ಶೆಫ್‌ಗಳ ಮೀರಿಸಿದ ಕೈದಿಗಳು: ಬುಲಂದ್‌ಶಹರ್‌ನ ಜೈಲಿನ ಆಹಾರ ಶೈಲಿಗೆ ಫೈವ್ ಸ್ಟಾರ್ ರೇಟಿಂಗ್

ಇತ್ತೀಚೆಗಷ್ಟೇ ವಿಶ್ವದ ಅತ್ಯುತ್ತಮ ಪಾಕಪದ್ಧತಿಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ ಸಿಕ್ಕಿತ್ತು. ಈ ಮಧ್ಯೆ  ಉತ್ತರಪ್ರದೇಶದ ಬುಲಂದ್‌ಶಹರ್ ಜೈಲಿನ ಆಹಾರದ ಗುಣಮಟ್ಟಕ್ಕೆ ಫೈವ್ ಸ್ಟಾರ್ ರೇಟಿಂಗ್ ಸಿಕ್ಕಿದೆ.

Bulandshahr prison in Uttar Pradesh has been awarded a five star rating by FSSAI akb

ಉತ್ತರಪ್ರದೇಶ: ಇತ್ತೀಚೆಗಷ್ಟೇ ವಿಶ್ವದ ಅತ್ಯುತ್ತಮ ಪಾಕಪದ್ಧತಿಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ ಸಿಕ್ಕಿತ್ತು. ಈ ಮಧ್ಯೆ  ಉತ್ತರಪ್ರದೇಶದ ಬುಲಂದ್‌ಶಹರ್ ಜೈಲಿನ ಆಹಾರದ ಗುಣಮಟ್ಟಕ್ಕೆ ಫೈವ್ ಸ್ಟಾರ್ ರೇಟಿಂಗ್ ಸಿಕ್ಕಿದೆ. ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (Food Safety and Standard Authority of India) ಬುಲಂದ್‌ಶಹರ್ ಜೈಲಿನ ಆಹಾರ ಗುಣಮಟ್ಟಕ್ಕೆ ಫೈವ್ ಸ್ಟಾರ್ ಮಾನ್ಯತೆ ನೀಡುವ ಜೊತೆ ಸರಿಯಾದ ಕ್ಯಾಂಪಸ್‌ನಲ್ಲಿ ತಿನ್ನಿ (Eat Right Campus) ಎಂಬ ಟ್ಯಾಗ್‌ಲೈನ್ ನೀಡಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿರುವ ಜೈಲು ಅಧಿಕಾರಿಗಳು ಇದಕ್ಕಾಗಿ ಕೈದಿಗಳು ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಸ್ವಚ್ಛತೆ ಹಾಗೂ ಆಹಾರ ಸುರಕ್ಷತೆಯ ಭಾಗವಾಗಿ ಆಹಾರ ತಯಾರಿ ವೇಳೆ ಕೈದಿಗಳು ಶುದ್ಧವಾದ ಅಪ್ರನ್ ಧರಿಸಿದ್ದರು. ಜೊತೆಗೆ ಕೈ ಕಾಣಿಸದಂತೆ ಕೈಗವಸುಗಳನ್ನು ತಲೆಗೆ ಟೋಪಿಯನ್ನು (cap) ಕೂಡ ಧರಿಸಿದ್ದರು ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. 

ಬುಲಂದ್‌ಶಹರ್ ಜೈಲು (Bulandshahr jail) ಈ ರೀತಿ ಆಹಾರ ಗುಣಮಟ್ಟಕ್ಕೆ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದಿಂದ ಫೈವ್ ಸ್ಟಾರ್ ಮಾನ್ಯತೆ ಪಡೆದ ಉತ್ತರಪ್ರದೇಶದ ಎರಡನೇ ಜೈಲು ಆಗಿದ್ದು, ಇದಕ್ಕೂ ಮೊದಲು ಫಾರೂಕ್‌ಬಾದ್‌ನ ಜೈಲು (Farrukhabad jail) ಈ ಸ್ಥಾನಮಾನ ಗಿಟ್ಟಿಸಿಕೊಂಡಿತ್ತು. ಈ ರೇಟಿಂಗ್ ನೀಡುವ ಮೊದಲು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ತಂಡವೂ ಅಡುಗೆಮನೆಯ ಆಹಾರದ ಗುಣಮಟ್ಟ, ಸಂಗ್ರಹಣೆ ಮತ್ತು ನೈರ್ಮಲ್ಯದ ಬಗ್ಗೆ ಪರಿಶೀಲನೆ ನಡೆಸಿತ್ತು. ಇದಾದ ಬಳಿಕ ಜೈಲಿನಲ್ಲಿ ಆಹಾರ ತಯಾರಿ ವೇಳೆ ಸ್ವಚ್ಛತೆ ಗಮನಿಸಿದ ತಂಡ ಎಕ್ಸಲೆಂಟ್ ಎಂಬ ಹೊಗಳಿಕೆಯ ಜೊತೆ ಈಟ್ ರೈಟ್ ಕ್ಯಾಂಪಸ್ ಎಂಬ ಟ್ಯಾಗ್‌ಲೈನ್ ನೀಡಿದೆ. 

