ದೀಪಾವಳಿ ಪಟಾಕಿ ನೆನಪಿಸಿದ ಬ್ಯಾಟಿಂಗ್, ಸಂಜು -ತಿಲಕ್ ವರ್ಮಾ ಸೆಂಚುರಿಯಿಂದ 284 ರನ್ ಟಾರ್ಗೆಟ್!
ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಇಷ್ಟೇ ಅಲ್ಲ ಸೌತ್ ಆಫ್ರಿಕಾಗೆ 284 ರನ್ ಟಾರ್ಗೆಟ್ ನೀಡಿದೆ.
ಜೋಹಾನ್ಸ್‌ಬರ್ಗ್(ನ.15) ಒಂದಡೆ ಸಂಜು ಸ್ಯಾಮ್ಸನ್, ಮತ್ತೊಂದೆಡೆ ತಿಲಕ್ ವರ್ಮಾ. ಇಬ್ಬರು ಪೈಪೋಟಿಗೆ ಬಿದ್ದು ಅಬ್ಬರಿಸಿದರು. ಬೌಂಡರಿ, ಸಿಕ್ಸರ್ ಅಬ್ಬರವೇ ಹೆಚ್ಚಾಗಿತ್ತು. ಸೌತ್ ಆಫ್ರಿಕಾ ಬಳಿ ಉತ್ತರವೇ ಇಲ್ಲದಾಯಿತು. ಸಂಜು ಸ್ಯಾಮ್ಸನ್ ಕೇವಲ 51 ಎಸೆತದಲ್ಲಿ ಶತಕ ಸಿಡಿಸಿ ದಾಖಲೆ ಬರೆದರೆ, ಇತ್ತ ತಿಲಕ್ ವರ್ಮಾ 41 ಎಸೆತದಲ್ಲಿ ಸೆಂಚುರಿ ಪೂರೈಸಿದರು. ತಿಲಕ್ ವರ್ಮಾ ಸತತ ಸೆಂಚುರಿ ಸಿಡಿಸಿ ದಾಖಲೆ ಬರೆದರು. ಈ ಮೂಲಕ ಟಿ20ಯಲ್ಲಿ ಸತತ ಶತಕ ಸಿಡಿಸಿದ 5ನೇ ಅಂತಾರಾಷ್ಟ್ರೀಯ ಕ್ರಿಕೆಟಿ ಹಾಗೂ ಭಾರತದ 2ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಬ್ಬರದ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 283 ರನ್ ಸಿಡಿಸಿದೆ.
ಸತತ ಶತಕ ಸಿಡಿಸಿದ ಅಂತಾರಾಷ್ಟ್ರೀಯ ಕ್ರಿಕೆಟಿಗರು(ಟಿ20)
ಗುಸ್ತವ್ ಮೆಕೆನ್
ರಿಲೇ ರೊಸೊ
ಫಿಲ್ ಸಾಲ್ಟ್
ಸಂಜು ಸ್ಯಾಮ್ಸನ್
ತಿಲಕ್ ವರ್ಮಾ
ಮುಟ್ಟಿದ್ದೆಲ್ಲವೂ ಬೌಂಡರಿ ಸಿಕ್ಸರ್. ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಅಭಮಾನಿಗಳಿಗೆ ದೀಪಾವಳಿ ಪಟಾಕಿ ನೆನಪಿಸಿತ್ತು. ಬಾನೆತ್ತರದ ಸಿಕ್ಸರ್ ಅಬ್ಬರಕ್ಕೆ ಸೌತ್ ಆಫ್ರಿಕಾ ಮಂಕಾಯಿತು. ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಯಾವ ಹಂತದಲ್ಲೂ ಬ್ಯಾಟಿಂಗ್‌ನಲ್ಲಿ ಸವಾಲು ಎದುರಿಸಲು ಅವಕಾಶವೇ ನೀಡಲಿಲ್ಲ. ಆರಂಭಿಕ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭಕ್ಕೆ ಸೌತ್ ಆಫ್ರಿಕಾ ಕಂಗಾಲಾಗಿತ್ತು. ಆದರೆ ಅಭಿಷೇಕ್ ಶರ್ಮಾ, 18 ಎಸೆತದಲ್ಲಿ 36 ರನ್ ಸಿಡಿಸಿ ನಿರ್ಗಮಿಸಿದ್ದರು. ಅಭಿಷೇಕ್ 2 ಬೌಂಡರಿ 4 ಸಿಕ್ಸರ್ ಸಿಡಿಸಿದ್ದರು.
ಶರ್ಮಾ ಬಳಿಕ ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಜೋಡಿ ಇನ್ನಿಂಗ್ಸ್ ಟೀಂ ಇಂಡಿಯಾದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಇಬ್ಬರು 200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಹೀಗಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಯಿತು. ಸಂಜು ಸ್ಯಾಮ್ಸನ್ 56 ಎಸೆತದಲ್ಲಿ ಅಜೇಯ 109 ರನ್ ಸಿಡಿಸಿದರೆ, ತಿಲಕ್ ವರ್ಮಾ 47 ಎಸೆತದಲ್ಲಿ ಅಜೇಯ 10 ರನ್ ಸಿಡಿಸಿದರು. ತಿಲಕ್ 10 ಸಿಕ್ಸರ್ ಸಿಡಿಸಿದರೆ, ಸಂಜು 9 ಸಿಕ್ಸರ್ ಸಿಡಿಸಿದರು.
ಈ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಒಟ್ಟು 23 ಸಿಕ್ಸರ್ ಸಿಡಿಸಿ ದಾಖಲೆ ಬರೆಯಿತು. ಭಾರತ 20 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 283 ರನ್ ಸಿಡಿಸಿತು. ಇದು ಟೀಂ ಇಂಡಿಯಾ ಟಿ20ಯಲ್ಲಿ ಸಿಡಿಸಿದ 2ನೇ ಅತ್ಯುತ್ತಮ ಸ್ಕೋರ್ ಅನ್ನೋ ದಾಖಲೆ ಬರೆಯಿತು.
ಭಾರತದ 2ನೇ ಅತ್ಯುತ್ತ ಸ್ಕೋರ್(ಟಿ20)
ಭಾರತ; 297 ರನ್ vs ಬಾಂಗ್ಲಾದೇಶ, 2024
ಭಾರತ; 283 ರನ್ vs ಸೌತ್ ಆಫ್ರಿಕಾ, 2024
ಭಾರತ ; 260 ರನ್ vs ಶ್ರೀಲಂಕಾ, 2017