ಬೆಂಗಳೂರಿನ ಈ ಹೊಟೇಲಲ್ಲಿ ಸಿಗುತ್ತೆ ಕೇವಲ 20 ರೂ.ಗೆ ಮಸಾಲೆ ದೋಸೆ!

ಮಸಾಲೆ ದೋಸೆ, ಇಡ್ಲಿ ತಿನ್ನೋಣ ಅಂತ ಹೊಟೇಲ್ ಗೆ ಹೋದ್ರೆ 500 ರೂಪಾಯಿ ತೆಗೆದಿಟ್ಟು ಬರೋದೆ. ಆದ್ರೆ ಬೆಂಗಳೂರಿನಲ್ಲೂ ಅತ್ಯಂತ ಕಡಿಮೆ ಬೆಲೆಗೆ, ರುಚಿಯಾದ ತಿಂಡಿ ನೀಡೋ ರೆಸ್ಟೋರೆಂಟ್ ಇದೆ ಅಂದ್ರೆ ನೀವು ನಂಬ್ತೀರಾ? ಅದೂ ಮೀಟರ್ ಆಟೋಗಿಂತ ಕಡಿಮೆ ಬೆಲೆಗೆ ಮಸಾಲೆ ದೋಸೆ ಸಿಗುತ್ತೆ.
 

masala dosa avaialble for 20 rs in taaza thindi in bengaluru roo

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Silicon City Bengaluru) ಹೊಟೇಲ್‌ಗಳಿಗೆ ಬರವಿಲ್ಲ. ದಕ್ಷಿಣ ಭಾರತದ ತಿನಿಸಿಗೆ ಪ್ರಸಿದ್ಧವಾಗಿರುವ ಅನೇಕ ಹೊಟೇಲ್ಸ್ ರಾಜಧಾನಿಯಲ್ಲಿವೆ. ಅದ್ರಲ್ಲೂ ರಾಮೇಶ್ವರ ಕೆಫೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆದ್ರೆ ರಾಮೇಶ್ವರ ಕೆಫೆಯ ರೆಸ್ಟೋರೆಂಟ್ ಸರಪಳಿಗೆ ಹೋಲಿಸಿದ್ರೆ ಜಯನಗರ ತಾಜಾ ತಿಂಡಿಯ ಬೆಲೆ ಬೆಂಗಳೂರಿಗರನ್ನು ಅಚ್ಚರಿಗೊಳಿಸಿದೆ. ಅತ್ಯಂತ ಕಡಿಮೆ ಬೆಲೆಗೆ ಇಲ್ಲಿ ಮಸಾಲೆ ದೋಸೆ ಸೇರಿದಂತೆ ದಕ್ಷಿಣ ಭಾರತದ ನಾನಾ ತಿಂಡಿಗಳು ಅತ್ಯಂತ ಕಡಿಮೆ ಬೆಲೆಗೆ ಸಿಗ್ತಿದ್ದು, ಸಾಮಾನ್ಯ ಜನರ ಕೈಗೆಟುಕುವಂತಿದೆ. 

ಒಂದು ಮಸಾಲೆ ದೋಸೆ (Masala Dosa) ಬೆಲೆ 20 ರೂ.: ಸಾಹಿಲ್ ಟೋಟಾಲೆ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ತಾಜಾ ತಿಂಡಿ (Taaza Thindi) ರೆಸ್ಟೋರೆಂಟ್ ಮೆನು ಹಾಗೂ ಅದರ ದರವನ್ನು ಹಂಚಿಕೊಂಡಿದ್ದಾರೆ. ಇದು ಬಳಕೆದಾರರನ್ನು ಅಚ್ಚರಿಗೊಳಿಸಿದೆ. ರಾಮೇಶ್ವರಂ (Rameshwaram) ನಲ್ಲಿ ಇದ್ರ ಬೆಲೆ ಎಷ್ಟು ಎಂದು ಸಾಹಿಲ್ ತಮ್ಮ ಪೋಸ್ಟಿಗೆ ಶೀರ್ಷಿಕೆ ನೀಡಿದ್ದಾರೆ. ಟೋಟಲ್ ಪೋಸ್ಟ್ ಪ್ರಕಾರ, ತಾಜಾ ತಿಂಡಿ ರೆಸ್ಟೋರೆಂಟ್‌ನಲ್ಲಿ ಒಂದು ಇಡ್ಲಿಗೆ ಕೇವಲ 10 ರೂಪಾಯಿ. ಇನ್ನು ಅದೇ ಬೆಲೆಗೆ ಮೆದು ವಡಾ ರುಚಿಯನ್ನು ಗ್ರಾಹಕರು ಸವಿಯಬಹುದು. 

ಮಾರ್ಕೆಟಿಗೆ ಬಂದಿದೆ ನಿಮ್ಮನ್ನ ಸಾವಿನ ದವಡೆಗೆ ನೂಕುವ ನಕಲಿ ಪನೀರ್, ಫೇಕೋ, ರಿಯಲ್ಲೋ?

ಈ ರೆಸ್ಟೋರೆಂಟ್ ಇನ್ನೊಂದು ವಿಶೇಷವೆಂದ್ರೆ ಮಸಾಲೆ ದೋಸೆ ಬೆಲೆ. ಇಲ್ಲಿ ಸಾದಾ ದೋಸೆ ಹಾಗೂ ಮಸಾಲೆ ದೋಸೆ ಕೇವಲ 20 ರೂಪಾಯಿಗೆ ಸಿಗುತ್ತದೆ. ಈ ರೆಸ್ಟೋರೆಂಟ್ ನಲ್ಲಿ ಕೇಸರಿತಾಬ್, ಖಾರಾಬಾತ್ ಕೇವಲ 15 ರೂಪಾಯಿಗೆ ಲಭ್ಯವಿದೆ. 

ಇಷ್ಟು ಕಡಿಮೆ ಬೆಲೆಗೆ ಮತ್ತೆಲ್ಲೂ ಮಸಾಲೆ ದೋಸೆ ಸಿಗಲು ಸಾಧ್ಯವಿಲ್ಲ. ಈ ಬೆಲೆಗೆ ಹತ್ತಿರವೂ ಇಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. 15 ವರ್ಷಗಳ ಹಿಂದೆ ಮುಂಬೈನಲ್ಲಿ ನಾನು ಇದೇ ಬೆಲೆಗೆ ಆಹಾರ ತಿನ್ನುತ್ತಿದ್ದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಶರವಣ ಭವನದಲ್ಲಿ ಮಸಾಲೆ ದೋಸೆ 200 ರೂಪಾಯಿಗೆ ಲಭ್ಯವಿದೆ. ಇಲ್ಲಿನ ಬಹುತೇಕ ಆಹಾರಗಳ ಬೆಲೆ 250 ರೂಪಾಯಿಗೆ ಮಾರಾಟವಾಗುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ತಾಜಾ ತಿಂಡಿಯಲ್ಲಿ ಎಲ್ಲ ಆಹಾರಗಳು ರುಚಿಯಾಗಿದ್ದು, ಶುದ್ಧತೆಗೆ ಆದ್ಯತೆ ನೀಡಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ. 

ಅನೇಕ ವರ್ಷಗಳಿಂದ ಇಲ್ಲಿ ಆಹಾರ ಸೇವನೆ ಮಾಡ್ತಿದ್ದೇನೆಂದು ಕೆಲವರು ಬರೆದ್ರೆ, ಕೊಲ್ಕತ್ತಾದಲ್ಲಿ ದಕ್ಷಿಣ ಭಾರತದ ತಿಂಡಿಗೆ ಕಡಿಮೆ ಬೆಲೆ ಇದೆ. ಆದ್ರೆ ದಕ್ಷಿಣ ಭಾರತದಲ್ಲೇ ಮಸಾಲೆ ದೋಸೆಗೆ ದುಬಾರಿ ಬೆಲೆ ಇದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ತಾಜಾ ತಿಂಡಿ ಬೆಂಗಳೂರಿನಲ್ಲಿರುವ ಜನಪ್ರಿಯ ದಕ್ಷಿಣ ಭಾರತದ ರೆಸ್ಟೋರೆಂಟ್ (South Indian Restaurant) ಸರಪಳಿಯಾಗಿದೆ. ಬೆಂಗಳೂರಿನ ಪ್ರಸಿದ್ಧ ರೆಸ್ಟೋರೆಂಟ್‌ಗಳಾದ ರಾಮೇಶ್ವರಂ, ವಿದ್ಯಾರ್ಥಿ ಭವನ, ಸಿಟಿಆರ್ ಮತ್ತು ಎಂಟಿಆರ್‌ಗೆ ಪಟ್ಟಿಯಲ್ಲಿ ತಾಜಾ ತಿಂಡಿ ಕೂಡ ಸೇರಿದೆ. ತಾಜಾ ತಿಂಡಿ ಬೆಂಗಳೂರಿನ ಅನೇಕ ಕಡೆ ತನ್ನ ಬ್ರಾಂಚ್ ಹೊಂದಿದೆ. ಇಡ್ಲಿ, ವಡಾ ಮತ್ತು ಮಸಾಲೆ ದೋಸೆಯಂತಹ ಬೆಳಗಿನ ಉಪಾಹಾರಕ್ಕೆ ಈ ರೆಸ್ಟೋರೆಂಟ್ ಪ್ರಸಿದ್ಧಿ ಪಡೆದಿದೆ. 

ಸ್ಟ್ರೀಟ್ ಫುಡ್‌ನಿಂದ ರಾಯಲ್ ಫುಡ್ ತನಕ, ಅನಂತ್ ಅಂಬಾನಿ ಮದ್ವೇಲಿ ಭಾರತೀಯ ಆಹಾರದ ಅನಾವರಣ!

ತಾಜಾ ತಿಂಡಿ ರೆಸ್ಟೋರೆಂಟ್ ನಲ್ಲಿ ಬರೀ ಉಪಹಾರ ಮಾತ್ರವಲ್ಲ ಊಟ ಕೂಡ ಲಭ್ಯವಿದೆ. ವಾರದ ದಿನಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ರೆಸ್ಟೋರೆಂಟ್ ತೆರೆದಿರುತ್ತದೆ. ಆದರೆ ಶನಿವಾರ ಮತ್ತು ಭಾನುವಾರ ರೆಸ್ಟೋರೆಂಟ್ ಮಧ್ಯಾಹ್ನ 12. 30 ರವರೆಗೆ ತೆರೆದಿರುತ್ತದೆ. ಇನ್ನು ಸಂಜೆ 4.30 ಕ್ಕೆ ತೆರೆಯುವ ರೆಸ್ಟೋರೆಂಟ್ ರಾತ್ರಿ 9.30 ರವರೆಗೆ ತನ್ನ ಸೇವೆಯನ್ನು ನೀಡುತ್ತದೆ. 

Latest Videos
Follow Us:
Download App:
  • android
  • ios