Sugar ಇದೆಯಾ? ನಿಮ್ಮ ದೇಹದಲ್ಲಿ GL ಎಷ್ಟಿದೆ ಟೆಸ್ಟ್ ಮಾಡ್ಕೊಳ್ಳಿ
ದಿನವೂ ನಾವೇನು ತಿನ್ನುತ್ತೀವಿ, ಎಷ್ಟು ತಿನ್ನುತ್ತೀವೆ ಎಂದು ತಿಳಿದಿರಬೇಕು. ಪ್ರತೀ ತುತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ತಿನ್ನುವುದೇ ದೇಹಕ್ಕೆ ಶಕ್ತಿ ಸಿಗಲೆಂದು. ಅಂದರೆ ಗ್ಲೂಕೋಸ್ ದೇಹಕ್ಕೆ ಬೇಕೆಂದರ್ಥ. ಅದರಲ್ಲೂ ಸಕ್ಕರೆ ಕಾಯಿಲೆ ಡಯಾಬಿಟಿಕ್ ಇರುವವರಿಗೆ ಗ್ಲೆöÊಕಾಮಿಕ್ ಇಂಡೆಕ್ಸ್(glycaemic index) ಅಂದರೆ ಗ್ಲೂಕೋಸ್ ಎಂಬುದು ಪ್ರಮುಖವಾಗಿದೆ.
ಸೀಜನಲ್ ಹಣ್ಣು (Seasonal fruits), ತರಕಾರಿಗಳು ನಮ್ಮ ದೇಹ ಹಾಗೂ ಆರೋಗ್ಯ (Health) ಎರಡನ್ನೂ ಕಾಪಾಡುತ್ತವೆ. ಹಾಗಂತ ಎಲ್ಲರಿಗೂ ಇದು ಸಾಧ್ಯವಿಲ್ಲ. ಅದರಲ್ಲೂ ಡಯಾಬಿಟಿಕ್ ಇರುವವರು ಎಚ್ಚರದಿಂದ ಇರಬೇಕು. ರಕ್ತದಲ್ಲಿ ಸಕ್ಕರ ಅಂಶ ಹೆಚ್ಚು ಕಡಿಮೆಯಾಗುತ್ತಿರುತ್ತೆ. ಅದು ಒಂದೇ ಲೆವಲ್‌ನಲ್ಲಿ ಕಾಯ್ದುಕೊಳ್ಳುವುದು ತಪಸ್ಸಿದ್ದಂತೆ. ಬೇಸಿಗೆಯಲ್ಲಿ ಸಪೋಟ, ಕರ‍್ಬೂಜ (Musk Melon), ಕಲ್ಲಂಗಡಿ ಹಲವು ಹಣ್ಣುಗಳು ಬರುತ್ತವೆ. ಹೊರಗಿನ ವಾತಾವರಣ ಹೆಚ್ಚಿದಂತೆ ದೇಹದ ತಾಪವೂ ಹೆಚ್ಚುತ್ತೆ. ದೇಹ ತಂಪಿರಿಸಲು ಜ್ಯೂಸ್ (juice), ಹಣ್ಣುಗಳ ಮೊರೆಹೋಗುವುದು ಸಾಮಾನ್ಯ. ಆದರೆ ಶುಗರ್ ಇರುವವರು ತಿನ್ನುವುದರ ಬಗ್ಗೆ ಹುಷಾರಾಗಿರಬೇಕು. ಫೈಬರ್, ಕಾರ್ಬೋಹೈಡ್ರೇಟ್(carbohydrate), ಜೇನಿನಷ್ಟು ಸಿಹಿ (fructose) , ಕೆಲ ವಿಟಮಿನ್, ಗ್ಲೂಕೋಸ್ ಸರಿಯಾಗಿರುವ ಆಹಾರವನ್ನೇ ಸೇವಿಸಬೇಕು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ತೊಂದರೆ ಫಿಕ್ಸ್.
ಯಾವ ಹಣ್ಣು ತಿನ್ನಬೇಕು?
ಸಪೋಟ ಜೇನಿನಷ್ಟು ಸಿಹಿಯಾಗಿರುತ್ತೆ. ತಿಂದ್ರೆ ಸಕ್ಕರೆ ತಿಂದಷ್ಟೇ ಸಿಹಿ. ಆದರೆ ಡಯಾಬಿಟಿಕ್ ಇರುವವರು ಚೆನ್ನಾಗಿದೆ ಎಂದು ತಿಂದರೆ ಶುಗರ್ ಲೆವೆಲ್ ಪಟಕ್ಕನೆ ಏರುತ್ತೆ. ಇದರಲ್ಲಿ ಫೋಲೆಟ್(folate) ಹೆಚ್ಚಿದ್ದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಉತ್ತಮವಾದ ಅದರಲ್ಲೂ ಹೆಚ್ಚುವರಿ ಪೋಷಕಾಂಶ ನೀಡುವ, ಫೈಬರ್, ವಿಟಮಿನ್ ಸಿ, ಪೊಟ್ಯಾಶಿಯಮ್(potassium), ಉಪ್ಪಿನಂಶ(fructose) ಇರುವ ಹಣ್ಣುಗಳನ್ನು ತಿನ್ನುವುದು ಉತ್ತಮ. ಅಂದರೆ ಸೇಬು, ಕಿತ್ತಳೆ, ಸೀಬೆ, ಚರ‍್ರಿ, ದ್ರಾಕ್ಷಿಯಂತಹ ಹಣ್ಣುಗಳು ಒಳ್ಳೆಯದು. ಇವು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗದಂತೆ ಕಾಯುತ್ತವೆ.
ರಕ್ತದಲ್ಲಿ ಗ್ಲೂಕೋಸ್ (Glucose)
ಹಣ್ಣು, ಆಹಾರ ಸಮ ಪ್ರಮಾಣದ ಸೇವನೆ ಶುಗರ್ ಇರುವವರ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ಸುರಕ್ಷಿತ ಹಾಗೂ ಸೂಕ್ತವಾದ ಹಣ್ಣು ಹಾಗೂ ಕಾರ್ಬೋಹೈಡ್ರೇಟ್ ಹೆಚ್ಚಿರುವುದನ್ನು ಆರಿಸಿಕೊಳ್ಳಬೇಕು. ಇದರಿಂದ ರಕ್ತದಲ್ಲಿನ ಗ್ಲೆöÊಕಾಮಿಕ್ ಇಂಡೆಕ್ಸ್ (glucose) ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ಬೆಣ್ಣೆಹಣ್ಣು, ಸ್ಟಾçಬರ‍್ರಿ(strawberry), ಬ್ಲಾಕ್‌ಬರ‍್ರಿ(blackberry), ಸೇಬು, ಪೀಚ್, ಪಿರ‍್ಸ(pears), ಚರ‍್ರಿ ಹಣ್ಣುಗಳಲ್ಲಿ 20-49ರಷ್ಟು ಗ್ಲೂಕೋಸ್ ಅಂಶವಿದೆ. ಇವು ಶುಗರ್ ಲೆವೆಲ್ ಕಡಿಮೆ ಇರುವಂತೆ ಹಾಗೂ ಬ್ಲಡ್ ಶುಗರ್ ಹೆಚ್ಚುವಂತೆ ಮಾಡುತ್ತದೆ.
ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಆರೋಗ್ಯವಾಗಿರಲು ಇವಿಷ್ಟನ್ನು ಮಾಡಿದರೆ ಸಾಕು
ಕಲ್ಲಂಗಡಿ (Water Melon) ಒಳ್ಳೆಯದಲ್ಲ
ಬೇಸಿಗೆಯಲ್ಲಿ ಕಲ್ಲಂಗಡಿ ದೇಹಕ್ಕೆ ತಂಪು ನೀಡುತ್ತದೆ ನಿಜ. ಆದರೆ ಶುಗರ್ ಇರುವವರಿಗೆ ಒಳ್ಳೆಯದಲ್ಲ. ಕಲ್ಲಂಗಡಿಯಲ್ಲಿ ಗ್ಲೂಕೋಸ್ ಅಂಶ ಹೆಚ್ಚಿದ್ದು, ಕಾರ್ಬೋಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿದೆ. ಇದರಿಂದ ಶುಗರ್ ಲೆವೆಲ್ ಒಂದೇ ಬಾರಿ ಕಡಿಮೆಯಾಗಬಲ್ಲದು. ಒಂದು ವೇಳೆ ಕಲ್ಲಂಗಡಿ ಸೇವಿಸಿದರೂ ಅದಕ್ಕೆ ಸರಿ ಹೊಂದುವ ಬ್ಯಾಲೆನ್ಸ್ ಮಾಡುವ ಫೈಬರ್(fiber), ಕರ‍್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನು ಸೇವಿಸಬೇಕು.
ಇನ್ಸುಲಿನ್ ಎಲೆಗಳನ್ನು ತಿಂದು ಡಯಾಬಿಟೀಸ್ ನಿಯಂತ್ರಿಸಬಹುದಾ ?
ಒಂದು ಫುಡ್ ಲೀಸ್ಟ್ ಇರಲಿ
ಆಹಾರ ಸೇವನೆ ಬಗ್ಗೆ ಒಂದು ಲೀಸ್ಟ್ ಮಾಡಿಕೊಳ್ಳಿ. ಒಂದು ಹೊತ್ತು ಅನ್ನ ತಿಂದರೆ, ಮಂತ್ತೊಂದು ಹೊತ್ತು ಚಪಾತಿ ತಿನ್ನುವುದು. ಬ್ಲೂö್ಯಬರ‍್ರಿ, ಸ್ಟಾçಬರ‍್ರಿಗಳಲ್ಲಿ ವಿಟಮಿನ್ ಸಿ-ಕೆ(vitamin C-K), ಫೈಬರ್, ಪೊಟ್ಯಾಶಿಯಮ್, ಖನಿಜಾಂಶವಿದೆ. ಟೊಮೆಟೊದಲ್ಲಿ ವಿಟಮಿನ್ ಸಿ-ಇ(vitamin C-E), ಪೊಟ್ಯಾಶಿಯಮ್ ಅಂಶವಿದೆ. ಹಾಗಲಕಾಯಿ ಕಹಿ ಇರಬಹುದು ಶುಗರ್ ಇರುವವರಿಗೆ ಅದು ರಾಮಬಾಣದಂತೆ ಕೆಲಸ ಮಾಡುತ್ತೆ. ಮೊಳಕೆ ಕಾಳು, ಮೆಂತ್ಯೆ ಕಾಳು, ಗೋಧಿ, ಜೋಳ, ರಾಗಿಯಲ್ಲಿ ಫೈಬರ್ ಹಾಗೂ ಕಾರ್ಬೋಹೈಡ್ರೇಟ್ ಹೆಚ್ಚಿದೆ.
ಇವು ಬೇಡವೇ ಬೇಡ
ಸಕ್ಕರೆ ಇರುವ ಸಾಫ್ಟ್ ಡ್ರಿಂಕ್ಸ್, ವೈಟ್ ರೈಸ್, ವೈಟ್ ಬ್ರೆಡ್, ಆಲೂಗೆಡ್ಡೆ, ಸಕ್ಕರೆ ಪದಾರ್ಥಗಳು.
ಗ್ಲೂಕೋಸ್ ಲೆವೆಲ್ ಎಷ್ಟಿರಬೇಕು
ಕಡಿಮೆ GI: 1-55
ಮೀಡಿಯಮ್ GI: 56-69
ಅತೀ ಹೆಚ್ಚು GI: 70ಕ್ಕಿಂತ ಹೆಚ್ಚು
ಮಧುಮೇಹಿಗಳಿಗೆ ಸೂಪರ್ ಫುಡ್ ಈ ಎಲೆಯ ಚಹಾ..