Asianet Suvarna News Asianet Suvarna News

ಸವಣೂರಲ್ಲಿ ರೌಡಿ ಶೀಟರ್‌ ಬರ್ಬರ ಹತ್ಯೆ

* ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದ ಘಟನೆ
* ಹಪ್ತಾ ವಸೂಲಿ ವಿಚಾರದಲ್ಲಿ ಗಲಾಟೆ ನಡೆದಿರುವ ಶಂಕೆ
*  ಆರೋಪಿ ಇಮ್ರಾನ್‌ ಚೌದರಿಯನ್ನು ವಶಕ್ಕೆ ಪಡೆದ ಪೊಲೀಸರು 
 

Rowdy Sheeter Murder at Savanur in Haveri grg
Author
Bengaluru, First Published Aug 9, 2021, 10:16 AM IST
  • Facebook
  • Twitter
  • Whatsapp

ಸವಣೂರು(ಆ.09):  ಪಟ್ಟಣದ ಕಾರಡಗಿ ಕ್ರಾಸ್‌ ಬಳಿ ರೌಡಿ ಶೀಟರ್‌ ಒಬ್ಬನನ್ನು ಅಮಾನುಷವಾಗಿ ಬರ್ಬರ ಹತ್ಯೆ ಮಾಡಿರುವ ಘಟನೆ ಭಾನುವಾರ ಸಂಭವಿಸಿದೆ. ಅನ್ವರ್‌ ಶೇಖ್‌ (30) ಎಂಬಾತನೇ ಕೊಲೆಯಾದ ರೌಡಿ ಶೀಟರ್‌.

ಹಪ್ತಾ ವಸೂಲಿ ವಿಚಾರದಲ್ಲಿ ಗಲಾಟೆ ಸಂಭವಿಸಿರುವ ಶಂಕೆ ಇದ್ದು, ಆರೋಪಿ ಇಮ್ರಾನ್‌ ಚೌದರಿ ಎಂಬಾತನೇ ರೌಡಿ ಶೀಟರ್‌ನನ್ನು ಕೊಡಲಿಯಿಂದ ಕೊಚ್ಚಿ ಬರ್ಬರ ಹತ್ಯೆಗೈದಿದ್ದಾನೆ.

ದಾವಣಗೆರೆ: ಸಹೋದರಿಯರಿಬ್ಬರ ನಿಗೂಢ ಸಾವು, ಹಿಂದಿದೆ ರೋಚಕ ಮರ್ಡರ್ ಮಿಸ್ಟರಿ!

ರೊಚ್ಚಿಗೆದ್ದ ಅನ್ವರ್‌ ಶೇಖ್‌ ಇಮ್ರಾನ್‌ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆಗ ಸಂಜೆ ವೇಳೆ ಇಮ್ರಾನ್‌ ಚೌದರಿ ಹಾಗೂ ಅನ್ವರ್‌ ಶೇಖ್‌ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಆರೋಪಿ ಇಮ್ರಾನ್‌ ಚೌದರಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ಅನ್ವರ್‌ ಶೇಖ್‌ ಗೋವಾದಲ್ಲಿ ತನ್ನ ವ್ಯವಹಾರಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ. ಸವಣೂರು ಪೋಲಿಸ್‌ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
 

Follow Us:
Download App:
  • android
  • ios