ಅಣ್ಣಾಮಲೈ ಜೊತೆ ಸಂಘರ್ಷ, ವೇದಿಕೆಯಲ್ಲಿಯೇ ತಮಿಳು ನಾಯಕಿಗೆ ಅಮಿತ್ ಶಾ ಕ್ಲಾಸ್!

ತಮಿಳಿಸಾಯಿ ಸೌಂದರ್ಯರಾಜನ್ ಮತ್ತು ಅಮಿತ್ ಶಾ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದೆ. ತಮಿಳಿಸಾಯಿ ಸೌಂದರ್ಯರಾಜನ್ ಬಹಿರಂಗವಾಗಿಯೇ ಅಣ್ಣಾಮಲೈ ವಿರುದ್ದ ಹೇಳಿಕೆಗಳನ್ನು ನೀಡಿದ್ದರು.

Did Amit Shah Warns bjp leader tamilisai soundararajan mrq

ವಿಜಯವಾಡ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು (TDP Chief Chandrababu Naidu) ಅವರ ಸಿಎಂ ಪದಗ್ರಹಣ ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಮಿತ್ ಶಾ ಕ್ಲಾಸ್ ತೆಗೆದುಕೊಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡಿನ ಬಿಜೆಪಿ ಘಟಕದಲ್ಲಿ ರಾಜ್ಯಧ್ಯಕ್ಷ ಕೆ.ಅಣ್ಣಾಮಲೈ (K Annamalai) ಮತ್ತು ಮಾಜಿ ನಾಯಕಿ ತಮಿಳಿಸಾಯಿ ಸೌಂದರ್ಯರಾಜನ್ (tamilisai soundararajan) ನಡುವೆ ಸಂಘರ್ಷ ಉಂಟಾಗಿತ್ತು. ತಮಿಳುನಾಡಿನಲ್ಲಿ ಒಂದೇ ಒಂದು ಸೀಟ್ ಗೆಲ್ಲದಿರಲು ಇವರಿಬ್ಬರ ನಡುವಿನ ಸಂಘರ್ಷವೂ ಕಾರಣ ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು. ತಮಿಳಿಸಾಯಿ ಸೌಂದರ್ಯರಾಜನ್ ಮತ್ತು ಅಮಿತ್ ಶಾ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದೆ.

ತಮಿಳಿಸಾಯಿ ಸೌಂದರ್ಯರಾಜನ್ ಬಹಿರಂಗವಾಗಿಯೇ ಅಣ್ಣಾಮಲೈ ವಿರುದ್ದ ಹೇಳಿಕೆಗಳನ್ನು ನೀಡಿದ್ದರು. ಇವರ ಜೊತೆಯಲ್ಲಿ ಬಿಜೆಪಿಯ ಕೆಲ ಪದಾಧಿಕರಿಗಳು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ಬಹಿರಂಗವಾಗಿ ಆರೋಪ ಮಾಡಿದ್ದರು. ಈ ಸಂಘರ್ಷ ಸಂಬಂಧ ಬಿಜೆಪಿ ಹೈಕಮಾಂಡ್ ಸ್ಥಳೀಯ ನಾಯಕರಿಂದ ವಿವರಣೆ ಕೇಳಿತ್ತು. 

ತಮಿಳಿಸಾಯಿಗೆ ಎಚ್ಚರಿಕೆ ಕೊಟ್ರಾ ಅಮಿತ್ ಶಾ?

ಇಂದು ಆಂಧ್ರ ಸಿಎಂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಆಂತರಿಕ ಸಂಘರ್ಷದ ಬಳಿಕ ತಮಿಳಿಸಾಯಿ ಸೌಂದರ್ಯರಾಜನ್ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಮುಖಾಮುಖಿಯಾಗಿದ್ದರು. ವೇದಿಕೆ ಮೇಲೆ ಕುಳಿತಿದ್ದ ಅಮಿತ್ ಶಾ ಮತ್ತು ವೆಂಕಯ್ಯ ನಾಯ್ಡು ಅವರಿಗೆ ನಮಸ್ಕರಿಸಿ ತಮಿಳಿಸಾಯಿ ಸೌಂದರ್ಯರಾಜನ್ ಮುಂದೆ ಹೋಗುತ್ತಾರೆ. ಕೂಡಲೇ ತಮಿಳಿಸಾಯಿ ಅವರನ್ನ ಕರೆದ ಅಮಿತ್ ಶಾ, ಎಚ್ಚರಿಕೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ತಮಿಳಿಸಾಯಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡುತ್ತಿರೋದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ. ಆದ್ರೆ ಅಮಿತ್ ಶಾ, ತೋರುಬೆರಳಿನಿಂದ ತಪ್ಪು ಎಂದು ತೋರಿಸುವ ರೀತಿಯಲ್ಲಿ ಕಾಣುತ್ತದೆ. 

ಆಂಧ್ರಪ್ರದೇಶಕ್ಕೆ ಅಮರಾವತಿಯೊಂದೇ ರಾಜಧಾನಿ: ನಾಯ್ಡು ಘೋಷಣೆ

ಅಣ್ಣಾಮಲೈ ಅಭಿಮಾನಿಗಳಿಂದ ವಿಡಿಯೋ ಶೇರ್

ವರದಿಗಳ ಪ್ರಕಾರ, ಚಂದ್ರಬಾಬು ನಾಯ್ಡು ಪದಗ್ರಹಣ ವೇದಿಕೆಯಲ್ಲಿಯೇ ತಮಿಳುನಾಡು ಬಿಜೆಪಿಯ ಆಂತರಿಕ ಕಲಹಕ್ಕೆ ಅಸಮಾಧಾನಗೊಂಡಿರೋದು ಬಹಿರಂಗವಾಗಿದೆ. ಹಾಗಾಗಿ ತಮಿಳಿಸಾಯಿ ಅವರಿಗೆ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ವಿಡಿಯೋವನ್ನು ಅಣ್ಣಾಮಲೈ ಅಭಿಮಾನಿಗಳು ವ್ಯಾಪಕವಾಗಿ ತರೇಹವಾರಿ ಸಾಲುಗಳನ್ನು ನೀಡಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

4ನೇ ಬಾರಿ ಸಿಎಂ ಪಟ್ಟಕ್ಕೇರಿದ ಚಂದ್ರಬಾಬು ನಾಯ್ಡು

ಆಂಧ್ರ ಪ್ರದೇಶ ಸಿಎಂ ಆಗಿ ಟಿಡಿಪಿಯ ಎನ್‌ ಚಂದ್ರಬಾಬು ನಾಯ್ಡು ಅವರು 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಕುಪ್ಪಂನ ಶಾಸಕರಾಗಿರುವ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್ ಅವರು ಪ್ರಮಾಣ ವಚನ ಬೋಧಿಸಿದರು.

ಆಂಧ್ರದ ಸಿಎಂ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್

Latest Videos
Follow Us:
Download App:
  • android
  • ios