ಅಮ್ಮಾ ಚಾಕು ಕೊಡು, ನಾನು ಸಾಯ್ಬೇಕು: ವಿಶ್ವವನ್ನೇ ಬೆಚ್ಚಿ ಬೀಳಿಸಿದೆ 9 ರ ಪೋರನ ಮಾತು!
ಸೋಶಿಯಲ್ ಮೀಡಿಯಾದಲ್ಲಿ ಶಾಕಿಂಗ್ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. 9 ವರ್ಷದ ಮುಗ್ಧ ಹುಡುಗನೊಬ್ಬ ಸ್ಕೂಲ್ ಬಸ್ ನಲ್ಲಿ ಕುಳಿತು ತನ್ನ ತಾಯಿ ಬಳಿ ಎದೆ ಬಡಿದುಕೊಂಡು ಅಳುತ್ತಾ ತನ್ನ ನೋವು ಹೇಳಿಕೊಳ್ಳುತ್ತಿರುವ ವಿಡಿಯೋ ಸದ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಮಗನ ನೋವು ಆಲಿಸಿದ ತಾಯಿ ವಿಡಿಯೋ ರೆಕಾರ್ಡ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಸಾವು ಏನೆಂದು ತಿಳಿಯದ ವಯಸ್ಸಿನ ಹುಡುಗ, ತಾಯಿ ಬಳಿ ಚಾಕು ಕೊಡು ಸಾಯ್ಬೇಕು ಅಂದಿದ್ದು ಏಕೆ?
ತಾಯಿ ತನ್ನ ಮಗನಿಗೇನಾಗಿದೆ ಎಂದು ಕಂಗಾಲಾಗಿದ್ದಾಳೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಆತ್ಮಹತ್ಯೆ ಎಂದರೇನು ಎಂಬ ಬಾಲಕ, ಸಹಪಾಠಿಗಳು ಗೇಲಿ ಮಾಡುತ್ತಾರೆ.ದು ಸಾಯಲಿಚ್ಛಿಸಿದ್ದಾನೆ.
ಈ ವಿಡಿಯೋದಲ್ಲಿ ಬಾಲಕ 'ಯಾರಾದರೂ ಬಂದು ನನ್ನನ್ನು ಸಾಯಿಸಿ' ಎಂದೂ ಹೇಳುತ್ತಿರುವುದು ದಾಖಲಾಗಿದೆ. ಬಾಲಕನ ತಾಯಿ Yarraka Bayles ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಕಂಗಾಲಾದ ಬಾಲಕ, ಕಾರಿನಲ್ಲಿ ಚಡಪಡಿಸುತ್ತಿದ್ದಾನೆ. ಅಲ್ಲದೇ ತಾಯಿ ಬಳಿ 'ನನಗೆ ಚಾಕು ಕೊಡು, ನಾನು ಸಾಯ್ಬೇಕು' ಎಂದಿದ್ದಾನೆ. ವಾಸ್ತವವಾಗಿ ಈ ಬಾಲಕ ಹುಟ್ಟಿದಾಗಿನಿಂದಲೇ Achondroplasia ಎಂಬ ಕಾಯಿಲೆಗೆ ಗುರಿಯಾಗಿದ್ದಾನೆ. ಇದಕ್ಕೂ ಮುನ್ನ ಆತ ಹಲವಾರು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಾನೆ.
ಈ ವಿಚಿತ್ರ ಕಾಯಿಲೆಗೀಡಾದ ಬಾಲಕ ಇತರ ಮಕ್ಕಳಂತೆ ಬೆಳೆದಿಲ್ಲ. ಆದರೆ ಸಹಪಾಠಿಗಳು ಈತ ಕುಬ್ಜನಾಗಿರುವುದಕ್ಕೆ ಪದೇ ಪದೇ ಗೇಲಿ ಮಾಡುತ್ತಿದ್ದಾರೆ. ಹೀಗಾಗಿ ಈತ ತನ್ನನ್ನು ತಾನು ದ್ವೇಷಿಸಲಾರಂಭಿಸಿದ್ದಾನೆ.
ಮಗನ ಪರಿಸ್ಥಿತಿ ಕಂಡು ನೋವು ತಡೆಯಲಾರದ ತಾಯಿ ವಿಡಿಯೋ ಒಂದನ್ನು ಮಾಡಿ 'ನೀವು ನಿಮ್ಮ ಮಕ್ಕಳು, ಕುಟುಂಬ ಹಾಗೂ ಸ್ನೇಹಿತರಿಗೆ ಇತರರನ್ನು ಗೇಲಿ ಮಾಡಲು ಕಲಿಸುತ್ತೀರಾ?' ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜಗತ್ತೇ ಬೆಚ್ಚಿ ಬಿದ್ದಿದೆ. ಬಾಲಕನೆಡೆ ಸಹಾನುಭೂತಿ ತೋರಿದೆ.
ಆದರೆ ಇಂತಹ ವಿಡಿಯೋಗಳು ಬಂದಾಗ ಭಾವುಕರಾಗುವ ಇದೇ ಜಗತ್ತು, ಕಪ್ಪು ವರ್ಣ, ಕುಬ್ಜ, ದಪ್ಪ, ಹಾಗೂ ಸಣ್ಣಗಿರುವವರನ್ನು ಗೇಲಿ ಮಾಡಿ, ಮಾತಿನಲ್ಲೇ ಚುಚ್ಚಿ ಘಾಸಿಗೊಳಿಸುತ್ತದೆ.
ಹಲವಾರು ಬಾರಿ ಈ ತಮಾಷೆ ಗಂಭೀರ ಸ್ವರೂಪ ಪಡೆದು ನೊಂದ ವ್ಯಕ್ತಿ ಸಾಯುವ ಯೋಚನೆ ಮಾಡುತ್ತಾರೆ. ಇನ್ನು ಮಗನ ಕುರಿತಾಗಿ ವಿಡಿಯೋದಲ್ಲಿ ವಿವರಿಸಿರುವ ತಾಯಿ 'ಇತರ ಮಕ್ಕಳಂತೆ ಆತನಿಗೂ ಓದುವ ಆಸೆ ಇದೆ. ಆದರೆ ಪ್ರತಿ ದಿನ ಒಂದಿಲ್ಲೊಂದು ಘಟನೆ ನಡೆಯುತ್ತೆ' ಎಂದಿದ್ದಾರೆ.
ಈ ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಇಂತಹ ಮಕ್ಕಳೊಂದಿಗೆ ಇತರರ ವರ್ತನೆ ಕುರಿತು ಭಾರೀ ಚರ್ಚೆ ಆರಂಭವಾಗಿದೆ. ಬಹುತೇಕ ಎಲ್ಲರೂ ಈ ಪುಟ್ಟ ಬಾಲಕನ ಬೆಂಬಲಕ್ಕೆ ನಿಂತಿದ್ದಾರೆ.