ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್: ಮೊದಲ ಐಪಿಎಲ್ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಬ್ಯಾನ್!

2025ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆಡಲಿರುವ ಮೊದಲ ಪಂದ್ಯದಿಂದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾನ್ ಆಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಾಂಡ್ಯ ನೇತೃತ್ವದ ಮುಂಬೈ ತಂಡವು ಮೂರು ಬಾರಿ ನಿಧಾನಗತಿಯ ಬೌಲಿಂಗ್ ಮಾಡಿತ್ತು, ಇದರಿಂದಾಗಿ ಈ ಶಿಕ್ಷೆಗೆ ಗುರಿಯಾಗಿದ್ದಾರೆ.

Hardik Pandya Is Banned Mumbai Indians Captain Will Miss First Match Of IPL 2025 Due To slow over rate kvn

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾರ್ದಿಕ್ ಪಾಂಡ್ಯ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ. ಇದು ಹಾರ್ದಿಕ್ ಪಾಂಡ್ಯ ಪಾಲಿಗೆ ಖುಷಿಯ ವಿಚಾರವಾದರೆ, ಇನ್ನೊಂದು ಶಾಕಿಂಗ್ ಸುದ್ದಿ ಮುಂಬೈ ಅಭಿಮಾನಿಗಳಿಗೆ ಕಾದಿದೆ. 2025ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆಡಲಿರುವ ಮೊದಲ ಪಂದ್ಯದಿಂದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾನ್ ಆಗಿದ್ದಾರೆ. 

5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಬರೋಬ್ಬರಿ 16.35 ಕೋಟಿ ರುಪಾಯಿ ನೀಡಿ ಹಾರ್ದಿಕ್ ಪಾಂಡ್ಯ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಕಳೆದ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಆದರೆ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು 14 ಪಂದ್ಯಗಳಲ್ಲಿ ಕೇವಲ 4 ಜಯ ಸಾಧಿಸಿ ನಿರಾಸೆ ಮೂಡಿಸಿತ್ತು.

IPL 2025 ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಮತ್ತೆ ಅಸಮಾಧಾನದ ಹೊಗೆ?

ಮೊದಲು ಐಪಿಎಲ್ ಪಂದ್ಯದಿಂದ ಪಾಂಡ್ಯ ಔಟ್:

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆಡಲಿರುವ ಮೊದಲ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಬ್ಯಾನ್ ಆಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಮೂರು ಬಾರಿ ನಿಧಾನಗತಿಯ ಬೌಲಿಂಗ್ ಮಾಡಿತ್ತು. 

ಐಪಿಎಲ್ ನಿಯಮಾವಳಿಗಳ ಪ್ರಕಾರ, ತಂಡವೊಂದು ಮೊದಲ ಬಾರಿಗೆ ನಿಧಾನಗತಿಯ ಬೌಲಿಂಗ್ ಮಾಡಿದರೆ ಆ ತಂಡದ ನಾಯಕರಿಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಇನ್ನು ಎರಡನೇ ಬಾರಿ ತಂಡದ ಅದೇ ತಪ್ಪು ಮಾಡಿದರೆ, ನಾಯಕನಿಗೆ ದಂಡದ ಮೊತ್ತ ಡಬಲ್ ಆಗುತ್ತದೆ. ಇನ್ನು ಇದಷ್ಟೇ ಅಲ್ಲದೇ ನಾಯಕನ ಜತೆಗೆ ಆಡುವ ಹನ್ನೊಂದರ ಬಳಗದಲ್ಲಿರುವ ಆಟಗಾರರಿಗೂ ಕೆಲವು ಪ್ರತಿಶತ ದಂಡ ವಿಧಿಸಲಾಗುತ್ತದೆ. ಇನ್ನು ಮೂರನೇ ಬಾರಿಗೆ ಅದೇ ತಪ್ಪು ಮರುಕಳಿಸಿದರೆ ತಂಡದ ನಾಯಕನಿಗೆ 30 ಲಕ್ಷ ರುಪಾಯಿ ದಂಡ ಹಾಗೂ ಮುಂದಿನ ಒಂದು ಪಂದ್ಯದ ಮಟ್ಟಿಗೆ ತಂಡದಿಂದ ಬ್ಯಾನ್ ಆಗಬೇಕಾಗುತ್ತದೆ.

ಜನವರಿ 12ಕ್ಕೆ ಕೋಚ್‌ ಗೌತಮ್ ಗಂಭೀರ್‌ ಭವಿಷ್ಯ ನಿರ್ಧಾರ? ಬಲಿಷ್ಠ ತಂಡ ಕಟ್ಟಲು ಮಾಸ್ಟರ್ ಪ್ಲಾನ್

ಹಾರ್ದಿಕ್ ಪಾಂಡ್ಯ ಮೊದಲ ಐಪಿಎಲ್ ಪಂದ್ಯದಿಂದ ಹೊರಗುಳಿದರೆ ಭಾರತ ಟಿ20 ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಯಶಸ್ವಿ ಮಾಜಿ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಅವರನ್ನು ರೀಟೈನ್ ಮಾಡಿಕೊಂಡಿತ್ತು.

Latest Videos
Follow Us:
Download App:
  • android
  • ios