Exclusive Interview: ಶಿಕ್ಷಣ ಸಂಸ್ಥೆಯಲ್ಲಿದ್ಧಾಗ ಅಲ್ಲಿಯ ನಿಯಮ ಪಾಲಿಸಲೇಬೇಕು: ಕೇರಳ ರಾಜ್ಯಪಾಲ
ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್ ವಿವಾದದ ದೇಶಾದಾದ್ಯಂತ ವ್ಯಾಪಿಸುತ್ತಿದೆ. ಈ ವಿವಾದಕ್ಕೆ ಗಣ್ಯ ವಲಯದಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ತಿರುವನಂತಪುರಂ (ಫೆ. 16): ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್ ವಿವಾದದ ದೇಶಾದಾದ್ಯಂತ ವ್ಯಾಪಿಸುತ್ತಿದೆ. ಈ ವಿವಾದಕ್ಕೆ ಗಣ್ಯ ವಲಯದಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
Exclusive Interview: UCC ಜಾರಿಗೆ ಆಗ್ರಹ, ಹಿಜಾಬ್ ವಿವಾದ ಬಿಟ್ಟು ಓದಿಗೆ ಗಮನ ಕೊಡಿ: ಕೇರಳ ರಾಜ್ಯಪಾಲ
‘ಇದೊಂದು (ಹಿಜಾಬ್ ವಿವಾದ) ವಿಷಯವೇ ಅಲ್ಲ. ಅವರು (ವಿದ್ಯಾರ್ಥಿಗಳು) ‘ಕುರಾನ್’ ಉಲ್ಲೇಖಿಸುತ್ತಿಲ್ಲ. ಕೇವಲ ಧರ್ಮದಲ್ಲಿದೆ ಎನ್ನುತ್ತಿದ್ದಾರೆ. ಆದರೆ ಕುರಾನ್‌ನಲ್ಲಿ ಎಲ್ಲಿಯೂ ಹಿಜಾಬ್ ಪದ ಬಳಕೆ ಇಲ್ಲ. ಕುರಾನ್‌ನಲ್ಲಿ ಖಿಮರ್ (ದುಪಟ್ಟಾ/ಪರದೆ) ಎಂಬ ಪದವಿದೆ. ಜಿಜಾಬ್ (ಅಂಗಿ) ಎಂಬ ಪದವೂ ಉಂಟು. ಅಂಗಿಯ ಮೇಲೆ ಪರದೆ ಹಾಕಿಕೊಳ್ಳಿ ಎಂದಿದೆಯೇ ವಿನಾ ಮುಖದ ಮೇಲೆ ಹಾಕಿಕೊಳ್ಳಿ ಎಂದು ಹೇಳಿಲ್ಲ’ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ನಾವು ಒಂದು ವ್ಯವಸ್ಥೆಯಲ್ಲಿದ್ದಾಗ, ಶಿಕ್ಷಣ ಸಂಸ್ಥೆಯಲ್ಲಿದ್ದಾಗ ಅಲ್ಲಿನ ನಿಯಮಗಳನ್ನು ಪಾಲಿಸಲೇಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.