ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಸೇರಿ ತನ್ನಿಬ್ಬರು ಮಕ್ಕಳಿಗೂ ಬೆಂಕಿ ಹಚ್ಚಿ ಕೊಂದ ಪತಿ
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಸೇರಿ ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಮಂಗಳವಾರ ರಾತ್ರಿ ಶಿಡ್ಲಘಟ್ಟ ತಾಲೂಕಿನ ಯೆಣ್ಣೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ (ಫೆ.22) : ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಸೇರಿ ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಮಂಗಳವಾರ ರಾತ್ರಿ ಶಿಡ್ಲಘಟ್ಟ ತಾಲೂಕಿನ ಯೆಣ್ಣೂರು ಗ್ರಾಮದಲ್ಲಿ ನಡೆದಿದೆ.
ವರ್ಷಿತಾ(12), ಸ್ನೇಹಾ(9) ಎಂಬ ಇಬ್ಬರು ಪುತ್ರಿಯರು, ಪತ್ನಿ ನೇತ್ರಾವತಿ(37) ಹತ್ಯೆಗೀಡಾದ ದುರ್ದೈವಿಗಳು. ಪತ್ನಿ ಹಾಗೂ ತನ್ನಿಬ್ಬ ಮಕ್ಕಳಿಗೆ ಬೆಂಕಿ ಹಚ್ಚಿದ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪತಿ ಸೊನ್ನೇಗೌಡ ಸ್ಥಿತಿ ಗಂಭಿರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವದತ್ತಿಯಲ್ಲಿ ಕತ್ತು ಕೊಯ್ದು ಪತ್ನಿ ಹತ್ಯೆಗೈದ ಪಾಪಿ ಪತಿ!
ಮನೆಯಲ್ಲಿ ಬೆಂಕಿಗೆ ಹೊತ್ತಿ ಉರಿದ ತಾಯಿ ಮಕ್ಕಳು:
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತಿದ್ದ ಸೊನ್ನೇಗೌಡ(Sonegowda) ಮಂಗಳವಾರ ರಾತ್ರಿ ಪತ್ನಿಯನ್ನು ಮುಗಿಸಲು ನಿರ್ಧಾರಕ್ಕೆ ಬಂದಿದ್ದಾನೆ. ಮೊದಲು ಪತ್ನಿಗೆ ಬೆಂಕಿ ಹಚ್ಚಿದ ಬಳಿಕ ತನ್ನಿಬ್ಬರು ಮಕ್ಕಳಿಗೂ ಬೆಂಕಿ ಹಚ್ಚಿರುವ ಸೊನ್ನೇಗೌಡ. ಬೆಂಕಿ ಹಚ್ಚಿದ ಬಳಿಕ ಕಿರುಚಾಡಿರುವ ತಾಯಿ ಮಕ್ಕಳು.
ಮನೆಯಲ್ಲಿ ಬೆಂಕಿ ಉರಿಯುತ್ತಿರುವುದು, ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರೇ ಬೆಂಕಿ ಆರಿಸಿದ್ದಾರೆ. ಆದರೆ ಅಷ್ಟೊತ್ತಗೆ ತೀವ್ರವಾಗಿ ಬೆಂಕಿಯಲ್ಲಿ ಉರಿಯುತ್ತಿದ್ದ ತಾಯಿ ಮಕ್ಕಳು ಮೃತಪಟ್ಟಿದ್ದಾರೆ. ಇನ್ನೊಂದೆಡೆ ಕಣ್ಮುಂದೆ ಪತ್ನಿ ಮಕ್ಕಳು ಬೆಂಕಯ ಕೆನ್ನಾಲಗೆಯಲ್ಲಿ ದಹಿಸುತ್ತಿದ್ದರು ಮಕ್ಕಳನ್ನು ರಕ್ಷಿಸಲು ಮುಂದಾಗದ ಸೊನ್ನೇಗೌಡ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರ ಅಸ್ವಸ್ಥನಾಗಿ ಸೊನ್ನೇಗೌಡನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಮಂಡ್ಯದ ಪ್ರಳಯಾಂತಕನ ಬೃಹನ್ನಾಟಕ ಪತ್ನಿ ಹತ್ಯೆ ಮಾಡಿ ತೊಟ್ಟು ವಿಷ ಕುಡಿದಿದ್ದ!
ಘಟನೆ ಮಾಹಿತಿ ತಿಳಿದು ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ ಭೇಟಿ ಸ್ಥಳೀಯರು ಹಾಗೂ ಮೃತಳ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ(Shidlaghatta Rural Police Station)ಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.