಳಿ ಸಂಭ್ರಮದಲ್ಲಿರುವ ಜಿಲ್ಲೆಯ ಜನತೆಯನ್ನು ಬೆಲೆ ಏರಿಕೆ ತೀವ್ರ ಕಂಗಾಲಾಗಿಸಿದೆ.

ಸಾಲ ಶೂಲಕ್ಕೆ ರೈತ

ಮಾರುಕಟ್ಟೆಯಲ್ಲಿ ಒಂದಡೆಗೆ ಹೂ, ಹಣ್ಣು, ತರಕಾರಿ ಬೆಳೆಗಳು ಸಿಕ್ಕಾಪಟ್ಟೆದರ ಹೆಚ್ಚಳವಾದರೆ ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೂ ವ್ಯಾಪಕ ಆರ್ಥಿಕ ನಷ್ಟವಾಗಿದೆ. ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಸೊಪ್ಪು, ತರಕಾರಿ ಮಾರಿ ಕೈ ತುಂಬ ಕಾಸು ಸಂಪಾದನೆ ಮಾಡುವ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಮಳೆ ರೈತನ ಬೆಳೆಯನ್ನು ಬಲಿ ಪಡೆದಿದ್ದು ಕೆಲ ರೈತರನ್ನು ಸಾಲದ ಶೂಲಕ್ಕೆ ತಳ್ಳಿದೆ.

ಕನ್ನಡ ಉಳಿಸಿ, ಬೆಳೆಸಲು ಸರ್ಕಾರ ಏನು ಮಾಡಬೇಕು? 10 ಸರಳ ಸಲಹೆಗಳು

ಅಧಿಕಾರಿಗಳಿಂದ ಸುಳ್ಳು ಮಾಹಿತಿ - ಆಕ್ರೋಶ

 

ಜಿಲ್ಲೆಯಲ್ಲಿ ಮಳೆಯಿಂದ (Rain) ಜನ ಜೀವನ ಅಸ್ತವ್ಯಸ್ಥವಾಗಿರುವುದು ಒಂದೆಡೆಯಾದರೆ ಲಕ್ಷಾಂತರ ರು, ಬಂಡವಾಳ ಹಾಕಿ ಬೆಳೆದಿದ್ದ ವಾಣಿಜ್ಯ ಬೆಳೆಗಳು (crops) ಮಳೆಗೆ ಕೊಚ್ಚಿ ಹೋಗಿದ್ದರೂ ಅಧಿಕಾರಿಗಳು (Officers) ಮಾತ್ರ ಮಳೆಯಿಂದ ಏನು ಆಗಿಲ್ಲ ಎಂಬ ಸುಳ್ಳು ವರದಿ ತಯಾರಿಸಿರುವುದು ರೈತರ(Farmers) ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ : ಬೆಳೆ ವಿಮೆ ಯೋಜನೆಗೆ ರೈತರ ನಿರಾಸಕ್ತಿ

ಹೌದು, ಜಿಲ್ಲೆಯ ಬಾಗೇಪಲ್ಲಿ (bagepalli), ಚಿಂತಾಮಣಿ, ಚಿಕ್ಕಬಳ್ಳಾಪುರ (chikkaballapura) ತಾಲೂಕು ಸೇರಿದಂತೆ ಶಿಡ್ಲಘಟ್ಟದಲ್ಲಿ ಮಳೆಯ ಅರ್ಭಟಕ್ಕೆ ಆಲೂಗಡ್ಡೆ, ಹಿಪ್ಪು ನೇರಳೆ, ಟೊಮೇಟೊ(Tomato), ಕ್ಯಾರೆಟ್‌, ಬೀನ್ಸ್‌ ಸೇರಿದಂತೆ ಕೊಯ್ಲಿಗೆ ಬಂದಿದ್ದ ನೆಲಗಡಲೆ, ಕ್ಯಾಪ್ಸಿಕಂ ಮತ್ತಿತರ ವಾಣಿಜ್ಯ ಬೆಳೆಗಳು ನೀರು ಪಾಲಾಗಿದ್ದರೂ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ದಸರಾ ವಿಜಯ ದಶಮಿ ಹಬ್ಬದ ಸಂಭ್ರಮದಲ್ಲಿ ಮುಳಗಿ ಮಳೆಯಿಂದ ಏನು ಬೆಳೆ ಹಾನಿ (Crop loss) ಆಗಿಲ್ಲ ಎಂಬ ವರದಿ ಮೇಲಧಿಕಾರಿಗಳಿಗೆ ರವಾನಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಕೊರತೆ : ಬೆಳೆ ಒಣಗುವ ಭೀತಿಯಲ್ಲಿ ರೈತ

ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಬೀಳುತ್ತಿರುವ ಭಾರಿ ಮಳೆಯಿಂದ ಕೆರೆ, ಕುಂಟೆಗಳು ಕಟ್ಟೆಗಳು ಒಡೆದು ಅಪಾರ ಪ್ರಾಮಾಣ ನೀರು ನುಗ್ಗಿ ರೈತರ ತೋಟ, ಭತ್ತ (Paddy), ರಾಗಿ (Millet) ಮತ್ತಿತರ ಬೆಳೆಗಳು ಮಣ್ಣು ಪಾಲಾಗುತ್ತಿವೆ. ಆದರೆ ಈ ಬಗ್ಗೆ ಬೆಳೆ ಹಾನಿ ಸಮೀಕ್ಷೆ (Survey) ನಡೆಸಬೇಕಾದ ಅಧಿಕಾರಿಗಳು ಜಿಲ್ಲೆಯಲ್ಲಿ ಎಲ್ಲಿಗೂ ಭೇಟಿ ನೀಡದೇ ಮಳೆಯಿಂದ ಬೆಳೆ ಹಾನಿ ಅಗಿಲ್ಲ ಎನ್ನುವ ವರದಿ ಸಲ್ಲಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Follow Us:
Download App:
  • android
  • ios