Belagavi: ವಿಚ್ಛೇದನ ಕೋರಿದ್ದ ಪತ್ನಿಯನ್ನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಗಂಡ..!

*  ಬೆಳಗಾವಿ ನಗರದ ಕೋಟೆ ಕೆರೆಯ ಹತ್ತಿರದ ನಡೆದ ಘಟನೆ
*  ದಂಪತಿ ಮಧ್ಯೆ ಇದ್ದ ಕೌಟುಂಬಿಕ ಕಲಹ
*  ಈ ಕುರಿತು ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 

Husband Killed Wife in Belagavi grg

ಬೆಳಗಾವಿ(ಮಾ.26):  ವಿಚ್ಛೇದನ(Divorce) ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಪತ್ನಿಯನ್ನು ಪತಿಯೇ ಸಾರ್ವಜನಿಕರವಾಗಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ(Murder) ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಗರದ ಕೋಟೆ ಕೆರೆಯ ಹತ್ತಿರದ ನಡೆದಿದೆ. ಈ ಘಟನೆಯಿಂದಾಗಿ ನಗರದ ಜನತೆ ಬೆಚ್ಚಿ ಬಿಳ್ಳುವಂತಾಗಿದೆ.

ಇಲ್ಲಿನ ಗಾಂಧಿ ನಗರದ ಹೀನಾ ಕೌಸರ್‌ ಮಂಜೂರ ಇಲಾಹಿ ನದಾಫ (27) ಹತ್ಯೆಗೀಡಾದ ಮಹಿಳೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಮಂಜೂರ್‌ ಇಲಾಹಿ ನದಾಫ (34) ಹತ್ಯೆ ಮಾಡಿದ ಆರೋಪಿ(Accused). ಹೀನಾಕೌಸರ್‌ ಕಳೆದ ನಾಲ್ಕು ವರ್ಷಗಳ ಹಿಂದೆ ಮಂಜೂರ್‌ ಜತೆ ವಿವಾಹವಾಗಿದ್ದರು(Marriage). ಈ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ತಾಯಿ ಮೃತಪಟ್ಟಿದ್ದು(Death), ತಂದೆ ಜೈಲು ಪಾಲಾದ ಕಾರಣಕ್ಕೆ ನಾಲ್ಕು ವರ್ಷದ ಮಗು ಈಗ ಅನಾಥವಾಗಿದೆ. ಮಂಜೂರ ಕೆಲ ವರ್ಷಗಳಿಂದ ಹೀನಾ ಕೌಸರ ಮೇಲೆ ದೈಹಿಕ ಹಲ್ಲೆ(Assault) ಜತೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕೆ ಹೀನಾಕೌಸರ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

Belagavi Murder: ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಕಾರಿನಲ್ಲಿತ್ತಾ 70 ಲಕ್ಷ ಹಾರ್ಡ್‌ಕ್ಯಾಶ್?

ಹತ್ಯೆಗೈದು ಆರೋಪಿ ಮಂಜೂರ್‌ ಹಾಗೂ ಹತ್ಯೆಗೀಡಾದ ಹೀನಾಕೌಸರ್‌ ನಡುವೆ ಕೌಟುಂಬಿಕ ಕಲಹವಿತ್ತು. ಈ ಕಾರಣದಿಂದಾಗಿ ಕಳೆದ ಎಂಟು ತಿಂಗಳ ಹಿಂದೆ ಹೀನಾಕೌಸರ್‌ ವಿಚ್ಛೇದನ ಕೋರಿ, ಬೆಳಗಾವಿಯ(Belagavi) ಕೌಟುಂಬಿಕ ನ್ಯಾಯಾಲಯದಲ್ಲಿ(Family Court) ಅರ್ಜಿ ಸಲ್ಲಿಸಿದ್ದರು. 

ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ಗಾಂಧಿನಗರದಲ್ಲಿ ಇರುವ ತವರು ಮನೆಗೆ ಹೀನಾಕೌಸರ್‌ ವಾಪಸ್‌ ಆಗುತ್ತಿದ್ದರು. ಈ ವೇಳೆ ಕೋಟೆ ಕೆರೆ ಬಳಿ ಬಂದ ಮಂಜೂರ್‌ ನಡೆದುಕೊಂಡು ಹೋಗುತ್ತಿದ್ದ ಹೀನಾಕೌಸರ್‌ ಅವರನ್ನು ಅಡ್ಡಗಟ್ಟಿ ಕೆಲಹೊತ್ತು ವಾಗ್ವಾದ ಮಾಡಿದ್ದಾನೆ. ಬಳಿಕ ತನ್ನ ಬ್ಯಾಗ್‌ನಲ್ಲಿ ತಂದಿದ್ದ ಮಚ್ಚಿನಿಂದ ಬರ್ಬರವಾಗಿ ನಡುರಸ್ತೆಯಲ್ಲಿಯೇ ಹೀನಾಕೌಸರ್‌ ಕುತ್ತಿಗೆ ಹಾಗೂ ಕೈಗೆ ಮಚ್ಚಿನಿಂದ ಕೊಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆಕೆಯನ್ನು, ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಹೀನಾಕೌಸರ್‌ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಹಾಗೂ ಮಾರ್ಕೆಟ್‌ ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಈ ಕುರಿತು ಮಾಳಮಾರುತಿ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗು ಹುಟ್ಟುವ ವೇಳೆ ಅಡ್ಡ ಬಂದ ಜಾತಿ...ಗರ್ಭಿಣಿ ಪತ್ನಿ ಕೊಲೆ

