ಪ್ಯಾರಾ ಬ್ಯಾಡ್ಮಿಂಟನ್‌: ವಿಶ್ವ ನಂ.1 ಆದ ಕನ್ನಡಿಗ IAS ಅಧಿಕಾರಿ ಸುಹಾಸ್‌ ಯತಿರಾಜ್

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಹಾಸ್‌ ಅವರು, ಈ ವರ್ಷ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು.

New milestone for Suhas Yathiraj becomes World No 1 para shuttler kvn

ನವದೆಹಲಿ: ಕನ್ನಡಿಗ, ಉ.ಪ್ರದೇಶ ಕೇಡರ್‌ ಐಎಎಸ್‌ ಅಧಿಕಾರಿ ಸುಹಾಸ್‌ ಎಲ್‌.ವೈ ಅವರು ಪ್ಯಾರಾ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನ ಎಸ್‌ಎಲ್‌4 ವಿಭಾಗದಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ್ದಾರೆ. ಮಂಗಳವಾರ ಹೊಸದಾಗಿ ಪ್ರಕಟಗೊಂಡ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸುಹಾಸ್‌ ಒಂದು ಸ್ಥಾನ ಏರಿಕೆ ಕಂಡು ಬಹಳ ಸಮಯದಿಂದ ಅಗ್ರಸ್ಥಾನದಲ್ಲಿದ್ದ ಫ್ರಾನ್ಸ್‌ನ ಲುಕಾಸ್‌ ಮಜುರ್‌ರನ್ನು ಹಿಂದಿಕ್ಕಿದರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಹಾಸ್‌ ಅವರು, ಈ ವರ್ಷ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 2 ಬಾರಿ ಸ್ವರ್ಣ ಪದಕ ಗೆದ್ದಿರುವ ಅವರು, 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದ್ದಾರೆ.

ಟಿಟಿ ವಿಶ್ವ ರ‍್ಯಾಂಕಿಂಗ್‌: 24ನೇ ಸ್ಥಾನಕ್ಕೆ ಶ್ರೀಜಾ

ನವದೆಹಲಿ: ಶ್ರೀಜಾ ಅಕುಲಾ ಮತ್ತೊಮ್ಮೆ ಭಾರತದ ನಂ.1 ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿದ್ದಾರೆ. ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ (ಐಟಿಟಿಎಫ್)ನ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ವೃತ್ತಿಬದುಕಿನ ಶ್ರೇಷ್ಠ 24ನೇ ಸ್ಥಾನಕ್ಕೇರಿರುವ ಶ್ರೀಜಾ, 29ನೇ ಸ್ಥಾನದಲ್ಲಿರುವ ಮನಿಕಾ ಬಾತ್ರಾರನ್ನು ಹಿಂದಿಕ್ಕಿದ್ದಾರೆ. 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್‌ ಡೇವಿಡ್‌ ವಾರ್ನರ್ ಗುಡ್‌ಬೈ

ಇತ್ತೀಚೆಗೆ ನಡೆದಿದ್ದ ಡಬ್ಲ್ಯುಟಿಟಿ ಕಂಟೆಂಡರ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಶ್ರೀಜಾ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ.

ಭಾರತ ಆರ್ಚರಿ ತಂಡಗಳಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌

ನವದೆಹಲಿ: ಭಾರತ ಪುರುಷ ಹಾಗೂ ಮಹಿಳಾ ಆರ್ಚರಿ ತಂಡಗಳು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿವೆ. ಒಲಿಂಪಿಕ್ಸ್‌ ಪ್ರವೇಶಿಸದ ರಾಷ್ಟ್ರಗಳ ಸಾಲಿನಲ್ಲಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದ ಕಾರಣ 2 ತಂಡಗಳಿಗೆ ಒಲಿಂಪಿಕ್ಸ್‌ ಟಿಕೆಟ್‌ ಲಭಿಸಿವೆ. ಇದರೊಂದಿಗೆ ಭಾರತ ಕ್ರೀಡಾಕೂಟದ ಎಲ್ಲಾ 5 ಪದಕ ವಿಭಾಗಗಳಲ್ಲೂ ಸ್ಪರ್ಧಿಸಲು ಅವಕಾಶ ಪಡೆದುಕೊಂಡಿದೆ. 

ಪುರುಷ, ಮಹಿಳಾ ತಂಡ, 2 ವೈಯಕ್ತಿಕ ವಿಭಾಗ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಭಾರತ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿವೆ. ಪುರುಷರ ತಂಡದಲ್ಲಿ ತರುಣ್‌ದೀಪ್‌, ಧೀರಜ್‌, ಪ್ರವೀಣ್‌ ಜಾಧವ್‌, ಮಹಿಳಾ ತಂಡದಲ್ಲಿ ದೀಪಿಕಾ ಕುಮಾರಿ, ಭಾಜನ್‌ ಕೌರ್‌, ಅಂಕಿತಾ ಸ್ಪರ್ಧಿಸಲಿದ್ದಾರೆ. ಇನ್ನು, ದೀಪಿಕಾ ಹಾಗೂ ತರುಣ್‌ದೀಪ್‌ 4ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ತರುಣ್‌ ಮೊದಲ ಬಾರಿ 2004ರ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ದೀಪಿಕಾ 2012ರಿಂದ ಸತತ 4ನೇ ಕ್ರೀಡಾಕೂಟದಲ್ಲೂ ಸ್ಪರ್ಧಿಸಲು ಸಜ್ಜಾಗಿದ್ದಾರೆ.
 

Latest Videos
Follow Us:
Download App:
  • android
  • ios