ಬಾಂಗ್ಲಾದೇಶ ತಂಡದ ಪರ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ತನ್ಜಿಮ್‌ ಹಸನ್ 4 ಓವರ್‌ ಬೌಲಿಂಗ್ ಮಾಡಿ ಬರೋಬ್ಬರಿ 21 ಚುಕೆ ಎಸೆತ ಸಹಿತ ಕೇವಲ 7 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ಪರ ಗೆಲುವಿನ ರೂವಾರಿ ಎನಿಸಿದರು. ಈ ಅದ್ಭುತ ಪ್ರದರ್ಶನಕ್ಕೆ ತನ್ಜಿಮ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕಿಂಗ್ಸ್‌ಟನ್: ಯುವ ವೇಗಿ ತನ್ಜಿಮ್‌ ಹಸನ್ ಶಕಿಬ್ ಅವರ ಮಾರಕ ದಾಳಿಯ ನೆರವಿನಿಂದ ನೆರೆಯ ನೇಪಾಳ ಎದುರು ಬಾಂಗ್ಲಾದೇಶ ತಂಡವು 21 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ನಜ್ಮುಲ್ ಹೊಸೈನ್ ಶಾಂಟೋ ನೇತೃತ್ವದ ಬಾಂಗ್ಲಾದೇಶ ತಂಡವು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 8 ಹಂತಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಕೇವಲ 106 ರನ್‌ಗಳನ್ನು ರಕ್ಷಿಸಿಕೊಳ್ಳುವ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿಕಡಿಮೆ ಮೊತ್ತವನ್ನು ರಕ್ಷಿಸಿಕೊಂಡ ತಂಡ ಎನ್ನುವ ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಇಲ್ಲಿನ ಅರ್ನೋಸ್ ವೇಲೆ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಬಾಂಗ್ಲಾದೇಶ ತಂಡವು, ನೇಪಾಳ ಬೌಲರ್‌ಗಳ ಸಂಘಟಿತ ಪ್ರದರ್ಶನದ ಎದುರು ತತ್ತರಿಸಿಹೋಯಿತು. ಬಾಂಗ್ಲಾದೇಶ ತಂಡವು 30 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಶಕೀಬ್ ಅಲ್ ಹಸನ್ 17 ರನ್ ಸಿಡಿಸಿದ್ದೇ ಬಾಂಗ್ಲಾದೇಶ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇನ್ನು ಕೊನೆಯಲ್ಲಿ ರಿಶಾದ್ ಹೊಸೈನ್(13) ಹಾಗೂ ಟಸ್ಕಿನ್ ಅಹಮದ್(12) ಅಮೂಲ್ಯ ರನ್ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಬಾಂಗ್ಲಾದೇಶ ತಂಡವು 19.3 ಓವರ್‌ಗಳಲ್ಲಿ 106 ರನ್ ಗಳಿಸಿ ಸರ್ವಪತನ ಕಂಡಿತು. 

ತವರಿನಲ್ಲಿ ಸ್ಮೃತಿ ಮಂಧನಾ ಮೊದಲ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 143 ರನ್‌ ಗೆಲುವು

Scroll to load tweet…

ಇನ್ನು ಸಾಧಾರಣ ಗುರಿ ಬೆನ್ನತ್ತಿದ ನೇಪಾಳ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡ 26 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆದರೆ ಆರನೇ ವಿಕೆಟ್‌ಗೆ ಕುಸಾಲ್ ಮಲ್ಲಾ(27) ಹಾಗೂ ದಿಪೇಂದ್ರ ಸಿಂಗ್ ಐರೆ(25) ಅಮೂಲ್ಯ 52 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಈ ಜೋಡಿ ಬೇರ್ಪಡುತ್ತಿದ್ದಂತೆಯೇ ದಿಢೀರ್ ಕುಸಿತ ಕಂಡ ನೇಪಾಳ ತಂಡವು 19.2 ಓವರ್‌ನಲ್ಲಿ ಕೇವಲ 85 ರನ್‌ ಗಳಿಸಿ ಸರ್ವಪತನ ಕಂಡು ಸೋಲು ಅನುಭವಿಸಿತು. 

ಇನ್ನು ಇದೇ ವೇಳೆ ಬಾಂಗ್ಲಾದೇಶ ತಂಡವು ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಸತತ ಮೂರು ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

Scroll to load tweet…

ಬಾಂಗ್ಲಾದೇಶ ತಂಡದ ಪರ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ತನ್ಜಿಮ್‌ ಹಸನ್ 4 ಓವರ್‌ ಬೌಲಿಂಗ್ ಮಾಡಿ ಬರೋಬ್ಬರಿ 21 ಚುಕೆ ಎಸೆತ ಸಹಿತ ಕೇವಲ 7 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ಪರ ಗೆಲುವಿನ ರೂವಾರಿ ಎನಿಸಿದರು. ಈ ಅದ್ಭುತ ಪ್ರದರ್ಶನಕ್ಕೆ ತನ್ಜಿಮ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

T20 World Cup 2024: ಒಂದಲ್ಲ, ಎರಡಲ್ಲ ಬರೋಬ್ಬರಿ 3 ಬಲಿಷ್ಠ ತಂಡಗಳು ಗ್ರೂಪ್ ಹಂತದಲ್ಲೇ ಔಟ್...!

ಸೂಪರ್ 8 ಹಂತಕ್ಕೆ ಬಾಂಗ್ಲಾದೇಶ ಲಗ್ಗೆ: 

ನೇಪಾಳ ತಂಡವನ್ನು ಬಗ್ಗುಬಡಿದ ಬಾಂಗ್ಲಾದೇಶ ತಂಡವು ಇದೀಗ ಸೂಪರ್ 8 ಹಂತಕ್ಕೆ ಲಗ್ಗೆಯಿಟ್ಟಿದೆ. ಇದೀಗ ಬಾಂಗ್ಲಾದೇಶ ತಂಡವು ಗ್ರೂಪ್ 1 ರಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ. ಇನ್ನು ಗ್ರೂಪ್‌ 2ನಲ್ಲಿ ಯುಎಸ್‌ಎ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.