Asianet Suvarna News Asianet Suvarna News

ಟೀಂ ಇಂಡಿಯಾ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ; ಈ ಅರ್ಹತೆಗಳಿದ್ದರೇ ನೀವೂ ಕೋಚ್‌ ಜಾಬ್‌ಗೆ ಅರ್ಜಿ ಹಾಕಿ

ಸದ್ಯ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ್ರಾವಿಡ್ ಅವರ ಹೆಡ್‌ ಕೋಚ್ ಗುತ್ತಿಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಕೊನೆಯಾಗಲಿದೆ. ರಾಹುಲ್ ದ್ರಾವಿಡ್ 2021ರ ಡಿಸೆಂಬರ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿ ನೇಮಕವಾಗಿದ್ದರು.

BCCI invites application for India head coach job as Rahul Dravid tenure set to end kvn
Author
First Published May 14, 2024, 10:13 AM IST

ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಬಿಸಿಸಿಐ ಸೋಮವಾರ ಅರ್ಜಿ ಆಹ್ವಾನಿಸಿದೆ. ನೂತನ ಕೋಚ್ ಅವಧಿ 3.5 ವರ್ಷ ಆಗಿರಲಿದ್ದು, 2024ರ ಜುಲೈ 1ರಿಂದ ಆರಂಭಗೊಂಡು 2027ರ ಡಿ.31ರ ವರೆಗೆ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ. ಇನ್ನು ರಾಹುಲ್ ದ್ರಾವಿಡ್ ಮತ್ತೊಮ್ಮೆ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲು ಬಯಸಿದರೆ ಅವರೂ ಕೂಡಾ ಅರ್ಜಿ ಹಾಕಬಹುದು ಎಂದು ಬಿಸಿಸಿಐ ತಿಳಿಸಿದೆ.

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 30 ಟೆಸ್ಟ್ ಅಥವಾ 50 ಏಕದಿನ ಪಂದ್ಯಗಳನ್ನಾಡಿರಬೇಕು. ಐಸಿಸಿ ಸದಸ್ಯ (ಟೆಸ್ಟ್ ಆಡುವ) ದೇಶದ ತಂಡಕ್ಕೆ ಕನಿಷ್ಠ 2 ವರ್ಷ ಕೋಚ್ ಆಗಿರಬೇಕು ಅಥವಾ ಐಪಿಎಲ್, ಅಂತಾ ರಾಷ್ಟ್ರೀಯ ಮಟ್ಟದ ಲೀಗ್, ಪ್ರಥಮ ದರ್ಜೆ ತಂಡ ಅಥವಾ ರಾಷ್ಟ್ರೀಯ 'ಎ' ತಂಡಕ್ಕೆ ಕನಿಷ್ಠ 3 ವರ್ಷ ಕೋಚ್ ಆಗಿ ಸೇವೆ ಸಲ್ಲಿಸಿರಬೇಕು. ಬಿಸಿಸಿಐ ಲೆವೆಲ್ 3 ಅಥವಾ ಅದಕ್ಕೆ ಸಮನಾದ ಪ್ರಮಾಣಪತ್ರ ಹೊಂದಿರಬೇಕು ಮತ್ತು 60 ವರ್ಷ ಮೀರಿರಬಾರದು ಎಂದು ಬಿಸಿಸಿಐ ನಿಬಂಧನೆ ವಿಧಿಸಿದೆ.

ಗುಜರಾತ್ ಟೈಟಾನ್ಸ್‌ನ ಹೊರದಬ್ಬಿದ ಮಳೆರಾಯ; ಕ್ವಾಲಿಫೈಯರ್‌-1ರಲ್ಲಿ ಸ್ಥಾನ ಪಡೆದ ಕೆಕೆಆರ್‌..!

ದ್ರಾವಿಡ್ ಕೋಚ್ ಕಾಂಟ್ರ್ಯಾಕ್ಟ್ ಅಂತ್ಯ: ಸದ್ಯ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ್ರಾವಿಡ್ ಅವರ ಹೆಡ್‌ ಕೋಚ್ ಗುತ್ತಿಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಕೊನೆಯಾಗಲಿದೆ. ರಾಹುಲ್ ದ್ರಾವಿಡ್ 2021ರ ಡಿಸೆಂಬರ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿ ನೇಮಕವಾಗಿದ್ದರು. ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿತ್ತು. ಇನ್ನು ಇದಾದ ಬಳಿಕ 2023ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು.

ದಶಕದಿಂದ ಭಾರತಕ್ಕೆ ಐಸಿಸಿ ಟ್ರೋಫಿ ಬರ: ಟೀಂ ಇಂಡಿಯಾ 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಐಸಿಸಿ ಟ್ರೋಫಿ ಗೆಲ್ಲಲು ಭಾರತ ವಿಫಲವಾಗಿದೆ. ಇದೀಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಮುಂಬರುವ ಜೂನ್ 01ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸಜ್ಜಾಗಿದೆ.

RCBಗೆ 5ನೇ ದಿಗ್ವಿಜಯ; ಚೆನ್ನೈ ಎದುರು ಕೇವಲ ಇಷ್ಟು ರನ್ ಅಂತರದಲ್ಲಿ ಗೆದ್ರೆ ಬೆಂಗಳೂರು ಪ್ಲೇ ಆಫ್‌ ಫಿಕ್ಸ್..!

ಭಾರತದ ಟಿ20 ಜೆರ್ಸಿ ಅಧಿಕೃತ ಅನಾವರಣ

ಅಹಮದಾಬಾದ್‌: ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ನೂತನ ಟಿ20 ಜೆರ್ಸಿಯನ್ನು ಸೋಮವಾರದ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಗಿದೆ. ಭಾರತದ ಜೆರ್ಸಿ ಪ್ರಾಯೋಜಕತ್ವ ಹೊಂದಿರುವ ಆ್ಯಡಿಡಾಸ್‌ ಸಂಸ್ಥೆ ಇತ್ತೀಚೆಗಷ್ಟೇ ಜೆರ್ಸಿಯ ಚಿತ್ರಗಳನ್ನು ಬಿಡುಗಡೆಗೊಳಿಸಿತ್ತು.

ಸೋಮವಾರ ನಾಯಕ ರೋಹಿತ್‌ ಶರ್ಮಾ, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅಧಿಕೃತವಾಗಿ ಅನಾವರಣಗೊಳಿಸಿದರು. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Latest Videos
Follow Us:
Download App:
  • android
  • ios