Asianet Suvarna News Asianet Suvarna News

ಉದಯಪುರ ಹತ್ಯೆ ತಾಲಿಬಾನ್‌ ಮನಸ್ಥಿತಿಯ ಕೃತ್ಯ ಎಂದ ಆರ್‌ಎಸ್ಎಸ್!

ಪ್ರತ್ಯೇಕತೆ ಮತ್ತು ಭಯೋತ್ಪಾದನೆಯ ಮಾತನಾಡುವ ಶಕ್ತಿಗಳು ದೇಶದಲ್ಲಿ ಬೇರೂರಲು ಸಾಧ್ಯವಾಗಬಾರದು ಎನ್ನುವುದಾದರೆ, ನಮ್ಮ ದೇಶದ ವಿಭಜನೆ ಏಕೆ ನಡೆಯಿತು ಎಂಬುದನ್ನು ಹೊಸ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್ ಹೇಳಿದರು.

RSS Prachar Pramukh Sunil Ambekar says Udaipur murder was not a result of provocation but a result of Talibani thinking san
Author
Bengaluru, First Published Jul 2, 2022, 1:15 PM IST | Last Updated Jul 2, 2022, 1:19 PM IST

ನವದೆಹಲಿ (ಜುಲೈ 2): ಪ್ರವಾದಿ ಮೊಹಮದ್ ಪೈಗಂಬರ್‌  (prophet muhammad paigambar) ವಿರುದ್ಧ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ( Nupur Sharma) ಹೇಳಿದ್ದ ಮಾತುಗಳಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌(supreme court)  ಛೀಮಾರಿ ಹಾಕಿದೆ. ದೇಶದಲ್ಲಿ ಇಂದು ಏನೆಲ್ಲಾ ಆಗುತ್ತದೆಯೋ ಅದಕ್ಕೆಲ್ಲ ನೂಪುರ್‌ ಶರ್ಮ ಅವರೇ ಕಾರಣ ಎಂದು ಹೇಳಿತ್ತು. ಈ ನಡುವೆ ಉದಯಪುರ ಹತ್ಯೆಯ ಕುರಿತಾಗಿ ಇದೇ ಮೊದಲ ಬಾರಿಗೆ ಆರ್‌ಎಸ್ಎಸ್‌ (RSS) ತನ್ನ ಹೇಳಿಕೆಯನ್ನು ನೀಡಿದೆ.

ಉದಯಪುರದಲ್ಲಿ ನಡೆದ ಭೀಕರ ಕ್ರೌರ್ಯ, ನೂಪುರ್ ಶರ್ಮ ಅವರ ಹೇಳಿಕೆಗೆ ಪ್ರಚೋದನಕಾರಿಯಾಗಿ ನಡೆದಿದ್ದಲ್ಲ. ಅದರೊಂದಿಗೆ ತಾಲಿಬಾನಿ ಮನಸ್ಥಿತಿಯ (Talibani thinking) ಕೃತ್ಯ. ತಾಲಿಬಾನಿ ಮನಸ್ಥಿತಿ ಹಾಗೂ ನಂಬಿಕೆ ಹೊಂದಿದ್ದ ವ್ಯಕ್ತಿಗಳು ಮಾಡಿರುವ ಈ ಕೃತ್ಯವನ್ನು ನೂಪುರ್‌ ಶರ್ಮ ಹೇಳಿಕೆಯ ಪ್ರಚೋದನಕಾರಿಯಾಗಿ ನಡೆದ ಕೃತ್ಯ ಎಂದು ಬಿಂಬಿಸಬಾರದು ಎಂದಿದೆ.

ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ (RSS Prachar Pramukh Sunil Ambekar) ಮಾತನಾಡಿ, ಉದಯಪುರದಲ್ಲಿ(udaipur ) ನಡೆದಿರುವುದು, ಇಂದು ಇಡೀ ವಿಶ್ವದಲ್ಲಿ ಯಾವುದೇ ಪ್ರಚೋದನೆಯಿಲ್ಲದೆ ನಡೆಯುತ್ತಿದೆ. ಎಲ್ಲೋ ಇರುವ ಹಮಾಸ್, ಇಸ್ಲಾಮಿಕ್ ಸ್ಟೇಟ್, ತಾಲಿಬಾನ್ ಇವುಗಳನ್ನೆಲ್ಲ ಮಾಡುತ್ತಿದ್ದವು. ನಮ್ಮ ದೇಶದಲ್ಲಿ ಸಿಮಿ ಹಾಗೂ ಪಿಎಫ್ಐನಂಥ ಸಂಘಟನೆಗಳೂ ಇವೆ. ಇಂಥ ಕೃತ್ಯಗಳು ನಡೆಯಲು ಯಾವುದೇ ಪ್ರಚೋದನೆಯಿಂದ ಸಂಭವಿಸುವುದಿಲ್ಲ. ಇಂಥ ಘಟನೆಗಳು ಪ್ರಚೋದನೆಯಿಂದಾಗಿ ನಡೆಯತ್ತದೆ ಎಂದಾದರೆ, ಆ ವ್ಯಕ್ತಿಗಳು ಇನ್ನಷ್ಟು ಹೆಚ್ಚು ವಿಶ್ವದ ವಿಚಾರಗಳನ್ನು ಓದಬೇಕು. ತಾಲಿಬಾನ್‌ನ ಈ ಘಟನೆಯ ಹಿಂದಿನ ಮನಸ್ಥಿತಿ ಮತ್ತು ನಂಬಿಕೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಭಾರತವು ತನ್ನ ಶಕ್ತಿಯನ್ನು ಇತರರಿಗೆ ಸಹಾಯ ಮಾಡಲು ಬಳಸುತ್ತದೆ.

ಉತ್ತಮ ವ್ಯಕ್ತಿಯೂ ಸಹ ಇತರರಿಗೆ ಸಹಾಯ ಮಾಡುವ ಶಕ್ತಿ ಹೊಂದಬೇಕು ಮತ್ತು ಶಾಂತಿ ಕದಡುವವರನ್ನು ತಡೆಯಬೇಕು ಎಂದು ಹೇಳಿದರು. ಇಂತಹ ಸಮಸ್ಯೆಗಳನ್ನು ಎದುರಿಸಲು ಸಾಂವಿಧಾನಿಕ ಮಾರ್ಗಗಳಿವೆ. ಯಾರಿಗಾದರೂ ಸಮಸ್ಯೆಯಿದ್ದರೆ ಅದನ್ನು ಸಾಂವಿಧಾನಿಕವಾಗಿ ಪರಿಹರಿಸಲು ಪ್ರಯತ್ನಿಸಬೇಕು. 'ದಿ ತಾಲಿಬಾನ್: ವಾರ್ ಅಂಡ್ ರಿಲಿಜನ್ ಇನ್ ಆಫ್ಘಾನಿಸ್ತಾನ್' ಮತ್ತು 'ದಿ ಫಾರ್ಗಾಟನ್ ಹಿಸ್ಟರಿ ಆಫ್ ಇಂಡಿಯಾ' ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅಂಬೇಕರ್ ಈ ಮಾತುಗಳನ್ನು ಆಡಿದ್ದಾರೆ.

ತಾಲಿಬಾನ್‌ಅನ್ನು ಅರ್ಥ ಮಾಡಿಕೊಳ್ಳಬೇಕು: ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್, ಭಾರತೀಯರು ತಾಲಿಬಾನ್ ಅನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಧರ್ಮದ ಹೆಸರಿನಲ್ಲಿ ವಿಭಜನೆ ಆಗಿರುವ ದೇಶದಲ್ಲಿ ಧಾರ್ಮಿಕ ಮೂಲಭೂತವಾದವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಭಾರತದೊಂದಿಗೆ ಆತ ಸಂಬಂಧ ಹೊಂದಿದ್ದಾನೆಯೇ ಎನ್ನುವುದನ್ನು ನಾವು ಪತ್ತೆ ಹಚ್ಚಬೇಕಿದೆ. ಇಂಥ ಭಯೋತ್ಪಾದಕ ಸಂಗತಿಗಳು ಭಾರತಕ್ಕೆ ಪ್ರವೇಶಿಸುತ್ತಿದೆಯೇ ಎನ್ನುವುದನ್ನು ಯೋಚಿಸಬೇಕು?  ಭಾರತದಲ್ಲಿ ನಡೆಯುತ್ತಿರುವ ಘಟನೆಗಳು ಒಂದಕ್ಕೊಂದು ಸಂಬಂಧವೇ? ಇಂತಹ ಮೂಲಭೂತವಾದಿ ಸಿದ್ಧಾಂತವನ್ನು ಬೆಂಬಲಿಸುವವರು ರಾಜಕೀಯವಾಗಿ ಅಥವಾ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ? ಕಾರಣ ಏನೇ ಇರಲಿ, ಅವುಗಳನ್ನು ಕಂಡುಹಿಡಿಯಬೇಕು ಎಂದಿದ್ದಾರೆ.