ಇದು ತಿನ್ನುವಾಗಲೂ ಧರಿಸಬಹುದಾದ ಮಾಸ್ಕ್‌ ! ವಿಡಿಯೋ ವೈರಲ್‌

ಅತ್ಯುತ್ತಮ ಪಾಕಪದ್ಧತಿಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ

ಭಾರತೀಯ ಶೈಲಿಯ ಆಹಾರ ದೇಶ-ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ. ಇಂಡಿಯನ್ ಫುಡ್ ಅಂದ್ರೆ ವಿದೇಶಿಗರು ಸಹ ಇಷ್ಟಪಟ್ಟು ತಿನ್ತಾರೆ. ಹೀಗಾಗಿಯೇ ವಿದೇಶಗಳಲ್ಲಿರುವ ಭಾರತೀಯ ರೆಸ್ಟೋರೆಂಟ್‌ಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರ್ತಾರೆ. ಭಾರತದ ವಿವಿಧ ತಿನಿಸುಗಳನ್ನು ಸವಿದು ಖುಷಿ ಪಡುತ್ತಾರೆ. ಭಾರತಕ್ಕೆ ಬರುವ ಪ್ರವಾಸಿಗರು (Tourists) ಸಹ ಇಲ್ಲಿನ ಅತ್ಯುತ್ತಮ ಆಹಾರಪದ್ಧತಿಗೆ ವಾವ್ಹ್ ಅಂತಾರೆ. ಹೀಗಿರುವಾಗ ಭಾರತೀಯ ಪಾಕಪದ್ಧತಿ ಇನ್ನೊಂದು ಹೊಸ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಶ್ವದ ಅತ್ಯುತ್ತಮ ಪಾಕಪದ್ಧತಿಗಳ (Cuisine) ಪಟ್ಟಿಯಲ್ಲಿ ಭಾರತದ ಪಾಕಪದ್ಧತಿಯು ಐದನೇ ಸ್ಥಾನದಲ್ಲಿದೆ. ಇದು ಜಗತ್ತಿನಾದ್ಯಂತ ಹಲವು ಆಹಾರಗಳು (Food) ಮತ್ತು ಪಾನೀಯಗಳನ್ನು (Drinks) ಆಧರಿಸಿ ಜನರು ನೀಡಿದ ಮತವನ್ನು ಆಧರಿಸಿ ಆಯ್ಕೆಯಾಗಿದೆ. ಗ್ರೀಸ್ ಮತ್ತು ಸ್ಪೇನ್ ನಂತರ ಇಟಲಿಯ ಆಹಾರವು ಮೊದಲ ಸ್ಥಾನದಲ್ಲಿದೆ. ಭಾರತವು 4.54 ಅಂಕಗಳನ್ನು ಪಡೆದುಕೊಂಡಿದೆ ಮತ್ತು ದೇಶದ ಅತ್ಯುತ್ತಮ ರೇಟ್ ಮಾಡಿದ ಆಹಾರ ಎಂದು ಕರೆಸಿಕೊಂಡಿದೆ. ಅತ್ಯುತ್ತಮ ಆಹಾರಗಳಲ್ಲಿ ಗರಂ ಮಸಾಲಾ, ಮಲೈ, ತುಪ್ಪ, ಬೆಣ್ಣೆ ಬೆಳ್ಳುಳ್ಳಿ ನಾನ್, ಕೀಮಾಸೇರಿವೆ ಎಂದು ತಿಳಿದುಬಂದಿದೆ. ಆಹಾರಪಟ್ಟಿಯಲ್ಲಿ ಒಟ್ಟು 460 ಐಟಂಗಳಿದ್ದವು. ಇದಲ್ಲದೆ, ಭಾರತೀಯ ಪಾಕಪದ್ಧತಿಯನ್ನು ಪ್ರಯತ್ನಿಸಲು ಅತ್ಯುತ್ತಮ ರೆಸ್ಟೋರೆಂಟ್‌ಗಳೆಂದರೆ ಶ್ರೀ ಠಾಕರ್ ಭೋಜನಲೇ (ಮುಂಬೈ), ಕರವಲ್ಲಿ (ಬೆಂಗಳೂರು), ಬುಖಾರಾ (ಹೊಸದಿಲ್ಲಿ), ದಮ್ ಪುಖ್ತ್ (ಹೊಸದಿಲ್ಲಿ), ಕೊಮೊರಿನ್ (ಗುರುಗ್ರಾಮ್) ಮತ್ತು 450 ಇತರ ಉರಿನವುಗಳು ಎಂದು ಸೂಚಿಸಲಾಗಿದೆ.

ಆನಲೈನ್‌ ಫುಡ್‌ ಆರ್ಡರ್ ಮಾಡುವ ಮುನ್ನ ಇದು ತಿಳಿದಿರಿ

ಚೈನೀಸ್ ಪಾಕಪದ್ಧತಿಗೆ ಪಟ್ಟಿಯಲ್ಲಿ 11ನೇ ಸ್ಥಾನ
ಜಪಾನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ತುರ್ಕಿಯೆ, ಫ್ರಾನ್ಸ್ ಮತ್ತು ಪೆರು ಕೂಡ ಅತ್ಯುತ್ತಮ ಪಾಕಪದ್ಧತಿಯನ್ನು ಹೊಂದಿರುವ ಟಾಪ್ 10 ದೇಶಗಳಲ್ಲಿ ಸೇರಿವೆ. ಪ್ರಪಂಚದ ಅತ್ಯಂತ ಜನಪ್ರಿಯವಾಗಿರುವ ಚೈನೀಸ್ ಪಾಕಪದ್ಧತಿಯು ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದೆ. ಪಟ್ಟಿಯೊಂದಿಗಿನ ಈ ಟ್ವೀಟ್ ಅಂತರ್ಜಾಲದಲ್ಲಿ 15,000 ಕ್ಕೂ ಹೆಚ್ಚು ಕಾಮೆಂಟ್‌ಗಳೊಂದಿಗೆ 36 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.

Latest Videos
Follow Us:
Download App:
  • android
  • ios