Asianet Suvarna News Asianet Suvarna News

ಪವಿತ್ರಾ ಲೋಕೇಶ್ ಗಂಡ ಸಾವಿರ ಕೋಟಿ ಒಡೆಯನಾಗಿದ್ದೇಗೆ? ಗುಟ್ಟು ಬಿಚ್ಚಿಟ್ಟ ನರೇಶ್

ಕಳೆದ ಎರಡ್ಮೂರು ವರ್ಷಗಳಿಂದ ಪವಿತ್ರಾ ಲೋಕೇಶ್ ಮತ್ತು ನರೇಶ್ ಜೊತೆಯಾಗಿ ವಾಸಿಸುತ್ತಿದ್ದಾರೆ. ಮೂರನೇ ಪತ್ನಿ ರಮ್ಯಾ ಜೊತೆಗಿನ ಡಿವೋರ್ಸ್ ಪ್ರಕರಣ ನ್ಯಾಯಾಲಯದಲ್ಲಿದೆ.

How did Pavitra Lokesh s husband naresh become a millionaire mrq
Author
First Published May 28, 2024, 11:27 AM IST

ಹೈದರಾಬಾದ್: ಚಂದನವನದ ಚೆಲುವೆ ಪವಿತ್ರಾ ಲೋಕೇಶ್ (Pavitra Lokesh) ಪತಿ ನರೇಶ್ (Actor Naresh) ಮೊದಲ ಬಾರಿಗೆ ಖಾಸಗಿ ವಿಷಯಗಳನ್ನು ಮಾಧ್ಯಮವೊಂದರ ಜೊತೆಯಲ್ಲಿ ಮಾತನಾಡಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು (Tollywood Actor Mahesh Babu) ಮಲಸೋದರನಾಗಿರುವ ನರೇಶ್, ತಂದೆ-ತಾಯಿ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ತಾಯಿ ವಿಜಯ ನಿರ್ಮಲಾ ಮತ್ತು ತಂದೆ ಕೃಷ್ಣ (Vijay Nirmala And Krishna) ಅಂತಿಮ ಕಾಲದಲ್ಲಿ ಹೈದರಾಬಾದ್ ನಗರದಿಂದ ದೂರ ಬಂದು ತೋಟದ ಮನೆಯಲ್ಲಿ ಉಳಿದುಕೊಂಡಿದ್ಯಾಕೆ ಎಂಬುದನ್ನು ನರೇಶ್ ರಿವೀಲ್ ಮಾಡಿದ್ದಾರೆ. 

ನರೇಶ್ ಕಲಾವಿದರ ಕುಟುಂಬದಲ್ಲಿ ಜನಿಸಿದವರು. ಹಾಗಾಗಿ ಬಾಲ್ಯ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನರೇಶ್ ಹಾಸ್ಯ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ತದನಂತರ ಗಂಭೀರ ಪಾತ್ರಗಳ ಮೂಲಕವೂ ಸಿನಿಮಾದಲ್ಲಿ ಸೆಂಟರ್ ಆಫ್ ಆಟ್ರಾಕ್ಷನ್ ಆಗುತ್ತಿದ್ದರು. ನರೇಶ್ ನಟನೆಗೆ ಮನಸೋಲದವರೇ ಇಲ್ಲ. ಹಾಗಾಗಿ ನರೇಶ್‌ಗೆ ಪೋಷಕ ಪಾತ್ರಗಳು ಹುಡುಕಿಕೊಂಡು ಬಂದವು ಅಂದ್ರೆ ತಪ್ಪಾಗಲಾರದು. 

12 ಎಕರೆ ಭೂಮಿ ಖರೀದಿ

ನರೇಶ್ ಅವರಿಗೆ ಕೃಷ್ಣ ಮಲತಂದೆಯಾಗಿದ್ದರು. ಜೀವನದ ಕೊನೆಯ ಕಾಲದವರೆಗೂ ತಾಯಿ ನಿರ್ಮಲಾ ಮತ್ತು ಕೃಷ್ಣ ಜೊತೆಯಾಗಿದ್ದರು. ಹೈದರಾಬಾದ್‌ ನಗರ ಹೊರವಲಯದಲ್ಲಿ 12 ಎಕರೆ ಕೃಷಿ ಜಮೀನು ಖರೀದಿಸಿದ ನಿರ್ಮಲಾ ಕುಟುಂಬ ಸಮೇತರಾಗಿ ಅಲ್ಲಿಯೇ ಉಳಿಯಲು ನಿರ್ಧರಿಸಿದರು. ಈ 12 ಎಕರೆ ಭೂಮಿಯನ್ನು ಅಂದು ಯಾವ ಬೆಲೆ ಖರೀದಿಸಿದರು ಮತ್ತು ಇಂದಿನ ದರ ಎಷ್ಟಿದೆ ಎಂಬುದನ್ನು ರಿವೀಲ್‌ಗೊಳಿಸಿದ್ದಾರೆ. 

ನಾವು ಮಕ್ಕಳನ್ನು ಪಡೆಯಬಹುದು ಆದರೇ...: ಮಗು ಮಾಡಿಕೊಳ್ಳುವ ಬಗ್ಗೆ ಪವಿತ್ರಾ-ನರೇಶ್ ನೇರ ಮಾತು

ಅಮ್ಮನ ಜೊತೆಗಿನ ಒಡನಾಡ ಹಂಚಿಕೊಂಡ ನರೇಶ್ 

ತಾಯಿ ನಿರ್ಮಲಾ ರೈತ ಮಹಿಳೆಯಾಗಿದ್ದು, ಕೃಷಿಗಾಗಿಯೇ 12 ಎಕರೆ ಭೂಮಿಯನ್ನು ಖರೀದಿಸಿದ್ದರು. ಅಂದು ತಾಯಿ ಒಂದು ಎಕರೆಗೆ 1.3 ಲಕ್ಷ ರೂಪಾಯಿ ನೀಡಿದ್ದರು. ಅಂದು ನಗರದ ಹೊರವಲಯದಲ್ಲಿದ್ದ ಈ ಭೂಮಿ ಇದೀಗ ಹೈದರಾಬಾದ್‌ ಹೃದಯ ಭಾಗದಲ್ಲಿದೆ. ತೋಟದಲ್ಲಿಯೇ ಮನೆ ಕಟ್ಟಿಕೊಂಡ ನಂತರ ನಾನು ಪೋಷಕರ ಜೊತೆ ಅಲ್ಲಿಗೆ ಹೋದ. ಈ ವೇಳೆ ಕೃಷ್ಣ ಅವರನ್ನು ಮೂಲೆಗುಂಪು ಮಾಡಲಾಯ್ತು ಅಂತ ಕೆಲವರು ಮಾತನಾಡಿದರು. ಆ ಸಮಯದಲ್ಲಿ ನನ್ನಲ್ಲಿಯೂ ಆ ಭಾವನೆ ಬಂದಿತ್ತು ಎಂದು ನರೇಶ್ ಹೇಳಿಕೊಂಡಿದ್ದಾರೆ. 

ಈ ಜಮೀನಿನಲ್ಲಿ ಇರೋ ಪ್ರತಿ ಮರವೂ ಅಮ್ಮ ನೆಟ್ಟಿದ್ದು. ಇಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಅಮ್ಮ ತರಕಾರಿ ಬೆಳೆಯುತ್ತಿದ್ದರು. ಒಮ್ಮೆ ತರಕಾರಿ ಮಾರಾಟ ಮಾಡಿದಾಗ ಕೇವಲ 300 ರೂಪಾಯಿ ಬಂದಿದ್ದಕ್ಕೆ ನೊಂದುಕೊಂಡಿದ್ದರು ಎಂದು ಬಾಲ್ಯದ ವಿಷಯವನ್ನು ನೆನಪು ಮಾಡಿಕೊಂಡರು. 

ಪವಿತ್ರಾ ಜೊತೆಗಿನ ಮದ್ವೆ ಬಗ್ಗೆ ಮೌನ ಮುರಿದ ನರೇಶ್​ ಪುತ್ರ: ಮಕ್ಕಳು ಹೀಗೂ ಇರ್ತಾರಾ ಅಂದ ಫ್ಯಾನ್ಸ್​!

ನರೇಶ್ ಸಾವಿರ ಕೋಟಿ ಆಸ್ತಿಯ ಒಡೆಯ 

ಅಂದು ಕೇವಲ ಒಂದು ಲಕ್ಷ ರೂಪಾಯಿಗೆ ಎಕರೆ ಜಮೀನು ಖರೀದಿಸಿದ್ದರು. ಇದೀಗ ಇದರ ಬೆಲೆ ಕೋಟಿ ಮೇಲೆ ಆಗಿದೆ ಎಂದರು. ನರೇಶ್ ಆಸ್ತಿ 1,000 ಕೋಟಿ ರೂಪಾಯಿಗೂ ಅಧಿಕ ಎಂಬ ಮಾತಿದೆ. ತಾಯಿ ನಿರ್ಮಲಾ ಅವರಿಂದ ನರೇಶ್‌ಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಬಂದಿದೆಯಂತೆ. ಹಾಗಾಗಿ ನರೇಶ್ ಆಸ್ತಿ ಸಾವಿರ ಕೋಟಿಗೂ ಅಧಿಕ ಎಂಬ ಮಾತಿದೆ. 

ಕಳೆದ ಎರಡ್ಮೂರು ವರ್ಷಗಳಿಂದ ಪವಿತ್ರಾ ಲೋಕೇಶ್ ಮತ್ತು ನರೇಶ್ ಜೊತೆಯಾಗಿ ವಾಸಿಸುತ್ತಿದ್ದಾರೆ. ಮೂರನೇ ಪತ್ನಿ ರಮ್ಯಾ ಜೊತೆಗಿನ ಡಿವೋರ್ಸ್ ಪ್ರಕರಣ ನ್ಯಾಯಾಲಯದಲ್ಲಿದೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ತಮ್ಮ ಜೀವನದ ಕಥೆಯನ್ನು ಸಿನಿಮಾ ಮಾಡಿ ತಾವೇ ನಟಿಸಿದ್ದರು.

Latest Videos
Follow Us:
Download App:
  • android
  • ios