Asianet Suvarna News Asianet Suvarna News

Always Hungry: ಎಷ್ಟು ತಿಂದರೂ ಮತ್ತೆ ಮತ್ತೆ ಹಸಿವಾಗುತ್ತದೆ ಯಾಕೆ..?

ಕೆಲವೊಬ್ಬರು ಹಾಗೇ, ಆಗಾಗ ಏನಾದರೂ ತಿನ್ನುತ್ತಲೇ ಇರುತ್ತಾರೆ. ಏನ್ ಬಕಾಸುರರಂಗೆ ತಿನ್ತಾರಪ್ಪಾ..ಅವಳು ಫುಲ್ ಫುಡ್ಡೀ ಹೀಗೆಲ್ಲಾ ಹೇಳುವುದು ಸುಲಭ. ಆದರೆ ಆಗಾಗ ಹಸಿವಾಗಲು, ಕಾರಣ (Reason)ವೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ(Important). ಹಾಗಿದ್ರೆ ಆಗಾಗ ಹಸಿವಾಗೋದಕ್ಕೆ ನಿಜವಾದ ಕಾರಣ ಏನು..?

Why you are Feeling Hungry all the time
Author
Bengaluru, First Published Dec 27, 2021, 4:48 PM IST
  • Facebook
  • Twitter
  • Whatsapp

ಹಸಿವು ಅನ್ನೋದು ಒಬ್ಬೊಬ್ಬರಿಗೆ ಒಂದು ರೀತಿ ಇರುತ್ತದೆ. ಕೆಲವೊಬ್ಬರು ದಿನಕ್ಕೆ ನಿರ್ಧಿಷ್ಟ ಪ್ರಮಾಣದ ಆಹಾರ ತಿಂದು ದಿನಪೂರ್ತಿ ಹಾಯಾಗಿರುತ್ತಾರೆ. ಇನ್ನು ಕೆಲವರು ದಿನಪೂರ್ತಿ ಹಸಿವು ಹಸಿವು ಎಂದು ಏನಾದರೊಂದು ತಿಂದುಕೊಂಡೇ ಇರುತ್ತಾರೆ. ಇನ್ನೂ ಹಲವರು ತಿನ್ನಲು ಕುಳಿತಾಗಲೊಮ್ಮೆ ರಾಶಿ ರಾಶಿ ತಿಂದುಬಿಡುತ್ತಾರೆ. ನೀವು ಏನು ತಿನ್ನುತ್ತೀರಿ ಮತ್ತು ಹೇಗೆ ತಿನ್ನುತ್ತೀರಿ ಎಂಬುದು ಸಹ ನಿಮ್ಮ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ನಿರಂತರವಾಗಿ ಹಸಿದಿರುವುದು ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್, ಫೈಬರ್ ಮತ್ತು ಕೊಬ್ಬಿನ ಕೊರತೆಯಿಂದ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ಸಾಕಷ್ಟು ನಿದ್ರೆ ಪಡೆಯದಿರುವುದು ಅಥವಾ ಒತ್ತಡವು ನಿಮ್ಮ ಹಸಿವಿನ ಮೇಲೆ ಪರಿಣಾಮ ಬೀರಬಹುದು. 

ಸಾಕಷ್ಟು ಪ್ರೋಟೀನ್ ತಿನ್ನದಿರುವುದು (You’re not eating enough protein)

ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುವ ಮೂರು ಮ್ಯಾಕ್ರೋ ನ್ಯೂಟ್ರಿಯಂಟ್‌ಗಳಲ್ಲಿ ಪ್ರೋಟೀನ್ (Protein) ಸಹ ಒಂದಾಗಿದೆ. ಕಾರ್ಬೋಹೈಡ್ರೇಟ್ಸ್ ಹಾಗೂ ಕೊಬ್ಬು ಇನ್ನೆರಡು ಅಂಶಗಳಾಗಿವೆ. ಊಟದಲ್ಲಿ ಪ್ರೊಟೀನ್‌ಗಳ ಅಂಶವಿದ್ದಾಗ ಇದು ಸುಲಭವಾಗಿ ಹೊಟ್ಟೆ ತುಂಬುವಂತೆ ಮಾಡುತ್ತದೆ. ಮತ್ತು ಇದರಿಂದ ಆಗಾಗ ಹಸಿವಾಗುವುದಿಲ್ಲ. ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುವ ಊಟವು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತದೆ ಮತ್ತು ನಂತರ ಹಸಿವಿಗೆ ಕಾರಣವಾಗುತ್ತದೆ. ತರಕಾರಿಗಳು, ಡೈರಿ ಉತ್ಪನ್ನಗಳಾದ ಮೊಸರು, ಹಾಲು ಮತ್ತು ಚೀಸ್, ಮೊಟ್ಟೆ, ಮೀನು, ಬೀನ್ಸ್, ಕಾಳುಗಳು ಹೆಚ್ಚು ಪ್ರೊಟೀನ್ ಹೊಂದಿರುತ್ತವೆ.

ಚೆನ್ನಾಗಿ ನಿದ್ದೆ ಮಾಡದಿರುವುದು (You’re not sleeping well)

ಆರೋಗ್ಯಕರ ಜೀವನಕ್ಕೆ 7ರಿಂದ 9 ಗಂಟೆಗಳ ಕಾಲ ನಿದ್ರೆಯ ಅಗತ್ಯವಿದೆ. ದಿನದಲ್ಲಿ ಇಷ್ಟು ಸಮಯ ನಿದ್ದೆ (Sleep) ಮಾಡದಿರುವುದು ಆಗಾಗ ಹಸಿವಾಗಲು ಕಾರಣವಾಗಬಹುದು. ಹಸಿವು ಉತ್ತೇಜಿಸುವ ಹಾರ್ಮೋನ್ ಗ್ರೆಲಿನ್ ಅನ್ನು ನಿಯಂತ್ರಿಸಲು ನಿದ್ರೆ ಸಹಾಯ ಮಾಡುತ್ತದೆ. ಸಾಕಷ್ಟು ನಿದ್ದೆ ಮಾಡದಿರುವುದು ದೇಹದಲ್ಲಿ ಗ್ರೆಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೀಗಾಗಿ ಇದು ದೇಹಕ್ಕೆ ಅಗತ್ಯವಾದ ನಿದ್ದೆ ಬೇಕಾದಾಗಲ್ಲೆಲ್ಲಾ ಹಸಿವಾಗುವಂತೆ ಮಾಡುತ್ತದೆ.

Weight Loss Diet Plan: ಫಿಟ್ ಆಗಿರೋಕೆ ತಿನ್ನೋದೆಲ್ಲಾ ಬಿಟ್ಟು ಕಷ್ಟಪಡಬೇಕಾಗಿಲ್ಲ..!

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದು(You’re eating refined carbs)

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದರಿಂದ ಇದು ಮತ್ತೆ ಮತ್ತೆ ಹಸಿವಾಗುವಂತೆ ಮಾಡುತ್ತದೆ. ಕಾರ್ಬೋಹೈಡ್ರೇಟ್‌ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಸಿದ್ಧಪಡಿಸುವ ಕಾರಣ ಇವು ಅನೇಕ ಪೋಷಕಾಂಶಗಳು ಮತ್ತು ಫೈಬರ್ ಪ್ರಮಾಣವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಇಂಥಹಾ ಆಹಾರಪದಾರ್ಥಗಳ ಸೇವನೆ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಇದು ಕಡಿಮೆಯಾದಾಗ ಮತ್ತೆ ಮತ್ತೆ ಹಸಿವು (Hungry) ಆದ ಅನುಭವ ಆಗುತ್ತದೆ.

ಆಹಾರದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಿರುವುದು (Your diet is low in fat)

ಕಡಿಮೆ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸುವುದು ಸಹ ಆಗಾಗ ಹಸಿವಾಗಲು ಕಾರಣವಾಗುತ್ತದೆ. ಹೀಗಾಗಿ ಒಮೆಗಾ-3 ಕೊಬ್ಬಿನಾಮ್ಲವಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಸಾಲ್ಮನ್, ವಾಲ್‌ನಟ್ಸ್ ಅಥವಾ ಅಗಸೆಬೀಜದಂತಹ ಆಹಾರ (Food)ವನ್ನು ಸೇವಿಸುವುದು ಸಹ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಆರೋಗ್ಯಕರ ಕೊಬ್ಬಿನ ಕೊರತೆಯಿದ್ದರೆ, ಇದು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರನ್ನು ಹೆಚ್ಚೆಚ್ಚು ಸೇವಿಸಲು ಕಾರಣವಾಗಬಹುದು. ಆದ್ದರಿಂದ ನೀವು ತಿನ್ನುವ ಆಹಾರ ಸಮತೋಲದಲ್ಲಿರುವಂತೆ ನೋಡಿಕೊಳ್ಳಿ. 

Weight Loss : ಉಪವಾಸ ಮಾಡಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ರೆ ಎಚ್ಚರ..!

ಆಹಾರದಲ್ಲಿ ಹೆಚ್ಚಿನ ಫೈಬರ್ ಅಗತ್ಯವಿದೆ (Your diet needs more fiber)

ಆಹಾರದಲ್ಲಿ ಫೈಬರ್‌ (Fiber)ನ ಪ್ರಮಾಣ ಅಳವಡಿಕೆಯಾಗಿರುವುದು ತುಂಬಾ ಮುಖ್ಯ. ಹಸಿವನ್ನು ಕಡಿಮೆ ಮಾಡುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಹಸಿವನ್ನು ಕಡಿಮೆ ಮಾಡುವ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಹಣ್ಣುಗಳು, ತರಕಾರಿಗಳು, ಕಾಳುಗಳು, ಓಟ್ಸ್ ಮೊದಲಾದವುಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಸೇವಿಸುವ ಆಹಾರದಲ್ಲಿ ಫೈಬರ್ ನ ಪ್ರಮಾಣ ಹೆಚ್ಚಿನಂಶದಲ್ಲಿರುವುದರಿಂದ ಇದು ಹೆಚ್ಚು ಹಸಿವಾಗದಂತೆ ಮಾಡುತ್ತದೆ. 

ಗಮನ ಬೇರೆಡೆಯಿದ್ದಾಗ ಹೆಚ್ಚು ತಿನ್ನುತ್ತೀರಿ (Eating while distracted)

ಗಮನ ಬೇರೆಡೆಯಿದ್ದಾಗ ಹೆಚ್ಚು ತಿನ್ನುವುದು ಹಲವರ ಅಭ್ಯಾಸ. ಟಿವಿ, ಮೂವಿ ನೋಡುತ್ತಿರುವಾಗ, ಫ್ರೆಂಡ್ಸ್ ಜತೆ ಹರಟೆ ಹೊಡೆಯುತ್ತಿರುವಾಗ ಸ್ಯಾಕ್ಸ್ (Snacks) ಪ್ಯಾಕೆಟ್ ಕೈಯಲ್ಲಿದ್ದರೆ ಸಾಕು ಖಾಲಿಯಾದದ್ದೇ ಗೊತ್ತಾಗುವುದಿಲ್ಲ. ಹೀಗಾಗಿ ಇಂಥಹಾ ಸಂದರ್ಭದಲ್ಲಿ ತಿಂಡಿಯ ಪ್ಯಾಕೆಟ್ಸ್, ಸ್ನ್ಯಾಕ್ಸ್ ಬಳಿಯಲ್ಲಿಟ್ಟು ಕೂರಬೇಡಿ. ಟಿವಿ ನೋಡುವ ಮೊದಲು, ಮೊಬೈಲ್ ಫೋನ್ ಬಳಸುವ ಬದಲು ತಿಂಡಿಯನ್ನು ತಿಂದು ಕುಳಿತುಕೊಳ್ಳಿ.

Follow Us:
Download App:
  • android
  • ios