Asianet Suvarna News Asianet Suvarna News

ಅಕ್ರಮ ಸಂಬಂಧ: ಜನ ಮಾತಾಡ್ಕೊಳ್ತಾರೆ, ಮನೆ ಕಡೆ ಬರಬೇಡ ಎಂದಿದಕ್ಕೆ ಮಹಿಳೆಗೆ ಚೂರಿ ಇರಿದ ಕಾಮುಕ

ಅನೈತಿಕ ಸಂಬಂಧ  ಬೇಡ ಎಂದಿದ್ದಕ್ಕೆ ಕೋಪಗೊಂಡ ಕಾಮುಕನೊಬ್ಬ ಮಹಿಳೆ ಹಾಗೂ ಆಕೆಯ ಪತಿಗೆ ಚಾಕು  ಹಿರಿದಿದ್ದೇನೆ. ಚಾಕು ಹಿರಿತದಿಂದ ಗಂಭೀರ ಗಾಯಗೊಂಡ ಮಹಿಳೆಯ ಪತಿ ಕ್ಯಾತನಹಳ್ಳಿ ಗ್ರಾಮದ ಜವರಯ್ಯ(48) ಸ್ಥಳದಲ್ಲೇ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಹಾಸನದಲ್ಲಿ ನಡೆದಿರುವ ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

illicit relationship A Awful murder in kyatanahalli hassan rav
Author
First Published Nov 5, 2022, 3:41 PM IST

ಹಾಸನ (ನ.5) : ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಅದರಲ್ಲೂ ಅನೈತಿಕ ಸಂಬಂಧ, ಅನುಮಾನ ಹಿನ್ನೆಲೆ ನಡೆಯುವ ಕೌಟುಂಬಿಕ ಹತ್ಯೆಗಳು ಹೆಚ್ಚುತ್ತಿರುವುದು ಆತಂಕವನ್ನುಂಟು ಮಾಡಿದೆ. 

'ಪತ್ನಿ ವಿನಿಮಯ' ಬೇಡಿಕೆ ನಿರಾಕರಿಸಿದ್ದಕ್ಕಾಗಿ ಪತಿಯಿಂದ ಲೈಂಗಿಕ ಕಿರಕುಳ: ಅತ್ತೆ ಮಾವಂದಿರ ಸಾಥ್‌

ಅನೈತಿಕ ಸಂಬಂಧ  ಬೇಡ ಎಂದಿದ್ದಕ್ಕೆ ಕೋಪಗೊಂಡ ಕಾಮುಕನೊಬ್ಬ ಮಹಿಳೆ ಹಾಗೂ ಆಕೆಯ ಪತಿಗೆ ಚಾಕು  ಇರಿದಿರು ಘಟನೆ ಹಾಸನ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ನಡೆದಿದೆ..ಚಾಕು ಇರಿತದಿಂದ ಗಂಭೀರ ಗಾಯಗೊಂಡ ಮಹಿಳೆಯ ಪತಿ ಕ್ಯಾತನಹಳ್ಳಿ ಗ್ರಾಮದ ಜವರಯ್ಯ(48) ಸ್ಥಳದಲ್ಲೇ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಹಾಸನದ ಹಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ?

ಜವರಯ್ಯ ಪತ್ನಿ ಮಂಜುಳಾ ಹಾಗೂ ಮೂಡ್ಲಗಿರಿ ನಡುವೆ ಅಕ್ರಮ ಸಂಬಂಧ ಕೇಳಿಬಂದಿತ್ತು. ಇವರಿಬ್ಬರ ನಡುವಿನ ಚಕ್ಕಂದ ಊರಿನವರ ಬಾಯಲ್ಲಿ ಹರಿದಾಡುತ್ತಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಮಂಜುಳಾ ಹಾಗೂ ಮೂಡ್ಲಗಿರಿ ಸಣ್ಣ ಜಗಳ ಶುರುವಾಗಿದೆ. ಊರಿನವರು ಅಕ್ರಮ ಸಂಬಂಧದ ಬಗ್ಗೆ ಮಾತಾಡ್ತಿದ್ದಾರೆ. ಇನ್ಮೇಲೆ ಮನೆ ಬಳಿ ಬರಬೇಡ ಎಂದು ಹೇಳಿದ್ದಾಳೆ. ಆದರೆ ಅವನು ಮಂಜುಳಾ ಮಾತನ್ನು ಕಡೆಗಣಿಸಿದ್ದಾನೆ. ಹೀಗಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. 

ನಿನ್ನೆ ಮಧ್ಯಾಹ್ನ ಮತ್ತೆ ಕ್ಯಾತನಹಳ್ಳಿ ಮಂಜುಳಾ ಮನೆಗೆ ಮೂಡ್ಲಗಿರಿ ಹೋಗಿದ್ರಿಂದ ಸಿಟ್ಟಿಗೆದ್ದ ಮಂಜುಳಾ, ಮನೆ ಕಡೆ ಬರದಂತೆ ಹೇಳಿದ್ರೂ ಮತ್ತೆ ಬಂದಿದ್ದಕ್ಕೆ ಕೋಪಗೊಂಡಿದ್ದಾಳೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಮೂಡ್ಲಗಿರಿ ಚಾಕುವಿನಿಂದ ಮಂಜುಳಾಗೆ ಇರಿಯಲು ಮುಂದಾಗಿದ್ದಾನೆ. ಈ ವೇಳೆ ರಕ್ಷಣೆಗೆ ಬಂದ ಪತಿ ಜವರಯ್ಯನಿಗೂ ಚಾಕುವಿನಿಂದ ಇರಿದಿರುವ ಹಂತಕ. ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ಜವರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ. 

ನನ್ನಾಸೆ ಬಳ್ಳಿ ಕುಸುಮ ಅಂದವನ ಬದುಕನ್ನೇ ಬರ್ಬಾದ್‌ ಮಾಡಿದ್ಲು ಬೆಡಗಿ!

ಹೊಳೆನರಸೀಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Follow Us:
Download App:
  • android
  • ios