ಬಾಲಿವುಡ್ ನಟಿ ಪ್ರಗ್ಯಾ ಜೈಸ್ವಾಲ್ ಅವರ ಡ್ರೆಸ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಅವರ ನಿಪ್ ಸ್ಲಿಪ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಆಕಸ್ಮಿಕವೋ ಅಥವಾ ಪ್ರಚಾರದ ಗಿಮಿಕ್ಕೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಬಾಲಿವುಡ್ ನಟಿ ಪ್ರಗ್ಯಾ ಜೈಸ್ವಾಲ್ (Bollywood actress Pragya Jaiswal) ಸದ್ಯ ಸೋಶಿಯಲ್ ಮೀಡಿಯಾ (Social media) ದಲ್ಲಿ ಟ್ರೆಂಡ್ ನಲ್ಲಿರುವ ನಟಿ. ಬಾಲಿವುಡ್ ಕಿಲಾಡಿ (Bollywood Khiladi) ಅಕ್ಷಯ್ ಕುಮಾರ್ ಜೊತೆ ಖೇಲ್ ಖೇಲ್ ಮೇ (Khel Khel May) ಸಿನಿಮಾದಲ್ಲಿ ಆಕ್ಟ್ ಮಾಡಿರುವ ನಟಿಗೆ, ಇಷ್ಟು ವರ್ಷದ ನಂತ್ರವಾದ್ರೂ ಬ್ರೇಕ್ ಸಿಗುತ್ತಾ ಎನ್ನುವ ಪ್ರಶ್ನೆ ಇದೆ. ಈ ಮಧ್ಯೆ ಪ್ರಗ್ಯಾ ಜೈಸ್ವಾಲ್ ಡ್ರೆಸ್ ಸುದ್ದಿ ಮಾಡಿದೆ. ಪ್ರಗ್ಯಾ, ಕಪ್ಪು ಬಣ್ಣದ ಡ್ರೆಸ್ ಧರಿಸಿ, ಪಾಪರಾಜಿಗಳ ಕ್ಯಾಮರಾಕ್ಕೆ ಫೋಸ್ ನೀಡಿದ್ದಾರೆ. ಆದ್ರೆ ಅವರು ವಾರ್ಡ್ರೋಬ್ ನಿಂದ ತೆಗೆದ ಡ್ರೆಸ್ ರಾಂಗ್ ಆಗಿತ್ತಾ ಇಲ್ಲ ಪ್ರಚಾರಕ್ಕೆ ಅವರು ರಾಂಗ್ ಡ್ರೆಸ್ ಆಯ್ಕೆ ಮಾಡಿಕೊಂಡ್ರೋ ಗೊತ್ತಿಲ್ಲ, ಆದ್ರೆ ಡ್ರೆಸ್ ನಲ್ಲಿ ನಿಪ್ ಸ್ಲಿಪ್ ಆಗಿದ್ದು ಎಲ್ಲರ ಕಣ್ಣಿಗೆ ಬಿದ್ದಿದೆ.
ಬ್ಲಾಕ್ ಟಾಪ್ ಧರಿಸಿದ್ದ ಪ್ರಗ್ಯಾ ಜೈಸ್ವಾಲ್ ಬೋಲ್ಡ್ ಆಗಿ ಫೋಸ್ ನೀಡಿದ್ದಾರೆ. ಆದ್ರೆ ಅವರ ನಿಪ್ಪಲ್ ಸ್ವಲ್ಪ ಹೊರಗೆ ಕಾಣಿಸಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಎಕ್ಸ್, ಇನ್ಸ್ಟಾದಲ್ಲಿ ಅವರ ಈ ವಿಡಿಯೋ ಹರಿದಾಡ್ತಿದೆ. ವಿಡಿಯೋ ನೋಡಿದ ಜನರು, ಇದು ಮಿಸ್ ಆಗಿ ಹೀಗೆ ಆಗಿದ್ದಾ ಅಥವಾ ಪ್ರಚಾರಕ್ಕಾಗಿ ನಟಿ ತಮ್ಮ ಡ್ರೆಸ್ ಸ್ಟೈಲ್ ಬದಲಿಸಿಕೊಂಡಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೊಂದು ಬಾಕಿ ಇತ್ತು ಎಂದ ನೆಟ್ಟಿಗರ ಸಂಖ್ಯೆಯೂ ಸಾಕಷ್ಟಿದೆ.
varamahalakshmi special : ಹಬ್ಬದಂದು ಸೀರೆಯುಟ್ಟು ರೀಲ್ಸ್ ಹಂಚಿಕೊಂಡ ಸುಧಾರಾಣಿ...ಮಹಾಲಕ್ಷ್ಮಿ ನೀವೆ ಎಂದ
Suriya Tammy ಹೆಸರಿನ ಎಕ್ಸ್ ಖಾತೆಯಲ್ಲಿ ಇವರ ವಿಡಿಯೋ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಪ್ರಗ್ಯಾ ಜೈಸ್ವಾಲ್. ಅಪರೂಪದ ನಿಪ್ ಸ್ಲಿಪ್. ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡ ನಟಿಯ ಧೈರ್ಯಕ್ಕೆ ಮೆಚ್ಚಲೇಬೇಕು ಅಂತ ಶೀರ್ಷಿಕೆ ಹಾಕಿದ್ದಾರೆ.
