Bheemana Amavasya: ಪತಿಗೆ ಪೂಜೆ ಮಾಡೋದೇಕೆ? ಹಬ್ಬದ ಹಿನ್ನೆಲೆ ಏನು?

ಆಷಾಢ ಮುಗಿಯಿತು ಇನ್ನು ಶ್ರಾವಣ ಪ್ರಾರಂಭ. ಹಬ್ಬಗಳ ಸಾಲಲ್ಲಿ, ಕಳೆಗಟ್ಟಿದ ಮನೆ, ತೋರಣ, ಹೂವಿನ ಅಲಂಕಾರ, ತಿಂದು ಸುಸ್ತಾಗುವಷ್ಟು ನಾನಾ ರೀತಿಯ ಅಡುಗೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳು ಶುರುವಾಗುವುದೇ ಶ್ರಾವಣ ಮಾಸದಿಂದ. ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಮೊದಲ ಹಬ್ಬ ಎಂದರೆ ಅದು ಭೀಮನ ಅಮಾವಾಸ್ಯೆ. ಮನೆಯ ಹೆಣ್ಣು ತನ್ನ ಗಂಡ, ಸೋದರರ ಜೀವನದ ಒಳಿತಿಗಾಗಿ ಮಾಡುವ ಪೂಜೆಯೇ ಭೀಮನ ಅಮಾವಾಸ್ಯೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Bheemana Amavasya Vrat mythological story behind offering pooja to husband

ಹಿಂದೂ ಸಂಪ್ರದಾಯದ ಪ್ರಕಾರ ಶ್ರಾವಣ ಮಾಸಕ್ಕೆ ತನ್ನದೇ ಆದ ಮಹತ್ವವಿದೆ. ಈ ಸಮಯದಲ್ಲಿ ಬಹುತೇಕ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಪದಾರ್ಥಗಳನ್ನು ಮಾಡುವುದಿಲ್ಲ. ಆಷಾಢದ ಕೊನೆಯ ದಿನ ಅಂದರೆ ಅಮಾವಾಸ್ಯೆಯಂದು ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಪತಿ ಮತ್ತು ಸಹೋದರರ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಈ ವರ್ಷ ಜುಲೈ 28ರಂದು ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ.

ಮಹತ್ವ
ಜ್ಯೋತಿರ್ಭೀಮೇಶ್ವರಿ ಅಮಾವಾಸ್ಯೆ (ಭೀಮನ ಅಮಾವಾಸ್ಯೆ) ವ್ರತದಲ್ಲಿ ಪ್ರಮುಖವಾಗಿ ಶಿವ ಮತ್ತು ಪಾರ್ವತಿ ದೇವರನ್ನು ಆರಾಧಿಸಲಾಗುತ್ತದೆ. ಈ ದಿನದಂದು ವಿವಾಹಿತ(Married) ಮತ್ತು ಅವಿವಾಹಿತ(Unmarried) ಮಹಿಳೆಯರು(Woman)  ಮತ್ತು ಹುಡುಗಿಯರು ಒಂದು ದಿನ ಉಪವಾಸವಿದ್ದು(Fast), ತಮ್ಮ ಪತಿ, ಸಹೋದರರು ಮತ್ತು ಮನೆಯಲ್ಲಿನ ಇತರೆ ಪುರುಷ ಸದಸ್ಯರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಇದನ್ನು ದೀಪಸ್ತಂಭ ಪೂಕೆ ಎಂದೂ ಕರೆಯಲಾಗುತ್ತದೆ. ಮದುವೆಯಾದ ಹೆಣ್ಣು ಆರಂಭದ 9 ವರ್ಷಗಳ ಕಾಲ ಭೀಮನ ಅಮಾವಾಸ್ಯೆ ವ್ರತವನ್ನು ಆಚರಿಸಲಾಗುತ್ತದೆ. ಪತಿ, ಸಹೋದರರು ಮತ್ತು ಮನೆಯ ಗಂಡಸರ ಆಯುಷ್ಯ, ಕೆಟ್ಟ ಶಕ್ತಿಗಳಿಂದ ಅಪಾಯದಿಂದ(Dangerous) ರಕ್ಷಿಸುವಂತೆ ಪ್ರಾರ್ಥಿಸಲಾಗುತ್ತದೆ. 