ಮೈಸೂರು: ಆಕೆ ರಕ್ತದಲ್ಲಿನ ಕಲ್ಮಶ ಹುಡುಕಿ ವೈದ್ಯರಿಗೆ ತಿಳಿಸುವ ಲ್ಯಾಬ್ ಟೆಕ್ನಿಷಿಯನ್. ಈತನೂ ಆಸ್ಪತ್ರೆಗಳಿಗೆ ಔಷಧಿ ಸಾಗಿನೋ ವಾಹನದ ಚಾಲಕ. ಫೀಲ್ಡಲ್ಲಿ ಓಡಾಡಿಕೊಂಡಿದ್ದಾಗ ಪರಿಚಯವಾಗಿ, ಆ ಪರಿಚಯ ಪ್ರೇಮಾಂಕುರಕ್ಕೆ (Love) ಕಾರಣ ಆಗಿದೆ. ಜಾತಿ ಬೇರೆಯಾದರೇನಂತೆ ಎಂದು ಕುಟುಂಬ ಎದುರಿಸಿ ಮದುವೆಯಾದವನಿಗೆ ಮಗು ಹುಟ್ಟುವ ವೇಳೆಗೆ ಜಾತಿಯ (Caste) ಹುಳು ತಲೆ ಹೊಕ್ಕಿದೆ. ಇದೇ ಕಾರಣಕ್ಕೆ 7 ತಿಂಗಳ ಗರ್ಭಿಣಿಯನ್ನು(Pregnant) ನಿರ್ಭಯವಾಗಿ ಕೊಂದು (Murder) ಕೆರೆಗೆ ಎಸೆದಿದ್ದಾನೆ ದುರುಳ.

Belagavi Murder: ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಮುಳುವಾಯ್ತಾ ಮೂರು ಮದುವೆ

ಪ್ರೀತಿ ಕುರುಡು ಆಂತಾರೆ ಓಕೆ. ಆದ್ರೆ ಸಂಸಾರ ಕಣ್ಣು ಮುಚ್ಚಿದರೆ ನಡೆದರೆ ಸಾಗದು. ಈ ದಾರುಣ ಪ್ರಕರಣದಲ್ಲೂ ಅದೇ ಆಗಿದೆ. ದೈಹಿಕ ಹಲ್ಲೆ ನಡೆಸಿ, ನಂತರ ಉಸಿರುಗಟ್ಟಿಸಿ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪತಿ, ಮೃತದೇಹವನ್ನು ರಾತ್ರೋ-ರಾತ್ರಿ ಕೆರೆಗೆ ಎಸೆದಿದ್ದಾನೆ. ಮೈಸೂರು (Mysuru) ನಗರದ ಹೊರ ವಲಯ ಬೆಳವಾಡಿ ಕೆರೆಯಲ್ಲಿ ಮಾ. 22 ರಂದು  ಘಟನೆ ನಡೆದಿತ್ತು.

ಮೈಸೂರಿನ ಹಿನಕಲ್ ಗ್ರಾಮದ ನನ್ನೇಶ್ವರ ಬಡಾವಣೆ ನಿವಾಸಿ ಪ್ರಮೋದ್ ಪತ್ನಿ ಅಶ್ವಿನಿ(23) ಹತ್ಯೆಗೀಡಾದ ಗರ್ಭಿಣಿ ಮಹಿಳೆ. ಮೈಸೂರು ತಾಲೂಕಿನ ಉದ್ಬೂರು ಗ್ರಾಮದ ಸ್ವಾಮಿ ಮತ್ತು ಲಕ್ಷ್ಮಿ ದಂಪತಿ ಪುತ್ರಿಯಾದ ಅಶ್ವಿನಿ ಮೈಸೂರು ತಾಲೂಕು ಮೈದನಹಳ್ಳಿ ಗ್ರಾಮದ ನಂದೀಶ್ ಮಗ ಪ್ರಮೋದ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕೃಷಿ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿದ್ದ ಪ್ರಮೋದನೊಂದಿಗೆ 2021ರ ಜೂನ್ 13ರಂದು ಮದುವೆಯಾಗಿದ್ದು, ಅಶ್ವಿನಿ ಈಗ 7 ತಿಂಗಳ ಗರ್ಭಿಣಿ. ಮದುವೆಯಾದ ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಆಸಾಮಿ ನಂತರ ತನ್ನ ವರಸೆ ಬದಲಿಸಿದ್ದನು.
 

Latest Videos
Follow Us:
Download App:
  • android
  • ios