ಪ್ರಗ್ಯಾ ಜೈಸ್ವಾಲ್ ನಟಿಸುತ್ತಿರುವ ಖೇಲ್ ಖೇಲ್ ಮೇ ಚಿತ್ರ ಬಿಡುಗಡೆಯಾಗಿದ್ದು, ಮೊದಲ ದಿನ ಚಿತ್ರಕ್ಕೆ ನಿರೀಕ್ಷೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಪ್ರಗ್ಯಾ, ತಾಪ್ಸಿ ಪನ್ನು, ಆಮಿ ವಿರ್ಕ್ ನಟಿಸಿದ್ದಾರೆ. ಮುದಸ್ಸರ್ ಅಜೀಜ್ ನಿರ್ದೇಶನದ ಈ ಚಿತ್ರದಲ್ಲಿ ಈ ಕಲಾವಿದರಲ್ಲದೆ ವಾಣಿ ಕಪೂರ್, ಆದಿತ್ಯ ಸೀಲ್, ಫರ್ದೀನ್ ಖಾನ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಗ್ಯಾ ಜೈಸ್ವಾಲ್ ಯಾರು? : ನಟಿ ಪ್ರಗ್ಯಾ ಜೈಸ್ವಾಲ್ ದಕ್ಷಿಣದಲ್ಲಿ ಚಿರಪರಿಚಿತ ನಟಿ. ಅನೇಕ ತೆಲುಗು ಚಿತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. 2014 ರಲ್ಲಿ ತಮಿಳು ಚಿತ್ರ ವಿರಟ್ಟು ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಾದ ನಂತರ ನಂದಮೂರಿ ಬಾಲಕೃಷ್ಣ ಜೊತೆ ಅಖಂಡ, ವರುಣ್ ತೇಜ್ ಜೊತೆ ಕಂಚೆ ಹಾಗೂ ಜೈ ಜಾನಕಿ ನಾಯಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದೊಡ್ಡ ಸ್ಟಾರ್ ಗಳ ಜೊತೆ ಕೆಲಸ ಮಾಡಿದ್ದಾರೆ ಪ್ರಗ್ಯಾ.
ಬಾಲಿವುಡ್ ನಲ್ಲೂ ಪ್ರಗ್ಯಾ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಟಿಟು ಎಂಬಿಎ ಸಿನಿಮಾದಲ್ಲಿ ಪ್ರಗ್ಯಾ ನಟಿಸಿದ್ದು, ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲಿಲ್ಲ. ಖೇಲ್ ಖೇಲ್ ಮೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಆಯುರ್ವೇದದ ಈ ಚಿಕಿತ್ಸೆ ಮೂಲಕ 14 ದಿನದಲ್ಲೇ 6 ಕೆ.ಜಿ ತೂಕ ಇಳಿಸಿಕೊಂಡ ನಟ
36 ವರ್ಷದ ಪ್ರಗ್ಯಾ ಜೈಸ್ವಾಲ್ ಹಾಟ್ ನಟಿಯರಲ್ಲಿ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುವ ಅವರು ಅನೇಕ ಫೋಟೋಗಳನ್ನು ಹಂಚಿಕೊಳ್ತಿರುತ್ತಾರೆ. ತಮ್ಮ ಕಿಲ್ಲರ್ ಫೋಸ್ ಮೂಲಕವೇ ಅವರು ಅಭಿಮಾನಿಗಳ ನಿದ್ರೆಗೆಡಿಸುತ್ತಾರೆ. ಈಗ ಖೇಲ್ ಖೇಲ್ ಮೇ ಚಿತ್ರದ ಪ್ರಚಾರದಲ್ಲಿ ಮಿಂಚಿದ ಪ್ರಗ್ಯಾ ಬ್ಲಾಕ್ ಕಲರ್ ಡ್ರೆಸ್ ನಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇದು ಉಪ್ಸ್ ಮೂಮೆಂಟಾ ಇಲ್ಲ ಪ್ರಸಿದ್ಧಿಗಾಗಿ ನಟಿ ಈ ಗಿಮಿಕ್ ಮಾಡಿದ್ದಾರಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.
