ಭಾವನೊಂದಿಗೆ ಅನೈತಿಕ ಸಂಬಂಧ ಶಂಕೆ: ಪತ್ನಿ ಕೊಂದು ಆಕೆಯ ಅಣ್ಣನಿಗೆ ಹತ್ಯೆ ಮೆಸೇಜ್‌!

ಪ್ರೀತಿಸಿ ಮದುವೆ ಆದವಳ ಮೇಲೆ ಅನೈತಿಕ ಸಂಬಂಧದ ಅನುಮಾನ. ಕತ್ತುಹಿಸುಕಿ ಕೊಂದು ಕೋಲ್ಕತ್ತಾಕ್ಕೆ ಪರಾರಿ. ಸುಭಾಷ್‌ ನಗರದಲ್ಲಿ ಘಟನೆ. *ಹಾಡ್‌ವೇರ್‌ ವೃತ್ತಿಯಲ್ಲಿದ್ದವನೊಂದಿಗೆ ಪ್ರೀತಿ. ಮನೆಯವರ ವಿರೋಧದ ನಡುವೆ ವಿವಾಹ. ಬಳಿಕ ಆಕೆಯ ನಡುವಳಿಕೆ ಬಗ್ಗೆ ಅನುಮಾನ. ನಿತ್ಯ ಜಗಳ, ಬುದ್ಧಿ ಹೇಳಿದ್ದ ಅತ್ತೆ, ಮಾವ ನೆ ಬದಲಿಸಿದರೂ ನಿಲ್ಲದ ಜಗಳ, ಕೊಲೆ

Husband kills wife suspecting illicit relationship in Bengaluru texted brother in law

ಬೆಂಗಳೂರು: ಆರು ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನು ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಕೊಂದು ಬಳಿಕ ಮೃತಳ ಸೋದರನಿಗೆ ಕೊಲೆ ಮಾಡಿರುವುದಾಗಿ ಸಂದೇಶ ಕಳುಹಿಸಿ ಪತಿ ಪರಾರಿ ಆಗಿರುವ ಘಟನೆ ಸದ್ದುಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾವರೆಕೆರೆ ಸಮೀಪದ ಸುಭಾಷ್‌ ನಗರದ ಅಪಾರ್ಚ್‌ಮೆಂಟ್‌ ನಿವಾಸಿ ನಾಜ್‌ ಖಾನಂ (22) ಕೊಲೆಯಾದ ದುರ್ದೈವಿ. ಕೃತ್ಯ ಎಸಗಿ ಪರಾರಿ ಆಗಿರುವ ಮೃತಳ ಪತಿ ನಾಸಿರ್‌ ಹುಸೇನ್‌ (30) ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಭಾನುವಾರ ರಾತ್ರಿ ಜಗಳ ವಿಕೋಪಕ್ಕೆ ಹೋಗಿ ಹುಸೇನ್‌, ಪತ್ನಿಯ ಕತ್ತು ಹಿಸುಕಿ ಕೊಂದು ವಿಮಾನದ ಮೂಲಕ ಕೊಲ್ಕತ್ತಾಗೆ ಸೋಮವಾರ ಪರಾರಿಯಾಗಿದ್ದಾನೆ. ಇದಕ್ಕೂ ಮುನ್ನ ಮೃತಳ ಸೋದರನಿಗೆ ಎಸ್‌ಎಂಎಸ್‌ ಕಳುಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದೃಶ್ಯಂ ಚಿತ್ರದ ಸ್ಟೈಲ್‌ನಲ್ಲಿ ನಡೆಯಿತು ಕೊಲೆ, ಗಂಡನನ್ನು ಹೂತು ಸೆಪ್ಟಿಕ್‌ ಟ್ಯಾಂಕ್‌ ಕಟ್ಟಿದ್ದ ಪತ್ನಿ!

ಕೊಂದಿದ್ದೇನೆ, ಬಾಡಿ ತಗೊಂಡು ಹೋಗಿ: ಆರು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದ ನಾಸೀರ್‌ ಹುಸೇನ್‌ ಹಾಗೂ ನಾಜ್‌ ಖಾನಂ ಪ್ರೀತಿಸಿ ವಿವಾಹವಾಗಿದ್ದರು. ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ ಆರೋಪಿ, ಮೊದಲು ನಾಜ್‌ ಖಾನಂ ಮನೆ ಪಕ್ಕದಲ್ಲೇ ವಾಸವಾಗಿದ್ದ. ಆಗ ಇಬ್ಬರಿಗೂ ಪರಿಚಯವಾಗಿ ಬಳಿಕ ಪ್ರೇಮವಾಗಿತ್ತು. ಹಾರ್ಡ್‌ವೇರ್‌ ಎಂಜಿನಿಯರ್‌ ಆಗಿದ್ದ ಹುಸೇನ್‌ಗೆ ಕೈ ತುಂಬಾ ಸಂಬಳ ಬರುತ್ತದೆ. ಸ್ಥಿತಿವಂತ ಎಂದು ಭಾವಿಸಿ ನಾಜ್‌ ಖಾನಂ ಕುಟುಂಬ ಮದುವೆ ಸಮ್ಮತಿಸಿತ್ತು. ಆದರೆ ಈ ವಿವಾಹಕ್ಕೆ ಹುಸೇನ್‌ ಕುಟುಂಬ ವಿರೋಧಿಸಿತು. ಕೊನೆಗೆ ತನ್ನ ಪೋಷಕರ ಗೈರು ಹಾಜರಿಯಲ್ಲೇ ನಾಜ್‌ ಖಾನಂ ಜತೆ ಆತ ವಿವಾಹವಾಗಿದ್ದ. ಮದುವೆ ನಂತರ ಸುಭಾಷ್‌ ನಗರದಲ್ಲಿ ಅವರು ನೆಲೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ತನ್ನ ಪತ್ನಿ ನಡತೆ ಶಂಕಿಸಿದ ಆರೋಪಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈ ಜಗಳದ ವಿಚಾರ ತಿಳಿದು ಅಳಿಯನಿಗೆ ನಾಜ್‌ ಕುಟುಂಬದವರು ಬುದ್ಧಿ ಹೇಳಿದ್ದರೂ ಸಹ ಆತ ಬದಲಾಗಲಿಲ್ಲ. ಈ ಕಲಹ ಹಿನ್ನೆಲೆಯಲ್ಲಿ 20 ದಿನಗಳ ಹಿಂದೆ ಸುಭಾಷ್‌ ನಗರಕ್ಕೆ ಅಪಾರ್ಚ್‌ಮೆಂಟ್‌ಗೆ ಆತ ವಾಸ್ತವ್ಯ ಬದಲಾಯಿಸಿದ. ಎಂದಿನಂತೆ ಭಾನುವಾರ ರಾತ್ರಿ ಕೂಡಾ ಪತ್ನಿ ಜತೆ ಆತ ಜಗಳ ಶುರು ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದ ಕೆರಳಿದ ಆರೋಪಿ, ಪತ್ನಿಯನ್ನು ಕೊಂದಿದ್ದಾನೆ.

ಸೋಮವಾರ ಬೆಳಗ್ಗೆ 10ಕ್ಕೆ ಮೃತಳ ಅಣ್ಣ ಆಯೂಬ್‌ ಖಾನ್‌ ಮೊಬೈಲ್‌ಗೆ ‘ನಿನ್ನ ತಂಗಿಯನ್ನು ಕೊಲೆ ಮಾಡಿದ್ದೇನೆ. ಬಂದು ಮೃತದೇಹವನ್ನು ತೆಗೆದುಕೊಂಡು ಹೋಗಿ’ ಎಂದು ಸಂದೇಶ ಕಳುಹಿಸಿ ಪರಾರಿಯಾಗಿದ್ದಾನೆ. ಈ ಸಂದೇಶ ನೋಡಿದ ಕೂಡಲೇ ಆತಂಕದಿಂದ ತಂಗಿಯ ಮನೆಗೆ ಖಾನ್‌ ಬಂದಿದ್ದಾರೆ. ಆಗ ತಂಗಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಕೊನೆಗೆ ಬಾಗಿಲು ಮುರಿದು ಒಳ ಪ್ರವೇಶಿಸಿದ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ರೇಪ್: ವಿಡಿಯೋ ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್..!

ಮೃತಳ ಭಾವನಿಗೂ ಕೊಲ್ಲುವ ಸಂದೇಶ
ತನ್ನ ಪತ್ನಿಯು ಆಕೆಯ ಅಕ್ಕನ ಗಂಡ ಇಲಿಯಾಸ್‌ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿ ಶಂಕಿಸಿದ್ದ. ಈ ಅನುಮಾನದಿಂದ ಪತ್ನಿ ಕೊಂದ ಬಳಿಕ ಆತ, ಇಲಿಯಾಸ್‌ಗೆ ‘ನಿನ್ನನ್ನು ಕೊಲ್ಲುತ್ತೇನೆ’ ಎಂದು ಸಂದೇಶ ಕಳುಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios