Asianet Suvarna News Asianet Suvarna News

ಈ ವಿಟಮಿನ್ ಕೊರತೆ ಹೆಚ್ಚಿಸುತ್ತೆ ಬುದ್ಧಿಮಾಂದ್ಯತೆಯ ಸಾಧ್ಯತೆ!

ಬುದ್ಧಿಮಾಂದ್ಯತೆ ಕಾಯಿಲೆಯೂ ಹೌದು. ಈ ಕುರಿತಾದ ರಿಸರ್ಚ್ (Research) ಒಂದು ನಡೆದಿದ್ದು, ಅದರಲ್ಲಿ ವಿಟಮಿನ್(Vitamin) ಒಂದರ ಕೊರತೆಯಿಂದಾಗಿ ಲಕ್ಷಾಂತರ ಜನರ ಆರೋಗ್ಯ (Health) ಹದಗೆಡುತ್ತಿದ್ದು, ಅಪಾಯದಲ್ಲಿದ್ದಾರೆ ಎಂದು ಎಚ್ಚರಿಕೆಯ ಸಂದೇಶ ನೀಡಿದೆ. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.

Millions are in Risk due to Vitamin deficiencies how to be healthy and fit
Author
Bangalore, First Published Jun 17, 2022, 4:26 PM IST

ಅತಿಯಾದ ಗಾಯದ(Injury) ಹೊಡೆತ ಅಥವಾ ಕಾಯಿಲೆಯಿಂದಾಗಿ(Disease) ವ್ಯಕ್ತಿಯ ಮೆದುಳು(Brain) ಹಾನಿಗೊಳಗಾದರೆ ನೆನಪಿನ ಶಕ್ತಿ(Memory Loss) ಕಳೆದುಕೊಳ್ಳುತ್ತಾನೆ ಇದಕ್ಕೆ ಇಂಗ್ಲಿಷ್ ನಲ್ಲಿ ಡಿಮೆಂಟಿನಾ(Dementia) ಎಂದು ಕರೆಯುತ್ತಾರೆ. ಅಂದರೆ ಬುದ್ಧಿಮಾಂದ್ಯತೆ(Dementia) ಎಂದು ಕರೆಯುತ್ತಾರೆ. ಇದೊಂದು ಕಾಯಿಲೆಯೂ ಹೌದು. ಈ ಕುರಿತಾದ ರಿಸರ್ಚ್(Research) ಒಂದು ನಡೆದಿದ್ದು, ಅದರಲ್ಲಿ ವಿಟಮಿನ್(Vitamin) ಒಂದರ ಕೊರತೆಯಿಂದಾಗಿ ಲಕ್ಷಾಂತರ ಜನರ ಆರೋಗ್ಯ(Health) ಹದಗೆಡುತ್ತಿದ್ದು, ಅಪಾಯದಲ್ಲಿದ್ದಾರೆ ಎಂದು ಎಚ್ಚರಿಕೆಯ ಸಂದೇಶ ನೀಡಿದೆ. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.

ಬುದ್ಧಿಮಾಂದ್ಯತೆ ಎಂಬುದು ಮಾನವನ ಸ್ಮರಣೆ(Memory) ಮತ್ತು ಸಾಮಾಜಿಕ ಸಾಮರ್ಥ್ಯಗಳ(Social Ability) ಮೇಲೆ ಪರಿಣಾಮ ಬೀರುವ ರೋಗಲಕ್ಷಣ. ಇದು ವ್ಯಕ್ತಿಯ ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಕಾಯಿಲೆಯು ವಯಸ್ಸಾದವರಲ್ಲಿ(Old agers) ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದಾದರೂ ವಯಸ್ಕರಲ್ಲೂ(Youngers) ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ.

ಮರೆಯುವ ರೋಗಕ್ಕೆ ಗುರಿಯಾಗುವ ಮುನ್ನ ನೀವು ಮಾಡಬೇಕಾಗಿರೋದೇನು?

ವಿಶ್ವ ಆರೋಗ್ಯ ಸಂಸ್ಥೆಯು(World Health Organization) ಇತ್ತೀಚೆಗೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ವಿಶ್ವಾದ್ಯಂತ ಈವರೆಗೂ 55 ಮಿಲಿಯನ್(Million) ಜನರು ಬುದ್ಧಿಮಾಂದ್ಯ(Dementia) ರೋಗಿಗಳು ಜೀವಂತವಾಗಿದ್ದಾರೆ. ಅಲ್ಲದೆ ಪ್ರತೀ ವರ್ಷ ಹೊಸದಾಗಿ 10 ಮಿಲಿಯನ್(Million) ಜನರು ಬುದ್ಧಿಮಾಂದ್ಯರಾಗುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಬುದ್ಧಿಮಾಂದ್ಯತೆಯು ವಿಶ್ವಾದ್ಯಂತ(World) ವಯಸ್ಸಾದವರಲ್ಲಿ ಅಂಗವೈಕಲ್ಯ ಮತ್ತು ಅವಲಂಬನೆಗೆ ಪ್ರಮುಖ ಕಾರಣವಾಗಿದೆ. ಜೊತೆಗೆ ಪ್ರಸ್ತುತ ಸಾವಿಗೆ(Death) 7ನೇ ಪ್ರಮುಖ ಕಾರಣ ಎಂದು ಹೇಳಲಾಗಿದೆ. 

