Asianet Suvarna News Asianet Suvarna News

ದಾವಣಗೆರೆ: ಸಹೋದರಿಯರಿಬ್ಬರ ನಿಗೂಢ ಸಾವು, ಹಿಂದಿದೆ ರೋಚಕ ಮರ್ಡರ್ ಮಿಸ್ಟರಿ!

Aug 4, 2021, 4:45 PM IST

ದಾವಣಗೆರೆ (ಆ. 04): ಇದೊಂದು ವಿಚಿತ್ರ ಮರ್ಡರ್ ಕಥೆ. ಗೌರಮ್ಮ (34) ಹಾಗೂ ರಾಧಮ್ಮ (32) ಎಂಬ ಇವರಿಬ್ಬರು ಸಹೋದರಿಯರು. ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿಯ ಗ್ರಾಮದವರು. ಕೆಲ ತಿಂಗಳ ಹಿಂದೆ ಆಂಜನೇಯ ಕಾಟನ್ ಮಿಲ್‌ನಲ್ಲಿ‌ ಕೆಲಸಕ್ಕೆಂದು ಇಬ್ಬರೂ ಸೇರಿಕೊಂಡಿದ್ದರು. ಎಲ್ಲವೂ ಸರಿಯಾಗಿದೆ ಎನ್ನುವಾಗ ಇಬ್ಬರೂ ನಿಗೂಢವಾಗಿ ಕೊಲೆಯಾಗುತ್ತಾರೆ.  ಕೊಳೆತ ಸ್ಥಿತಿಯಲ್ಲಿ ಶವ ನಗರದ ಹೊರವಲಯದ ಆಂಜನೇಯ ಕಾಟನ್ ಮಿಲ್ ಬಳಿ ಪತ್ತೆಯಾಗುತ್ತದೆ. ಈ ಕೊಲೆಯ ಹಿಂದಿನ ಮಿಸ್ಟರಿ ಹುಡುಕುತ್ತಾ ಹೋದರೆ ಇಂಟರೆಸ್ಟಿಂಗ್ ಕಥೆಯೊಂದು ಅನಾವರಣಗೊಳ್ಳುತ್ತದೆ.