ಭಾರತ ಜಾಗತಿಕ ಜ್ಞಾನ ಕೇಂದ್ರ ಆಗಬೇಕು: ಮೋದಿ

ಕ್ಯಾಂಪಸ್‌ನಲ್ಲಿ 40 ತರಗತಿ ಕೊಠಡಿಗಳೊಂದಿಗೆ ಎರಡು ಶೈಕ್ಷಣಿಕ ಬ್ಲಾಕ್‌ಗಳಿವೆ, ಒಟ್ಟು 1,900 ಆಸನ ಸಾಮರ್ಥ್ಯವಿದೆ. ಇದು ತಲಾ 300 ಆಸನಗಳ ಸಾಮರ್ಥ್ಯದ ಎರಡು ಸಭಾಂಗಣಗಳನ್ನು ಹೊಂದಿದೆ. ಇದು ಸುಮಾರು 550 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿರುವ ವಿದ್ಯಾರ್ಥಿ ಹಾಸ್ಟೆಲ್ ಅನ್ನು ಹೊಂದಿದೆ.

PM Narendra Modi says Nalanda has created an intellectual spirit that continues to thrive in our nation mrq

ಪಟನಾ: ಭಾರತವು ಜ್ಞಾನ ಮತ್ತು ಶಿಕ್ಷಣದ ಜಾಗತಿಕ ಕೇಂದ್ರವಾಗಬೇಕೆಂದು ಎಂಬುದು ನನ್ನ ಬಯಕೆ. ಅದಕ್ಕೆಂದೇ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿತ ಮತ್ತು ಸಂಶೋಧನಾ ಕೇಂದ್ರಿತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ನಮ್ಮ ಯುವಕರು ಇಡೀ ಜಗತ್ತಿಗೆ ನಾಯಕತ್ವವನ್ನು ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿ ನೂತನ ನಳಂದಾ ವಿಶ್ವವಿದ್ಯಾನಿಲಯ ಕ್ಯಾಂಪಸ್ ಅನ್ನು ಉದ್ಘಾಟಿಸಿದ ಮಾತನಾಡಿದ ಮೋದಿ, ‘ನಳಂದವು ಭಾರತದ ಶೈಕ್ಷಣಿಕ ಪರಂಪರೆ ಮತ್ತು ರೋಮಾಂಚಕ ಸಾಂಸ್ಕೃತಿಕ ವಿನಿಮಯದ ಸಂಕೇತವಾಗಿದೆ. ಇದು ಕೇವಲ ಭಾರತದ ಗತಕಾಲದ ಪುನರುಜ್ಜೀವನವಲ್ಲ, ಆದರೆ ಅನೇಕ ದೇಶಗಳ ಪರಂಪರೆಯು ಈ ಸ್ಥಳಕ್ಕೆ ಸಂಬಂಧಿಸಿದೆ’ ಎಂದು ಹೇಳಿದರು.

‘ನಮ್ಮ ಸರ್ಕಾರವು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಸುಧಾರಿತ ಮತ್ತು ಸಂಶೋಧನಾ-ಆಧರಿತವಾಗಿಸಲು ಕೆಲಸ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸರಾಸರಿ ಪ್ರತಿ ವಾರ ಒಂದು ವಿಶ್ವವಿದ್ಯಾನಿಲಯವು ಹುಟ್ಟಿಕೊಂಡಿದೆ. ವಿದ್ಯಾರ್ಥಿಗಳು ಯಾವಾಗಲೂ ಕುತೂಹಲಿಗಳಾಗಿರಬೇಕು ಮತ್ತು ಧೈರ್ಯದಿಂದ ಇರಬೇಕು’ ಎಂದು ಮೋದಿ ಹೇಳಿದರು. ಉದ್ಘಾಟನಾ ಸಮಾರಂಭದಲ್ಲಿ 17 ದೇಶಗಳ ಮಿಷನ್ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ತಮಿಳುನಾಡಿನಲ್ಲಿ ಶೂನ್ಯ ಸಂಪಾದನೆಗೆ ಮೋದಿ ಕಣ್ಣೀರು: ಮುರಸೋಳಿ ವರದಿ

ನೂತನ ನಳಂದಾ ವಿವಿ ವೈಶಿಷ್ಟ್ಯ

1600 ವರ್ಷ ಹಿಂದೆ ಸ್ಥಾಪಿತವಾದ ನಳಂದಾ ವಿವಿಯನ್ನು 800 ವರ್ಷ ಹಿಂದೆ ದಾಳಿಕೋರರು ಧ್ವಂಸ ಮಾಡಿದ್ದರು. ಹೀಗಾಗಿ ಈ ವಿವಿಯನ್ನು ಮರುಸ್ಥಾಪಿಸುವ ಸಲುವಾಗಿ 2010 ರಲ್ಲಿ ನಳಂದಾ ವಿವಿ ಕಾಯ್ದೆಯ ಮೂಲಕ ವಿವಿಯನ್ನು ಸ್ಥಾಪಿಸಲಾಯಿತು ಮತ್ತು ಇದು 2014 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಈಗ ಇದರ ಕ್ಯಾಂಪಸ್‌ 455 ಎಕರೆ ಪ್ರದೇಶದಲ್ಲಿ 1749 ಕೋಟಿ ರು. ವೆಚ್ಚದಲ್ಲಿ ತಲೆ ಎತ್ತಿದೆ.

ಕ್ಯಾಂಪಸ್‌ನಲ್ಲಿ 40 ತರಗತಿ ಕೊಠಡಿಗಳೊಂದಿಗೆ ಎರಡು ಶೈಕ್ಷಣಿಕ ಬ್ಲಾಕ್‌ಗಳಿವೆ, ಒಟ್ಟು 1,900 ಆಸನ ಸಾಮರ್ಥ್ಯವಿದೆ. ಇದು ತಲಾ 300 ಆಸನಗಳ ಸಾಮರ್ಥ್ಯದ ಎರಡು ಸಭಾಂಗಣಗಳನ್ನು ಹೊಂದಿದೆ. ಇದು ಸುಮಾರು 550 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿರುವ ವಿದ್ಯಾರ್ಥಿ ಹಾಸ್ಟೆಲ್ ಅನ್ನು ಹೊಂದಿದೆ. ಇದು ಅಂತಾರಾಷ್ಟ್ರೀಯ ಕೇಂದ್ರ, 2000 ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವ ಆಂಫಿಥಿಯೇಟರ್, ಅಧ್ಯಾಪಕರ ಕ್ಲಬ್ ಮತ್ತು ಕ್ರೀಡಾ ಸಂಕೀರ್ಣ ಸೇರಿದಂತೆ ಹಲವಾರು ಇತರ ಸೌಲಭ್ಯಗಳನ್ನು ಹೊಂದಿದೆ. ಸೌರ ಸ್ಥಾವರ, ನೀರಿನ ಸಂಸ್ಕರಣಾ ಘಟಕಗಳು, ತ್ಯಾಜ್ಯ ನೀರು ಮರುಬಳಕೆ ಘಟಕ, 100 ಎಕರೆ ಜಲಮೂಲವನ್ನೂ ಹೊಂದಿದೆ.

ನಾನು ಗಂಗಾಮಾತೆಯ ದತ್ತುಪುತ್ರ: ಗಂಗೆ, ವಿಶ್ವನಾಥರೇ ನನ್ನನ್ನು ಆಶೀರ್ವದಿಸಿದ್ದಾರೆ: ಪ್ರಧಾನಿ ಮೋದಿ

Latest Videos
Follow Us:
Download App:
  • android
  • ios