ಗ್ರಾಮಸ್ಥರ ಒಡನಾಡಿಯಾಗಿದ್ದ ಕಾಡುಹಂದಿಗೆ ನಾಡಬಾಂಬ್‌ ಇಟ್ಟು ಹತ್ಯೆ; ಆರೋಪಿ ಬಂಧನ

ತಾಲೂಕಿನ ಚೆಂಡಿಯಾ ಬಳಿ ಗ್ರಾಮಸ್ಥರ ಒಡನಾಡಿಯಾಗಿದ್ದ ಕಾಡುಹಂದಿಯನ್ನು ನಾಡಬಾಂಬ್‌ ಇಟ್ಟು ಹತ್ಯೆ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸೀಫ್ರನ್‌ ಥಾಮಸ್‌ ಫರ್ನಾಂಡಿಸ್‌ ಹಂದಿ ಹತ್ಯೆ ಮಾಡಿದ ಆರೋಪದ ಮೇಲೆ ಅರಣ್ಯ ಅಧಿಕಾರಿಗಳ ವಶದಲ್ಲಿರುವ ಆರೋಪಿ.

A wild boar was killed by a land bomb; Accused arrested at karwar rav

ಕಾರವಾರ (ಆ.7) :  ತಾಲೂಕಿನ ಚೆಂಡಿಯಾ ಬಳಿ ಗ್ರಾಮಸ್ಥರ ಒಡನಾಡಿಯಾಗಿದ್ದ ಕಾಡುಹಂದಿಯನ್ನು ನಾಡಬಾಂಬ್‌ ಇಟ್ಟು ಹತ್ಯೆ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸೀಫ್ರನ್‌ ಥಾಮಸ್‌ ಫರ್ನಾಂಡಿಸ್‌(Seephron Thomas Fernandes) ಹಂದಿ ಹತ್ಯೆ ಮಾಡಿದ ಆರೋಪದ ಮೇಲೆ ಅರಣ್ಯ ಅಧಿಕಾರಿಗಳ ವಶದಲ್ಲಿರುವ ಆರೋಪಿ.

ಕೆಲವು ದಿನಗಳಿಂದ ಕಾಡುಹಂದಿಗಳ ಗುಂಪು ಜನವಸತಿ ಪ್ರದೇಶಗಳಿಗೆ ಬರುತ್ತಿತ್ತು. ಇದನ್ನು ಗಮನಿಸಿದ ಚೆಂಡಿಯಾ ಗ್ರಾಮದವರು ಹಂದಿಗೆ ಹಣ್ಣು, ತರಕಾರಿ ಸೇರಿದಂತೆ ವಿವಿಧ ಆಹಾರ ನೀಡುತ್ತಿದ್ದರು. ಕಾಡುಹಂದಿ ಜನರಿಗೆ ಯಾವುದೆ ತೊಂದರೆ ಉಂಟು ಮಾಡದೆ ರಾತ್ರಿ ವೇಳೆ ನಾಡಿಗೆ ಬಂದು ಆಹಾರ ತಿಂದು ಹೋಗುತ್ತಿತ್ತು. ಕೆಲವೊಮ್ಮೆ ಈ ಹಂದಿ ಹಗಲಿನ ವೇಳೆಯೂ ಬರುತ್ತಿತ್ತು.

ಪಂಜುರ್ಲಿ ದೈವದ ರೂಪವಾಗಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು, ಬಾಂಬ್‌ ಇಟ್ಟು ಹತ್ಯೆಗೈದ ದುಷ್ಕರ್ಮಿಗಳು

ಆದರೆ ಶುಕ್ರವಾರ ರಾತ್ರಿ ಸ್ಥಳೀಯರಿಗೆ ಬಾಂಬ್‌ ಸಿಡಿದ ಶಬ್ದ ಕೇಳಿಸಿದೆ. ಬಳಿಕ ಗ್ರಾಮದ ಸ್ಮಶಾನದ ಬಳಿ ಆಹಾರಕ್ಕಾಗಿ ಬರುತ್ತಿದ್ದ ಹಂದಿಯು ನಾಡ ಬಾಂಬ್‌ ತಿಂದು ಮೃತಪಟ್ಟಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಡ ಬಾಂಬ್‌ಗೆ ಕೋಳಿ ಮಾಂಸವನ್ನು ಕಟ್ಟಿಇಡಲಾಗಿದ್ದು ಹಂದಿಯು ಮಾಂಸ ತಿಂದೊಡನೆ ಸ್ಫೋಟಗೊಂಡು ಮೃತಪಟ್ಟಿರುವುದು ಖಚಿತವಾಗಿದೆ. ಸ್ಥಳದಲ್ಲಿ ಇನ್ನೊಂದು ಜೀವಂತ ನಾಡ ಬಾಂಬ್‌ ಕೂಡಾ ಪತ್ತೆಯಾಗಿದ್ದು ಶನಿವಾರ ಆರೋಪಿ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೋಲ ನಡೆಯುವಾಗ್ಲೇ ಬಿತ್ತು ಹೆಣ..ಕೊಲೆಗಾರನ ಬಗ್ಗೆ ದೈವವೇ ಕೊಟ್ತು ಸುಳಿವು..!

 

ಇದೀಗ ಇದೇ ಪ್ರದೇಶದಲ್ಲಿ ಪೊಲೀಸರು ಮತ್ತೊಂದು ಸಜೀವ ಬಾಂಬ್‌ ಪತ್ತೆ ಮಾಡಿದ್ದು, ಮಂಗಳೂರಿನಿಂದ ಬಾಂಬ್‌ ನಿಷ್ಕಿ್ರಯ ದಳ ಆಗಮಿಸಿ ಪರಿಶೀಲನೆ ನಡೆಸಿದೆ.

Latest Videos
Follow Us:
Download App:
  • android
  • ios