ರಿಸರ್ಚನಲ್ಲಿ ಹೇಳಿರುವುದೇನು? 
ಇತ್ತೀಚೆಗೆ ಯುನಿವರ್ಸಿಟಿ ಆಫ್ ಆಸ್ಟೆçÃಲಿಯಾ(University Of Australia) ರಿಸರ್ಚ್(Research) ಒಂದನ್ನು ನಡೆಸಿತ್ತು. ಇದರಲ್ಲಿ ವಿಟಮಿನ್ ಡಿಯ(Vitamin D) ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳುವುದು ಬುದ್ಧಿಮಾಂದ್ಯತೆಯಲ್ಲಿ ಕಂಡುಬರುವAತೆ ಅರಿವಿನ ದುರ್ಬಲತೆಯ ಆಕ್ರಮಣವನ್ನು ತಡೆಯಬಹುದು. ಅಲ್ಲದೆ ವಿಟಮಿನ್ ಡಿ ಕೊರತೆ ಹಾಗೂ ಬುದ್ಧಿಮಾಂದ್ಯತೆ ನಡುವೆ ಸಂಪರ್ಕ ಸಾಧಿಸುವುದು, ಕಡಿಮೆ ಮಟ್ಟದ ವಿಟಮಿನ್ ಡಿ ಸಹ ಪಾರ್ಶ್ವವಾಯುವಿಗೆ(Stroke) ಕಾರಣವಾಗಬಹುದು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. 
ಅಷ್ಟೇ ಅಲ್ಲದೆ ವಿಟಮಿನ್ ಡಿ ಪ್ರಮಾಣವನ್ನು ಹೆಚ್ಚಿಸುವುದರಿಂದ ಶೇ. 17ರಷ್ಟು ಬುದ್ಧಿಮಾಂದ್ಯತೆ ರೋಗವನ್ನು ತಡೆಯಬಹುದು ಎಂದು ಹೇಳಲಾಗಿದೆ. 

ಹಗಲು ನಿದ್ದೆ ಮಾಡುವ ಅಭ್ಯಾಸದಿಂದ ಆಲ್ಝೈಮರ್‌ ಅಪಾಯ ಹೆಚ್ಚು..!

ವಿಟಮಿನ್ ಡಿ ಹೇಗೆ ಕೆಲಸ ಮಾಡುತ್ತದೆ? 
ಮಗುವಿಗೆ(Babies) ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ಸಿಗಬೇಕು ಎಂದು ಡಾಕ್ಟರ್(Doctors) ಹೇಳಿರುವುದನ್ನು ಕೇಳಿದ್ದೇವೆ. ನೈಸರ್ಗಿಕವಾಗಿ(Naturally) ವಿಟಮಿನ್ ಡಿ ಸೂರ್ಯನಲ್ಲಿ(Sun) ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ ಪುಟ್ಟ ಮಗುವನ್ನು ಬೆಳಗ್ಗೆ(Morning) ಬೀಳುವ ಸೂರ್ಯನ ಎಳೆ ಕಿರಣಕ್ಕೆ(Sun Rays) ಹಿಡಿಯುತ್ತಾರೆ. ಸೂರ್ಯನ ಎಳೆಯ ಕಿರಣಗಳಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. 

ವಿಟಮಿನ್ ಡಿ ಮೆದುಳು ಹಾನಿಗೊಳಗಾಗುವುದನ್ನು ತಡೆಯುತ್ತದೆ. ದೇಹದಲ್ಲಿನ ಹಲವು ವಿಷಕಾರಿ ತ್ಯಾಜ್ಯವನ್ನು(Waste Toxic) ಹೊರಹಾಕಲು ಕಾರ್ಯವಿಧಾನಗಳು ಇವೆ. ಆದರೂ ಕೆಲ ಸಂದರ್ಭದಲ್ಲಿ ಯಾವುದೋ ಕಾರಣಕ್ಕಾಗಿ ಹಾಗೆಯೇ ಉಳಿದ ತ್ಯಾಜ್ಯಗಳು ನರಗಳಲ್ಲಿ(Nerve) ಉಳಿಯುತ್ತವೆ. ಹೀಗೆ ಉಳಿದ ತ್ಯಾಜ್ಯಗಳು ಜೀವಕೋಶಗಳ(Cells) ನಡುವಿನ ಸಂವಹನಕ್ಕೆ(Communication) ಅಡ್ಡಿಪಡಿಸುತ್ತದೆ. ಈ ರೀತಿಯ ಸಮಸ್ಯೆಗಳನ್ನು ವಿಟಮಿನ್ ಡಿ ಸರಿಪಡಿಸುತ್ತದೆ.

ನ್ಯೂರೋಪ್ರೊಟೆಕ್ಟಿವ್(Neauroprotective) ಗುಣಲಕ್ಷಣ ಹೊಂದಿರುವ ವಿಟಮಿನ್ ಡಿ ಮೆದುಳನ್ನು(Brain) ಹಾನಿಗೊಳಗಾಗುವುದನ್ನು ರಕ್ಷಷಿಸುತ್ತದೆ. ನ್ಯೂರೋಸ್ಟೆರಾಯ್ಡ್(Neaurostaroid) ಇದರಲ್ಲಿದ್ದು ಮೆದುಳು ಕಾರ್ಯಚಟುವಟಿಕೆಯಿಂದ ಇರುವಂತೆ ಸಹಕರಿಸುತ್ತದೆ. ವಿಟಮಿನ್ ಡಿ ಕೊರತೆಯು ಮೆದುಳಿನ ನರಕೋಶಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಹಲವು ನರವೈಜ್ಞಾನಿಕ ಸಮಸ್ಯೆಗೆ ಕಾರಣವಾಗಬಹುದು. ಆದರೆ ಬುದ್ಧಿಮಾಂದ್ಯತೆಗೆ ಯಾವುದೇ ಚಿಕಿತ್ಸೆ ಲಭ್ಯವಿಲ್ಲದ್ದಿದ್ದರೂ ಆರಂಭಿಕ ರೋಗನಿರ್ಣಯವು ಪರಿಸ್ಥಿತಿಯ ಸರಿಯಾದ ನಿರ್ವಹಣೆಗೆ ಸಹಾಯ ಮಾಡುತ್ತದೆ. 

Study Suggests: ಬುದ್ಧಿಮಾಂದ್ಯತೆ ಕಡಿಮೆ ಮಾಡುತ್ತೆ ಈ ವಿಶೇಷ ಚಿಕಿತ್ಸೆ

ಜನರಲ್ಲಿ ನ್ಯೂನ್ಯತೆ ಕಾಣಲು ಕಾರಣವೇನು?
ವಿಶ್ವಾದ್ಯಂತ ಬಹಳಷ್ಟು ಜನರಲ್ಲಿ ವಿಟಮಿನ್ ಡಿ ನ್ಯೂನ್ಯತೆ ಕಾಣಿಸಿಕೊಂಡಿದೆ. 2021ರ ವರದಿ ಪ್ರಕಾರ 1 ಬಿಲಿಯನ್(Billion) ಜನರಲ್ಲಿ ವಿಟಮಿನ್ ಡಿ ನ್ಯೂನ್ಯತೆ ಕಂಡುಬAದಿದ್ದು ಅದರಲ್ಲಿ ಅರ್ಧದಷ್ಟು ಜನರಿಲ್ಲಿ ವಿಟಮಿನ್ ಡಿ ಕೊರತೆ ಕಾಣಿಸಿಕೊಂಡಿದೆ. ಇಷ್ಟು ದೊಡ್ಡ ಅನಾಹುತವನ್ನು ತಪ್ಪಿಸಬೇಕೆಂದರೆ ಆಗಾಗ್ಗೆ ವಿಟಮಿನ್ ಡಿ ದೇಹದಲ್ಲಿ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಜೊತೆಗೆ ಈ ವಿಟಮಿನ್ ಕಾಯ್ದುಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ಬಿಸಿನಲ್ಲಿರಬೇಕು. ಹೀಗೆ ಮಾಡುವುದರಿಂದ ನೈಸರ್ಗಿಕವಾಗಿ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ.

ಬುದ್ಧಿಮಾಂದ್ಯತೆಯ ರೋಗಲಕ್ಷಣಗಳು
ಹಲವಾರು ವಿಧಾನಗಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಬಹುದು. ನೆನಪಿನ ಶಕ್ತಿ ಕಳೆದುಕೊಳ್ಳುವುದು(Forgetfulness), ಸಮಯದ ಜಾಡು ಕಳೆದುಕೊಳ್ಳುವುದು(Losing track of Time), ಆಗಾಗ್ಗೆ ಗೊಂದಲಕ್ಕೊಳಗಾವುದು(Getting Confused Often), ಇನ್ನೊಬ್ಬರ ಜೊತೆ ಸಂವಹಿಸಲು ಕಷ್ಟಪಡುವುದು(Difficulty in Communicating with People), ವಯಕ್ತಿಕ ಕೆಲಸಗಳಿಗೂ ಇನ್ನೊಬ್ಬರ ನೆರವು ಪಡೆಯುವುದು(Looking for Assistance in doing Basic Personal Work), ನಡೆವಳಿಕೆಯಲ್ಲಿ ಬದಲಾವಣೆ(Change in Behaviour), ನಡೆಯುವುದಕ್ಕೂ ಕಷ್ಟಪಡುವುದು(Difficulty in Walking), ಆತ್ಮೀಯರ ಹೆಸರೂ ನೆನಪಿನಲ್ಲಿಡುವುದು ಕಷ್ಟವಾಗುವುದು(Difficulty in Remembering Names of Close People), ಪರಿಚಿತ ಸ್ಥಳಗಳನ್ನೂ ಮರೆಯುವುದು(Not able to Feel Familiar Places) ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. 

Follow Us:
Download App:
  • android
  • ios