ಮೋದಿ ಕಾಶಿಗೆ (Kashi) ಬಂದಾಗ ಅವರನ್ನು ನೋಡಲು ರಸ್ತೆಯ ಇಕ್ಕೆಲದಲ್ಲಿ ಜನ ಸೇರಿದ್ದರು. ಆಗ ಅವರ ಬುಲೆಟ್ ಪ್ರೂಫ್ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ.
ವಾರಾಣಸಿ: ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡುತ್ತಿದ್ದಾಗ ಅವರ ಕಾರಿನ ಮೇಲೆ ಯಾರೋ ಚಪ್ಪಲಿ ಎಸೆದ ಘಟನೆ ನಡೆದಿದೆ. ಮೋದಿ ಕಾಶಿಗೆ (Kashi) ಬಂದಾಗ ಅವರನ್ನು ನೋಡಲು ರಸ್ತೆಯ ಇಕ್ಕೆಲದಲ್ಲಿ ಜನ ಸೇರಿದ್ದರು. ಆಗ ಅವರ ಬುಲೆಟ್ ಪ್ರೂಫ್ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ. ಆಗ ಭದ್ರತಾ ಸಿಬ್ಬಂದಿ ಚಪ್ಪಲಿಯನ್ನು ಕಾರಿನ ಮೇಲಿಂದ ತೆಗೆದು ಬಿಸಾಕಿದ ವಿಡಿಯೋ ವೈರಲ್ (Video Viral) ಆಗಿದೆ. ಇದು ಭಾರಿ ಭದ್ರತಾ ಲೋಪ ಎಂದು ಹೇಳಲಾಗಿದೆ.
ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿ ವಾರಾಣಾಸಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಧಾನಿಗಳ ಪ್ರಯಾಣಿಸುವ ಕಾರ್ ಮೇಲೆ ಯಾರೋ ಕಿಡಿಗೇಡಿ ಚಪ್ಪಲಿ ಎಸೆದಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಚಪ್ಪಲಿಯನ್ನು ಸರಿಸಿದ್ದಾರೆ. ಕಾರ್ ಮೇಲೆ ಚಪ್ಪಲಿ ಬಿದ್ದಿರುವ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. 1.41 ನಿಮಿಷದ ಈ ವಿಡಿಯೋದಲ್ಲಿ ನೆರೆದಿದ್ದ ಜನರು ಗುಂಪು ಮೋದಿ.. ಮೋದಿ ಎಂದು ಘೋಷಣೆ ಕೂಗುತ್ತಿರುತ್ತಾರೆ. ಈ ಜನರ ಗುಂಪಿನಿಂದ ಚಪ್ಪಲಿ ತೂರಿ ಬಂದಿದೆ.
ಸಂದರ್ಶನದಲ್ಲಿ ಮೋದಿ ಸರ್ಕಾರದ ಕುರಿತು ಶಾಕಿಂಗ್ ಹೇಳಿಕೆ ನೀಡಿದ ರಾಹುಲ್ ಗಾಂಧಿ
ಉತ್ತರ ಪ್ರದೇಶ ಪೊಲೀಸರ ಹೇಳಿಕೆ
ಮೋದಿ ಅವರ ಕಾರ್ ಮೇಲೆ ಬಿದ್ದಿದ್ದು ಮೊಬೈಲ್, ಚಪ್ಪಲಿ ಅಲ್ಲ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿದ್ದಾರೆ. ಆದ್ರೆ ಜನರ ಗುಂಪಿನಿಂದ ಫೋನ್ ಹೇಗೆ ಬಂತು? ಎಸೆದವರು ಯಾರು ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡಿಲ್ಲ.
ಭದ್ರತಾ ಸಿಬ್ಬಂದಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ಗಂಗಾ ಘಾಟ್‌ನಿಂದ ಕೆವಿ ಮಂದಿರದತ್ತ ತೆರಳುವ ಮಾರ್ಗದ ಮಧ್ಯೆದಲ್ಲಿ ನಡೆದಿದೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರ ಗುಂಪಿನಿಂದ ತೂರಿ ಬಂದಿದೆ ಎಂದು ಹೇಳಿದ್ದಾರೆ. ಆದರೆ ಎಷ್ಟರ ಮಟ್ಟಿಗೆ ಭದ್ರತಾ ಲೋಪ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಲ್ಲ.
ರೈತರಿಗೆ ಬೆಂಬಲ ಬೆಲೆ ಬಂಪರ್; ಎಂಎಸ್‌ಪಿ ದರ ಏರಿಕೆಗೆ ಮೋದಿ ಸರ್ಕಾರ ನಿರ್ಧಾರ
ವಾರಣಾಸಿಯಿಂದ ಮೂರನೇ ಬಾರಿ ಸಂಸದರಾಗಿ ಆಯ್ಕೆ
ವಾರಣಾಸಿ ಪಿಎಂ ಕಿಸಾನ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ 9.26 ಕೋಟಿ ರೈತರ ಖಾತೆಗೆ 17ನೇ ಕಂತಿನ 20 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದರು. ಮೂರನೇ ಬಾರಿಗೆ ನರೇಂದ್ರ ಮೋದಿ ವಾರಣಾಸಿಯಿಂದ ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 1,52,513 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 2019ರಲ್ಲಿ 4.8 ಲಕ್ಷ ಮತಗಳ ಅಂತರದಿಂದ ಪ್ರಧಾನಿ ಮೋದಿ ಗೆದ್ದಿದ್ದರು.

