ನಿಮ್ಮ ಎನರ್ಜಿ ಮೂಲ ಯಾವುದು ಅನ್ನೋ ಮಾಧ್ಯಮದ ಪ್ರಶ್ನೆಗೆ ಟಿಎಂಸಿ ನಾಯಕ ಮಹುವಾ ಮೊಯಿತ್ರಾ ನೀಡಿದ ಉತ್ತರ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಮಹುವಾ ಮೊಯಿತ್ರಾ ನೀಡಿದ ಉತ್ತರ ಸೆಕ್ಸ್ ಅಥಾ ಎಗ್ಸ್? ಇಲ್ಲಿದೆ ವೈರಲ್ ವಿಡಿಯೋ.
ಕೃಷ್ಣನಗರ(ಏ.18) ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನಾಯಕರು ಬ್ಯೂಸಿಯಾಗಿದ್ದಾರೆ. ಪ್ರಶ್ನೆಗೆ ಲಂಚ ಪ್ರಕರಣದಲ್ಲಿ ಅಮಾನತುಗೊಂಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಚಾರದ ವೇಳೆ ಮಾಧ್ಯಮದ ಪ್ರಶ್ನೆಗೆ ನೀಡಿದ ಉತ್ತರ ಇದೀಗ ಚರ್ಚೆಗೆ ಕಾರಣವಾಗಿದೆ. ನಿಮ್ಮ ಎನರ್ಜಿಯ ಮೂಲ ಯಾವುದು ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮಹುವಾ ಮೊಯಿತ್ರಾ ಉತ್ತರ ನೀಡಿದ್ದರೆ. ಆದರೆ ಮಹುವಾ ಮೊಯಿತ್ರಾ ನೀಡಿದ ಉತ್ತರ ಸೆಕ್ಸ್ ಅಥವಾ ಎಗ್ಸ್ ಅನ್ನೋದು ಇದೀಗ ಚರ್ಚೆ. ಸಾಮಾಜಿಕ ಮಾಧ್ಯಮದಲ್ಲಿ ಮಹುವಾ ಮೊಯಿತ್ರಾ ಎನರ್ಜಿ ಮೂಲ ಸೆಕ್ಸ್ ಎಂದು ವೈರಲ್ ಆಗಿದೆ. ಆದರೆ ಪ್ರಶ್ನೆ ಕೇಳಿದ ಪತ್ರಕರ್ತ, ಮಹುವಾ ಹೇಳಿದ್ದು ಎಗ್ಸ್ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ ಈ ವಿಡಿಯೋ ಮಾತ್ರ ಭಾರಿ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಹುವಾ ಮೊಯಿತ್ರಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ತೆರೆದ ವಾಹನದ ಮೂಲಕ ಕ್ಷೇತ್ರದ ಹಲವು ಗ್ರಾಮಗಳಿಗೆ ಬೇಟಿ ನೀಡುತ್ತಿರುವ ಮಹುವಾ ಮೊಯಿತ್ರಾ ಮತ ಯಾಚಿಸುತ್ತಿದ್ದಾರೆ. ಹೀಗೆ ತೆರೆದ ವಾಹನದಲ್ಲಿ ತೆರಳುತ್ತಿದ್ದ ವೇಳೆ ಮಹುವಾ ಜೊತೆಗೆ ಟಿಎಂಸಿ ನಾಯಕರು ಹಾಜರಿದ್ದರು. ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು ಕೂಡ ಹಾಜರಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಸತತ ಪ್ರಚಾರ ನಡೆಸುತ್ತಿರುವ ಮಹುವಾ ಅಷ್ಟೇ ಸಕ್ರಿಯವಾಗಿ ಮತಯಾಚಿಸುತ್ತಿದ್ದಾರೆ. ಹೀಗಾಗಿ ನಿಮ್ಮ ಈ ಶಕ್ತಿಯ ಮೂಲ ಯಾವುದು ಎಂದು ಪ್ರಶ್ನಿಸಿದ್ದಾರೆ.
ಕುಡುಕ ಯುವಕರಿಂದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷನ ಕಾರು ಅಡ್ಡಗಟ್ಟಿ ಕಿರಿಕ್; ಟಿಎಂಸಿ ಕೈವಾಡ ಆರೋಪ
ತಕ್ಷಣವೇ ಉತ್ತರ ನೀಡಿದ ಮಹುವಾ ಮೊಯಿತ್ರಾ ಮಾತುಗಳು ವೈರಲ್ ಆಗಿದೆ. ಮುಹುವಾ ಹೇಳಿದ್ದು ಸೆಕ್ಸ್ ಅಥವಾ ಎಗ್ಸ್ ಎಂದು ಚರ್ಚೆ ಜೋರಾಗಿದೆ. ಮಹುವಾ ತಮ್ಮ ಶಕ್ತಿಯ ಮೂಲವನ್ನು ಸೆಕ್ಸ್ ಎಂದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಹುವಾ ಹೇಳಿರುವುದು ಸ್ಪಷ್ಟವಾಗಿದೆ. ಸಂಪೂರ್ಣ ವಿಡಿಯೋದಲ್ಲೂ ಇದು ಸ್ಪಷ್ಟ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಈ ವಾದ ವಿವಾದ ಜೋರಾಗುತ್ತಿದ್ದಂತೆ ಪ್ರಶ್ನೆ ಕೇಳಿದ ಪತ್ರಕರ್ತ ಮಹುವಾ ಹೇಳಿರುವುದು ಎಗ್ಸ್ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಸ್ಪಷ್ಟನೆ ತೃಪ್ತಿ ತಂದಿಲ್ಲ. ಈಗಲೂ ಇದೇ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಡಿಯೋ ಕೂಡ ಬಾರಿ ವೈರಲ್ ಆಗಿದೆ.
