ಕುಟುಂಬಗಳ ಬೆಸೆಯುವ ದೀಪಾವಳಿ ಆಚರಣೆ: ಚೈತ್ರಾ
ವೈವಿಧ್ಯಮಯ ಸಂಸ್ಕೃತಿಯ ಹಿಂದೂ ರಾಷ್ಟ್ರದಲ್ಲಿ ದೀಪಾವಳಿ ಹಬ್ಬವನ್ನು ವಿವಿಧ ಸಮುದಾಯದವರು ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಎತ್ತಿ ಹಿಡಿಯುತ್ತಾರೆ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಹೇಳಿದ್ದಾರೆ.
ಗೋಣಿಕೊಪ್ಪ (ಅ.24) : ವೈವಿಧ್ಯಮಯ ಸಂಸ್ಕೃತಿಯ ಹಿಂದೂ ರಾಷ್ಟ್ರದಲ್ಲಿ ದೀಪಾವಳಿ ಹಬ್ಬವನ್ನು ವಿವಿಧ ಸಮುದಾಯದವರು ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಎತ್ತಿ ಹಿಡಿಯುತ್ತಾರೆ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಹೇಳಿದ್ದಾರೆ.
Diwali 2022: ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಅವಶ್ಯ ಬಳಸಿ ಈ ವಸ್ತು
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಮ್ಮ ದೇಶ ನಮ್ಮ ಸಂಸ್ಕೃತಿ ಆಚರಣೆ ಅಂಗವಾಗಿ ಕೊಡಗು ಹಿಂದೂ ಮಲಯಾಳಿ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ದೀಪಾವಳಿ ಆಚರಣೆ ಕಾರ್ಯಕ್ರಮವನ್ನು ಮಣ್ಣಿನ ಹಣತೆ ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕುಟುಂಬಗಳನ್ನು ಬೆಸೆಯಲು ದೀಪಾವಳಿ ಆಚರಣೆ ಪಾರಂಪರಿಕವಾಗಿ ನಡೆಯುತ್ತಿದೆ. ವಿವಿಧ ಸಮುದಾಯದವರು ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ ಎಂದು ಹೇಳಿದರು.
ಕನ್ನಡ ಗೌಡ ಜನಾಂಗ ಸಮುದಾಯದ ಪ್ರಮುಖ ಎಚ್.ಬಿ. ಗಣೇಶ್ ಮಾತನಾಡಿ, ದೀಪಾವಳಿಯನ್ನು ಪಾರಂಪರಿಕವಾಗಿ ಸಮುದಾಯದವರು ಆಚರಿಸುತ್ತಿದ್ದು, ಮನೆಯನ್ನು ರಂಗೋಲಿಯಿಂದ ಅಲಂಕರಿಸಿ ದೀಪಗಳನ್ನು ಬೆಳಗುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ನಂತರ ಲಕ್ಷ್ಮೇಪೂಜೆ, ಗೋ ಪೂಜೆಗಳನ್ನು ಆಚರಿಸಿ ಸಿಹಿ ಪದಾರ್ಥಗಳನ್ನು ತಯಾರಿಸಿ ಸವಿಯುವ ಮತ್ತು ಹಂಚುವ ಮೂಲಕ ಹಬ್ಬವನ್ನು ಆಚರಿಸುತ್ತೇವೆ ಎಂದು ಹೇಳಿದರು.
ತುಳು ಭಾಷಿಕ ಸಮುದಾಯದ ಮುಖಂಡ ಶೇಖರ್ ಭಂಡಾರಿ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ತನ್ನದೇ ಆದ ಸಂಪ್ರದಾಯದೊಂದಿಗೆ ದೀಪಾವಳಿಯನ್ನು ಆಚರಿಸಲಾಗುತ್ತದೆ. ಮೂರು ದಿನ ಹಬ್ಬವನ್ನು ವಿಶಿಷ್ಟರೀತಿಯಲ್ಲಿ ಆಚರಿಸಲಾಗುವುದು. ಹೊಸ ಬಟ್ಟೆತೊಡುವುದರಿಂದ ರಂಗೋಲಿ, ದೀಪಾಲಂಕಾರ ಹೀಗೆ ವಿಭಿನ್ನ ಆಚರಣೆಗಳನ್ನು ಮಾಡಲಾಗುವುದು. ಲಕ್ಷ್ಮೇಪೂಜೆ, ಗೋ ಪೂಜೆ ಮತ್ತು ಹಿರಿಯರಿಗೆ ಎಡೆಹಿಡುವ ಕಾರ್ಯವನ್ನು ಸಹ ಈ ಸಂದರ್ಭ ನಡೆಸಲಾಗುವುದು ಎಂದು ಹೇಳಿದರು.
ದೈವಜ್ಞ ಬ್ರಾಹ್ಮಹಣರ ಸಮುದಾಯದ ಮುಖಂಡ ಎಂ.ಜಿ. ಮೋಹನ್ ಮಾತನಾಡಿ, ಸಮುದಾಯದವರು ಆಚರಿಸುವ ದೀಪಾವಳಿಯ ಬಗ್ಗೆ ತಿಳಿಸಿ, ವಿಶೇಷವಾಗಿ ಸೌತೆ ಕಾಯಿ ಕಡುಬು ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸುವುದು, ಮಹಾಲಕ್ಷ್ಮೇ ಪೂಜೆ ಮತ್ತು ಗೋವುಗಳನ್ನು ಶೃಂಗರಿಸಿ ಪೂಜಿಸಿ ತಯಾರಿಸಿದ ವಿಶೇಷ ಖಾದ್ಯಗಳನ್ನು ಗೋವುಗಳಿಗೆ ಭಕ್ಷಿಸಲು ನೀಡುವ ಮೂಲಕ ಪಾರಂಪರಿಕವಾಗಿ ಆಚರಣೆಯನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ವಿಷ್ಣು ಸಮಾಜದ ಆಚರಣೆಯ ಬಗ್ಗೆ ತಿಳಿಸಿದ ಮುಖಂಡ ಜಿ.ಡಿ. ಹಿಮ್ಮತ್ ರಾಮ್, ದೀಪಾವಳಿಯಲ್ಲಿ ಮಹಾಲಕ್ಷ್ಮೇಯನ್ನು ವೈಭವೀಕರಣವಾಗಿ ಪೂಜಿಸುವ ಸಂಪ್ರದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಕೊಡಗಿನಲ್ಲಿರುವ ವಿಷ್ಣು ಸಮಾಜದ ಸಮುದಾಯವರು, ಕೊಡಗಿನ ಕಾವೇರಿ ಮಾತೆಯನ್ನು ಲಕ್ಷ್ಮೇ ರೂಪದಲ್ಲಿ ಪೂಜಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ತೆಲುಗು ಸಮುದಾಯದಲ್ಲಿ ದೀಪಾವಳಿ ಆಚರಿಸುವ ಮಾಹಿತಿಯನ್ನು ತೆಲುಗು ಮುಖಂಡ ನಾಗಿರೆಡ್ಡಿ ನೀಡಿ, ತೆಲುಗು ರಾಜ್ಯದಲ್ಲಿ ದೀಪಾವಳಿಯನ್ನು ಒಂದು ರೀತಿಯಲ್ಲಿ ಆಚರಿಸಿದರೆ ಕರ್ನಾಟಕದಲ್ಲಿ ಮತ್ತೊಂದು ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದೆ. ಹೊಸ ಬಟ್ಟೆತೊಡೂವುದರ ಜೊತೆಗೆ ದೀಪಾವಳಿ ಪ್ರಾರಂಭದಲ್ಲಿಂದ ಮುಂದಿನ ತುಳಿಸಿ ಪೂಜೆ ವರೆಗೆ ದೀಪಗಳನ್ನು ಮನೆಗಳ ಮುಂಭಾಗದಲ್ಲಿ ಬೆಳಗುವ ಮೂಲಕ ನಿರಂತರವಾಗಿ ತಿಂಗಳವರೆಗೆ ಆಚರಣೆ ನಡೆಯುತ್ತದೆ. ವಿವಿಧ ರಾಜ್ಯಗಳಲ್ಲಿ ಹಬ್ಬಗಳ ಬಗ್ಗೆ ವಿವಿಧ ಹಿನ್ನೆಲೆ ಮತ್ತು ಸಂಪ್ರದಾಯವನ್ನು ಹೊಂದಿದ್ದರೂ, ಆಚರಣೆಯಲ್ಲಿ ಹಿಂದುತ್ವದ ಪ್ರತಿರೂಪವಿದೆ ಎಂದು ಹೇಳಿದರು.
ತಮಿಳು ಭಾಷಿಕ ಜನಾಂಗದ ಶಿವಶಕ್ತಿ ಮಾತನಾಡಿ, ಕುಟುಂಬದ ಸದಸ್ಯರು ಒಟ್ಟಾಗಿ ಹೊಸ ಉಡುಪುಗಳನ್ನು ಧರಿಸಿ ಮನೆಯಲ್ಲಿ ಪೂಜೆಗಳನ್ನು ನೆರವೇರಿಸುವುದರಿಂದ ಸುಖ ಹಾಗೂ ಕುಟುಂಬಸ್ಥರಲ್ಲಿ ಬಾಂಧವ್ಯ ವೃದ್ಧಿಗೆ ಕಾರಣವಾಗಿದೆ ಎಂದರು.
ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ದೇಶದ ವಿವಿಧ ಸಂಸ್ಕೃತಿ ಆಚರಿಸುವ ಸಮುದಾಯಗಳೊಂದಿಗೆ ಮಾಧ್ಯಮ ನೇರ ಭಾಗಿಯಾಗಲು ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮವನ್ನು ಆಚರಿಸುತ್ತದೆ. ಈ ಮೂಲಕ ಸಮುದಾಯದ ವಿಶಿಷ್ಟಸಂಸ್ಕೃತಿ ಆಚರಣೆಗಳನ್ನು ಒಂದು ಸಮುದಾಯಗಳಿಂದ ಮತ್ತೊಂದು ಸಮುದಾಯಕ್ಕೆ ತಿಳಿಯಪಡಿಸುವ ಕಾರ್ಯ ನಡೆಸುತ್ತಿದೆ ಎಂದು ಹೇಳಿದರು.
ದೀಪಾವಳಿಗೂ ಖಾಸಗಿ ಬಸ್‌ಗಳಿಂದ ಸುಲಿಗೆ: ಟಿಕೆಟ್ ದರ ತ್ರಿಬಲ್..!
ವಿವಿಧ ಜನಾಂಗಗಳ ದೀಪಾವಳಿ ಆಚರಣೆಯ ಬಗ್ಗೆ ಮಾಹಿತಿ ನೀಡಿದ ಅತಿಥಿಗಳಿಗೆ ಮಣ್ಣಿನ ದೀಪಗಳನ್ನು ನೀಡುವ ಮೂಲಕ ಅಭಿನಂದಿಸಲಾಯಿತು.
ಸಂಚಾಲಕ ಚಿಮ್ಮಣಮಾಡ ದರ್ಶನ್ ದೇವಯ್ಯ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಆಶೋಕ್, ಖಜಾಂಚಿ ವಿ.ವಿ. ಅರುಣ್ ಕುಮಾರ್, ನಿರ್ದೇಶಕ ಜಗದೀಶ್ ಜೋಡುಬೀಟಿ, ಸದಸ್ಯ ಟಿ.ಆರ್. ಮನೋಜ್‌ಕುಮಾರ್ ಇದ್ದರು.