ಚಂದ್ರನಲ್ಲಿ ಕತ್ತಲ ಸಮಯ ಹತ್ತಿರ, ನಿದ್ರೆಗೆ ಜಾರಲಿದೆ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್!
ಚಂದ್ರಯಾನ 3 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ಒಂದು ಹಗಲು ಭೂಮಿಯ 14 ದಿನ. ಇದೀಗ ಚಂದ್ರನಲ್ಲಿ ಕತ್ತಲ ಸಮಯ ಸಮೀಪಿಸುತ್ತಿದೆ. ಚಂದ್ರನ ಮೇಲಿನ ಒಂದು ಕತ್ತಲ ರಾತ್ರಿ ಭೂಮಿಯಲ್ಲಿ 2 ದಿನ. ಇದೀಗ ಎರಡು ದಿನ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಎರಡನ್ನೂ ಸ್ಲೀಪ್ ಮೂಡ್‌ಗೆ ಜಾರಲಿದೆ.
ನವದೆಹಲಿ(ಸೆ.02) ಚಂದ್ರಯಾನ ಯಶಸ್ವಿಯಾಗಿ ಚಂದ್ರನ ಮೇಲೆ ಅಧ್ಯಯನ ನಡೆಸುತ್ತಿದೆ. ಇತ್ತ ಶ್ರೀಹರಿಕೋಟಾದಿಂದ ಆದಿತ್ಯ ಎಲ್-1 ಉಡಾವಣೆಗೊಂಡಿದೆ. ಸೂರ್ಯನತ್ತ ಹೊರಟಿರುವ ನೌಕೆ ಬಾಹ್ಯಾಕಾಶದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಇತ್ತ ಚಂದ್ರನ ಮೇಲೆ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ 100 ಮೀಟರ್ ಸಂಚರಿಸಿ ಹಲವು ಮಾಹಿತಿಯನ್ನು ರವಾನಿಸಿದೆ. ಇದೀಗ ಚಂದ್ರನ ಮೇಲೆ ಕತ್ತಲ ಸಮಯ ಸಮೀಪಿಸುತ್ತಿದೆ. ಹೀಗಾಗಿ ಚಂದ್ರನ ಮೇಲೆ ಕಳೆದ 10 ದಿನಗಳಿಂದ ಸಂಚರಿಸುತ್ತಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಶೀಘ್ರದಲ್ಲೇ ನಿದ್ರೆಗೆ ಜಾರಲಿದೆ.
ಹೌದು, ಚಂದ್ರನ ಒಂದು ಹಗಲು ಎಂದರೆ ಭೂಮಿಯ 14 ದಿನ. ಇನ್ನು ನಾಲ್ಕು ದಿನದಲ್ಲಿ ಚಂದ್ರನ ಮೇಲೆ ಕತ್ತಲು ಆವರಿಸಲಿದೆ. ಬಿಸಿಲು ಮಾಯವಾಗಲಿದೆ. ಈ ವೇಳೆ ಚಂದ್ರನ ಮೇಲಿ ತಾಪಮಾನ 200 ಡಿಗ್ರಿ ಸೆಲ್ಸಿಶಿಸ್‌ಗಿಂತ ಕಡಿಮೆಕ್ಕೆ ಇಳಿಯಲಿದೆ. ಈ ತಾಪಮಾನವನ್ನು ತಡೆದುಕೊಳ್ಳುವ ಸಲವಾಗಿ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ನ್ನು ಸ್ಲೀಪ್ ಮೂಡ್‌ನಲ್ಲಿ ಇಡಲಾಗುವುದು ಎಂದು ಇಸ್ರೋ ಚೇರ್ಮನ್ ಎಸ್ ಸೋಮನಾಥ್ ಹೇಳಿದ್ದಾರೆ.
Chandrayaan-3: ಇಂಡೋ-ಪಾಕ್ ಮ್ಯಾಚ್‌ಗೂ ಮುಂಚೆ, ಚಂದ್ರನಲ್ಲಿ ಶತಕ ಬಾರಿಸಿದ ಪ್ರಗ್ಯಾನ್ ರೋವರ್!
