ಟಿ20 ಚಾಂಪಿಯನ್ ಭಾರತಕ್ಕೆ ಮುಂಬೈನಲ್ಲಿಂದು ಅದ್ಧೂರಿ ಸ್ವಾಗತ..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ಇಂದು ತವರಿಗೆ ಬಂದಿಳಿದಿದೆ. ಇಂದು ಸಂಜೆ ಮುಂಬೈನಲ್ಲಿ ರೋಡ್ ಷೋ ಸೇರಿದಂತೆ ಬಿಸಿಸಿಐ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Indian Cricket Team returns home From PM Modi meet to roadshow in Mumbai all details need to know kvn

ನವದೆಹಲಿ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಆಟಗಾರರು ಗುರುವಾರ ಬಾರ್ಬಡೊಸ್‌ನಿಂದ ತವರಿಗೆ ಮರಳಲಿದ್ದು, ಅದ್ಧೂರಿ ಸ್ವಾಗತ ಏರ್ಪಡಿಸಲಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೋಜನ ಕೂಟ ಕೂಡಾ ನಡೆಯಲಿದೆ. 

ಶನಿವಾರವೇ ವಿಶ್ವಕಪ್ ಕೊನೆಗೊಂಡಿದ್ದರೂ ಚಂಡಮಾರುತದ ಕಾರಣಕ್ಕೆ ಬಾರ್ಬಡೊಸ್‌ನಲ್ಲೇ ಬಾಕಿಯಾಗಿದ್ದ ಆಟಗಾರರು ಬುಧವಾರ ವಿಶೇಷ ವಿಮಾನವೇರಿದ್ದಾರೆ. ಬಿಸಿಸಿಐ ಪದಾಧಿಕಾರಿಗಳು, ಭಾರತೀಯ ಪತ್ರಕರ್ತರು ಕೂಡಾ ಆಟಗಾರರು ಹಾಗೂ ಕೋಚ್‌ಗಳ ಜೊತೆ ಭಾರತಕ್ಕೆ ಮರಳಲಿದ್ದಾರೆ. ಬೆಳಗ್ಗೆ 6.20ಕ್ಕೆ ನವದೆಹಲಿ ವಿಮಾನ ನಿಲ್ದಾಣಕ್ಕೆ ತಂಡ ಆಗಮಿಸಲಿದೆ. ಬಳಿಕ ಭಾರತೀಯ ಆಟಗಾರರಿಗೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಹವಾ..! ಅತಿಹೆಚ್ಚು ಲೈಕ್ ಪಡೆದ ಆ ಪೋಸ್ಟ್‌ನಲ್ಲಿ ಅಂತದ್ದೇನಿದೆ?

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ 'ಬೆಳಗ್ಗೆ 6 ಗಂಟೆಗೆ ವಿಮಾನ ನವದೆಹಲಿಗೆ ಆಗಮಿಸಲಿದೆ. 11 ಗಂಟೆಗೆ ಪ್ರಧಾನಿ ಮೋದಿ ನಿವಾಸದಲ್ಲಿ ಭೋಜನ ಕೂಟ' ನಡೆಯಲಿದೆ ಎಂದಿದ್ದಾರೆ.

ಸಂಜೆ ಮುಂಬೈನಲ್ಲಿ ತೆರೆದ ವಾಹನದಲ್ಲಿ ಆಟಗಾರರ ಬೃಹತ್ ಮೆರವಣಿಗೆ!

ಪ್ರಧಾನಿ ಮೋದಿ ನಿವಾಸದಲ್ಲಿ ಭೋಜನಕೂಟದಲ್ಲಿ ಪಾಲ್ಗೊಂಡ ಬಳಿಕ ಆಟಗಾರರು ಮುಂಬೈಗೆ ಪ್ರಯಾಣಿಸಲಿದ್ದಾರೆ. ಸಂಜೆ 5 ಗಂಟೆಯಿಂದ ನಾರಿಮನ್ ಪಾಯಿಂಟ್‌ನಿಂದ ಸುಮಾರು 2 ಕಿ. ಮೀ. ದೂರ ಇರುವ ವಾಂಖೇಡೆ ಕ್ರೀಡಾಂಗಣದವರೆಗೆ ಆಟಗಾರರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಿದ್ದಾರೆ. 2 ಗಂಟೆ ಗಳ ಕಾಲ ಮೆರವಣಿಗೆ ನಡೆಯುವ ನಿರೀಕ್ಷೆಯಿದ್ದು, ಬಳಿಕ 7 ಗಂಟೆಗೆ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿಸಿಸಿಐ ಘೋಷಿಸಿರುವ 125 ಕೋಟಿ ರು. ನಗದು ಬಹುಮಾನವನ್ನೂ ಇದೇ ವೇಳೆ ಹಸ್ತಾಂತರಿಸಲಾಗುತ್ತದೆ.

ಟೀಂ ಇಂಡಿಯಾದ ಈ 8 ಆಟಗಾರರಲ್ಲಿ ನಿಜವಾದ ವಿಶ್ವಕಪ್ ಹೀರೋ ಯಾರು..?

ಸಂಭ್ರಮಾಚರಣೆಗೆ ಬನ್ನಿ: ರೋಹಿತ್, ಶಾ ಆಹ್ವಾನ ಮುಂಬೈನಲ್ಲಿ ನಡೆಯಲಿರುವ ಆಟಗಾರರ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳಿಗೆ ಭಾರತದ ನಾಯಕ ರೋಹಿತ್‌ ಶರ್ಮಾ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆಹ್ವಾನಿಸಿದ್ದಾರೆ. 

'ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗ ಣದಲ್ಲಿ ನಮ್ಮೊಂದಿಗೆ ನೀವೂ ಜೊತೆ ಯಾಗಿ' ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ. 'ಟೀಂ ಇಂಡಿಯಾದ ವಿಕ್ಟರಿ ಪೆರೇಡ್‌ಗಾಗಿ ನಮ್ಮೊಂದಿಗೆ ಸೇರಿಕೊಳ್ಳಿ. ಸಂಜೆ 5 ಗಂಟೆಯಿಂದ ಮರೈನ್ ಡ್ರೈವ್ ಹಾಗೂ ವಾಂಖೆಡೆ ಸ್ಟೇಡಿಯಂ ವರೆಗೆ ಆಟಗಾರರ ಬೃಹತ್‌ ಮೆರವಣಿಗೆ ನಡೆಯಲಿದೆ' ಎಂದು ಶಾ ವಿನಂತಿಸಿದ್ದಾರೆ.

Latest Videos
Follow Us:
Download App:
  • android
  • ios