ಕಮಂಡಲ ಗಣಪತಿ ದೇವಸ್ಥಾನ: ಇಲ್ಲಿ ತೀರ್ಥಸ್ನಾನ ಮಾಡುವುದರಿಂದ ಶನಿದೋಷ ಪರಿಹಾರ!
ಈ ದೇಗುಲದಿಂದ 18 ಕಿ.ಮೀ. ದೂರದ ಮೃಗವಧೆ ಎಂಬಲ್ಲಿ ತಪ್ಪಸ್ಸು ಮಾಡಿದ ಪಾರ್ವತಿ ದೇವಿ, ತಪ್ಪಸ್ಸಿನ ಬಳಿಕ ವಿಘ್ನೇಶ್ವರನ ಪೂಜೆ ಮಾಡಲು ನೀರಿಲ್ಲ ಎಂದಾಗ ಬ್ರಹ್ಮ ಬಾಣ ಬಿಟ್ಟು ಪಾರ್ವತಿಯ ಪೂಜೆಗಾಗಿ ನೀರು ತರಿಸಿದ ಸ್ಥಳ. ಅಂದಿನಿಂದಲೂ ಇಲ್ಲಿ ನೀರು ನಿಂತಿಲ್ಲ. ಬ್ರಹ್ಮನ ಬಾಣದಿಂದ ಕಮಲದ ಹೂವಿನ ಆಕಾರದಲ್ಲಿ ಮೂಡಿದ ನೀರಿನ ಬುಗ್ಗೆ ಇಂದಿಗೂ ಅದೇ ಆಕಾರದಲ್ಲಿ ಹರಿಯುತ್ತಿರೋದ್ರಿಂದ ಕಾಲ ಕ್ರಮೇಣ ಕಮಂಡಲ ಗಣಪತಿ ದೇಗುಲವಾಯ್ತು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.17) : ನಮ್ಮ ರಾಜ್ಯದಲ್ಲಿ ಸಾಕಷ್ಟು ಗಣೇಶನ ದೇವಸ್ಥಾನಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆಗಳಿವೆ. ಇವುಗಳಲ್ಲಿ ಚಿಕ್ಕಮಗಳೂರಿನ ಕೊಪ್ಪದಲ್ಲಿರುವ ಕಮಂಡಲ ಗಣಪತಿ ದೇವಸ್ಥಾನವೂ ಒಂದು. ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ನೆಲೆ ನಿಂತಿರುವ ಈ ಗಣೇಶ ಪವಾಡವನ್ನು ಸೃಷ್ಟಿಸುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಬಹಳ ಸೋಜಿಗಗಳನ್ನು ಹೊಂದಿರುವ ಈ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಶನಿ ಕಾಟದಿಂದ ಮುಕ್ತಿ ಹೊಂದಲು ಬಂದ ಸ್ಥಳ :
ಕಮಂಡಲ ಗಣಪತಿ ದೇವಸ್ಥಾನವು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಕೆಸವೆ ಗ್ರಾಮದಲ್ಲಿದೆ.ಸಾವಿರಾರು ವರ್ಷಗಳ ಇತಿಹಾಸದ ಜೊತೆಗೆ ಹಲವು ಅಚ್ಚರಿಗೆ ಕಾರಣವಾಗಿರುವ ದೇವಸ್ಥಾನ. ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ನೆಲೆ ನಿಂತಿರುವ ಈ ಗಣೇಶ ಪವಾಡವನ್ನು ಸೃಷ್ಟಿಸುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಬಹಳ ಸೋಜಿಗಗಳನ್ನು ಹೊಂದಿರುವ ಈ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನವು ಕೊಪ್ಪ ಬಸ್ ನಿಲ್ದಾಣದಿಂದ 4 ಕಿ.ಮಿ. ದೂರದಲ್ಲಿದೆ.ಇಲ್ಲಿನ ಸ್ಥಳಪುರಾಣದಂತೆ ಒಮ್ಮೆ ಶನಿದೇವನ ಕಾಟದಿಂದ ಪಾರಾಗಲು ಪಾರ್ವತಿ ದೇವಿಯು ಭೂಮಿಗಿಳಿದು ಬಂದು, ಮೈಗವಧೆ ಎಂಬಲ್ಲಿ ತಪಸ್ಸು ಮಾಡುತ್ತಾಳೆ. ಅಲ್ಲಿಂದ ಈ ದೇವಾಲಯವಿರುವ ಸ್ಥಳಕ್ಕೆ ಬಂದು ಗಣೇಶನಿಗೆ ಪೂಜೆ ಮಾಡಲು ಸಿದ್ಧಳಾಗುತ್ತಾಳೆ. ಆದರೆ ಪೂಜೆಗೆ ನೀರಿರುವುದಿಲ್ಲ. ನೀರಿಗಾಗಿ ಬ್ರಹ್ಮದೇವನನ್ನು ಬೇಡಿಕೊಂಡಾಗ, ಬ್ರಹ್ಮ ದೇವ ಭೂಮಿಗೆ ಬಾಣ ಹೊಡೆದು ನೀರು ಸೃಷ್ಟಿಸಿದನಂತೆ ಎಂಬುದು ಇಲ್ಲಿನ ಇತಿಹಾಸ. ಇದನ್ನೇ ಬ್ರಾಹ್ಮಿ ನದಿಯ ಉಗಮ ಸ್ಥಾನವೆಂತಲೂ ಹೇಳಲಾಗುತ್ತದೆ..
ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪುಗಳನ್ನೆಲ್ಲಾ ಮಾಡ್ಬೇಡಿ!
ಬ್ರಹ್ಮನ ಬಾಣದಿಂದ ಕಮಲದ ಆಕಾರದಲ್ಲಿ ಮೂಡಿದ ನೀರಿನ ಬುಗ್ಗೆ :
ಈ ದೇಗುಲದಿಂದ 18 ಕಿ.ಮೀ. ದೂರದ ಮೃಗವಧೆ ಎಂಬಲ್ಲಿ ತಪ್ಪಸ್ಸು ಮಾಡಿದ ಪಾರ್ವತಿ ದೇವಿ, ತಪ್ಪಸ್ಸಿನ ಬಳಿಕ ವಿಘ್ನೇಶ್ವರನ ಪೂಜೆ ಮಾಡಲು ನೀರಿಲ್ಲ ಎಂದಾಗ ಬ್ರಹ್ಮ ಬಾಣ ಬಿಟ್ಟು ಪಾರ್ವತಿಯ ಪೂಜೆಗಾಗಿ ನೀರು ತರಿಸಿದ ಸ್ಥಳ. ಅಂದಿನಿಂದಲೂ ಇಲ್ಲಿ ನೀರು ನಿಂತಿಲ್ಲ. ಬ್ರಹ್ಮನ ಬಾಣದಿಂದ ಕಮಲದ ಹೂವಿನ ಆಕಾರದಲ್ಲಿ ಮೂಡಿದ ನೀರಿನ ಬುಗ್ಗೆ ಇಂದಿಗೂ ಅದೇ ಆಕಾರದಲ್ಲಿ ಹರಿಯುತ್ತಿರೋದ್ರಿಂದ ಕಾಲ ಕ್ರಮೇಣ ಕಮಂಡಲ ಗಣಪತಿ ದೇಗುಲವಾಯ್ತು.ಬ್ರಾಹ್ಮಿ ನದಿಯ ಉಗಮ ಕೂಡ ಇದೇ ಅಂತೆ. ಮಳೆಗಾಲದಲ್ಲಿ ವಿಘ್ನೇಶ್ವರನ ಪಾದದ ತನಕವೂ ಉಕ್ಕೋ ನೀರು ಬೇಸಿಗೆಯಲ್ಲಿ ತುಸು ಕಡಿಮೆ ಹರಿಯುತ್ತೆ. ಆದ್ರೆ, ಇತಿಹಾಸದಿಂದಲೂ ನೀರು ಬತ್ತಿದ ಉದಾಹರಣೆಯೇ ಇಲ್ಲ. ಮಳೆಗಾಲದಲ್ಲಿ ತೀರ್ಥದ ನೀರು ಗಣೇಶನ ಪಾದದವರೆಗೆ ಬರುವುದು, ಈ ಪುರಾಣ ಪ್ರಸಿದ್ಧ ಗಣೇಶನಿಗೆ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದಲೇ ಭಕ್ತಾದಿಗಳು ಬರುತ್ತಾರೆ.
ಯೋಗ ಮುದ್ರೆಯಲ್ಲಿ ಕುಳಿತಿರುವ ಗಣಪ :
ಇಲ್ಲಿನ ಗಣೇಶ ಯೋಗ ಮುದ್ರೆ ಗಣಪ. ಚಕ್ಕಲು-ಬಕ್ಕಲು ಹಾಕಿಕೊಂಡು ಯೋಗಕ್ಕೆ ಕೂತಿರೋ ಭಂಗಿಯಲ್ಲಿದ್ದಾನೆ ಇಲ್ಲಿನ ವಿಘ್ನ ವಿನಾಶಕ. ಇಂತಹಾ ಅತ್ಯಾಪರೂಪ ಮೂರ್ತಿ ಸಿಗೋದು ತುಂಬಾ ವಿರಳವಂತೆ. ಅದು ಹೇಗೆಂದರೆ ಇಲ್ಲಿರುವ, ಗಣೇಶ, ಯೋಗ ಮುದ್ರೆಯಲ್ಲಿ ಕುಳಿತಿರುವುದು. ಈ ರೀತಿಯ ವಿಗ್ರಹ ಬೇರೆಯಾವ ದೇವಸ್ಥಾನದಲ್ಲಿಯೂ ನಮಗೆ ಕಾಣಸಿಗದು. ಹಾಗೇ, ಈ ಗಣೇಶನ ವಿಗ್ರಹದ ಮುಂದೆ ಒಂದು ಕಮಲದ ಆಕಾರವಿರುವ ತೀರ್ಥಕುಂಡವೂ ಕೂಡ..ಈ ತೀರ್ಥವನ್ನು ಕಮಂಡಲ ತೀರ್ಥ ಎಂದೂ ಕರೆಯುತ್ತಾರೆ, ಗಣೇಶನ ಮುಂದೆ ಕಮಲದ ಹೂವಿನಿಂದ ಉದ್ಭವದಂತೆ ಕಾಣುವ ತೀರ್ಥಕುಂಡವಿರುವುದರಿಂದ ಇಲ್ಲಿರುವ ಗಣೇಶನಿಗೆ ಕಮಂಡಲ ಗಣೇಶ ಎಂಬ ಹೆಸರು ಬಂದಿದೆ ಅಂತಲೂ ಹೇಳುತ್ತಾರೆ...
ಗಣೇಶ ಹಬ್ಬದ ಪ್ರಯುಕ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಸೇವೆ, ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಈ ನೀರಲ್ಲಿ ಸ್ನಾನ ಮಾಡಿದ್ರೆ ಶನಿ ದೋಷ ಪರಿಹಾರವಾಗುತ್ತೆ, ಓದುವ ಮಕ್ಕಳು ಇಲ್ಲಿನ ತೀರ್ಥ ಕುಡಿದ್ರೆ ಜ್ಞಾನಪಶಕ್ತಿಯ ಜೊತೆ ಓದು ತಲೆಗೆ ಹತ್ತುತ್ತೆ ಅಂತಾರೆ ದೇವಾಲಯದ ಅರ್ಚಕರು. ಯೋಗಮುದ್ರೆಯ ಗಣೇಶನಿಗೆ ಹರಕೆ ಕಟ್ಟಿದ್ರೆ ಬೇಡಿದ ಹರಕೆ ಈಡೇರುತ್ತಂತೆ. ಈ ದೇವಾಲಯಕ್ಕೆ ಬಂದ ಪ್ರತಿಯೊಬ್ಬ ಭಕ್ತರು ಮೃಗವಧೆ ಸ್ಥಳಕ್ಕೆ ಹೋಗಿ ಅಲ್ಲಿಂದ ಇಲ್ಲಿಗೆ ಬಂದು ಪೂಜೆ ಮಾಡಿಸಿದ್ರೆ ಒಳ್ಳೆಯದಾಗುತ್ತಂತೆ. ಒಟ್ಟಾರೆ, ಹಲವಾರು ಧಾರ್ಮಿಕ ಇತಿಹಾಸಕ್ಕೆ ಸಾಕ್ಷಿಯಾಗಿರೋ ಕಾಫಿನಾಡಿನ ಈ ಸ್ಥಳ ಸಾವಿರಾರು ಪ್ರವಾಸಿಗರು ಹಾಗೂ ಭಕ್ತರ ನೆಚ್ಚಿನ ತಾಣವಾಗಿದೆ. ಶೃಂಗೇರಿ ಹಾಗೂ ಹೊರನಾಡಿಗೆ ಬರೋ ಲಕ್ಷಾಂತರ ಪ್ರವಾಸಿಗರಲ್ಲಿ ಈ ಕ್ಷೇತ್ರದ ಮಹಿಮೆ ಗೊತ್ತಿರೋರು ಇಲ್ಲಿಗೆ ಬರೋದನ್ನ ಮರೆಯೋದಿಲ್ಲ. ಸ್ಥಳಿಯರು ಕೂಡ ಇಲ್ಲಿಗೆ ಬಂದು ಅರ್ಧಗಂಟೆ ಕೂತ್ರೆ ಮನಸ್ಸಿಗೆ ನೆಮ್ಮದಿ ಸಿಕ್ಕಿದಂತಾಗುತ್ತೆ ಅಂತಾ ದಿನಂ ಪ್ರತಿ ಬಂದು ಕೂತು ಹೋಗ್ತಾರೆ.