ಸ್ವಾತಂತ್ರ್ಯಾ ನಂತರ ಏನೇ ನಡೆದರೂ ಆ ನಂತರ ಆರೆಸ್ಸೆಸ್ ಕೊಡುಗೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು ಎಂದು ಸುನೀಲ್ ಅಂಬೇಕರ್ ಆರೋಪಿಸಿದರು. 12 ಜುಲೈ 1922 ರಂದು, ಡಾ. ಹೆಡ್ಗೆವಾರ್ ಒಂದು ವರ್ಷದ ನಂತರ ಜೈಲಿನಿಂದ ಬಿಡುಗಡೆಯಾದರು. ಅವರನ್ನು ಸ್ವಾಗತಿಸಲು ನಾಗ್ಪುರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ವೇಳೆಗೆ ಮೋತಿಲಾಲ್ ನಹರೂ ಮತ್ತು ಸಿ ರಾಜಗೋಪಾಲಾಚಾರಿ ಬಂದು ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ಇದನ್ನು ಇವರು ದೇಶಕ್ಕೆ ತಿಳಿಸಬೇಕು.

ಕುರಾನ್ ಓದಿದವರು ಎಲ್ಲಾ ಭಯೋತ್ಪಾದಕಾರಾಗಿದ್ದಾರೆ: ಹಿಂದೂ ಜಾಗರಣ ವೇದಿಕೆ ಮುಖಂಡನ ವಿವಾದಾತ್ಮಕ ಹೇಳಿಕೆ

ಸಂವಿಧಾನದಲ್ಲಿ ಜಾತ್ಯಾತೀತತೆ ಸೇರಿಸಿದ್ದೇಕೆ ಎನ್ನುವುದನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕು: ವಿಡಿ ಸಾವರ್ಕರ್, ನೇತಾಜಿ ಸುಭಾಷ್ ಬೋಸ್, ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಜೈಲಿನಲ್ಲಿದ್ದ ಮಣಿಪುರದ ರಾಜನ ಬಗ್ಗೆ ಜನರು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು. ಆಗ ಮಾತ್ರ ಬ್ರಿಟಿಷರು ನಮ್ಮನ್ನು ಒಂದು ದೇಶವಾಗಿ ಸಂಘಟಿಸಲಿಲ್ಲ ಎಂಬುದು ಜನರಿಗೆ ತಿಳಿಯುತ್ತದೆ. ಸ್ವಾತಂತ್ರ್ಯಕ್ಕೂ ಮುನ್ನ ಭಾರತ ಒಂದಾಗಿತ್ತು. ಅದಕ್ಕಾಗಿಯೇ ಇತಿಹಾಸವನ್ನು ತಿಳಿದುಕೊಳ್ಳುವುದು ಅವಶ್ಯಕ. ಸಂವಿಧಾನದಲ್ಲಿ ಜಾತ್ಯತೀತತೆಯನ್ನು ಹೇಗೆ ಅಳವಡಿಸಲಾಯಿತು? ಹೊಸ ಪೀಳಿಗೆಗೆ ಈ ಬಗ್ಗೆ ಅರಿವು ಮೂಡಿಸಬೇಕು.

ನೂಪುರ್ ಶರ್ಮಾ ವಿರುದ್ಧದ ಸುಪ್ರೀಂಕೋರ್ಟ್ ಜಡ್ಜ್ ಅಭಿಪ್ರಾಯ ವಾಪಸ್ ಪಡೆಯುವಂತೆ ಸಿಜೆಐಗೆ ಅರ್ಜಿ

ಸುನೀಲ್ ಅಂಬೇಕರ್ ಮಾತನಾಡಿ, ವಿಭಜನೆ ಏಕೆ ಆಯಿತು ಎಂಬುದು ಹೊಸ ತಲೆಮಾರಿಗೆ ಗೊತ್ತಾಗಬೇಕು. ಕೆಲವರು ಇದನ್ನು ಚರ್ಚಿಸಬಾರದು ಎಂದು ಬಯಸುತ್ತಾರೆ. ನಮ್ಮ ದೇಶದ ಮೇಲೆ ಮತ್ತೆ ದಾಳಿಯಾಗದಂತೆ ನೋಡಿಕೊಳ್ಳುವುದು ಅಥವಾ ಪ್ರತ್ಯೇಕತೆ ಮತ್ತು ಭಯೋತ್ಪಾದನೆಯ ಬಗ್ಗೆ ಮಾತನಾಡುವ ಶಕ್ತಿಗಳು ಬೇರೂರದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.

Latest Videos
Follow Us:
Download App:
  • android
  • ios