ಜ್ಯೋತಿರ್ಲಿಂಗ ಸರಣಿ; ಭೀಮನಿಗೂ ಶಿವನಿಗೂ ಭೀಕರ ಯುದ್ಧ, ಗೆದ್ದೋರ್ಯಾರು?

12 ಮಹಾ ಜ್ಯೋತಿರ್ಲಿಂಗಗಳಲ್ಲೊಂದು ಭೀಮಶಂಕರ ಜ್ಯೋತಿರ್ಲಿಂಗ. ಇದು ಎಲ್ಲಿದೆ, ಏನಿದರ ಐತಿಹ್ಯ ತಿಳಿಯೋಣ..

There was a fierce battle between Bhima and Lord Shiva story of Bhimashankar Jyotirlinga skr

ಶ್ರಾವಣ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದುದು. ಈ ಶ್ರಾವಣ ಮಾಸದಲ್ಲಿ ಶಂಕರನ ಆರಾಧನೆಗೆ ವಿಶೇಷ ಮಹತ್ವವಿದೆ. ಶ್ರಾವಣ ಮಾಸದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಂಕರನನ್ನು ಪೂಜಿಸುವುದು ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ಸಂದರ್ಭದಲ್ಲಿ ನಾವು ಜ್ಯೋತಿರ್ಲಿಂಗಗಳ ಬಗ್ಗೆ ಭಕ್ತರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಜ್ಯೋತಿರ್ಲಿಂಗ ಸರಣಿಯಲ್ಲಿ ಎರಡನೆಯದು ಭೀಮಾಶಂಕರ ಜ್ಯೋತಿರ್ಲಿಂಗ. ಇದು ಎಲ್ಲಿದೆ, ಏನಿದರ ಹಿಂದಿನ ಕತೆ ಎಲ್ಲವನ್ನೂ ತಿಳಿಯೋಣ. 

ಭೀಮಾಶಂಕರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಪುಣೆಯಿಂದ ಸುಮಾರು 110 ಕಿಮೀ ದೂರದಲ್ಲಿರುವ ಶಿರಾಧನ್ ಗ್ರಾಮದಲ್ಲಿದೆ. ಈ ದೇವಾಲಯದ ಬಳಿ ಭೀಮಾ ನದಿ ಹರಿಯುತ್ತದೆ. ಇಲ್ಲೇ ಉಗಮವಾಗುವ ಈ ನದಿ ಮುಂದೆ ಹೋಗಿ ಕೃಷ್ಣಾ ನದಿಯನ್ನು ಸೇರುತ್ತದೆ. ದೇವಾಲಯವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು 13ನೇ ಶತಮಾನದಲ್ಲಿ ನಿರ್ಮಾಣವಾಗಿದೆ. 

ದಂತಕಥೆಯ ಪ್ರಕಾರ, ರಾವಣನ ಸಹೋದರ ಕುಂಭಕರ್ಣ ಸಹಾದ್ರಿ ಪರ್ವತದಲ್ಲಿ ಕರ್ಕಟಿ ಎಂಬ ರಾಕ್ಷಸಿಯನ್ನು ಭೇಟಿಯಾದ. ಇಬ್ಬರೂ ಪರಸ್ಪರ ವಿವಾಹ(Marriage)ವಾದರು. ಮದುವೆಯ ನಂತರ, ಕುಂಭಕರ್ಣನು ಲಂಕೆಗೆ ಹಿಂದಿರುಗಿದನು. ಆದರೆ ಕರ್ಕಟಿ ಪರ್ವತದ ಮೇಲೆಯೇ ಇದ್ದಳು. ಕರ್ಕಟಿಯು ಮಗನಿಗೆ ಜನ್ಮ ನೀಡಿದಳು. ಈ ಮಗುವಿನ ಹೆಸರು ಭೀಮ. ತ್ರಿಪುರಾಸರ ಎಂದೂ ಕರೆಯಲಾಗುತ್ತದೆ. ಭಗವಾನ್ ರಾಮನು ಕುಂಭಕರ್ಣನನ್ನು ಕೊಂದನು. ಅದನ್ನರಿತ, ಕರ್ಕಟಿಯು ತನ್ನ ಮಕ್ಕಳನ್ನು ದೇವತೆಗಳಿಂದ ದೂರವಿರಿಸಲು ನಿರ್ಧರಿಸಿದಳು. ಬೆಳೆಯುತ್ತಾ, ಭೀಮನು ತನ್ನ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳಲು ಯೋಚಿಸಿದನು.

There was a fierce battle between Bhima and Lord Shiva story of Bhimashankar Jyotirlinga skr

ನಾಳೆ ಕಾಮಿಕಾ ಏಕಾದಶಿ; ವಿಷ್ಣು ಕೃಪೆಗಾಗಿ ನೀವೇನು ಮಾಡಬೇಕು? ಏನು ಮಾಡಕೂಡದು?

ಬ್ರಹ್ಮದೇವನ ವರ(boon) ಪಡೆದ
ಭೀಮನು ತಂದೆಯ ಸಾವಿನ ಸೇಡು ತೀರಿಸಿಕೊಳ್ಳಲು ಶಕ್ತಿಶಾಲಿಯಾಗಲಪ ಬ್ರಹ್ಮದೇವನಿಗೆ ತಪಸ್ಸು ಮಾಡಿ, ಅವನಿಂದ ವರ ಪಡೆದನು. ನಂತರ ತನ್ನ ವರಬಲದಿಂದಾಗಿ ಎಲ್ಲ ದೇವತೆಗಳು, ದೈವಭಕ್ತರ ಮೇಲೆ ಹರಿಹಾಯ ತೊಡಗಿದನು. ಅವನು ರಾಜ ಇಂದ್ರನನ್ನು ಪರಾಭವಗೊಳಿಸಿ ಸ್ವರ್ಗವನ್ನು ವಶಪಡಿಸಿಕೊಂಡನು. ಈ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಒಬ್ಬ ರಾಜ ಕಾಮರೂಪೇಶ್ವರನಿದ್ದನು. ಅವನು ಭಗವಾನ್ ಶಿವ(Lord Shiva)ನ ಮಹಾನ್ ಆರಾಧಕನಾಗಿದ್ದನು. ಒಂದು ದಿನ ಭೀಮನು ಕಾಮೇಶ್ವರರೂಪ ರಾಜನು ಭೋಲೇನಾಥನನ್ನು ಪೂಜಿಸುವುದನ್ನು ನೋಡಿದನು. ಅವನು ರಾಜನನ್ನು ಸೆರೆ ಹಿಡಿದು ಜೈಲಿಗೆ ಹಾಕಿದನು. ಆದರೆ ರಾಜನು ಜೈಲಿನಲ್ಲಿಯೇ ಶಿವಲಿಂಗವನ್ನು ಮಾಡಿ ಶಂಕರನನ್ನು ಪೂಜಿಸಲು ಪ್ರಾರಂಭಿಸಿದನು. ಈ ವಿಷಯ ತಿಳಿದ ಭೀಮನು ರಾಜನು ನಿರ್ಮಿಸಿದ ಶಿವಲಿಂಗವನ್ನು ಖಡ್ಗದ ಸಹಾಯದಿಂದ ಒಡೆಯಲು ಪ್ರಯತ್ನಿಸಿದನು. ಪರಿಣಾಮವಾಗಿ, ಮಹಾದೇವ, ಅಲ್ಲಿ ಪ್ರತ್ಯಕ್ಷನಾದನು. 

ರಾಕ್ಷಸರ ರಕ್ತ ಹೀರುವ ಕಾಳಿ ದೇವಿಯ ನಾಲಿಗೆ!

ಘೋರ ಯುದ್ಧ(War)
ಭೀಮ ಮತ್ತು ಭಗವಾನ್ ಶಂಕರರ ನಡುವೆ ಭೀಕರ ಯುದ್ಧವು ನಡೆಯಿತು. ಕೊನೆಯಲ್ಲಿ ಶಿವನು ಭೀಮನನ್ನು ಕೊಂದನು. ನಂತರ ದೇವತೆಗಳು ಶಿವನನ್ನು ಅದೇ ಸ್ಥಳದಲ್ಲಿ ಇರುವಂತೆ ಒತ್ತಾಯಿಸಿದರು. ದೇವತೆಗಳ ಆಜ್ಞೆಯ ಮೇರೆಗೆ ಶಿವನನ್ನು ಶಿವಲಿಂಗದ ರೂಪದಲ್ಲಿ ಸ್ಥಾಪಿಸಲಾಯಿತು. ಅದೇ ಸ್ಥಳ ಮಹಾರಾಷ್ಟ್ರದ ಶಿರಾಧನ್. ಭೀಮನೊಂದಿಗಿನ ಯುದ್ಧದ ಕಾರಣ, ಈ ಜ್ಯೋತಿರ್ಲಿಂಗಕ್ಕೆ ಭೀಮಾಶಂಕರ ಜ್ಯೋತಿರ್ಲಿಂಗ ಎಂದು ಹೆಸರಿಸಲಾಯಿತು. ಅಲ್ಲದೆ, ಈ ದೇವಾಲಯವು ಭೀಮಾ ನದಿ ತೀರದಲ್ಲಿರುವುದೂ ಕೂಡಾ ಈ ಹೆಸರಿಗೆ ಕಾರಣ. ಇವರಿಬ್ಬರ ನಡುವೆ ಯುದ್ಧ ನಡೆಯುವಾಗ ನೆಲಕ್ಕೆ ಬಿದ್ದ ಬೆವರಿನಿಂದ ಭೀಮಾ ನದಿಯ ಉಗಮವಾಯಿತು ಎಂಬ ನಂಬಿಕೆ ಇದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios