ನನ್ನಾಸೆ ಬಳ್ಳಿ ಕುಸುಮ ಅಂದವನ ಬದುಕನ್ನೇ ಬರ್ಬಾದ್ ಮಾಡಿದ್ಲು ಬೆಡಗಿ!
ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಕಾರಣಕ್ಕೆ ಎರಡು ವಾರದ ಹಿಂದೆ ಚೆನ್ನೈ ಮೂಲದ ವೈದ್ಯನೊಬ್ಬನ್ನು ಆತನ ಭಾವಿ ಪತ್ನಿಯೇ ಕೊಲೆ ಮಾಡಿದ್ದು ಸುದ್ದಿಯಾಗಿತ್ತು. ಈ ಪ್ರಕರಣಕ್ಕೀಗ ರೋಚಕ ತಿರುವು ಸಿಕ್ಕಿದ್ದು, ಅಶ್ಲೀಲ ಫೋಟೋ ಸೋರಿಕೆ ಎಂದಿಗೂ ಕೊಲೆಯ ಕಾರಣವಾಗಿರಲಿಲ್ಲ. ಆಕೆಗೆ ಇನ್ನೊಂದು ಸಂಬಂಧವಿತ್ತು. ಇದನ್ನು ಪ್ರಶ್ನಿಸಿದ ಕಾರಣಕ್ಕೆ ಆತನನ್ನು ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾರೆ.
ಬೆಂಗಳೂರು (ಅ.11): ಸರಿಯಾಗಿ 2 ದಿನಗಳ ಹಿಂದೆ ನಾವು ಚೆನ್ನೈ ಮೂಲದ ಡಾಕ್ಟರ್ ಒಬ್ಬನ ಕೊಲೆ ಕಥೆ ಬಗ್ಗೆ ಹೇಳಿದ್ದೆವು. ಆ ವೈದ್ಯನಿಗೆ ಬೆಂಗಳೂರಿನ ಸುಂದರಿಯೊಬ್ಬಳ ಪರಿಚಯವಾಗುತ್ತೆ. ಪರಿಚಯ ಸ್ನೇಹವಾಗಿ ನಂತರ ಅದು ಪ್ರೀತಿಗೆ ತಿರುಗುತ್ತೆ. ಇಬ್ಬರೂ ತಮ್ಮ ಪೋಷಕರನ್ನ ಒಪ್ಪಿಸಿ ಮದುವೆಗೂ ಸಿದ್ಧರಾಗ್ತಾರೆ. ಇನ್ನೇನು ಮದುವೆಯಾಗಲು ಮೂರು ತಿಂಗಳಷ್ಟೇ ಬಾಕಿ ಇರುತ್ತೆ ಈ ಟೈಂನಲ್ಲಿ ಡಾಕ್ಟರ್ ಒಂದು ಎಡವಟ್ಟು ಮಾಡಿಕೊಂಡು ತನ್ನ ಪ್ರೇಯಸಿಯಿಂದಲೆ ಕೊಲೆಯಾಗಿದ್ದ ಅನ್ನೋದು ಆ ಸುದ್ದಿ,
ಅಂದು ಭಾವಿ ಪತಿಯನ್ನು ಕೊಂದ ಆರ್ಕಿಟೆಕ್ಟ್ ಒಂದು ಕಥೆ ಹೇಳಿದ್ದಳು. ತನ್ನ ಖಾಸಗಿ ಫೋಟೋಗಳನ್ನು ಲೀಕ್ ಮಾಡಿದ್ದಕ್ಕಾಗಿ ಹೀಗೆ ಮಾಡಿದ್ದೆ ಎಂದಿದ್ದಳು. ಆದರೆ, ಈ ಕೇಸ್‌ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಯಾಕೆಂದರೆ, ಆಕೆ ಹೇಳಿದ್ದು ಬರೀ ಕಥೆಯಾಗಿತ್ತು. ಯಾಕೆಂದರೆ, ವೈದ್ಯನನ್ನು ಕೊಲೆ ಮಾಡುವ ಹಿಂದೆ ಬೇರೆಯದ್ದೇ ಕಾರಣವಿತ್ತು.
ಪ್ರೇಮ ಗೀಮ ಜಾನೇದೋ ಅಂದ್ರೆ ಮೋಸವೋ...ನಗ್ನಚಿತ್ರಗಳಿಗೆ ನಾಶವಾಯ್ತು ಪ್ರೀತಿ..!
ವೈದ್ಯ ವಿಕಾಸ್ ಹಾಗೂ ಪ್ರತಿಭಾ ನಡುವೆ ಮದುವೆ ನಿಶ್ಚಯವಾಗಿದ್ದರೂ, ಪ್ರತಿಭಾಗೆ ಅದಾಗಲೇ ಒಂದು ಅನೈತಿಕ ಸಂಬಂಧವಿತ್ತು. ಇದು ವಿಕಾಸ್‌ಗೂ ತಿಳಿದಿತ್ತು. ಈ ಬಗ್ಗೆ ಎಚ್ಚರಿಕೆ ನೀಡಿದ್ದ ಕಾರಣಕ್ಕೆ ಗೆಳೆಯನ ಜೊತೆಗೂಡಿ ಭಾವಿ ಪತಿಯನ್ನೇ ಕೊಲೆ ಮಾಡಿದ್ದಾಳೆ.