ಶಾದ್‌ನಗರ್(ನ.30): ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸೆರೆ ಸಿಕ್ಕಿರುವ ನಾಲ್ವರು ಆರೋಪಿಗಳನ್ನು ಶಾದ್‌ನಗರ್ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿದೆ.

ಸುಟ್ಟಸ್ಥಿತಿಯಲ್ಲಿ ನಾಪತ್ತೆಯಾಗಿದ್ದ 26 ವರ್ಷದ ಪಶುವೈದ್ಯೆ ಶವ ಪತ್ತೆ

ಈ ವೇಳೆ ಆರೋಪಿಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಒತ್ತಾಯಿಸಿ ಭಾರೀ ಜನಸ್ತೋಮ ಶಾದ್‌ನಗರ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದೆ. ಆರೋಪಿಗಳಿಗೆ ನಾವೇ ಶಿಕ್ಷೆ ಕೊಡುತ್ತೇವೆ ಎಂದು ನಾಗರಿಕರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ.

ಈ ವೇಳೆ ಪೊಲಿಸ್ ಠಾಣೆ ಪ್ರವೇಶಿಸದಂತೆ ಜನರನ್ನು ಪೊಲೀಸರು ತಡೆಯುತ್ತಿದ್ದು, ಜನ ಪೊಲೀಸರತ್ತ ಚಪ್ಪಲಿ ಎಸೆದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಆಕ್ರೋಶಭರಿತ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಡುತ್ತಿದ್ದಾರೆ.

ವೈದ್ಯೆಯ ಮೇಲೆ ರೇಪ್, ಕೊಲೆ: ಪೊಲೀಸರಿಗೇಕೆ ಸಂತ್ರಸ್ತೆ ಕರೆ ಮಾಡಲಿಲ್ಲ? ಮಂತ್ರಿ ವಿವಾದ!

ಸದ್ಯ ನಾಲ್ವರೂ ಆರೋಪಿಗಳನ್ನು ಚಂಚಲ್‌ಗುಡ ಜೈಲಿಗೆ ವರ್ಗಾಯಿಸಲಾಗಿದ್ದು, ಜನ ಕಾನೂನು ಪ್ರಕ್ರಿಯೆಗೆ ಸಹಕರಿಸುವಂತೆ ತೆಲಂಗಾಣ ಡಿಜಿಪಿ ಮನವಿ ಮಾಡಿದ್ದಾರೆ.

ವೈದ್ಯೆ ಅತ್ಯಾಚಾರ ಆರೋಪಿಗಳ ಪರ ವಕಾಲತ್ತಿಗೆ ವಕೀಲರ ನಕಾರ!