Fact Check| ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕ್ವಾಡೆನ್!
ಆಸ್ಪ್ರೇಲಿಯಾದ 9 ವರ್ಷದ ಹುಡುಗ ಕ್ವಾಡೆನ್ ಬೇಲ್ಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯ
ಕ್ಯಾನ್‌ಬೆರಾ[ಮಾ.11]: ಇತ್ತೀಚೆಗೆ ಆಸ್ಪ್ರೇಲಿಯಾದ 9 ವರ್ಷದ ಹುಡುಗ ಕ್ವಾಡೆನ್ ಬೇಲ್ಸ್ ತಾನು ವಯಸ್ಸಿಗೆ ತಕ್ಕಂತೆ ಬೆಳೆಯಲಿಲ್ಲ ಎಂದು ಶಾಲೆಯಲ್ಲಿ ಅವಮಾನ ಮಾಡುತ್ತಿದುದನ್ನು, ಅಪಹಾಸ್ಯ ಮಾಡುತ್ತಿದುದನ್ನು ಸಹಿಸಲಾರದೆ ಸಾಯಬೇಕೆಂದು ಪದೇ ಪದೇ ಹೇಳುತ್ತಿದ್ದ ವಿಡಿಯೋ ಬಾರಿ ವೈರಲ್ ಆಗಿತ್ತು. ಆ ಕರುಣಾಜನಕ ವಿಡಿಯೋದಲ್ಲಿ ಕ್ವಾಡೆನ್ ‘ನನಗೊಂದು ಹಗ್ಗ ಕೊಡಿ, ಜೀವ ಕೊನೆಗೊಳಿಸಿಕೊಳ್ಳಬೇಕೆಂದು ಅನಿಸುತ್ತಿದೆ’ ಎಂದಿದ್ದ. ಪುಟ್ಟಬಾಲಕನ ಬಾಯಲ್ಲಿ ಇಂಥ ಮಾತು ಕಂಡು ನೆಟ್ಟಿಗರು ಭಾವುಕರಾಗಿ, ನಿನ್ನ ಜೊತೆ ಇಡೀ ಜಗತ್ತೇ ಇದೆ ಎಂಬ ಭಾವನಾತ್ಮಕ ಬೆಂಬಲ ನೀಡಿದ್ದರು.
Fact Check ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆದರೆ ಇದೀಗ ಬೇಲ್ಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅತ್ಯಂತ ವಿಶ್ವಾಸಾರ್ಹ ಸುದ್ದಿಸಂಸ್ಥೆಯಾದ ಬಿಬಿಸಿಯ ಲೋಗೋವನ್ನು ಬಳಸಿ ಈ ಸುದ್ದಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ 9 ವರ್ಷದ ಕ್ವಾಡೆನ್ ಬೇಲ್ಸ್ ಶಾಲೆಯಲ್ಲಿನ ಅವಮಾನವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದೀಗ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ.
ಅಮ್ಮಾ ಚಾಕು ಕೊಡು, ನಾನು ಸಾಯ್ಬೇಕು: ವಿಶ್ವವನ್ನೇ ಬೆಚ್ಚಿ ಬೀಳಿಸಿದೆ 9 ರ ಪೋರನ ಮಾತು!
ಆದರೆ ಈ ಸುದ್ದಿ ನಿಜವೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ದೃಢವಾಗಿದೆ. ಬಿಬಿಸಿ ತಾನು ಈ ಸುದ್ದಿ ಪ್ರಕಟಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲಿಗೆ ವಿಶ್ವಾಸಾರ್ಹತೆ ಗಳಿಸುವ ಉದ್ದೇಶದಿಂದ ಬಿಬಿಸಿ ಲೋಗೋವನ್ನು ಬಳಸಲಾಗಿದೆ ಎಂಬುದು ಸ್ಪಷ್ಟ. ಅಮೆರಿಕದಲ್ಲಿ ಬೇರೆ ಯಾವುದೇ ಬಾಲಕನ ಮೃತದೇಹ Êಪತ್ತೆಯಾಗಿದ್ದ ವಿಡಿಯೋವನ್ನೇ ಬಳಸಿಕೊಂಡು ಈ ಸುಳ್ಳುಸುದ್ದಿ ಬಿತ್ತರಿಸಲಾಗಿದೆ ಎಂಬುದು ಅನಂತರ ಖಚಿತವಾಗಿದೆ.