ಚಂದ್ರನ ಮೇಲಿನ ಒಂದ ಕತ್ತಲ ರಾತ್ರಿ ಎಂದರೆ ಭೂಮಿಯ 2 ದಿನ. ಎರಡು ದಿನ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಸ್ಲೀಪ್ ಮೂಡ್‌ನಲ್ಲಿ ಇರಲಿದೆ. ಚಂದ್ರಯಾನ 3 ಮಿಷನ್ ಚಂದ್ರನ ಮೇಲೆ 14 ದಿನ ಅಧ್ಯಯನ ನಡೆಸುವುದೇ ಆಗಿದೆ. ಇದೀಗ 4 ದಿನಗಳು ಬಾಕಿ ಉಳಿದಿದೆ. ಈಗಾಗಲೇ ಚಂದ್ರನ ಮೇಲಿನ ತಾಪಮಾನ, ಚಂದ್ರನಲ್ಲಿರುವ ಕುಳಿ, ಸಲ್ಫರ್ ಸೇರಿದಂತೆ ಹಲವು ಧಾತುಗಳ ಕುರಿತು ಮಾಹಿತಿಯನ್ನು ಇಸ್ರೋಗೆ ಕಳುಹಿಸಿದ.
ಇದೀಗ 100 ಮೀಟರ್ ಸಂಚರಿಸಿರುವ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಶತಕ ಬಾರಿಸಿದ ಸಂಭ್ರಮದಲ್ಲಿದೆ. ಚಂದ್ರನ ಮೇಲ್ಮೈ ಸಮೀಪದಲ್ಲೇ ಕಡಿಮೆ ಪ್ರಮಾಣದ ಪ್ಲಾಸ್ಮಾ (ಅಯಾನೀಕೃತ ಅನಿಲ) ವಾತಾವರಣ ಇರುವುದನ್ನು ಪತ್ತೆ ಹಚ್ಚಿದೆ. ಇದರಿಂದ ಚಂದ್ರನಿಂದ ಭೂಮಿಗೆ ಸಂವಹನ ಪ್ರಕ್ರಿಯೆ ಇದರಿಂದ ಮತ್ತಷ್ಟುಸುಲಲಿತ ಆಗಬಹುದು ಎಂದು ಆಶಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ‘ರೇಡಿಯೋ ಅನಾಟಮಿ ಆಫ್ ಮೂನ್ ಬೌಂಡ್ ಹೈಪರ್‌ಸೆನ್ಸೆಟಿವ್ ಲೋನೋಸ್ಪಿಯರ್ ಆ್ಯಂಡ್ ಅಟ್‌ಮಾಸ್ಪಿಯರ್- ಲ್ಯಾಂಗ್‌ಮುಯಿರ್ ಪ್ರೋಬ್ (ಆರ್‌ಎಎಂಬಿಎಚ್-ಎಲ್‌ಪಿ) ಉಪಕರಣವು, ಚಂದ್ರನ ಮೇಲ್ಮೈಗೆ ಸಮೀಪದ ಪ್ರದೇಶದಲ್ಲಿ ಮೊತ್ತಮೊದಲ ಬಾರಿಗೆ ಲೂನಾರ್ ಪ್ಲಾಸ್ಮಾ ಪರಿಸರವನ್ನು ಪತ್ತೆ ಹಚ್ಚಿದೆ’ ಎಂದು ಹೇಳಿದೆ.
Aditya-L1 Mission: ನಿಗದಿತ ಕಕ್ಷೆ ಸೇರಿದ ಆದಿತ್ಯ ಎಲ್1, ನೌಕೆಯಿಂದ ಬೇರ್ಪಟ್ಟ ಉಪಗ್ರಹ!
ಲೇಸರ್ ಇನ್‌ಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್’ (ಲಿಬ್ಸ್) ಗಂಧಕ ಸೇರಿ ವಿವಿಧ ವಸ್ತುಗಳ ಇರುವಿಕೆಯನ್ನು ಖಚಿತಪಡಿಸಿತ್ತು. ಈಗ ರೋವರ್‌ನಲ್ಲಿನ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪ್ (ಎಪಿಎಕ್ಸ್‌ಎಸ್) ಚಂದ್ರನಲ್ಲಿ ಸಲ್ಫರ್ ಇರುವಿಕೆಯನ್ನು ಖಚಿತಪಡಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರ ಜೊತೆಗೆ ಅಲ್ಯುಮಿನಿಯಂ, ಕ್ಯಾಲ್ಷಿಯಂ, ಕಬ್ಬಿಣದ ಮೊದಲಾದ ವಸ್ತುಗಳನ್ನು ಕೂಡಾ ಪತ್ತೆ ಹಚ್ಚಿದೆ.