ಗುರುವಾಯೂರು ದೇವಾಲಯದ ಕುರಿತ ಆಸಕ್ತಿಕರ ಸಂಗತಿಗಳಿವು..
ಕೇರಳದ ಗುರುವಾಯೂರ್ ಶ್ರೀ ಕೃಷ್ಣ ದೇವಾಲಯವು ಭಾರತದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಬಹಳಷ್ಟು ಪವಾಡಗಳಿಗೆ ಸಾಕ್ಷಿಯಾಗಿರುವ ಈ ದೇವಾಲಯದ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ.
ದಕ್ಷಿಣ ಭಾರತ(South India)ವು ಹಲವಾರು ಭವ್ಯವಾದ ದೇವಾಲಯಗಳಿಗೆ ನೆಲೆಯಾಗಿದೆ. ಇವುಗಳಲ್ಲಿ ಕೆಲ ದೇವಾಲಯಗಳು ಪ್ರಪಂಚದಲ್ಲೇ ಅತ್ಯಂತ ಶ್ರೀಮಂತವಾಗಿವೆ, ಇವುಗಳು ತಮ್ಮ ಅದ್ಭುತ ವಾಸ್ತುಶಿಲ್ಪ ಅಥವಾ ಕುತೂಹಲಕಾರಿ ಇತಿಹಾಸಕ್ಕಾಗಿ ಜನಪ್ರಿಯವಾಗಿವೆ. ಕೇರಳ(Kerala), ನಿರ್ದಿಷ್ಟವಾಗಿ, ಹಿಂದೂ ಭಕ್ತರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಹಲವಾರು ದೇವಾಲಯಗಳನ್ನು ಹೊಂದಿದೆ. ಅಂಥ ಒಂದು ದೇವಾಲಯವೆಂದರೆ ಗುರುವಾಯೂರ್ ದೇವಾಲಯ(Guruvayur temple).
ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಗುರುವಾಯೂರ್ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಕೇರಳದ ದೇವಾಲಯಗಳಲ್ಲಿ ಒಂದಾಗಿದೆ. ಕೇರಳದ ಗುರುವಾಯೂರ್ ದೇವಾಲಯದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
ಗುರುವಾಯೂರ್ ದೇವಾಲಯವು ಪೂಜ್ಯ ಹಿಂದೂ ದೇವತೆಯಾದ ವಿಷ್ಣು(Vishnu)ವಿನ ರೂಪವಾದ ಗುರುವಾಯೂರಪ್ಪನ್‌ಗೆ ಸಮರ್ಪಿತವಾಗಿದೆ. ಆದ್ದರಿಂದ ಈ ದೇವಾಲಯವನ್ನು ಗುರುವಾಯೂರು ಶ್ರೀಕೃಷ್ಣ ದೇವಾಲಯ(Sri Krishna temple) ಎಂದೂ ಕರೆಯುತ್ತಾರೆ. ಭಗವಾನ್ ವಿಷ್ಣುವಿನ ಗುರುವಾಯೂರ್ ರೂಪವು ನಾಲ್ಕು ತೋಳುಗಳನ್ನು ಹೊಂದಿದ್ದು, ಒಂದು ಶಂಖ ಪಾಂಚಜನ್ಯವನ್ನು ಹೊತ್ತಿದೆ, ಇನ್ನೊಂದು ಕೈ ಸುದರ್ಶನ ಚಕ್ರವನ್ನು ಹೊತ್ತಿದೆ, ಮಗದೊಂದು ಗದೆಯನ್ನು ಹೊತ್ತಿದ್ದರೆ ಕೊನೆಯದು ಪವಿತ್ರ ತುಳಸಿ ಮಾಲೆಯೊಂದಿಗೆ ಕಮಲವನ್ನು ಹೊಂದಿದೆ.
ಕೃಷ್ಣನ ಗುರುವಾಯೂರಪ್ಪನ ರೂಪವು ಭಗವಾನ್ ವಿಷ್ಣುವಿನ ರೂಪವಾಗಿದೆ ಎಂದು ಕೃಷ್ಣನ ತಂದೆಯಾದ ವಸುದೇವ ಮತ್ತು ದೇವಕಿಯು ಅವನ ಜನನದ ಸಮಯದಲ್ಲಿ ನೋಡಿದರು. ಆದ್ದರಿಂದ, ಗುರುವಾಯೂರು 'ದಕ್ಷಿಣ ಭಾರತದ ದ್ವಾರಕಾ' ಎಂಬ ಬಿರುದನ್ನು ಗಳಿಸಿದೆ. ದ್ವಾರಕಾ ಉತ್ತರ ಭಾರತದ ಪುರಾತನ ನಗರವಾಗಿದ್ದು, ಕೃಷ್ಣನು ಜನಿಸಿದನೆಂದು ನಂಬಲಾಗಿದೆ.
ಸಂಖ್ಯೆ 2; ಇವರ ಸ್ವಭಾವ ಹೇಗಿರುತ್ತೆ? ಅದೃಷ್ಟದ ಬಣ್ಣ ಯಾವುದು?
ಈ ದೇವಾಲಯದಲ್ಲಿ ಮೆಸಂತಿ ಎಂದು ಕರೆಯಲ್ಪಡುವ ಮುಖ್ಯ ಅರ್ಚಕರು ಪ್ರಾರ್ಥನೆ ಮತ್ತು ಆಚರಣೆಗಳಿಗೆ ಪೂರ್ಣ ಸಮಯ ಲಭ್ಯವಿರುತ್ತಾರೆ. ಪುರೋಹಿತರು ಮುಂಜಾನೆಯೇ ಗರ್ಭಗುಡಿಯನ್ನು ತೆರೆಯುತ್ತಾರೆ ಮತ್ತು ಮಧ್ಯಾಹ್ನದ ಪ್ರಾರ್ಥನೆಯ ವಿಧಿವಿಧಾನಗಳು ಪೂರ್ಣಗೊಳ್ಳುವವರೆಗೆ ಉಪವಾಸವನ್ನು ಆಚರಿಸುತ್ತಾರೆ.
ಗುರುವಾಯೂರ್ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಆರಂಭಿಕ ದೇವಾಲಯದ ದಾಖಲೆಗಳು 17ನೇ ಶತಮಾನಕ್ಕೆ ಸೇರಿವೆ. ಆದರೆ ಇತರ ಸಾಹಿತ್ಯ ಗ್ರಂಥಗಳು ಮತ್ತು ದಂತಕಥೆಗಳು ದೇವಾಲಯವು ಸುಮಾರು 5000 ವರ್ಷಗಳಷ್ಟು ಹಳೆಯದಾಗಿದೆ ಎಂದು ಸೂಚಿಸುತ್ತದೆ. ಪುರಾತನ ಗ್ರಂಥಗಳ ಪ್ರಕಾರ, ಗುರುವಾಯೂರ್ ದೇವಾಲಯದ ಮುಖ್ಯ ದೇವಾಲಯವನ್ನು ಡಚ್ ಮತ್ತು ಟಿಪ್ಪು ಸುಲ್ತಾನರು ಪದೇ ಪದೇ ಲೂಟಿ ಮಾಡಿದ ನಂತರ 1630ರಲ್ಲಿ ಇದನ್ನು ಪುನರ್ನಿರ್ಮಿಸಲಾಯಿತು. ಈ ದೇವಾಲಯವು 1298ರಲ್ಲಿ ಕ್ಯಾಲಿಕಟ್ನ ಝಮೋರಿನ್ ಆಡಳಿತಕ್ಕೆ ಬಂದಿತು. ಅಂದಿನಿಂದ, ಇಲ್ಲಿ ನಡೆದ ಅನೇಕ ಪವಾಡಗಳ ಬಗ್ಗೆ ಮಲಯಾಳಂನಲ್ಲಿ ವ್ಯಾಪಕವಾಗಿ ಬರೆಯಲಾಗಿದೆ.
ಗುರುವಾಯೂರ್ ದೇವಾಲಯಕ್ಕೆ ಪ್ರವೇಶಿಸಲು ಅತ್ಯಂತ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಹೊಂದಿದೆ. ಪುರುಷರು ಮುಂಡು ಅಥವಾ ಹುಡುಗರು ಶಾರ್ಟ್ಸ್ ಅನ್ನು ಮಾತ್ರ ಧರಿಸಬಹುದು. ವೇಷ್ಟಿ ಎಂಬ ಸಣ್ಣ ಬಟ್ಟೆಯ ಹೊರತಾಗಿ ದೇಹದ ಮೇಲ್ಭಾಗದಲ್ಲಿ ಏನನ್ನು ಧರಿಸುವುದನ್ನೂ ನಿಷೇಧಿಸಲಾಗಿದೆ. ಇತ್ತೀಚಿನವರೆಗೂ ಮಹಿಳೆಯರಿಗೆ ಸೀರೆಗಳನ್ನು ಮಾತ್ರ ಧರಿಸಲು ಅವಕಾಶವಿತ್ತು ಮತ್ತು ಈಗ ನಿಯಮಗಳು ಸ್ವಲ್ಪ ಸಡಿಲಗೊಂಡಿದ್ದು ಸಲ್ವಾರ್ ಕಮೀಜ್ ಅನ್ನು ಸಹ ಸ್ವೀಕಾರಾರ್ಹಗೊಳಿಸಲಾಗಿದೆ.
ಮನೆಯಲ್ಲಿ ನಾಯಿ ಇದ್ದರೆ ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ!
ದೇವಾಲಯಕ್ಕೆ ಸೇರಿದ ಸುಮಾರು 56 ಆನೆಗಳಿವೆ. ಅವು ಪುನ್ನತ್ತೂರ್ ಕೊಟ್ಟ ಆನೆ ಅಂಗಳದಲ್ಲಿ ವಾಸಿಸುತ್ತವೆ. ಇದು ಅತಿ ಹೆಚ್ಚು ಗಂಡು ಏಷ್ಯನ್ ಆನೆಗಳನ್ನು ಹೊಂದಿದ ನೆಲೆಯಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.