Raksha Bandhan: ರಾಖಿ ಕಟ್ಟೋ ಮುನ್ನ ಈ ಕೆಲಸ ಮಾಡಿಬಿಡಿ

ಆಚರಣೆ
ಸ್ಕಂದ ಪುರಾಣದಲ್ಲಿ(Skanda Purana) ಭೀಮನ ಅಮಾವಾಸ್ಯೆ ಬಗ್ಗೆ ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಈ ವ್ರತದಲ್ಲಿ ಕಾಳಿಕಾಂಬಾ ಎಂಬ ಮಣ್ಣಿನಿಂದ ಮಾಡಿದ ಎರಡು ದೀಪಗಳನ್ನು ಬೆಳಗಿಸಲಾಗುತ್ತದೆ. ಈ ದೀಪವು ಶಿವ(Lord Shiva) ಮತ್ತು ಪಾರ್ವತಿಯನ್ನು(Goddess Parvathi) ಪ್ರತಿನಿಧಿಸುತ್ತದೆ. ಅಲ್ಲದೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಈ ವ್ರತದ ಮತ್ತೊಂದು ವೈಶಿಷ್ಟö್ಯವೆಂದರೆ ಕಡಬು ಮಾಡುವುದು. ಹಿಟ್ಟಿನ ಚೆಂಡುಗಳು ಅಥವಾ ಕಡುಬು ಮಾಡಿ ಅವುಗಳಲ್ಲಿ ನಾಣ್ಯಗಳನ್ನು(Coin) ಅಡಗಿಸಿ ಇಡಲಾಗುತ್ತದೆ. ಅಷ್ಟೇ ಅಲ್ಲದೆ ಈ ನಾಣ್ಯಗಳನ್ನು ಇಡ್ಲಿ, ಕೊಜಕಟ್ಟೆöÊ, ಮೋದಕ ಮತ್ತು ಗೋಧಿ ಚೆಂಡುಗಳಲ್ಲಿಯೂ ಅಡಗಿಸಿ ಇಡಲಾಗುತ್ತದೆ. ಇವುಗಳನ್ನು ಮನೆಯಲ್ಲಿನ ಸಹೋದರರಿ ಅಥವಾ ಯುವಕರು ಪೂಜೆಯ ನಂತರ ದಿನದ ಕೊನೆಯಲ್ಲಿ ಒಡೆಯುತ್ತಾರೆ. ಭೀಮನ ಅಮಾವಾಸ್ಯೆಯ ದಿನದಂದು ಉಪವಾಸ ಆಚರಿಸುವ ಮಹಿಳೆಯರು ಬೇಯಿಸಿದ, ಹುರಿದ ಆಹಾರವನ್ನು(Cooked food) ಸೇವಿಸಬಾರದು. ಶಿವ ಮತ್ತು ಪಾರ್ವತಿಯ ಪೂಜೆ ಮಾಡಿ ನೈವೇದ್ಯೆ ಮಾಡಿದ ನಂತರವಷ್ಟೇ ಮಹಿಳೆಯರು ಹಣ್ಣು, ಹಾಲುಗಳನ್ನು ಸೇವಿಸಿ ಉಪವಾಸ ಆಚರಿಸುತ್ತಾರೆ. 

ಆಚರಣೆಯ ಹಿನ್ನಲೆ
ಭೀಮನ ಅಮಾವಾಸ್ಯೆ ವ್ರತದ ಕುರಿತು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಒಬ್ಬ ರಾಜ ಅವನ ಮಗ(ರಾಜಕುಮಾರ) ಅಕಾಲಿಕವಾಗಿ ಮೃತನಾಗುತ್ತಾನೆ. ರಾಜನು ತನ್ನ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದನು. ಆದರೂ ಈ ಮೃತ ಮಗನಿಗೆ ಮಗಳನ್ನು ಕೊಡಲು ಮುಂದೆ ಬರುವವರಿಗೆ ಬಹುಮಾನ ಘೋಷಿಸುವ ಮೂಲಕ ಸತ್ತ ಮಗನಿಗೆ ಮದುವೆ ಮಾಡಲು ನಿರ್ಧರಿಸುತ್ತಾನೆ. 
ಈ ಸಮಯದಲ್ಲಿ ಬಡ ಬ್ರಾಹ್ಮಣನೊಬ್ಬ ತನ್ನ ಮಗಳನ್ನು ಮೃತ ರಾಜಕುಮಾರನೊಂದಿಗೆ ಮದುವೆ ಮಾಡಲು ಮುಂದಾಗುತ್ತಾನೆ. ಅದ್ಧೂರಿಯಾಗಿ ಮದುವೆಯನ್ನೂ ಆಚರಿಸಲಾಗುತ್ತದೆ. ಅದು ಅಮಾವಾಸ್ಯೆ ದಿನವಾಗಿದೆ(ಆಷಾಢದ ಕೊನೆಯ ದಿನ). ವಿವಾಹ ಮಹೋತ್ಸವ ಮುಗಿದ ನಂತರ ಮೃತ ರಾಜಕುಮಾರನ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಕ್ಕಾಗಿ ಭಾಗೀರಥಿ ನದಿಯ ಬಳಿ ತರಲಾಗುತ್ತದೆ. ಜನರು ಪೈರನ್ನು ಸಿದ್ಧ ಪಡಿಸುತ್ತಿದ್ದಂತೆ ಗುಡುಗು ಸಹಿತ ಭಾರೀ ಮಳೆಗೆ ಜನರು ಭಯಭೀತರಾಗಿ ಮೃತ ದೇಹ ಮತ್ತು ಬಾಲಕಿಯನ್ನು ಅಲ್ಲಿಯೇ ಬಿಟ್ಟು ಓಡಿಹೋಗುತ್ತಾರೆ. 

ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಅರ್ಪಿಸುವಾಗ ಈ ತಪ್ಪು ಮಾಡ್ಬೇಡಿ

ಈ ಸಮಯದಲ್ಲಿ ಬಾಲಕಿಯ ತಾಯಿ ಪ್ರತೀ ವರ್ಷ ತಪ್ಪದೆ ಆಚರಿಸುತ್ತಿದ್ದ ಜ್ಯೋತಿರ್ಭೀಮೇಶ್ವರಿ ವ್ರತದ ದಿನ ಎಂದು ಹುಡುಗಿ ನೆನಪಿಸಿಕೊಂಡಳು. ಅವಳು ನದಿಯಲ್ಲಿ ಸ್ನಾನ ಮಾಡಿ ಎರಡು ದೀಪಗಳನ್ನು ರೂಪಿಸಿದಳು ಮತ್ತು ದೀಪಗಳಿಗೆ ಬತ್ತಿಯನ್ನು ರೂಪಿಸಲು ಸಸ್ಯದ ನಾರನ್ನು ಹೊರತಗೆದಳು. ಅಕ್ಕಿ, ಗೋಧಿ ಇಲ್ಲದ ಕಾರಣ ದೀಪಗಳಿಗೆ ನೀರು ಸುರಿದು ಮಣ್ಣಿನಿಂದ ಭಂಡಾರ ಮಾಡಿದಳು. ಆಕೆಯ ಎಲ್ಲಾ ಚಟುವಟಿಕೆಗಳಿಗೆ ಶಿವ ಮತ್ತು ಪಾರ್ವತಿ ಮೂಕ ಪ್ರೇಕ್ಷಕರಾಗಿದ್ದರು ಮತ್ತು ಆಕೆಯ ಭಕ್ತಿಗೆ ಸಂತೋಷಪಟ್ಟು ಅವಳನ್ನು ಆಶೀರ್ವದಿಸಿದರು. ಆ ಸ್ಥಳದಲ್ಲಿ ಲಭ್ಯವಿದ್ದ ವಸ್ತುಗಳನ್ನು ಕೊಟ್ಟು ತನ್ನ ಪೂಜೆಯನ್ನು ಮುಗಿಸಿದಳು. 
ಪೂಜೆ ಮುಗಿಯುವ ಮುನ್ನವೇ ಶಿವ ಹಾಗೂ ಪಾರ್ವತಿ ಪ್ರತ್ಯಕ್ಷರಾಗಿ ಮಣ್ಣಿನ ಭಂಡಾರವನ್ನು ಶಿವನಿಂದ ಒಡೆಯಲಾಯಿತಲ್ಲದೆ ಆಕೆಯ ಬಳಿ ವರ ಕೇಳಿದರು. ಆಗ ಬಾಲಕಿಯು ತನ್ನ ಗಂಡನ ಮರುಜನ್ಮಕ್ಕೆ ಬೇಡಿಕೊಂಡಳಲ್ಲದೆ, ಶಿವ ಪಾರ್ವತಿಯು ಆಕೆಯ ವರವನ್ನು ಪೂರೈಸಿದರು. ಈ ಘಟನೆಯ ನಂತರ ಜ್ಯೋತಿರ್ಭೀಮೇಶ್ವರಿ ವ್ರತವೂ ಪ್ರಸಿದ್ಧಿ ಹೊಂದಿತು ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios