ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ 99 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ

ಬೆಂಗಳೂರು: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ. ಆದರೆ ಕೇವಲ ಒಂದು ರನ್ ಅಂತರದಲ್ಲಿ ರಿಷಭ್ ಪಂತ್ ಸ್ಮರಣೀಯ ಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿದ್ದಾರೆ. ಪಂತ್ ಅವರ ಸ್ಪೋಟಕ ಬ್ಯಾಟಿಂಗ್‌ನಿಂದಾಗಿ ಟೀಂ ಇಂಡಿಯಾ ಅಮೂಲ್ಯ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಚಿನ್ನಸ್ವಾಮಿ ಸ್ಟೆಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗಾಯದ ಸಮಸ್ಯೆಯ ನಡುವೆಯೂ ಕ್ರೀಸ್‌ಗಿಳಿದ ರಿಷಭ್ ಪಂತ್, ಸರ್ಫರಾಜ್ ಖಾನ್ ಜತೆಗೂಡಿ ಅಮೂಲ್ಯ ಶತಕದ ಜತೆಯಾಟವಾಡುವ ಮೂಲಕ ಆಸರೆಯಾದರು. ಆದರೆ ಮೂರಂಕಿ ಮೊತ್ತ ದಾಖಲಿಸಲು ಕೇವಲ ಒಂದು ರನ್ ಬಾಕಿ ಇದ್ದಾಗ ರಿಷಭ್ ಪಂತ್ ವೇಗಿ ವಿಲಿಯಮ್ ಓ'ರೂರ್ಕಿ ಬೌಲಿಂಗ್‌ನಲ್ಲಿ ಇನ್‌ಸೈಡ್ ಎಡ್ಜ್ ಆಗಿ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಶತಕ ಸಿಡಿಸಿದ ಸರ್ಫರಾಜ್ ಖಾನ್; ಕಿವೀಸ್ ಲೆಕ್ಕ ಚುಕ್ತಾ ಮಾಡಲು ಭಾರತಕ್ಕೆ ಬೇಕಿದೆ ಜಸ್ಟ್ 12 ರನ್!

ಅಂದಹಾಗೆ ರಿಷಭ್ ಪಂತ್ ನರ್ವಸ್ 90ಗೆ ಬಲಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಇನ್ನಿಂಗ್ಸ್ ಸೇರಿದಂತೆ ರಿಷಭ್ ಪಂತ್ 7 ಬಾರಿ ನರ್ವಸ್ 90ಗೆ ಬಲಿಯಾಗಿದ್ದಾರೆ. ರಿಷಭ್ ಪಂತ್ ಮೀರ್‌ಪುರದಲ್ಲಿ ಬಾಂಗ್ಲಾದೇಶ ಎದುರು(93), ಆಸ್ಟ್ರೇಲಿಯಾ ಎದುರು ಸಿಡ್ನಿಯಲ್ಲಿ(97), ಚಿನ್ನಸ್ವಾಮಿಯಲ್ಲಿ(96), ರಾಜ್‌ಕೋಟ್‌ನಲ್ಲಿ(92), ಹೈದರಾಬಾದ್‌ನಲ್ಲಿ(92), ಚೆಪಾಕ್‌ನಲ್ಲಿ(91) ಹಾಗೂ ಇದೀಗ ಚಿನ್ನಸ್ವಾಮಿಯಲ್ಲಿ ಮತ್ತೊಮ್ಮೆ (99) ನರ್ವಸ್ 90ಗೆ ಬಲಿಯಾಗಿದ್ದಾರೆ. 

Scroll to load tweet…

ರಿಷಭ್ ಪಂತ್ ಇದುವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 6 ಬಾರಿ 100+ ರನ್ ಬಾರಿಸಿದ್ದಾರೆ. ಇನ್ನು ಈ 7 ಸಂದರ್ಭದಲ್ಲಿ 90+ ರನ್ ಅನ್ನು ಮೂರಂಕಿ ಮೊತ್ತವನ್ನಾಗಿ ಪರಿವರ್ತಿಸಿದ್ದರೇ ಪಂತ್ ಖಾತೆಯಲ್ಲಿ ಇದುವರೆಗೂ ಒಟ್ಟು 13 ಶತಕಗಳು ದಾಖಲಾಗಿರುತ್ತಿದ್ದವು.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತಕ್ಕೆ ಪಾಕಿಸ್ತಾನ ಕ್ರಿಕೆಟ್‌ ಹೊಸ ಆಫರ್‌!

ಟೆಸ್ಟ್‌ ಕ್ರಿಕೆಟ್‌ನಲ್ಲಿ 99ಕ್ಕೆ ವಿಕೆಟ್ ಒಪ್ಪಿಸಿದ ಎರಡನೇ ವಿಕೆಟ್ ಕೀಪರ್ ಪಂತ್: ರಿಷಭ್, ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ 99 ರನ್‌ಗೆ ವಿಕೆಟ್ ಒಪ್ಪಿಸಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೊದಲು ಎಂ ಎಸ್ ಧೋನಿ, 2012ರಲ್ಲಿ ನಾಗ್ಪುರದಲ್ಲಿ ನಡೆದ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ 99 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

ಅತಿಹೆಚ್ಚು ಬಾರಿ ನರ್ವಸ್ 90ಗೆ ಬಲಿಯಾದ ಟೀಂ ಇಂಡಿಯಾ ಕ್ರಿಕೆಟಿಗರಿವರು:

10 - ಸಚಿನ್ ತೆಂಡುಲ್ಕರ್
9 - ರಾಹುಲ್ ದ್ರಾವಿಡ್
7 - ರಿಷಭ್ ಪಂತ್
5 - ಸುನಿಲ್ ಗವಾಸ್ಕರ್
5 - ಎಂ ಎಸ್ ಧೋನಿ
5 - ವಿರೇಂದ್ರ ಸೆಹ್ವಾಗ್