ವಿಡಿಯೋ ವೈರಲ್ ಬಳಿಕ ಸಚಿವೆ ಸಾವಿತ್ರಿ ಠಾಕೂರ್ ವಿದ್ಯಾರ್ಹತೆಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಚುನಾಯಿತ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ಸಂವಿಧಾನ ತಿದ್ದುಪಡಿಗೆ ಕಾಂಗ್ರೆಸ್ ಆಗ್ರಹಿಸಿದೆ.
ಭೋಪಾಲ್: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸಾವಿತ್ರಿ ಠಾಕೂರ್ (Union junior minister Savitri Thakur) ಹಿಂದಿಯಲ್ಲಿ ಸರಿಯಾಗಿ ನಾಲ್ಕು ಪದಗಳನ್ನು ಬರೆಯಲು ವಿಫಲರಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಬೇಟಿ ಪಡಾವೋ, ಬೇಟಿ ಬಚಾವೋ ಸಾಲನ್ನು ಬರೆಯಲು ಆಗದೇ ಸಚಿವೆ ಮುಜುಗರಕ್ಕೊಳಗಾಗಿದ್ದಾರೆ. ಮಧ್ಯಪ್ರದೇಶ ಧಾರ್ ಸರ್ಕಾರಿ ಶಾಲೆಯಲ್ಲಿ ನಡೆದ 'ಸ್ಕೂಲ್ ಚಲೋ ಅಭಿಯಾನ' ಕಾರ್ಯಕ್ರಮದಲ್ಲಿ ಸಚಿವೆ ಸಾವಿತ್ರಿ ಠಾಕೂರ್ ಭಾಗಿಯಾಗಿದ್ದರು. ಗೋಡೆ ಮೇಲೆ ಸಚಿವರು ತಪ್ಪಾಗಿ ಬರೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್ ಬಳಿಕ ಸಚಿವೆ ಸಾವಿತ್ರಿ ಠಾಕೂರ್ ವಿದ್ಯಾರ್ಹತೆಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಚುನಾಯಿತ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ಸಂವಿಧಾನ ತಿದ್ದುಪಡಿಗೆ ಕಾಂಗ್ರೆಸ್ ಆಗ್ರಹಿಸಿದೆ.
ಸಚಿವಾಲಯನ ಹೇಗೆ ನಿರ್ವಹಣೆ ಮಾಡ್ತಾರೆ?
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ.ಕೆ.ಮಿಶ್ರಾ, ಸಾಂವಿಧಾನಿಕ ಹುದ್ದೆಯಲ್ಲಿರುವ ಮತ್ತು ಸರ್ಕಾರದ ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಹೊತ್ತಿರುವ ಸಚಿವರಿಗೆ ಮಾತೃಭಾಷೆಯಲ್ಲೂ ಬರೆಯಲು ಅಸಮರ್ಥರಾಗಿರೋದು ಪ್ರಜಾಪ್ರಭುತ್ವದ ದೌರ್ಭಾಗ್ಯ. ಇನ್ನು ಸಾವಿತ್ರಿ ಠಾಕೂರ್ ತಮ್ಮ ಸಚಿವಾಲಯವನ್ನು ಹೇಗೆ ನಿರ್ವಹಣೆ ಮಾಡಬಲ್ಲರು ಎಂದು ಮಿಶ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಬೆಂಬಲ ಬೆಲೆ ಬಂಪರ್; ಎಂಎಸ್‌ಪಿ ದರ ಏರಿಕೆಗೆ ಮೋದಿ ಸರ್ಕಾರ ನಿರ್ಧಾರ
ಸಚಿವರ ತಪ್ಪು ಬರಹ ನೋಡಿ ಅಲ್ಲಿಯ ಶಾಲಾ ಮಕ್ಕಳು ಏನು ತಿಳಿದುಕೊಂಡಿರಬಹುದು? ಕೇಂದ್ರ ಸರ್ಕಾರದಲ್ಲಿ ಹೇಗೆ ಕಾರ್ಯನಿರ್ವಹಿಸಬಲ್ಲರು? ಇಂತಹ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮುನ್ನ ಅಲ್ಲಿಯ ಮತದಾರರು ಯೋಚಿಸಬೇಕಿತ್ತು ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಹೇಳಿದ್ದಾರೆ. ಉಮಂಘ್ ಸಿಂಘಾರ್ ಧಾರ್ ಜಿಲ್ಲೆಯವರಾಗಿದ್ದು, ಇಲ್ಲಿಯ ಬುಡಕಟ್ಟು ಸಮುದಾಯದ ನಾಯಕರಾಗಿದ್ದಾರೆ.
ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಬಿಜೆಪಿ ಕಿಡಿ
ಧಾರ್ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ಸುಮಾನಿ ಈ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಬುಡಕಟ್ಟು ವಿರೋಧಿ ಚಿಂತನೆಯನ್ನು ಹೊಂದಿದ್ದು, ಸಚಿವೆ ಸಾವಿತ್ರಿ ಠಾಕೂರ್, ಬೇರೆ ಕಾರ್ಯಕ್ರಮಗಳಿಗೆ ತೆರಳುವ ಹಿನ್ನೆಲೆ ಅವಸರದಲ್ಲಿದ್ದರು. ಆದ್ದರಿಂದ ಬರೆದ ಸಾಲುಗಳಲ್ಲಿ ತಪ್ಪಾಗಿರಬಹುದು. ಸಾವಿತ್ರಿ ಅವರ ಭಾವನೆಗಳನ್ನು ಶುದ್ಧವಾಗಿವೆ. ಕಾಂಗ್ರೆಸ್ ಬುಡಕಟ್ಟು ಸಮುದಾಯದ ಮಹಿಳೆಯನ್ನು ಅವಮಾನಿಸಿದ್ದು, ಜನತೆ ಇದನ್ನು ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿ ಕಾಶಿ ಭೇಟಿ ವೇಳೆ ಕಾರಿನ ಮೇಲೆ ಚಪ್ಪಲಿ ಎಸೆತ: ವಿಡಿಯೋ ವೈರಲ್
